ಐಎಸ್‌ಎಲ್: ಎಫ್‌ಸಿ ಗೋವಾ vs ಬೆಂಗಳೂರು ಎಫ್‌ಸಿ ಪಂದ್ಯ ಡ್ರಾದಲ್ಲಿ ಅಂತ್ಯ

ಇಂಡಿಯನ್ ಸೂಪರ್ ಲೀಗ್‌ನಲ್ಲಿ ಇವತ್ತು 69ನೇ ಪಂದ್ಯದಲ್ಲಿ ಎಫ್‌ಸಿ ಗೋವಾ ಹಾಗೂ ಬೆಂಗಳೂರು ಎಫ್‌ಸಿ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಎರಡು ತಂಡಗಳು ಕೂಡ ತಲಾ ಒಂದು ಗೋಲು ಗಳಿಸಿದ್ದು ಪಂದ್ಯ ಡ್ರಾದಲ್ಲಿ ಅಂತ್ಯವಾಗಿದೆ.

ಸಾಕಷ್ಟು ಜಿದ್ದಾಜಿದ್ದಿನಿಂದ ಕೂಡಿದ ಈ ಪಂದ್ಯದಲ್ಲಿ ಮೊದಲಾರ್ಧದಲ್ಲಿ ಬೆಂಗಳೂರು ಎಪ್‌ಸಿ ತಂಡ ಗೋಲು ಗಳಿಸಲು ವಿಫಲವಾಯಿತು. ಆದರೆ ಎಫ್‌ಸಿ ಗೋವಾ ಪಂದ್ಯದ 41ನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ ಮುನ್ನಡೆಯನ್ನು ಪಡೆಯಿತು. ಡೈಲನ್ ಫಾಕ್ಸ್ ಈ ಗೋಲು ಸಿಡಿಸಿ ತಂಡಕ್ಕೆ ಮೇಲುಗೈ ಒದಗಿಸಿದರು. ಈ ಮೂಲಕ ಮೊದಲಾರ್ಧದ ಅಂತ್ಯಕ್ಕೆ ಎಫ್‌ಸಿ ಗೋವಾ 1-0 ಅಂತರದಿಂದ ಮೇಲುಗೈ ಸಾಧಿಸಿದೆ.

ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಿದ್ದು ಇವರೇ, ಇದಕ್ಕೆಲ್ಲಾ ವಿರಾಟ್ ಭಯ ಪಡಬಾರದು: ಮಾಜಿ ಕ್ರಿಕೆಟಿಗ!ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಿದ್ದು ಇವರೇ, ಇದಕ್ಕೆಲ್ಲಾ ವಿರಾಟ್ ಭಯ ಪಡಬಾರದು: ಮಾಜಿ ಕ್ರಿಕೆಟಿಗ!

ಇನ್ನು ದ್ವಿತೀಯಾರ್ಧದಲ್ಲಿ ಬೆಂಗಳೂರು ಎಫ್‌ಸಿ ತಂಡ ಗೋಲು ಗಳಿಸುವ ಮೂಲಕ ಸಮಬಲವನ್ನು ಸಾಧಿಸುವಲ್ಲಿ ಯಶಸ್ವಿಯಾಯಿತು. 61ನೇ ನಿಮಿಷದಲ್ಲಿ ಬಿಎಫ್‌ಸಿ ನಾಯಕ ಸುನಿಲ್ ಛೇಟ್ರಿ ಈ ಗೋಲು ದಾಖಲಿಸಿ ತಂಡದ ಸಮಬಲಕ್ಕೆ ಕಾರಣವಾದರು. ಆದರೆ ಅದಾದ ಬಳಿಕ ಎರಡು ತಮಡಗಳೂ ಕೂಡ ಗೋಲು ಗಳಿಸಲು ವಿಫಲವಾಗಿದೆ. ಹೀಗಾಗಿ ಈ ಪಂದ್ಯದಲ್ಲಿ ಎರಡು ತಮಡಗಳು ಕೂಡ ಡ್ರಾ ಫಲಿತಾಂಶಕ್ಕೆ ತೃಪ್ತಿಪಟ್ಟುಕೊಂಡಿದೆ.

