ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಅಂಕ ಹಂಚಿಕೊಂಡ ಮುಂಬೈ ಸಿಟಿ, ಜೆಮ್ಷೆಡ್ಪುರ ಎಫ್‌ಸಿ

By Isl Media
ISL 2020: Profligate Mumbai fail to crack open 10-man Jamshedpur

ಗೋವಾ: ಜೆಮ್ಷೆಡ್ಪುರ ಎಫ್ ಸಿ ಪರ ನೆರಿಜಸ್ ವಾಸ್ಕಿಸ್ (9ನೇ ನಿಮಿಷ) ಹಾಗೂ ಮುಂಬೈ ಸಿಟಿ ಪರ ಬಾರ್ಥಲೋಮ್ಯೊ ಒಗ್ಬಚೆ (15ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಹೀರೋ ಇಂಡಿಯನ್ ಸೂಪರ್ ಲೀಗ್ ನ 28ನೇ ಪಂದ್ಯ 1-1 ಗೋಲಿನಿಂದ ಡ್ರಾಗೊಂಡಿತು. ನಿರೀಕ್ಷೆಯಂತೆ ಮುಂಬೈ ಸಿಟಿ ಹಾಗೂ ಜೆಮ್ಷೆಡ್ಪುರ ತಂಡಗಳ ನಡುವಿನ ಪ್ರಥಮಾರ್ಧ ಅತ್ಯಂತ ರೋಚಕವಾಗಿ ನಡೆಯಿತು. ಆಕ್ರಮಣಕಾರಿ ಆಟವಾಡಿದ ಇತ್ತಂಡಗಳಿಗೆ ಸಮಬಲದ ಯಶಸ್ಸು.

ಅಮೆರಿಕನ್ ಪವರ್‌ಬಾಲ್ ಜಾಕ್‌ಪಾಟ್ ಆಡಿ: 520 ಮಿಲಿಯನ್ ಡಾಲರ್ ಗೆಲ್ಲಿಅಮೆರಿಕನ್ ಪವರ್‌ಬಾಲ್ ಜಾಕ್‌ಪಾಟ್ ಆಡಿ: 520 ಮಿಲಿಯನ್ ಡಾಲರ್ ಗೆಲ್ಲಿ

ಬಾರ್ಥಲೋಮ್ಯೋ ಒಗ್ಬಚೆ ಮಾಡಿದ ಪ್ರಮಾದದಿಂದಾಗಿ ಜೆಎಫ್ ಸಿ 9ನೇ ನಿಮಿಷದಲ್ಲಿ ಗೊಲು ಗಳಿಸಿ ಮುನ್ನಡೆಯಿತು. ನೆರಿಜಸ್ ವಾಸ್ಕಿಸ್ ಗಳಿಸಿ ಗೋಲು ತಂಡಕ್ಕೆ ಮುನ್ನಡೆ ತಂದುಕೊಟ್ಟಿತು. ಪಂದ್ಯದ ಆರಂಭದಲ್ಲಿ ಸಾಮಾನ್ಯ ಪಾಸ್ ಗಳು ಉದಾಸೀನದಿಂದ ಕೂಡಿರುತ್ತದೆ. ಒಗ್ಬಚೆ ನೀಡಿದ ಪಾಸ್ ಅದೇ ರೀತಿಯಿಂದ ಕೂಡಿತ್ತು.

