ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2020: ಈಸ್ಟ್ ಬೆಂಗಾಲ್ ವಿರುದ್ಧವೂ ನಾರ್ಥ್ ಈಸ್ಟ್ ಬೆಸ್ಟ್

By Isl Media
ISL 2020: NorthEast continue unbeaten run as SC East Bengal rue luck

ಗೋವಾ, ಡಿಸೆಂಬರ್ 5: ಸುರಶ್ಚಂದ್ರ ಸಿಂಗ್ (33ನೇ ನಿಮಿಷ) ನೀಡಿದ ಉಡುಗೊರೆ ಗೋಲು ಹಾಗೂ ರೊಚ್ಚಾರ್ಜೆಲಾ (90ನೇ ನಿಮಿಷ) ಗಳಿಸಿದ ಗೋಲಿನಿಂದ ಈಸ್ಟ್ ಬೆಂಗಾಲ್ ತಂಡವನ್ನು 2-0 ಗೋಲುಗಳ ಅಂತರದಲ್ಲಿ ಮಣಿಸಿದ ನಾರ್ಥ್ ಈಸ್ಟ್ ಯುನೈಟೆಡ್ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಅಜೇಯವಾಗಿ ಮುನ್ನಡೆದಿದೆ. 33ನೇ ನಿಮಿಷದಲ್ಲಿ ಸುರಶ್ಚಂದ್ರ ಸಿಂಗ್ ನೀಡಿದ ಉಡುಗೊರೆ ಗೋಲಿನಿಂದ ನಾರ್ಥ್ ಈಸ್ಟ್ ಯುನೈಟೆಡ್ ತಂಡ ಈಸ್ಟ್ ಬೆಂಗಾಲ್ ವಿರುದ್ಧದ ಪ್ರಥಮಾರ್ಧದಲ್ಲಿ ಮುನ್ನಡೆ ಕಂಡಿತು.

 ನಪೋಲಿ ಸ್ಟೇಡಿಯಂಗೆ ಫುಟ್ಬಾಲ್‌ ದಂತಕತೆ ಡಿಯಾಗೋ ಮರಡೋನಾ ಹೆಸರು ನಪೋಲಿ ಸ್ಟೇಡಿಯಂಗೆ ಫುಟ್ಬಾಲ್‌ ದಂತಕತೆ ಡಿಯಾಗೋ ಮರಡೋನಾ ಹೆಸರು

ಹಿಂದಿನ ಪಂದ್ಯದಲ್ಲಿ ತಂಡದ ಯಶಸ್ಸಿಗೆ ಕಾರಣರಾಗಿದ್ದ ಇಡ್ರಿಸ್ಸಾ ಸಿಲ್ಲಾ ಈ ಗೋಲು ಗಳಿಕೆಯಲ್ಲಿ ಪ್ರಮುಖ ಪಾತ್ರವಹಿಸಿದರು. ಗೋಲು ಯಾರು ಗಳಿಸಿದರು ಎಂಬುದು ಬಹಳ ಹೊತ್ತು ಗೊತ್ತಾಗಲಿಲ್ಲ. ಇಡ್ರಿಸ್ಸಾ ಹೆಡರ್ ಮೂಲಕ ಕ್ವಿಸ್ಸಿ ಅಪ್ಪಿಯ್ಯ ಅವರಿಗೆ ನೀಡಿದರು. ಅಪ್ಪಿಯ್ಯ ಚೆಂಡನ್ನು ಮುನ್ನಡೆಸಿ ಕ್ರಾಸ್ ಪಾಸ್ ನೀಡಿದರು. ಸಿಲ್ಲಾ ಅವರಿಗೆ ಚೆಂಡು ಪುನಃ ಬಾಕ್ಸ್ ವಿಭಾಗದಲ್ಲಿ ದಕ್ಕಿತು. ಆದರೆ ಚೆಂಡನ್ನು ಗೋಲ್ ಬಾಕ್ಸ್ ಗೆ ತಲುಪಿಸಲಾಗಲಿಲ್ಲ.

