ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಒಡಿಶಾ ಎಫ್‌ಸಿಗೆ ಸೋಲಿನ ರುಚಿ ತೋರಿಸಿದ ಕೇರಳ ಬ್ಲಾಸ್ಟರ್ಸ್ ಎಫ್‌ಸಿ

ISL 2021-22: match 19 KBFC vs OFC, Kerala Blasters FC won the match by 2-1 Highlights

ಇಂಡಿಯನ್ ಸೂಪರ್ ಲೀಗ್‌ನ ಈ ಬಾರಿಯ ಆವೃತ್ತಿಯ 19ನೇ ಪಂದ್ಯದಲ್ಲಿ ಒಡಿಶಾ ಎಫ್‌ಸಿ ಹಾಗೂ ಕೇರಳ ಬ್ಲಾಸ್ಟರ್ಸ್ ಎಫ್‌ಸಿ ಮುಖಾಮುಖಿಯಾಗಿ ಜಿದ್ದಾಜಿದ್ದಿನ ಪ್ರದರ್ಶನ ನೀಡಿದೆ. ಈ ಹೋರಾಟದಲ್ಲಿ ಕೇರಳ ಬ್ಲಾಸ್ಟರ್ಸ್ ಎಫ್‌ಸಿ ತಂಡ ಈ ಬಾರಿಯ ಟೂರ್ನಿಯಲ್ಲಿ ಮೊದಲ ಗೆಲುವು ಸಾಧಿಸಲು ಯಶಸ್ವಿಯಾಗಿದೆ. ಮತ್ತೊಂದೆಡೆ ಒಡಿಶಾ ಎಫ್‌ಸಿ ತಂಡ ಮೊದಲ ಸೋಲು ಅನುಭವಿಸಿದೆ.

ಈ ಪಂದ್ಯದ ಮೊದಲಾರ್ಧದಲ್ಲಿ ಎರಡು ತಂಡಗಳು ಕೂಡ ಯಾವುದೇ ಗೋಲು ಗಳಿಸಲು ಸಾಧ್ತವಾಗಿರಲಿಲ್ಲ. ಆದರೆ ಎದ್ವಿತೀಯಾರ್ಧದಲ್ಲಿ ಕೇರಳ ಬ್ಲಾಸ್ಟರ್ಸ್ ತಂಡ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು, ಇದರಲ್ಲಿ ಕೇರಳ ಬ್ಲಾಸ್ಟರ್ಸ್ ಯಶಸ್ಸು ಕೂದ ಸಾಧಿಸಿತು. ಪಂದ್ಯದ 62ನೇ ನಿಮಿಷದಲ್ಲಿ ಕೇರಳ ಬ್ಲಾಸ್ಟರ್ಸ್ ತಂಡದ ಪರವಾಗಿ ಎಲ್ವಾರೋ ಅಸ್ಕ್ಯೂಜ್ ಗೋಲಿನ ಖಾತೆ ತೆರೆದು ತಂಡಕ್ಕೆ ಮುನ್ನಡೆಯನ್ನು ಒದಗಿಸಿದರು. ಅದಾದ ಬಳಿಕ 85ನೇ ನಿಮಿಷದಲ್ಲಿ ಪ್ರಶಾಂತ್ ಕುರುತಾಡಾತ್ಕುನಿ ಕೇರಳ ಪರವಾಗಿ ಎರಡನೇ ಗೋಲು ಬಾರಿಸಿ ಮುನ್ನಡೆಯನ್ನು 2-0 ಅಂತರಕ್ಕೆ ಹೆಚ್ಚಿಸಿದರು. ಅದಾದ ಬಳಿಕ ಅಂತಿಮ ನಿಮಿಷದಲ್ಲಿ ಒಡಿಶಾ ಎಫ್‌ಸಿ ತಂಡದ ಪರವಾಗಿ ನಿಖಿಲ್ ರಾಜ್ ಗೋಲು ದಾಖಲಿಸಿದರು. ಈ ಮೂಲಕ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ತಂಡ 2-1 ಅಂತರದಿಮದ ಭರ್ಜರಿ ಗೆಲುವು ದಾಖಲಿಸಿದೆ.

ಭಾರತ-ನ್ಯೂಜಿಲೆಂಡ್ 2ನೇ ಟೆಸ್ಟ್‌: ಡಿಕ್ಲೇರ್ ಘೋಷಿಸಿದ ಟೀಂ ಇಂಡಿಯಾ, ಭಾರತಕ್ಕೆ 539 ರನ್‌ಗಳ ಮುನ್ನಡೆಭಾರತ-ನ್ಯೂಜಿಲೆಂಡ್ 2ನೇ ಟೆಸ್ಟ್‌: ಡಿಕ್ಲೇರ್ ಘೋಷಿಸಿದ ಟೀಂ ಇಂಡಿಯಾ, ಭಾರತಕ್ಕೆ 539 ರನ್‌ಗಳ ಮುನ್ನಡೆ