ಭಾರತ ವಿರುದ್ಧದ ತಪ್ಪುಗಳನ್ನು ತಿದ್ದಿಕೊಳ್ಳಲು ಇದು ಅವಕಾಶ: ಸ್ಟಾರ್ಕ್ಭಾರತ ವಿರುದ್ಧದ ತಪ್ಪುಗಳನ್ನು ತಿದ್ದಿಕೊಳ್ಳಲು ಇದು ಅವಕಾಶ: ಸ್ಟಾರ್ಕ್

ಜಾಕಿಚಾಂದ್ ಸಿಂಗ್ ಈ ಪಾಸನ್ನು ನಿಯಂತ್ರಿಸಿದರು. ವೇಗದಲ್ಲಿ ಚೆಂಡನ್ನು ಮುನ್ನಡೆಸಿದ ಸಿಂಗ್ ಪೆನಾಲ್ಟಿ ವಲಯಕ್ಕೆ ಚೆಂಡನ್ನು ಪಾಸ್ ಮಾಡಿದರು. ಸಮಯ ಹಾಗೂ ಅಂತರ ಎರಡರ ಸದುಪಯೋಗ ಪಡೆದ ವಾಸ್ಕಿಸ್ ಸುಲಭವಾಗಿ ಗೋಲು ಗಳಿಸಿದರು.

ಸಂಭ್ರಮ ಹೆಚ್ಚು ಕಾಲ ಉಳಿಯಲಿಲ್ಲ

ಸಂಭ್ರಮ ಹೆಚ್ಚು ಕಾಲ ಉಳಿಯಲಿಲ್ಲ

ಜೆಎಫ್ ಸಿ ಯ ಈ ಮುನ್ನಡೆಯ ಸಂಭ್ರಮ ಹೆಚ್ಚು ಕಾಲ ಉಳಿಯಲಿಲ್ಲ. ಜೆಎಫ್ ಸಿ ಗೋಲು ಗಳಿಸುವಲ್ಲಿ ಕಾರಣರಾಗಿದ್ದ ಒಗ್ಬಚೆ ತಮ್ಮ ತಂಡಕ್ಕೆ ನೆರವಾಗಿ ಆ ನೋವನ್ನು ಕೂಡಲೇ ಮರೆಯುವಂತೆ ಮಾಡಿದರು. ಲೆ ಫ್ರಾಂಡೆ ಅವರ ಕಾರ್ನರ್ ಕಿಕ್ ಬಿಪಿನ್ ಸಿಂಗ್ ಅವರ ನಿಯಂತ್ರಣಕ್ಕೆ ಸಿಕ್ಕಿತು. ಅವರು ಚೆಂಡನ್ನು ಬಾರ್ಥಲೋಮ್ಯೊ ಒಗ್ಬಚೆಗೆ ನೀಡಿದರು. ಒಗ್ಬಚೆ ಎದುರಾಳಿ ತಂಡದ ಗೋಲ್ ಕೀಪರ್ ಟಿ ಪಿ ರೆಹನೇಶ್ ಅವರನ್ನು ವಂಚಿಸುವಲ್ಲಿ ಸಫಲರಾದರು. ಪಂದ್ಯ 1-1ರಲ್ಲಿ ಸಮಬಲಗೊಂಡಿತು. ಐಟರ್ ಮನ್ರಾಯ್ ಅವರು ಎರಡನೇ ಬಾರಿಗೆ ರೆಡ್ ಹಳದಿ ಕಾರ್ಡ್ ಗಳಿಸಿ ರೆಡ್ ಕಾರ್ಡ್ ಮೂಲಕ ಅಂಗಣದಿಂದ ಹೊರನಡೆದದ್ದು ಟಾಟಾ ಪಡೆಗೆ ತುಂಬಲಾರದ ನಷ್ಟವಾಯಿತು. ಕೇವಲ 10 ಮಂದಿ ಆಟಗಾರರಿದ್ದರೂ ಜೆಎಫ್ ಸಿ ಉತ್ತಮ ರೀತಿಯಲ್ಲಿ ಹೋರಾಟ ನೀಡಿತು.