ಭಾರತ vs ಆಸ್ಟ್ರೇಲಿಯಾ: ಪಂದ್ಯದ ಬಳಿಕದ ತಮಾಷೆಯ ಟ್ವೀಟ್‌ಗಳುಭಾರತ vs ಆಸ್ಟ್ರೇಲಿಯಾ: ಪಂದ್ಯದ ಬಳಿಕದ ತಮಾಷೆಯ ಟ್ವೀಟ್‌ಗಳು

ಆದರೂ ಚೆಂಡು ತೆವಳುತ್ತ ನೆಟ್ ಕಡೆಗೆ ಸಾಗಿತು. ಆಗ ಸುರಶ್ಚಂದ್ರ ಸಿಂಗ್ ಅವರ ಸ್ಪರ್ಷವಾದ ಕಾರಣ ಅದು ಉಡುಗೊರೆ ಗೋಲಾಗಿ ಪರಿಣಮಿಸಿತು. ಇತ್ತಂಡಗಳ ಆಕ್ರಮಣಕಾರಿ ಆಟ ಪ್ರದರ್ಶಿಸಿದರೂ ಮತ್ತೆ ಗೋಲು ದಾಖಲಾಗಲಿಲ್ಲ.

ಮೊದಲ ಜಯದ ನಿರೀಕ್ಷೆ

ಮೊದಲ ಜಯದ ನಿರೀಕ್ಷೆ

ಎಟಿಕೆ ಮತ್ತು ಮುಂಬೈ ಸಿಟಿ ಎಫ್ ಸಿ ವಿರುದ್ಧ ಸತತ ಸೋಲಿನ ನಂತರ ಎಸ್ ಸಿ ಈಸ್ಟ್ ಬೆಂಗಾಲ್ ತಂಡ ನಾರ್ಥ್ ಈಸ್ಟ್ ಯುನೈಟೆಡ್ ವಿರುದ್ಧ ಮೊದಲ ಜಯದ ಗುರಿಹೊತ್ತು ಅಂಗಣಕ್ಕೆ ಇಳಿಯಿತು. ಕೋಚ್ ರಾಬೀ ಫ್ಲವರ್ ಅವರ ಪಡೆ, ಇದುವೆರೆಗೂ ಎದುರಾಳಿಗಳಿಗೆ 5 ಗೋಲು ಗಳಿಸುವ ಅವಕಾಶ ನೀಡಿದ್ದು, ಇನ್ನೂ ಗೋಲಿನ ಖಾತೆ ತೆರೆಯಲಿಲ್ಲ. ವೈಯಕ್ತಿಕ ಪ್ರಮಾದಗಳು ತಂಡದ ಸೋಲಿಗೆ ಕಾರಣವಾಯಿತು ಎಂದು ಸ್ವತಃ ಕೋಚ್ ಹೇಳಿದ್ದಾರೆ. ಈ ಋತುವಿನಲ್ಲಿ ಉತ್ತಮ ಆರಂಭ ಕಂಡಿರುವ ನಾರ್ಥ್ ಈಸ್ಟ್ ಯುನೈಟೆಡ್ ಅದೇ ರೀತಿಯ ಆಟವನ್ನು ಗಮನದಲ್ಲಿರಿಸಕೊಂಡು ಅಂಗಣಕ್ಕಿಳಿಯಿತು. ಇಂದಿನ ಪಂದ್ಯದ ಬಗ್ಗೆ ಮಾತ್ರ ನಮ್ಮ ಗಮನ ಎಕೋಚ್ ಗೆರಾರ್ಡ್ ನಸ್ ಹೇಳಿದ್ದಾರೆ.