ಇನ್ನು ಈ ಡ್ರಾ ಫಲಿತಾಂಶದಿಂದಾಗಿ ಈ ಎರಡು ತಂಡಗಳ ಸ್ಥಾನದಲ್ಲಿಯೂ ಯಾವುದೇ ಬದಲಾವಣೆಯಾಗಿಲ್ಲ. ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನಿಡಿರುವ ಈ ಎರಡು ತಂಡಗಳು ಕೂಡ ಅಂಕಪಟ್ಟಿಯಲ್ಲಿ ಕೆಳ ಹಂತದಲ್ಲಿದೆ. ಬಿಎಫ್‌ಸಿ ತಂಡ ಆಡಿದ 12 ಪಂದ್ಯಗಳಲ್ಲಿ ಕೇವಲ 3 ಗೆಲುವು ಸಾಧಿಸಿದ್ದು 5 ಪಂದ್ಯಗಳಲ್ಲಿ ಡ್ರಾ ಸಾಧಿಸಿದೆ. 4 ಪಂದ್ಯಗಳಲ್ಲಿ ಸೋಲು ಕಂಡಿದೆ ಈ ಮೂಲಕ 8ನೇ ಸ್ಥಾನದಲ್ಲಿದೆ. ಇನ್ನು ಎಫ್‌ಸಿ ಗೋವಾ ಪರಿಸ್ಥಿತಿ ಇದಕ್ಕಿಂತ ಹೀನಾಯವಾಗಿದ್ದು ಆಡಿದ 13 ಪಂದ್ಯಗಳಲ್ಲಿ 3 ಗೆಲುವು ಸಾಧಿಸಿದ್ದು 5 ಡ್ರಾ ಹಾಗೂ 5 ಸೋಲು ಅನುಭವಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.

 ಭಾರತ vs ದ.ಆಫ್ರಿಕಾ 3ನೇ ಏಕದಿನ: ಕಳಪೆ ಆಟವಾಡಿದ್ದ ಈ ಮೂವರು ಟೀಮ್ ಇಂಡಿಯಾದಿಂದ ಔಟ್! ಭಾರತ vs ದ.ಆಫ್ರಿಕಾ 3ನೇ ಏಕದಿನ: ಕಳಪೆ ಆಟವಾಡಿದ್ದ ಈ ಮೂವರು ಟೀಮ್ ಇಂಡಿಯಾದಿಂದ ಔಟ್!

ಎಫ್‌ಸಿ ಗೋವಾ: ಧೀರಜ್ ಮೊಯಿರಾಂಗ್ಥೆಮ್ (ಗೋಲ್‌ ಕೀಪರ್), ಅನ್ವರ್ ಅಲಿ, ಡೈಲನ್ ಫಾಕ್ಸ್, ಸೆರಿಟನ್ ಫೆರ್ನಾಂಡಿಸ್ (ನಾಯಕ), ಸೇವಿಯರ್ ಗಾಮಾ, ಐಬಾನ್ ಡೊಹ್ಲಿಂಗ್, ಗ್ಲಾನ್ ಮಾರ್ಟಿನ್ಸ್, ಎಡು ಬೆಡಿಯಾ, ಅಲ್ಬರ್ಟೊ ನೊಗುರಾ, ಜಾರ್ಜ್ ಒರ್ಟಿಜ್, ದೇವೇಂದ್ರ ಮುರ್ಗಾಂವ್ಕರ್.

ಬೆಂಗಳೂರು ಎಫ್‌ಸಿ; ಗುರುಪ್ರೀತ್ ಸಂಧು (ಜಿಕೆ), ಪ್ರತೀಕ್ ಚೌಧರಿ, ವುಂಗ್‌ಗಾಯಂ ಮುಯಿರಾಂಗ್, ಆಶಿಕ್ ಕುರುನಿಯನ್, ರೋಷನ್ ನೌರೆಮ್, ಡ್ಯಾನಿಶ್ ಫಾರೂಕ್, ಇಮಾನ್ ಬಸಾಫಾ, ಬ್ರೂನೋ ಸಿಲ್ವಾ, ಪ್ರಿನ್ಸ್ ಇಬಾರಾ, ಕ್ಲಿಟನ್ ಸಿಲ್ವಾ, ಸುನಿಲ್ ಛೆಟ್ರಿ (ಸಿ).

For Quick Alerts
ALLOW NOTIFICATIONS
For Daily Alerts
Story first published: Sunday, January 23, 2022, 22:21 [IST]
Other articles published on Jan 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X