ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಟೂರ್ನಿಯ ಮೊದಲ ಗೆಲುವು ದಾಖಲಿಸಿದ ಎಸ್‌ಸಿ ಈಸ್ಟ್ ಬೆಂಗಾಲ್

ISL 2021-22: match 65 SCEB vs FCG, SC East Bengal match won by 2-1 Highlights

ಇಂಡಿಯನ್ ಸೂಪರ್ ಲೀಗ್‌ನಲ್ಲಿ ಬುಧವಾರ 65ನೇ ಮುಖಾಮುಖಿಯಲ್ಲಿ ಎಸ್‌ಸಿ ಈಸ್ಟ್‌ ಬೆಂಗಾಲ್ ಹಾಗೂ ಎಫ್‌ಸಿ ಗೋವಾ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಎಸ್‌ಸಿ ಈಸ್ಟ್ ಬೆಂಗಾಲ್ ತಂಡ ಎಫ್‌ಸಿ ಗೋವಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. 1-2 ಅಂತರದಿಂದ ಎಸ್‌ಸಿ ಈಸ್ಟ್ ಬೆಂಗಾಲ್ ಗೆಲುವು ಸಾಧಿಸುವ ಮೂಲಕ ಟೂರ್ನಿಯ ಪ್ರಥಮ ಗೆಲುವು ಪಡೆದಂತಾಗಿದೆ.

ಎಸ್‌ಸಿ ಈಸ್ಟ್ ಬೆಂಗಾಲ್ ಈ ಬಾರಿಯ ಟೂರ್ನಿಯಲ್ಲಿ ಈವರೆಗೆ ಅತ್ಯಂತ ಕಳಪೆ ಪ್ರದರ್ಶನ ನೀಡಿಕೊಂಡು ಬಂದಿದೆ. ಒಂದು ಗೆಲುವು ಪಡೆಯಲು ಕೂಡ ತಂಡಕ್ಕೆ ಸಾಧ್ಯವಾಗಿರಲಿಲ್ಲ. ಕಡೆಗೂ ಎಫ್‌ಸಿ ಗೀವಾ ವಿರುದ್ಧ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಅಂತಿಮ ಸ್ಥಾನವನ್ನು ಬಿಟ್ಟು ಮೇಲೇರಿದೆ.

ಭಾರತ vs ದ.ಆಫ್ರಿಕಾ ಪ್ರಥಮ ಏಕದಿನ: ಸಚಿನ್ ಬೃಹತ್ ದಾಖಲೆ ಮುರಿದು ಹಾಕಿದ ವಿರಾಟ್ ಕೊಹ್ಲಿಭಾರತ vs ದ.ಆಫ್ರಿಕಾ ಪ್ರಥಮ ಏಕದಿನ: ಸಚಿನ್ ಬೃಹತ್ ದಾಖಲೆ ಮುರಿದು ಹಾಕಿದ ವಿರಾಟ್ ಕೊಹ್ಲಿ

ಪಂದ್ಯ ಆರಂಭವಾದ 9ನೇ ನಿಮಿಷದಲ್ಲಿ ಈಸ್ಟ್ ಬೆಂಗಾಲ್ ತಂಡ ಮೊದಲ ಗೋಲು ದಾಖಲಿಸಲು ಯಶಸ್ವಿಯಾಗಿತ್ತು. ನೌರೆಮ್ ಸಿಂಗ್ ಈಸ್ಟ್ ಬೆಂಗಾಲ್ ತಂಡಕ್ಕೆ ಈ ಮೊದಲ ಯಶಸ್ಸನ್ನು ಒದಗಿಸಿದರು. ಈ ಮೂಲಕ ಆರಂಭಿಕ ಮೇಲುಗೈ ಸಾಧಿಸಲು ಯಶಸ್ವಿಯಾಗಿತ್ತು. ಆದರೆ ನಂತರ ಪಂದ್ಯದ 37ನೇ ನಿಮಿಷದಲ್ಲಿ ಎಫ್‌ಸಿ ಗೋವಾ ಕೂಡ ಗೋಲು ದಾಖಲಿಸುವಲ್ಲಿ ಯಶಸ್ವಿಯಾಗಿತ್ತು. ಈ ಮೂಲಕ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಆಲ್ಬರ್ಟೊ ನೊಗುರಾ ಈ ಗೋಲು ಸಿಡಿಸಿದ್ದರು. ಅದಾದ ಬಳಿಕ ಐದೇ ನಿಮಿಷದಲ್ಲಿ ಎಸ್‌ಸಿ ಈಸ್ಟ್ ಬೆಂಗಾಲ್ ತಂಡ ಮತ್ತೊಂದು ಗೋಲು ಗಳಿಸುವ ಮೂಲಕ ಪಂದ್ಯದಲ್ಲಿ ಮೇಲುಗೈ ಸಾಧಿಸಿದೆ. ಈ ಬಾರಿಯೂ ನೌರೆಮ್ ಸಿಂಗ್ ಈ ಮುನ್ನಡೆಯನ್ನು ತಂಡಕ್ಕೆ ಒದಗಿಸಿದರು.

