ಐಎಸ್‌ಎಲ್ 2020: ಜಯ ಕಾಣದ ಗೋವಾ, ಮತ್ತೊಂದು ಪಂದ್ಯ ಡ್ರಾ

By Isl Media

ಗೋವಾ, ನವೆಂಬರ್ 30: ನಾರ್ಥ್ ಈಸ್ಟ್ ಯುನೈಟೆಡ್ ಪರ ಇಡ್ರಿಸ್ಸಾ ಸಿಲ್ಲಾ (40ನೇ ನಿಮಿಷ) ಮತ್ತು ಗೋವಾ ಪರ ಐಗರ್ ಆಂಗುಲೊ (43ನೇ ನಿಮಿಷ) ತಲಾ ಒಂದು ಗೋಲು ಗಳಿಸುವುದರೊಂದಿಗೆ ಹೀರೋ ಇಂಡಿಯನ್ ಸೂಪರ್ ಲೀಗ್ ನ 12ನೇ ಪಂದ್ಯ 1-1 ಗೋಲಿನಿಂದ ಸಮಬಲಗೊಂಡಿತು. ಡಿಫೆನ್ಸ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ತೋರಿದ ನಾರ್ಥ್ ಈಸ್ಟ್ ವಿರುದ್ಧ ಗೋವಾಕ್ಕೆ ಜಯದ ಖಾತೆ ತೆರೆಯಲಾಗಲಿಲ್ಲ.

ಉತ್ತಮ ಉದಾಹರಣೆಯೊಂದಿಗೆ ಬೂಮ್ರಾ ಸಮರ್ಥಿಸಿದ ಕೆಎಲ್ ರಾಹುಲ್

ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಸೋಮವಾರ ಉತ್ತಮ ಪೈಪೋಟಿಯಿಂದ ಪಂದ್ಯವೊಂದು ಪ್ರೇಕ್ಷಕರನ್ನು ರಂಜಿಸಿತು. ಎರಡೂ ತಂಡಗಳು ಉತ್ತಮ ಪಾಸ್ ನೀಡುತ್ತಿರುವಾಗ ಒಂದು ಚಿಕ್ಕ ಪ್ರಮಾದ ಎದುರಾಳಿ ತಂಡಕ್ಕೆ ಗೋಲು ಗಳಿಸಲು ಅವಕಾಶ ಮಾಡಿಕೊಡುತ್ತದೆ ಎಂಬುದಕ್ಕೆ ಉದಾಹರಣೆಯಾಯಿತು.

ಫಾರ್ಮುಲಾ 1 ರೇಸ್‌ನಲ್ಲಿ ಭೀಕರ ಅಪಘಾತ, ಹೊತ್ತಿ ಉರಿದ ಕಾರು: ವಿಡಿಯೋ

40ನೇ ನಿಮಿಷದವರೆಗೂ ಇತ್ತಂಡಗಳು ಗೋಲು ಗಳಿಸುವಲ್ಲಿ ವಿಫಲವಾಗಿದ್ದವು. ನಾರ್ಥ್ ಈಸ್ಟ್ ಎರಡು ಅವಕಾಶಗಳನ್ನು ಕೈ ಚೆಲ್ಲಿತ್ತು. ಆದರೆ 40ನೇ ನಿಮಿಷದಲ್ಲಿ ಗೋವಾ ಆಟಗಾರರು ಪೆನಾಲ್ಟಿ ವಲಯದಲ್ಲಿ ಇಡ್ರಿಸ್ಸಾ ಸಿಲ್ಲಾ ಅವರನ್ನು ಉದ್ದೇಶಪೂರ್ವಕವಾಗಿ ತಡೆದ ಕಾರಣ ರೆಫರಿ ಪೆನಾಲ್ಟಿಗೆ ಅವಕಾಶ ನೀಡಿದರು.

ಸಂಭ್ರಮ ಹೆಚ್ಚು ಕಾಲ ಉಳಿಯಲಿಲ್ಲ

ಸಂಭ್ರಮ ಹೆಚ್ಚು ಕಾಲ ಉಳಿಯಲಿಲ್ಲ

ಸಿಲ್ಲಾ ಮೊದಲ ಕಿಕ್ ನಲ್ಲಿ ಗೋಲಾಗಿತ್ತು, ಆದರೆ,ಲಾಲ್ರಿಂಪುಯಾ ಮುಂದೆ ಬಂದ ಕಾರಣ ಪುನಃ ಪೆನಾಲ್ಟಿ ಹೊಡೆತಕ್ಕೆ ಅವಕಾಶ ನೀಡಲಾಗಿ ಸಿಲ್ಲಾ ತಂಡದ ಪರ ಗೋಲು ಗಳಿಸುವಲ್ಲಿ ಯಶಸ್ವಿಯಾದರು. ನಾರ್ಥ್ ಈಸ್ಟ್ ನ ಈ ಸಂಭ್ರಮ ಹೆಚ್ಚು ಕಾಲ ಉಳಿಯಲಿಲ್ಲ. 43ನೇ ನಿಮಿಷದಲ್ಲಿ ಐಗರ್ ಆಂಗುಲೊ ಗಳಿಸಿದ ಗೋಲಿನಿಂದ ಪ್ರಥಮಾರ್ಧ 1-1ರಲ್ಲಿ ಸಮಬಲಗೊಂಡಿತು.