ಎಲ್ಲ ರೀತಿಯಲ್ಲೂ ಯಶಸ್ಸಿನ ಹೆಜ್ಜೆ

ಎಲ್ಲ ರೀತಿಯಲ್ಲೂ ಯಶಸ್ಸಿನ ಹೆಜ್ಜೆ

ನಾರ್ಥ್ ಈಸ್ಟ್ ಯುನೈಟೆಡ್ ತಂಡ ಎಲ್ಲ ರೀತಿಯಲ್ಲೂ ಯಶಸ್ಸಿನ ಹೆಜ್ಜೆ ಇಟ್ಟಿರಬಹುದು, ಆದರೆ, ಓಪನ್ ಪ್ಲೇ ವಿಭಾಗದಲ್ಲಿ ಸ್ವಲ್ಪ ಮಟ್ಟಿನ ಹಿನ್ನಡೆ ಕಂಡಿದೆ. ಗಳಿಸಿರುವ ನಾಲ್ಕು ಗೋಲುಗಳಲ್ಲಿ ಮೂರು ಗೋಲು ಸೆಟ್-ಪೀಸ್ ಮೂಲಕ ದಾಖಲಾಗಿತ್ತು. ಎರಡೂ ತಂಡದಲ್ಲೂ ಹೊಸ ಪ್ರತಿಭೆಗಳು ಇರುವುದರಿಂದ ಪಂದ್ಯದ ಬಗ್ಗೆ ಮುಂಚಿತವಾಗಿ ಮಾಲನಾಡುವುದು ಸೂಕ್ತ ಎನಿಸುವುದಿಲ್ಲ.

ಅಂಥೊನಿ ಪಿಲ್ಕಿಂಗ್ಟನ್ ಅವಲಂಬಿಸಿದೆ

ಅಂಥೊನಿ ಪಿಲ್ಕಿಂಗ್ಟನ್ ಅವಲಂಬಿಸಿದೆ

ಈಸ್ಟ್ ಬೆಂಗಾಲ್ ತಂಡ ಮಿಡ್ ಫೀಲ್ಡ್ ವಿಭಾಗದಲ್ಲಿ ಮ್ಯಾಟಿ ಸ್ಟೈನ್ಮನ್ ಮತ್ತು ಅಂಥೊನಿ ಪಿಲ್ಕಿಂಗ್ಟನ್ ಅವರನ್ನು ಹೆಚ್ಚು ಅವಲಂಬಿಸಿದೆ. ಡಿಫೆನ್ಸ್ ವಿಭಾಗದಲ್ಲಿ ಬಲ್ವತ್ ಸಿಂಗ್ ಅವರನ್ನು ಹೊರತುಪಡಿಸಿದರೆ ಇತರರು ಪರಿಣಾಮಕಾರಿಯಾಗಿ ಆಡಿಲ್ಲ. ತಂಡದಲ್ಲಿ ಕೊಂಚ ಬದಲಾವಣೆಯೊಂದಿಗೆ ಈಸ್ಟ್ ಬೆಂಗಾಲ್ ಅಂಗಣಕ್ಕಿಳಿಯಿತು. ಗೆರಾರ್ಡ್ ಸನ್ ಅವರ ನಾರ್ಥ್ ಈಸ್ಟ್ ಯುನೈಟೆಡ್ ಇದುವರೆಗೂ ಸೋಲು ಕಂಡಿರಲಿಲ್ಲ. ಡಿಫೆನ್ಸ್ ವಿಭಾಗದಲ್ಲಿ ಬೆಂಜಮಿನ್ ಲ್ಯಾಂಬೊಟ್ ಮತ್ತು ಡೈಲಾನ್ ಫಾಕ್ಸ್ ಇದುವರೆಗೂ ಉತ್ತಮ ರೀತಿಯ ಪ್ರದರ್ಶನ ತೋರಿರುವುದು ತಂಡದ ಮನೋಬಲವನ್ನು ಹೆಚ್ಚಿಸಿದೆ. ಇಡ್ರಿಸ್ಸಾ ಸಿಲ್ಲಾ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ್ದು, ಕ್ವಿಸ್ಸಿ ಅಪ್ಪಿಯ್ಯ ತಂಡಕ್ಕೆ ಆಧಾರವಾಗಿದ್ದಾರೆ.

Story first published: Saturday, December 5, 2020, 23:10 [IST]
Other articles published on Dec 5, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X