ಈ ಗೋಲಿನೊಂದಿಗೆ ಮೊದಲಾರ್ಧದಲ್ಲಿಯೇ ಎಸ್‌ಸಿ ಈಸ್ಟ್ ಬೆಂಗಾಲ್ ತಂಡ 2-1 ಅಂತರದಿಂದ ಮುನ್ನಡೆಯನ್ನು ಸಾಧಿಸುವಲ್ಲಿ ಯಶಸ್ವಿಯಾಯಿತು. ದ್ವಿತೀಯಾರ್ಧದಲ್ಲಿ ಯಾವುದೇ ಗೋಲು ದಾಖಲಾಗದ ಕಾರಣ ಅಂತಿಮವಾಗಿ ಈಸ್ಟ್ ಬೆಂಗಾಲ್ 2-1 ಅಂತರದ ಭರ್ಜರಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ.

 ದ.ಆಫ್ರಿಕಾ ವಿರುದ್ಧದ ಪ್ರಥಮ ಏಕದಿನ ಪಂದ್ಯದ ಸೋಲಿಗೆ ಕಾರಣ ಯಾರೆಂಬುದನ್ನು ಬಿಚ್ಚಿಟ್ಟ ನಾಯಕ ರಾಹುಲ್ ದ.ಆಫ್ರಿಕಾ ವಿರುದ್ಧದ ಪ್ರಥಮ ಏಕದಿನ ಪಂದ್ಯದ ಸೋಲಿಗೆ ಕಾರಣ ಯಾರೆಂಬುದನ್ನು ಬಿಚ್ಚಿಟ್ಟ ನಾಯಕ ರಾಹುಲ್

ಎಸ್‌ಸಿ ಈಸ್ಟ್ ಬೆಂಗಾಲ್: ಅರಿಂದಮ್ ಭಟ್ಟಾಚಾರ್ಜ (ಗೋಲ್‌ ಕೀಪರ್), ಆದಿಲ್ ಖಾನ್, ಫ್ರಾಂಜೊ ಪ್ರೈಸ್, ಅಂಕಿತ್ ಮುಖರ್ಜಿ, ಅಮರ್‌ಜಿತ್ ಕಿಯಾಮ್, ಡ್ಯಾರೆನ್ ಸಿಡೋಯೆಲ್, ಸೌರವ್ ದಾಸ್, ವಹೆಂಗ್‌ಬಾಮ್ ಲುವಾಂಗ್, ಮೊಹಮ್ಮದ್ ರಫೀಕ್ (ನಾಯಕ), ನೌರೆಮ್ ಸಿಂಗ್ ಮತ್ತು ಥೋಂಗ್‌ಕೋಸಿಮ್ ಹಾಕಿಪ್.

ಎಫ್‌ಸಿ ಗೋವಾ: ಧೀರಜ್ ಮೊಯಿರಾಂಗ್ಥೆಮ್ (ಗೋಲ್‌ ಕೀಪರ್), ಲಿಯಾಂಡರ್ ಡಿ'ಕುನ್ಹಾ, ಅನ್ವರ್ ಅಲಿ, ಐಬಾನ್ ಡೊಹ್ಲಿಂಗ್, ಅಲೆಕ್ಸಾಂಡರ್ ಜೆಸುರಾಜ್, ಗ್ಲಾನ್ ಮಾರ್ಟಿನ್ಸ್, ಎಡು ಬೆಡಿಯಾ (ನಾಯಕ), ಮಕನ್ ಚೋಥೆ, ಆಲ್ಬರ್ಟೊ ನೊಗುರಾ, ಜಾರ್ಜ್ ಒರ್ಟಿಜ್ ಮತ್ತು ಐರಾನ್ ಕ್ಯಾಬ್ರೆರಾ.

Story first published: Thursday, January 20, 2022, 14:03 [IST]
Other articles published on Jan 20, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X