ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಹೊಸ ಬೆಳಕಿನ ನಿರೀಕ್ಷೆಯಲ್ಲಿ ಗೋವಾ, ರಣತಂತ್ರದ ನಿರೀಕ್ಷೆಯಲ್ಲಿ ಕ್ವಾಡ್ರಾಟ್

By Isl Media
ISL 2020: New dawn for Goa, says Ferrando; Cuadrat expects tactical battle

ಗೋವಾ, ನವೆಂಬರ್ 21: ಹೀರೋ ಇಂಡಿಯನ್ ಸೂಪರ್ ಲೀಗ್ ನ 7ನೇ ಆವೃತ್ತಿಯ ಮೂರನೇ ಪಂದ್ಯದಲ್ಲಿ ಲೀಗ್ ಇತಿಹಾಸದಲ್ಲೇ ಸ್ಥಿರ ಪ್ರದರ್ಶನ ತೋರುತ್ತ ಬಂದಿರುವ ಎಫ್ ಸಿ ಗೋವಾ ಮತ್ತು ಬೆಂಗಳೂರು ಎಫ್ ಸಿ ತಂಡಗಳು ಭಾನುವಾರ ಮಾರ್ಗೋವಾದ ಫಟೋರ್ಡಾ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. ಕಳೆದ ಋತುವಿನಲ್ಲಿ ಲೀಗ್ ಶೀಲ್ಡ್ ಗೆದ್ದಿರುವ ಎಫ್ ಸಿ ಗೋವಾ ತಂಡ ಎಎಫ್ ಸಿ ಚಾಂಪಿಯನ್ಸ್ ಲೀಗ್ ನ ಗ್ರೂಪ್ ಹಂತಕ್ಕೆ ನೇರವಾಗಿ ಆಯ್ಕೆಯಾದ ಭಾರತದ ಮೊದಲ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಆದರೆ ಈಗ ಕೋಚ್ ಬದಲಾವಣೆಯ ನಂತರ ಹೊಸ ನಿರೀಕ್ಷೆಯಲ್ಲಿದೆ.

ಸೂರ್ಯಕುಮಾರ್-ಕೊಹ್ಲಿ ಸಿಡುಕಿನ ಬಳಿಕ ಏನಾಯ್ತು?!: ಯಾದವ್ ವಿವರಣೆಸೂರ್ಯಕುಮಾರ್-ಕೊಹ್ಲಿ ಸಿಡುಕಿನ ಬಳಿಕ ಏನಾಯ್ತು?!: ಯಾದವ್ ವಿವರಣೆ

ಮಾಜಿ ಕೋಚ್ ಸರ್ಗಿಯೋ ಲೊಬೆರಾ ಅವರನ್ನು ಹಿಂಬಾಲಿಸಿ ಅನೇಕ ಆಟಗಾರರು ಮುಂಬೈ ಸಿಟಿ ಎಫ್ ಸಿ ತಂಡವನ್ನು ಸೇರಿಕೊಂಡಿದ್ದು, ಗೋವಾದ ನೈಜ ಶಕ್ತಿಯನ್ನು ಕುಗ್ಗುವಂತೆ ಮಾಡಿದೆ. ಇದೊಂದು ಬೆಳವಣಿಗೆಯನ್ನು ಹೊರತುಪಡಇಸಿದರೆ ಗೋವಾ ತಂಡ ಉತ್ತಮ ಪ್ರದರ್ಶನ ನೀಡುವ ತಂಡವಡನಿಸಿದೆ.