ಇನ್ನು ಈ ಗೆಲುವಿನ ಮೂಲಕ ಕೆರಳ ಬ್ಲಾಸ್ಟರ್ಸ್ ತಂಡ ಈ ಬಾರಿಯ ಆವೃತ್ತಿಯಲ್ಲಿ ಮೊದಲ ಗೆಲುವು ದಾಖಲಿಸಿದೆ. ಅಲ್ಲದೆ ಅಂಕಪಟ್ಟಿಯಲ್ಲಿಯೂ ಪ್ರಗರಿ ಸಾಧಿಸಿದೆ. ಸದ್ಯ ಕೇರಳ ಬ್ಲಾಸ್ಟರ್ಸ್ ತಂಡ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಇನ್ನು ಆರಂಭಿಕ ಎರಡು ಪಂದ್ಯಗಳನ್ನು ಕೂಡ ಗೆದ್ದು ಬೀಗಿದ್ದ ಒಡಿಶಾ ಎಫ್‌ಸಿ ಈ ಪಂದ್ಯದ ಮೂಲಕ ಮೊದಲ ಸೋಲು ಅನುಭವಿಸಿದೆ. ಆದರೆ ಸದ್ಯಕ್ಕೆ ಅಂಕಪಟ್ಟಿಯಲ್ಲಿ ಒಡಿಶಾ ಎಫ್‌ಸಿ ತಮಡ ಮೂರನೇ ಸ್ಥಾನದಲ್ಲಿಯೇ ಮುಂದುವರಿದಿದೆ.

ಇನ್ನು ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಮುಂಬೈ ಸಿಟಿ ಎಫ್‌ಸಿ ಇದ್ದರೆ ಎರಡನೇ ಸ್ಥಾನದಲ್ಲಿ ಚೆನ್ನೈಯಿನ್ ಎಫ್‌ಸಿ ಇದೆ. ಒಡಿಶಾ ಮೂರು ಹಾಗೂ ಎಟಿಕೆ ಮೋಹನ್ ಬಾಗನ್ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ. ಬೆಂಗಳೂರು ಎಫ್‌ಸಿ ತಂಡ ನಾಲ್ಕು ಪಂದ್ಯಗಳಲ್ಲಿ ಕೇವಲ ಒಂದು ಗೆಲುವು ಸಾಧಿಸಿದ್ದು ಎರಡು ಸೋಲು ಅನುಭವಿಸಿದೆ. ಒಂದು ಪಂದ್ಯದಲ್ಲಿ ಡ್ರಾ ಫಲಿತಾಂಶ ಪಡೆದುಕೊಂಡಿದೆ. ಹೀಗಾಗಿ ಅಂಕಪಟ್ಟಿಯಲ್ಲಿ 8ನೇ ಸ್ಥಾನಕ್ಕೆ ಕುಸಿದಿದೆ.

ಒಡಿಶಾ ಎಫ್‌ಸಿ: ಕಮಲ್ಜಿತ್ ಸಿಂಗ್ (ಗೋಲ್‌ ಕೀಪರ್), ವಿಕ್ಟರ್ ಮೊಂಗಿಲ್, ಹೆಕ್ಟರ್ ರಾಮಿರೆಜ್, ಹೆಂಡ್ರಿ ಆಂಟೊನಾಯ್, ಲಾಲ್ರುತ್ಥರಾ, ಜೇವಿಯರ್ ಹೆರ್ನಾಂಡೆಜ್, ವಿನಿತ್ ರೈ (ನಾಯಕ), ಥೋಯ್ಬಾ ಸಿಂಗ್, ಇಸಾಕ್ ವನ್ಲಾಲ್ರುವಾಟ್ಫೆಲಾ, ಜೇವಿಯರ್ ಹೆರ್ನಾಂಡೆಜ್, ಜೆರ್ರಿ ಮಾವಿಹ್ಮಿಂಗ್ತಂಗ ಮತ್ತು ಅರಿಡೈ ಸೌರೆಜ್.

ಕೇರಳ ಬ್ಲಾಸ್ಟರ್ಸ್ ಎಫ್‌ಸಿ : ಅಲ್ಬಿನೊ ಗೋಮ್ಸ್ (ಗೋಲ್‌ ಕೀಪರ್), ಎನೆಸ್ ಸಿಪೊವಿಕ್, ಜೆಸೆಲ್ ಕಾರ್ನೆರೊ (ನಾಯಕ), ಮಾರ್ಕೊ ಲೆಸ್ಕೊವಿಕ್, ಲಾಲ್ತತಂಗ ಖೌಲ್ಹ್ರಿಂಗ್, ಹರ್ಮನ್ಜೋತ್ ಖಬ್ರಾ, ಸಹಲ್ ಸಮದ್, ಆಡ್ರಿಯನ್ ಲೂನಾ, ಜೀಕ್ಸನ್ ಸಿಂಗ್, ವಿನ್ಸಿ ಬ್ಯಾರೆಟ್ಟೊ ಮತ್ತು ಅಲ್ವಾರೊ ವಾಜ್ಕ್ವೆಜ್.

Story first published: Monday, December 6, 2021, 0:20 [IST]
Other articles published on Dec 6, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X