ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ನಾರ್ತ್‌ಈಸ್ಟ್‌ ವಿರುದ್ಧ 'ಡ್ರಾ'ಗೆ ತೃಪ್ತಿಪಟ್ಟ ಬೆಂಗಳೂರು ಎಫ್‌ಸಿ

By Isl Media
ISL 2020: NorthEast, Bengaluru see winless streaks continue in stalemate

ಗೋವಾ: ಸ್ಟಾರ್‌ ಆಟಗಾರ ರಾಹುಲ್‌ ಬೆಕೆ (49ನೇ ನಿ.) ದ್ವಿತೀಯಾರ್ಧದಲ್ಲಿ ತಂದುಕೊಟ್ಟ ಆಕರ್ಷಕ ಗೋಲ್‌ನ ಬಲದಿಂದ ಬೆಂಗಳೂರು ಎಫ್‌ಸಿ ತಂಡಪ್ರಸಕ್ತ ಇಂಡಿಯನ್ ಸೂಪರ್‌ ಲೀಗ್‌ ಫುಟ್ಬಾಲ್‌ ಟೂರ್ನಿಯ 56ನೇ ಲೀಗ್ ಪಂದ್ಯದಲ್ಲಿ ನಾರ್ತ್‌ಈಸ್ಟ್‌ ಯುನೈಟೆಡ್‌ ಎಫ್‌ಸಿ ವಿರುದ್ಧ ಡ್ರಾ ಸಾಧಿಸಿತು. ಇಲ್ಲಿನ ತಿಲಕ್ ಮೈದಾನ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ಮತ್ತು ನಾರ್ತ್‌ಈಸ್ಟ್‌ ಯುನೈಟೆಡ್‌ ಎಫ್‌ಸಿ ತಂಡಗಳು 1-1 ಗೋಲ್‌ಗಳೊಂದಿಗೆ ಸಮಬಲ ಸಾಧಿಸಿ ತಲಾ ಒಂದು ಅಂಕ ಹಂಚಿಕೊಂಡವು.

ರಿಷಭ್ ಪಂತ್ ಬ್ಯಾಟಿಂಗ್ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಗೌತಮ್ ಗಂಭೀರ್ರಿಷಭ್ ಪಂತ್ ಬ್ಯಾಟಿಂಗ್ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಗೌತಮ್ ಗಂಭೀರ್

ಇದರೊಂದಿಗೆ ಬಿಎಫ್‌ಸಿ ಆಡಿದ ಒಟ್ಟು 11 ಪಂದ್ಯಗಳಿಂದ 13 ಅಂಕಗಳನ್ನು ಗಳಿಸಿದಂತ್ತಾಗಿದ್ದು ಅಂಕಪಟ್ಟಿಯಲ್ಲಿ ತನ್ನ 6ನೇ ಸ್ಥಾನ ಕಾಯ್ದುಕೊಂಡಿದೆ. ಪ್ರಮುಖವಾಗಿ ಕಳೆದ ನಾಲ್ಕು ಪಂದ್ಯಗಳಲ್ಲಿ ಅನುಭವಿಸಿದ್ದ ಸೋಲಿನಿಂದ ಕೊನೆಗೂ ಹೊರಬಂದು ಡ್ರಾ ಫಲಿತಾಂಶಕ್ಕೆ ತೃಪ್ತಿಪಟ್ಟಿದೆ.

ಬ್ರಿಸ್ಬೇನ್‌ ಹೋಟೆಲ್‌ನಲ್ಲಿ ಖೈದಿಯಂತೆ ಬಂಧಿಯಾದ ಟೀಮ್ ಇಂಡಿಯಾ!ಬ್ರಿಸ್ಬೇನ್‌ ಹೋಟೆಲ್‌ನಲ್ಲಿ ಖೈದಿಯಂತೆ ಬಂಧಿಯಾದ ಟೀಮ್ ಇಂಡಿಯಾ!

ಮತ್ತೊಂದೆಡೆ ನಾರ್ತ್‌ಈಸ್ಟ್‌ ಯುನೈಟೆಡ್‌ ತಂಡ ಅಂಕಪಟ್ಟಿಯಲ್ಲಿ ಮೇಲೇರುವ ಸ್ಥಾನ ಕೈಚೆಲ್ಲಿ 11 ಪಂದ್ಯಗಳಿಂದ 12 ಅಂಕಗಳನ್ನು ಗಳಿಸುವ ಮೂಲಕ 7ನೇ ಸ್ಥಾನದಲ್ಲೇ ಉಳಿದೆ.