ತರಬೇತಿಯಲ್ಲಿ ಪಳಗಿರುವ ತಂಡ

ತರಬೇತಿಯಲ್ಲಿ ಪಳಗಿರುವ ತಂಡ

ಹೊಸ ಕೋಚ್ ಜುವಾನ್ ಫೆರಾಂಡೊ ಅವರ ತರಬೇತಿಯಲ್ಲಿ ಪಳಗಿರುವ ತಂಡ ಉತ್ತಮ ಅನುಭವ ಹೊಂದಿರುವ ವಿದೇಶಿ ಆಟಗಾರರು ಮತ್ತು ಭಾರತದ ಭರವಸೆಯ ಆಟಗಾರರಿಂದ ತಂಡ ಬಲಿಷ್ಠವೆನಿಸಿದೆ. ಹೊಸ ಆಟಗಾರರಿಗೆ ಆದಷ್ಟು ಬೇಗನೆ ಹೊಂದಿಕೊಳ್ಳುವಲ್ಲಿ ನೆರವಾಗಲು ಎಡು ಬೇಡಿಯಾ ಅವರಂಥ ಆಟಗಾರರ ಅನುಭವದ ನೆರವಿನ ಅಗತ್ಯ ಇದೆ.

ಅಂಕಗಳನ್ನು ಗಳಿಸುವುದು ಅಷ್ಟು ಸುಲಭವಲ್ಲ

ಅಂಕಗಳನ್ನು ಗಳಿಸುವುದು ಅಷ್ಟು ಸುಲಭವಲ್ಲ

ಭಾನುವಾರದ ಪಂದ್ಯದಲ್ಲಿ ಮೂರು ಅಂಕಗಳನ್ನು ಗಳಿಸುವುದು ಅಷ್ಟು ಸುಲಭವಲ್ಲ. ಏಕೆಂದರೆ ಎದುರಾಳಿ ತಂಡ ಬೆಂಗಳೂರು ಎಫ್ ಸಿ. ಕಳೆದ ಬಾರಿ ಆಟಗಾರರನ್ನು ಉಳಿಸಕೊಂಡಿರುವ ಬೆಂಗಳೂರು ಎಫ್ ಸಿ ಮತ್ತೆ ಹೊಸ ಆಟಗಾರರನ್ನು ಸೇರಿಸಿಕೊಂಡು ಬಲಿಷ್ಠಗೊಂಡಿದೆ. ದಿಮಾಸ್ ಡೆಲ್ಗಾಡೋ ಮತ್ತು ಎರಿಕ್ ಪಾರ್ಥಲು ಅವರಂಥ ಅನುಭವಿ ಆಟಗಾರರು ವಿದೇಶಿ ಆಟಗಾರರ ಬಲವನ್ನು ಹೆಚ್ಚಿಸಿದ್ದಾರೆ. ನಾರ್ವೆಯ ಕ್ರಿಸ್ಟಿಯನ್ ಆಪ್ಸೆತ್ ಬ್ರೆಜಿಲ್ ನ ವಿಂಗರ್ ಕ್ಲೆಟಾನ್ ಸಿಲ್ವಾ ತಂಡಕ್ಕೆ ಸೇರ್ಪಡೆಯಾದ ಹೊಸ ವಿದೇಶಿ ಆಟಗಾರರಲ್ಲಿ ಪ್ರಮುಖರು.

ಅಂಕಿ ಅಂಶಗಳೇ ಹೇಳುತ್ತಿವೆ

ಅಂಕಿ ಅಂಶಗಳೇ ಹೇಳುತ್ತಿವೆ

ಬೆಂಗಳೂರು ತಂಡ ಐಎಸ್ಎಲ್ ಗೆ ಪ್ರವೇಶವಾದಾಗಿನಿಂದ ಪಂದ್ಯಗಳನ್ನು ಗಮನಿಸಿದರೆ ಕಾರ್ಲ್ಸ್ ಕ್ಬಾಡ್ರಾಟ್ ಪಡೆ ಗೋವಾ ವಿರುದ್ಧ ಮೇಲುಗೈ ಸಾಧಿಸಿರುವುದನ್ನು ಅಂಕಿಅಂಶಗಳೇ ಹೇಳುತ್ತಿವೆ. ಆಡಿರುವ ಏಳು ಪಂದ್ಯಗಳಲ್ಲಿ ಗೋವಾ ಗೆದ್ದಿರುವವುದು ಕೇವಲ ಒಂದು ಬಾರಿ. ಆದರೆ ಕೋಚ್ ಫೆರಾಂಡೊ ಹಿಂದಿನ ಸಾಧನೆಗಳ ಮೇಲೆ ಹೆಚ್ಚು ಆತುಕೊಂಡವರಲ್ಲ. , "ಗೋವಾ ವಿರುದ್ಧ ಬೆಂಗಳೂರು ಎಫ್ ಸಿ ಯಾವ ರೀತಿಯ ಸಾಧನೆ ಮಾಡಿದೆ ಎಂಬುದನ್ನು ನಾನು ಬಲ್ಲೆ, ಹಿಂದಿನ ಪಂದ್ಯದಲ್ಲೂ ಏನಾಯಿತು ಎಂಬುದನ್ನು ನಾನು ಬಲ್ಲೆ. ಆದರೆ ಇದು ಹೊಸ ತಂಡ, ಹೊಸ ಅಧ್ಯಾಯ, ಋತುವಿನ ಹೊಸ ಕ್ಷಣ,'' ಎಂದು ಗೋವಾದ ನೂತನ ಕೋಚ್ ಹೇಳಿದ್ದಾರೆ.

