ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಜೆಮ್ಶೆಡ್ಪುರ ಎಫ್‌ಸಿ vs ಹೈದರಾಬಾದ್ ಎಫ್‌ಸಿ ಪಂದ್ಯ ಡ್ರಾದಲ್ಲಿ ಅಂತ್ಯ

ISL 2021-22: match 15, HFC vs JFC, match draw by 1-1 Highlights

ಇಂಡಿಯನ್ ಸೂಪರ್ ಲೀಗ್‌ನ 15ನೇ ಪಂದ್ಯದಲ್ಲಿ ಜೆಮ್ಶೆಡ್ಪುರ ಎಫ್‌ಸಿ ಹಾಗೂ ಹೈದರಾಬಾದ್ ಎಫ್‌ಸಿ ತಂಡಗಳು ಮುಖಾಮುಖಿಯಾಗಿದೆ. ಈ ಜಿದ್ದಾಜಿದ್ದಿನಿಂದ ಕೂಡದ ಈ ಪಂದ್ಯ 1-1 ಗೋಲುಗಳಿಂದ ಡ್ರಾ ಫಲಿತಾಂಶವನ್ನು ಪಡೆದುಕೊಂಡಿದೆ. ಈ ಮೂಲಕ ಟಾಪ್ 4ರಲ್ಲಿ ಸ್ಥಾನ ಗಳಿಸುವ ಮೇಲೆ ಕಣ್ಣಿಟ್ಟಿದ್ದ ಎರಡು ತಂಡಗಳಿಗೂ ನಿರಾಸೆಯಾಗಿದೆ.

ತೀವ್ರ ಪೈಪೋಟಿಯಿಂದ ಕೂಡಿದ್ದ ಈ ಪಂದ್ಯದಲ್ಲಿ ಆರಂಭದಲ್ಲಿ ಎರಡು ತಂಡಗಳು ಕೂಡ ಗೋಲು ಗಳಿಸಲು ವಿಫಲವಾಗಿದ್ದವು. ಆದರೆ ಪಂದ್ಯದ 41ನೇ ನಿಮಿಷದಲ್ಲಿ ಜೆಮ್ಶೆಡ್ಪುರ ಎಪ್‌ಸಿ ಮೊದಲ ಗೋಲು ಗಳಿಸುವಲ್ಲಿ ಯಶಸ್ವಿಯಾಯಿತು. ಸ್ಕಾಟಿಷ್ ಫುಟ್ಬಾಲರ್ ಗ್ರೆಗ್ ಸ್ಟೆವರ್ಟ್ ಜೆಮ್ಶೆಡ್ಪುರ ಪರವಾಗಿ ಈ ಗೋಲು ಸಿಡಿಸಿ ತಂಡಕ್ಕೆ ಮುನ್ನಡೆಯನ್ನು ಒದಗಿಸಿದರು. ಆದರೆ ಹೈದರಾಬಾದ್ ಎಫ್‌ಸಿ ಮೊದಲಾರ್ಧದಲ್ಲಿ ಯಾವುದೇ ಗೋಲು ಗಳಿಸಲು ವಿಫಲವಾಗಿತ್ತು.

ಐಪಿಎಲ್ 2022: ಕಡಿಮೆ ಬೆಲೆಗೆ ರೀಟೈನ್ ಆದ ಕೊಹ್ಲಿ, ಧೋನಿ: ವೇತನ ಕಡಿತಕ್ಕೆ ಹೇಗೆ ಒಪ್ಪಿಕೊಂಡ್ರು?ಐಪಿಎಲ್ 2022: ಕಡಿಮೆ ಬೆಲೆಗೆ ರೀಟೈನ್ ಆದ ಕೊಹ್ಲಿ, ಧೋನಿ: ವೇತನ ಕಡಿತಕ್ಕೆ ಹೇಗೆ ಒಪ್ಪಿಕೊಂಡ್ರು?