ಗಾಲೆಗೊ ನೀಡಿದ ಪಾಸ್‌ನ ಲಾಭ

ಗಾಲೆಗೊ ನೀಡಿದ ಪಾಸ್‌ನ ಲಾಭ

ಪಂದ್ಯದ ಮೊದಲ ಅವಧಿಯಲ್ಲಿ ಮಿಡ್‌ಫೀಲ್ಡರ್‌ ಲೂಯಿಸ್ ಮಷಾಡೊ ಅದ್ಭುತ ಆಟ ಪ್ರದರ್ಶಿಸಿ ಸಹ ಆಟಗಾರ ಗಾಲೆಗೊ ನೀಡಿದ ಪಾಸ್‌ನ ಸಂಪೂರ್ಣ ಲಾಭ ಪಡೆದುಕೊಂಡು 27ನೇ ನಿಮಿಷದಲ್ಲಿ ನಾರ್ತ್‌ಈಸ್ಟ್‌ ತಂಡಕ್ಕೆ ಆರಂಭಿಕ ಮುನ್ನಡೆ ಒದಗಿಸಿಕೊಟ್ಟರು. ಬಳಿಕ ರಕ್ಷಣಾತ್ಮಕ ಆಟವಾಡಿದ ನಾರ್ತ್‌ಈಸ್ಟ್‌ ತಂಡ ಮೊದಲಾರ್ಧದ ಮುಕ್ತಾಯಕ್ಕೆ ಈ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಯಿತು.

ಆಕ್ರಮಣಕಾರಿ ಆಟಕ್ಕೆ ಮುಂದಾಯಿತು

ಆಕ್ರಮಣಕಾರಿ ಆಟಕ್ಕೆ ಮುಂದಾಯಿತು

ದ್ವಿತೀಯಾರ್ಧದಲ್ಲಿ ಎಚ್ಚೆತ್ತುಕೊಂಡ ಬಿಎಫ್‌ಸಿ ಆರಂಭದಲ್ಲೇ ತನ್ನ ತಂತ್ರಗಾರಿಕೆಯಲ್ಲಿ ಬದಲಾವಣೆ ತಂದು ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಪರಿಣಾಮ ಪಂದ್ಯ ಶುರುವಾದ ನಾಲ್ಕೇ ನಿಮಿಷಗಳಲ್ಲಿ ಸಮಬಲದ ಗೋಲ್‌ ದಾಖಲಾಯಿತು. ಸಹ ಆಟಗಾರ ದಿಮಾಸ್‌ ನೀಡಿದ ಪಾಸ್‌ ಅನ್ನು ಅದ್ಭುತವಾಗಿ ಸ್ವೀಕರಿಸಿದ ರಾಹುಲ್‌ ಬೆಕೆ ಚೆಂಡನ್ನು ಗೋಲ್‌ ಪೆಟ್ಟಿಗೆಯೊಳಗೆ ಸೇರಿಸಿ ಬಿಎಫ್‌ಸಿ ಪರ ಆಪತ್ಬಾಂಧವನಾದರು. 49ನೇ ನಿಮಿಷದಲ್ಲಿ ದಾಖಲಾದ ಈ ಗೋಲ್‌ ಬಿಎಫ್‌ಸಿಗೆ ಇನ್ನಿಲ್ಲದ ಆತ್ಮವಿಶ್ವಾಸ ತಂದುಕೊಟ್ಟಿತು.

ಗೋಲ್‌ಗಾಗಿ 11 ಪ್ರಯತ್ನ

ಗೋಲ್‌ಗಾಗಿ 11 ಪ್ರಯತ್ನ

ಪಂದ್ಯದಲ್ಲಿ ನಾರ್ತ್‌ಈಸ್ಟ್‌ ತಂಡ ಚೆಂಡಿನ ಮೇಲಿನ ನಿಯಂತ್ರಣವನ್ನು ಶೇ. 38 ರಷ್ಟು ಕಾಯ್ದುಕೊಂಡರೂ ಕೂಡ ಗೋಲ್‌ ಗಳಿಕೆಯ ಸಲುವಾಗಿ 11 ಬಾರಿ ಪ್ರಯತ್ನ ಮಾಡಿತ್ತು. ಇದರಲ್ಲಿ ನಾಲ್ಕು ಬಾರಿ ಚೆಂಡು ಗುರಿಯತ್ತ ಸಾಗಿತ್ತು ಕೂಡ. ಮತ್ತೊಂದೆಡೆ ಶೇ. 62 ರಷ್ಟು ನಿಯಂತ್ರಣ ಸಾಧಿಸಿದ್ದ ಬೆಂಗಳೂರು ಎಫ್‌ಸಿ ಇದರ ಪೂರ್ಣ ಲಾಭ ಪಡೆಯುವಲ್ಲಿ ವಿಫಲವಾಯಿತು. 10 ಬಾರಿ ಗೋಲ್‌ ಗಳಿಸವ ಪ್ರಯತ್ನ ನಡೆಸಿ ಕೇವಲ ಮೂರು ಬಾರಿ ಮಾತ್ರವೇ ಚೆಂಡನ್ನು ಗುರಿಯತ್ತ ಮುನ್ನುಗ್ಗುವಂತೆ ಮಾಡಿತ್ತು. ಒಟ್ಟಾರೆ ಗೆಲ್ಲುವ ಉತ್ತಮ ಅವಕಾಶವನ್ನು ಬಿಎಫ್‌ಸಿ ಈ ಪಂದ್ಯದಲ್ಲಿ ಕೈಚೆಲ್ಲಿದೆ.

Story first published: Wednesday, January 13, 2021, 9:56 [IST]
Other articles published on Jan 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X