ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2021: ನಾರ್ಥ್‌ಈಸ್ಟ್ ವಿರುದ್ಧ ರೋಮಾಂಚಕ ರೀತಿಯಲ್ಲಿ ಗೆದ್ದ ಜೆಮ್ಶೆಡ್ಪುರ ಎಫ್‌ಸಿ

ISL 2021-22: match 51 NEUFC vs JFC, Jamshedpur FC match won by 3-2, Highlights

ಇಂಡಿಯನ್ ಸೂಪರ್ ಲೀಗ್‌ನಲ್ಲಿ ಇಂದು ನಾರ್ಥ್‌ಈಸ್ಟ್ ಯುನೈಟೆಡ್ ಎಫ್‌ಸಿ ಹಾಗೂ ಜೆಮ್ಶೆಡ್ಪುರ ಎಫ್‌ಸಿ ತಂಡಗಳು ಮುಖಾಮುಖಿಯಾಗಿದೆ. ಈ ಹಣಾಹಣಿಯಲ್ಲಿ ನಾರ್ಥ್‌ಈಸ್ಟ್ ಯುನೈಟೆಡ್ ತಂಡ ಜೆಮ್ಶೆಡ್ಪುರ ಎಫ್‌ಸಿ ತಂಡದ ವಿರುದ್ಧ ರೋಚಕ ಗೆಲುವು ಸಾಧಿಸಿದೆ. ಪಂದ್ಯದ ಅಂತಿಮ ಹಂತದವರೆಗೂ ನಾರ್ಥ್‌ಈಸ್ಟ್ ಯುನೈಟೆಡ್ ಎಫ್‌ಸಿ ತಂಡ ಮುನ್ನಡೆಯನ್ನು ಸಾಧಿಸಿತ್ತು. ಆದರೆ ಕೊನೇಯ ನಿಮಿಷದಲ್ಲಿ ರೋಚಕ ತಿರುವು ಪಂಡೆದ ಪಂದ್ಯದಲ್ಲಿ ಯಾರೂ ಊಹಿಸದ ರೀತಿಯಲ್ಲಿ ಜೆಮ್ಶಡೆ್ಪುರ ಎಫ್‌ಸಿ ತಂಡ ಗೆದ್ದು ಬೀಗಿದೆ. ಪಂದ್ಯದ ಕೊನೇಯ ನಿಮಿಷದಲ್ಲಿ ಗೋಲು ಗಳಿಸಿ ಸಮಬಲ ಸಾಧಿಸಿದ್ದ ಜೆಎಫ್‌ಸಿ ತಂ ಹೆಚ್ಚುವರಿ ಅವಧಿಯಲ್ಲಿ ಗೆಲುವಿನ ಗೋಲು ದಾಖಲಿಸಿ ರೋಚಕವಾಗಿ ಗೆದ್ದು ಬೀಗಿದೆ.

ನಾರ್ಥ್‌ಈಸ್ಟ್ ಯುನೈಟೆಡ್ ಎಫ್‌ಸಿ ತಂಡ ಪಂದ್ಯ ಆರಂಭವಾದ ನಾಲ್ಕನೇ ನಿಮಿಷದಲ್ಲಿಯೇ ಮೊದಲ ಗೋಲು ದಾಖಲಿಸುವಲ್ಲಿ ಯಶಸ್ವಿಯಾಗಿತ್ತು. ದೇಶೋರ್ನ್ ಬ್ರೌನ್ ತಂಡದ ಪರವಾಗಿ ಈ ಗೋಲಿನ ಖಾತೆ ತೆರೆಯುವಲ್ಲಿ ಯಶಸ್ವಿಯಾಗಿದ್ದರು. ಆದರೆ ನಂತರ 44ನೇ ನಿಮಿಷದಲ್ಲಿ ಜೆಮ್ಶೆಡ್ಪುರ ಎಫ್‌ಸಿ ತಂಡ ಮೊದಲ ಗೋಲು ಗಳಿಸುವ ಮೂಲಕ ಪಂದ್ಯದಲ್ಲಿ ಸಮಬಲ ಸಾಧಿಸಿತು, ಹೀಗಾಗಿ ಮೊದಲಾರ್ಧ 1-1 ಅಂತರದಿಮದ ಸಮಬಲಗೊಂಡಿತ್ತು.

ನಂತರ ದ್ವಿತಿಯಾರ್ಧದಲ್ಲಿ ಜೆಮ್ಶೆಡ್ಪುರ ಎಫ್‌ಸಿ ತಂಡ ಪಂದ್ಯದ 56ನೇ ನಿಮಿಷದಲ್ಲಿ ಮತ್ತೊಂದು ಗೋಲು ದಾಖಲಿಸುವಲ್ಲಿ ಯಶಸ್ವಿಯಾಯಿತು. ಬೋರಿಸ್ ಸಿಂಗ್ ಜೆಮ್ಶೆಡ್ಪುರ ತಂಡಕ್ಕೆ ಎರಡನೇ ಗೋಲು ದಾಖಳಿಸಿ ಮುನ್ನಡೆಯನ್ನು ಒದಗಿಸಿದರು. ಪಮದ್ಯ ಮುಕ್ತಾಯವಾಗುವ ಹಂತದಲ್ಲಿ ನಾರ್ಥ್‌ಈಸ್ಟ್ ಯುನೈಟೆಡ್ ತಮಡ ರೋಚಕ ರೀತಿಯಲ್ಲಿ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಯಿತು. ಈ ಮೂಲಕ ಪಂದ್ಯ 2-2 ಅಂತರದಿಂದ ಸಮಬಲಕಂಡಿತು. ಹೀಗಾಗಿ ಹೆಚ್ಚುವರಿ ಅವಧಿಯಲ್ಲಿ ಎರಡು ತಮಡಗಳು ಕೂಡ ಗೋಲು ಗಳಿಸಲು ಸೆಣೆಸಾಟ ಆರಂಭಿಸಿದವು. ಈ ಸಂದರ್ಭದಲ್ಲಿ ಜೆಮ್ಶೆಡ್ಪುರ ಎಫ್‌ಸಿ ತಂಡ ಮತ್ತೊಂದು ಗೋಲು ಗಳಿಸಿತು. ಈ ಮೂಲಕ ಅಂತಿಮ ಕ್ಷಣದಲ್ಲಿ ರೋಚಕವಾಗಿ ಗೆಲುವು ಸಾಧಿಸಿದೆ.