ಚೆಂಡು ಗೋಲ್ ಬಾಕ್ಸ್ ನಿಂದ ಹೊರಕ್ಕೆ

ಚೆಂಡು ಗೋಲ್ ಬಾಕ್ಸ್ ನಿಂದ ಹೊರಕ್ಕೆ

34ನೇ ನಿಮಿಷದಲ್ಲಿ ಸಿಲ್ಲಾ ಅವರಿಗೆ ಗೋಲು ಗಳಿಸುವ ಅವಕಾಶ ಉತ್ತಮವಾಗಿತ್ತು ಆದರೆ ಹೆಡರ್ ಮೂಲಕ ಚಿಮ್ಮಿದ ಚೆಂಡು ಗೋಲ್ ಬಾಕ್ಸ್ ನಿಂದ ಹೊರಸಾಗಿತ್ತು. ಮೊಹಮ್ಮದ್ ನವಾಜ್ ಉತ್ತಮ ರೀತಿಯಲ್ಲಿ ಗೋಲ್ ಕೀಪಿಂಗ್ ಮಾಡಿದ್ದು ನಾರ್ಥ್ ಈಸ್ಟ್ ನ ಮತ್ತೊಂದು ಗೋಲು ಗಳಿಸುವ ಅವಕಾಶವನ್ನು ಕಸಿದುಕೊಂಡಿತು.

ಗೋವಾಕ್ಕೆ ಮೊದಲ ಜಯದ ನಿರೀಕ್ಷೆ

ಗೋವಾಕ್ಕೆ ಮೊದಲ ಜಯದ ನಿರೀಕ್ಷೆ

ಹೀರೋ ಇಂಡಿಯನ್ ಸೂಪರ್ ಲೀಗ್ ನ 12ನೇ ಪಂದ್ಯದಲ್ಲಿ ಎಫ್ ಸಿ ಗೋವಾ ಮತ್ತು ನಾರ್ಥ್ ಈಸ್ಟ್ ಯುನೈಟೆಡ್ ತಂಡಗಳು ಮುಖಾಮುಖಿಯಾದವು. ಆಡಿರುವ ಎರಡು ಪಂದ್ಯಗಳಲ್ಲಿ ಒಂದು ಸೋಲು ಹಾಗೂ ಒಂದು ಡ್ರಾ ಗಳಿಸಿ 10ನೇ ಸ್ಥಾನದಲ್ಲಿದೆ. ನಾರ್ಥ್ ಈಸ್ಟ್ ಯುನೈಟೆಡ್ ಎರಡು ಪಂದ್ಯಗಳಲ್ಲಿ ಒಂದು ಜಯ ಮತ್ತು ಒಂದು ಡ್ರಾ ಕಂಡು ಎರಡನೇ ಸ್ಥಾನದಲ್ಲಿದೆ. ಜುವಾನ್ ಫೆರಾಂಡೊ ಪಡೆ ಹಸಿರು ಅಂಗಣದಲ್ಲಿ ಇದುವರೆಗೂ ತನ್ನ ನೈಜ ಸಾಮರ್ಥ್ಯ ತೋರಿಲ್ಲ. ಗಳಿಸಿದ್ದು ಎರಡು ಗೋಲು ಮಾತ್ರ. ತಂಡ ಇದುವರೆಗೂ ತೋರಿದ ಪ್ರದರ್ಶನಲ್ಲಿ ಫಲಿತಾಂಶದ ಮೇಲೆ ಅಷ್ಟೇನು ಪರಿಣಾಮ ಬೀರಲಿಲ್ಲ.

ಎಡುಬೇಡಿಯಾ ಮೇಲೆ ಹೆಚ್ಚಿನ ಜವಾಬ್ದಾರಿ

ಎಡುಬೇಡಿಯಾ ಮೇಲೆ ಹೆಚ್ಚಿನ ಜವಾಬ್ದಾರಿ

ರೆದೀಮ್ ತಾಂಗ್ ಅಮಾನತುಗೊಂಡಿರುವ ಹಿನ್ನೆಲೆಯಲ್ಲಿ ನಾಯಕ ಎಡುಬೇಡಿಯಾ ಅವರ ಮೇಲೆ ಹೆಚ್ಚಿನ ಜವಾಬ್ದಾರಿ ಬೀಳಲಿದೆ. ಆದರೆ ಗೆರಾರ್ಡ್ ನಸ್ ಅವರಲ್ಲಿ ಪಳಗಿರುವ ನಾರ್ಥ್ ಈಸ್ಟ್ ವಿರುದ್ಧ ಗೋಲು ಗಳಿಸುವುದು ಅಷ್ಟು ಸುಲಭವಲ್ಲ. ಪರ್ವತಪ್ರದೇಶದ ತಂಡ ಈ ಬಾರಿ ಉತ್ತಮ ರೀತಿಯ ಡಿಫೆನ್ಸ್ ವಿಭಾಗವನ್ನು ಹೊಂದಿದೆ. ಇದುವರೆಗೂ ಎದುರಾಳಿ ತಂಡಕ್ಕೆ ಕೇವಲ ಎರಡು ಬಾರಿ ಶಾಟ್ ಗೆ ಅವಕಾಶ ನೀಡಿದೆ. ಡೈಲಾನ್ ಫಾಕ್ಸ್ ಮತ್ತು ಬೆಂಜಮಿನ್ ಲಾಂಬಾಟ್ ಅವರ ಗೋಡೆಯನ್ನು ದಾಟವುದು ಗೋವಾಕ್ಕೆ ಅಷ್ಟು ಸುಲಭವಾದುದಲ್ಲ. ಇತ್ತಂಡಗಳಿಗೂ ಇದು ಸವಾಲಿನ ಪಂದ್ಯವಾಗಿದೆ.

For Quick Alerts
ALLOW NOTIFICATIONS
For Daily Alerts
Story first published: Monday, November 30, 2020, 22:19 [IST]
Other articles published on Nov 30, 2020
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X