ದಾಖಲೆಗಳನ್ನು ಕಾಯ್ದುಕೊಳ್ಳುವ ಗುರಿ

ದಾಖಲೆಗಳನ್ನು ಕಾಯ್ದುಕೊಳ್ಳುವ ಗುರಿ

ಪ್ರಧಾನ ಕೋಚ್ ಆದಾಗಿನಿಂದ ಗೋವಾ ವಿರುದ್ಧ ಸೋಲು ಅನುಭವಿಸದ ಕೋಚ್ ಕ್ವಾಡ್ರಾಟ್, ಹಿಂದಿನ ದಾಖಲೆಗಳನ್ನು ಕಾಯ್ದುಕೊಳ್ಳುವ ಗುರಿ ಹೊಂದಿದ್ದಾರೆ. ಗೋವಾ ವಿರುದ್ಧ ಆಡಿರುವ ಸತತ ಆರು ಪಂದ್ಯಗಳಲ್ಲಿ ಬೆಂಗಳೂರು ಸೋಲು ಕಂಡಿರಲಿಲ್ಲ. ಆದರೆ ಗೋವಾ ವಿರುದ್ಧ ತಮ್ಮ ತಂಡ ಕಠಿಣ ಹೋರಾಟವನ್ನು ಎಸುರಿಸಲಿದೆ ಎಂಬುದೂ ಅವರಿಗೆ ಗೊತ್ತು. "ಜುವಾನ್ ಫೆರಾಂಡೋ ಅವರ ಬಗ್ಗೆ ವೈಯಕ್ತಿಕವಾಗಿ ನನಗೆ ಗೊತ್ತಿಲ್ಲ. ಆದರೆ ಸ್ಪೇನ್ ನ ತರಬೇತುದಾರರು ಉತ್ತಮ ರೀತಿಯಲ್ಲಿ ತಂಡವನ್ನು ಸಂಘಟಿಸಬಲ್ಲರು ಎಂಬುದು ಗೊತ್ತು. ಎದುರಾಳಿಯ ರಣತಂತ್ರ, ಲೆಕ್ಕಾಚಾರಗಳನ್ನು ಚೆನ್ನಾಗಿ ಅರಿತಿರುತ್ತಾರೆ ಎಂಬುದೂ ಗೊತ್ತು,'' ಎಂದು 52 ವರ್ಷದ ಕೋಚ್ ಹೇಳಿದ್ದಾರೆ. ‘'ನಮ್ಮ ವಿರುದ್ಧ ಯೋಜನೆಗಳನ್ನು ರೂಪಿಸುವಲ್ಲಿ ಅವರು ಕಠಿಣ ಶ್ರವಹಿಸಿದ್ದಾರೆ ಎಂಬುದೂ ಗೊತ್ತು. ಆದ್ದರಿಂದ ಪೈಪೋಟಿಯಿಂದ ಕೂಡಿದ ಪಂದ್ಯವನ್ನು ನಿರೀಕ್ಷಿಸುತ್ತಿದ್ದೇನೆ,'' ಎಂದರು.

Story first published: Saturday, November 21, 2020, 20:19 [IST]
Other articles published on Nov 21, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X