ದ್ವಿತಿಯಾರ್ಧದಲ್ಲಿ ಜೆಮ್ಶೆಡ್ಪುರ ಎಫ್‌ಸಿ ತಂಡ ಪಂದ್ಯದ 56ನೇ ನಿಮಿಷದಲ್ಲಿ ಮತ್ತೊಂದು ಗೋಲು ದಾಖಲಿಸುವಲ್ಲಿ ಯಶಸ್ವಿಯಾಯಿತು. ಬೋರಿಸ್ ಸಿಂಗ್ ಜೆಮ್ಶೆಡ್ಪುರ ತಂಡಕ್ಕೆ ಎರಡನೇ ಗೋಲು ದಾಖಳಿಸಿ ಮುನ್ನಡೆಯನ್ನು ಒದಗಿಸಿದರು. ಪಮದ್ಯ ಮುಕ್ತಾಯವಾಗುವ ಹಂತದಲ್ಲಿ ನಾರ್ಥ್‌ಈಸ್ಟ್ ಯುನೈಟೆಡ್ ತಮಡ ರೋಚಕ ರೀತಿಯಲ್ಲಿ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಯಿತು. ಈ ಮೂಲಕ ಪಂದ್ಯ 2-2 ಅಂತರದಿಂದ ಸಮಬಲಕಂಡಿತು. ಹೀಗಾಗಿ ಹೆಚ್ಚುವರಿ ಅವಧಿಯಲ್ಲಿ ಎರಡು ತಮಡಗಳು ಕೂಡ ಗೋಲು ಗಳಿಸಲು ಸೆಣೆಸಾಟ ಆರಂಭಿಸಿದವು. ಈ ಸಂದರ್ಭದಲ್ಲಿ ಜೆಮ್ಶೆಡ್ಪುರ ಎಫ್‌ಸಿ ತಂಡ ಮತ್ತೊಂದು ಗೋಲು ಗಳಿಸಿತು. ಈ ಮೂಲಕ ಅಂತಿಮ ಕ್ಷಣದಲ್ಲಿ ರೋಚಕವಾಗಿ ಗೆಲುವು ಸಾಧಿಸಿದೆ.

ನಾರ್ತ್ ಈಸ್ಟ್ ಯುನೈಟೆಡ್ ಎಫ್ ಸಿ: ಮಿರ್ಷಾದ್ ಮಿಚು (ಗೋಲ್‌ ಕೀಪರ್), ಪ್ರೊವತ್ ಲಾಕ್ರಾ, ಮಶೂರ್ ಶೆರೀಫ್ಮ್, ಪ್ಯಾಟ್ರಿಕ್ ಫ್ಲೋಟ್‌ಮನ್ಮ್, ತೊಂಡೊನ್ಬಾ ಸಿಂಗ್, ಪ್ರಗ್ಯಾನ್ ಗೊಗೊಯ್, ಹೆರ್ನಾನ್ ಸಂತಾನಾ (ನಾಯಕ), ಇಮ್ರಾನ್ ಖಾನ್, ಸುಹೇರ್ ವಡಕ್ಕೆಪೀಡಿಕಾ, ಮಥಿಯಾಸ್ ಕೊರೆರ್, ದೇಶೋರ್ನ್ ಬ್ರೌನ್.

ಜಮ್ಶೆಡ್‌ಪುರ ಎಫ್‌ಸಿ ಆಡುವ ಬಳಗ: ಪವನ್ ಕುಮಾರ್ (ಗೋಲ್‌ ಕೀಪರ್), ಲಾಲ್ಡಿನ್ಲಿಯಾನಾ ರೆಂತ್ಲೀ, ಪೀಟರ್ ಹಾರ್ಟ್ಲಿ (ನಾಯಕ), ಎಲಿ ಸಬಿಯಾ, ರಿಕಿ ಲಲ್ಲಾವ್ಮಾ, ಜಿತೇಂದ್ರ ಸಿಂಗ್, ಬೋರಿಸ್ ಸಿಂಗ್, ಸೀಮಿನ್ಲೆನ್ ಡೌಂಗೆಲ್, ಮೊಬಾಶಿರ್ ರೆಹಮಾನ್, ಗ್ರೆಗ್ ಸ್ಟೀವರ್ಟ್, ಜೋರ್ಡಾನ್ ಮುರ್ರೆ.

Story first published: Friday, January 7, 2022, 0:00 [IST]
Other articles published on Jan 7, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X