ಆದರೆ ದ್ವಿತೀಯಾರ್ಧ ಆರಂಭವಾದ ಕೆಲವೇ ನಿಮಿಷಗಳಲ್ಲಿ ಪಂದ್ಯದ 57ನೇ ನಿಮಿಷದಲ್ಲಿ ಹೈದರಾಬಾದ್ ಎಫ್‌ಸಿ ತಂಡ ಕೂಡ ಗೋಲು ದಾಖಲಿಸುವಲ್ಲಿ ಯಶಸ್ವಿಯಾಯಿತು. ಬೈಜೀರಿಯಾದ ಫುಟ್ಬಾಲ್ ಆಟಗಾರ ಬಾರ್ಥೊಲೊವೋವ್ ಲೊಗ್ಬೇಚೇ ಹೈದರಾಬಾದ್ ತಂಡದ ಪರವಾಗಿ ಈ ಗೋಲು ದಾಖಲಸುವಲ್ಲಿ ಯಶಸ್ವಿಯಾದರು. ಈ ಮೂಲಕ ಹೈದರಾಬಾದ್ ತಂಡ ಸಮಬಲ ಸಾಧಿಸುವಲ್ಲಿ ಯಶಸ್ವುಯಾಯಿತು. ಅದಾದ ಬಳಿಕ ಎರಡು ತಮಡಗಳು ಕೂಡ ಸಾಕಷ್ಟು ಪ್ರಯತ್ನಿಸಿತಾದರೂ ಯಾವ ತಂಡ ಕೂಡ ಗೋಲು ಗಳಿಸುವಲ್ಲಿ ವಿಫಲವಾಯಿತು. ಈ ಮೂಲಕ ಪಂದ್ಯ ಡ್ರಾದೊಂದಿಗೆ ಅಂತ್ಯ ಕಂಡಿದೆ.

ಕೊಹ್ಲಿ ಏಕದಿನ ನಾಯಕತ್ವದ ಭವಿಷ್ಯ ಈ ವಾರವೇ ನಿರ್ಧಾರ; ಈ ಇಬ್ಬರು ಕೊಹ್ಲಿ ಬೇಡ ಎಂದರೆ ಹೊಸ ನಾಯಕ ಫಿಕ್ಸ್!ಕೊಹ್ಲಿ ಏಕದಿನ ನಾಯಕತ್ವದ ಭವಿಷ್ಯ ಈ ವಾರವೇ ನಿರ್ಧಾರ; ಈ ಇಬ್ಬರು ಕೊಹ್ಲಿ ಬೇಡ ಎಂದರೆ ಹೊಸ ನಾಯಕ ಫಿಕ್ಸ್!

ಹೈದರಾಬಾದ್ ಎಫ್‌ಸಿ ಆಡುವ ಬಳಗ: ಲಕ್ಷ್ಮೀಕಾಂತ್ ಕಟ್ಟಿಮನಿ (ಗೋಲ್‌ಕೀಪರ್), ಜುವಾನನ್, ಚಿಂಗ್ಲೆನ್ಸನಾ ಸಿಂಗ್, ಆಕಾಶ್ ಮಿಶ್ರಾ, ಆಸಿಶ್ ರೈ, ಜೋವೊ ವಿಕ್ಟರ್ (ನಾಯಕ), ಅನಿಕೇತ್ ಜಾಧವ್, ಯಾಸಿರ್ ಮೊಹಮ್ಮದ್, ಹಿತೇಶ್ ಶರ್ಮಾ, ಜೋಯಲ್ ಚಿಯಾನೀಸ್ ಮತ್ತು ಬಾರ್ತಲೋಮಿವ್ ಓಗ್ಬೆಚೆ.

ಜೆಮ್ಶಡ್ಪುರ ಎಫ್‌ಸಿಆಡುವ ಬಳಗ: ಟಿಪಿ ರೆಹನೇಶ್ (ಗೋಲ್‌ಕೀಪರ್), ನರೇಂದರ್ ಗಹ್ಲೋಟ್, ರಿಕಿ ಲಲ್ಲಾವ್ಮಾ, ಎಲಿ ಸಬಿಯಾ (ನಾಯಕ), ಲಾಲ್ಡಿನ್ಲಿಯಾನಾ ರೆಂತ್ಲೀ, ಜಿತೇಂದ್ರ ಸಿಂಗ್, ಸೆಮಿನ್ಲೆನ್ ಡೌಂಗೆಲ್, ಕೋಮಲ್ ಥಾಟಲ್, ಅಲೆಕ್ಸಾಂಡ್ರೆ ಲಿಮಾ, ನೆರಿಜಸ್ ವಾಲ್ಸ್ಕಿಸ್ ಮತ್ತು ಗ್ರೆಗ್ ಸ್ಟೀವರ್ಟ್.

Story first published: Thursday, December 2, 2021, 23:52 [IST]
Other articles published on Dec 2, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X