ಕುತೂಹಲದ ಪಂದ್ಯ

ಕುತೂಹಲದ ಪಂದ್ಯ

ಹೀರೊ ಇಂಡಿಯನ್ ಸೂಪರ್ ಲೀಗ್ ನ 28ನೇ ಪಂದ್ಯದಲ್ಲಿ ಮುಂಬಯ ಸಿಟಿ ಎಫ್ ಸಿ ಹಾಗೂ ಜೆಮ್ಷೆಡ್ಪುರ ಎಫ್ ಸಿ ಮುಖಾಮುಖಿಯಾದವು. ಇತ್ತಂಡಗಳ ಸಾಮರ್ಥ್ಯವನ್ನು ಗಮನಿಸಿದಾಗ ಪಂದ್ಯ ಕುತೂಹಲದ ಕ್ಷಣಗಳಿಗೆ ಸಾಕ್ಷಿಯಾಗುವುದು ಸ್ಪಷ್ಟ. ಮುಂಬೈ ಸಿಟಿ ತಂಡ ಸತತವಾಗಿ ನಾಲ್ಕು ಪಂದ್ಯಗಳಲ್ಲಿ ಜಯ ಗಳಿಸಿ ಆತ್ಮವಿಶ್ವಾಸದಲ್ಲಿದೆ. ಜೆಮ್ಷೆಡ್ಪುರ ತಂಡ ಕೇವಲ ಒಂದು ಪಂದ್ಯದಲ್ಲಿ ಗೆದ್ದು, ಮೂರು ಪಂದ್ಯಗಳಲ್ಲಿ ಡ್ರಾ ಕಂಡಿದೆ. ಆಡಿರುವ ಐದು ಪಂದ್ಯಗಳಲ್ಲಿ ಮುಂಬೈ ಎದುರಾಳಿ ತಂಡಕ್ಕೆ ಕೇವಲ ಎರಡು ಗೋಲು ಗಳಿಸಲು ಅವಕಾಶ ಕಲ್ಪಿಸಿದೆ. ಹ್ಯುಗೋ ಬೌಮಾಸ್ ಗೋಲು ಗಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಆಡೊ ಲೆ ಫ್ರಾಂಡೆ ನಾಲ್ಕು ಗೋಲುಗಳನ್ನು ಗಳಿಸಿ ತಂಡದ ಪರ ಅತಿ ಹೆಚ್ಚು ಗೋಲು ಗಳಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.

ಆರು ಗೋಲುಗಳನ್ನು ಗಳಿಸಿದೆ

ಆರು ಗೋಲುಗಳನ್ನು ಗಳಿಸಿದೆ

ಸೆಟ್-ಪೀಸ್ ಮೂಲಕ ಮುಂಬೈ ಆರು ಗೋಲುಗಳನ್ನು ಗಳಿಸಿದೆ. ಜೆಮ್ಷೆಡ್ಪುರ ತಂಡ ಸೆಟ್ -ಪಿಸ್ ಮೂಲಕ ಕೇವಲ ಒಂದು ಗೋಲು ಗಳಿಸಿದೆ. ಪೀಟರ್ ಹಾರ್ಟ್ಲೆ ಹಾಗೂ ಸ್ಟೀಫನ್ ಎಝಿ ಅವರು ತಂಡವನ್ನು ಸೋಲಿನಿಂದ ಪಾರು ಮಾಡಿದ್ದಾರೆ.ಡಿಫೆನ್ಸ್ ವಿಭಾಗದಲ್ಲಿ ನೆರಜಸ್ ವಾಸ್ಕಿಸ್ ತಂಡದ ಪರ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರರೆನಿಸಿದ್ದಾರೆ. ಇಂದಿನ ಪಂದ್ಯದಲ್ಲಿ ಜಯ ಗಳಿಸಿದರೆ ಮುಂಬೈ ಅಗ್ರ ಸ್ಥಾನ ತಲುಪಲಿದೆ. ಜೆಮ್ಷೆಡ್ಪುರ ಅಗ್ರ ನಾಲ್ಕನೇ ಸ್ಥಾನ ತಲುಪಲಿದೆ.

Story first published: Tuesday, December 15, 2020, 10:07 [IST]
Other articles published on Dec 15, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X