ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಎಫ್‌ಸಿ ಗೋವಾ ವಿರುದ್ಧ 1-0 ಅಂತರದ ಗೆಲುವು ಸಾಧಿಸಿದ ಜೆಮ್ಶೆಡ್ಪುರ ಎಫ್‌ಸಿ

ISL 2021-22: match 74 FCG vs JFC, Jamshedpur FC match won by 1-0 Highlights

ಇಂಡಿಯನ್ ಸೂಪರ್ ಲೀಗ್‌ನ 74ನೇ ಪಂದ್ಯದಲ್ಲಿ ಎಫ್‌ಸಿ ಗೋವಾ ಹಾಗೂ ಜೆಮ್ಶೆಡ್ಪುರ ಎಫ್‌ಸಿ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಜೆಮ್ಶೆಡ್ಪುರ ಎಫ್‌ಸಿ ಗೆಲುವು ಸಾಧಿಸುವ ಮೂಲಕ ಅಗ್ರ ನಾಲ್ಕರಲ್ಲಿ ತನ್ನ ಸ್ಥಾನವನ್ನು ಭಧ್ರಗೊಳಿಸಿದೆ. ಎಫ್‌ಸಿ ಗೋವಾ ವಿರುದ್ಧ ಜೆಮ್ಶೆಡ್ಪುರ್ ಎಫ್‌ಸಿ 1-0 ಅಂತರದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಸಾಕಷ್ಟು ಪೈಪೋಟಿಯಿಂದ ಕೂಡಿದ ಪಂದ್ಯದಲ್ಲಿ ಮೊದಲಾರ್ಧದಲ್ಲಿ ಎರಡು ತಂಡಗಳು ಕೂಡ ಗೋಲು ಗಳಿಸಲು ವಿಫಲವಾಗಿದ್ದವು. ಈ ಪಂದ್ಯದ ಏಕೈಕ ಗೋಲು 49 ನೇ ನಿಮಿಷದಲ್ಲಿ ಬಂದಿತು. ಸ್ಟ್ರೈಕರ್ ಡೇನಿಯಲ್ ಚೀಮಾ ಚುಕ್ವು ಅವರ ಬಲಶಾಲಿ ಹೊಡೆತ ಜೆಮ್‌ಶೆಡ್‌ಪುರವನ್ನು 1-0 ಮುನ್ನಡೆಗೆ ಕಾರಣವಾಯಿತು. ಡಿಫೆಂಡರ್ ಲಾಲ್ಡಿನ್ಲಿಯಾನಾ ರೆಂತ್ಲೆಯ್ ಬಲ ಭಾಗದಿಂದ ಚೆಂಡನ್ನು ತಳ್ಳಿ ಗೋಲ್ ಪೆಟ್ಟಿಗೆಗೆಸೇರಿಸಿದರು. ಗೋವಾ ಗೋಲ್‌ಕೀಪರ್ ನವೀನ್ ಕುಮಾರ್ ಚೆಂಡನ್ನು ನಿಲ್ಲಿಸಲು ಪ್ರಯತ್ನಿಸಿದರು. ಆದರೆ ಚೆಂಡು ಗೋಲ್‌ಪೋಸ್ಟ್‌ನೊಳಕ್ಕೆ ನುಗ್ಗಿತ್ತು.

ಮೊದಲಾರ್ಧದಲ್ಲಿ ಎರಡು ತಂಡಗಳು ಗೋಲು ಗಳಿಸಲು ವಿಫಲವಾಗಿತ್ತು. ಈ ಒತ್ತಡದಿಂದಾಗಿ ಚೆಂಡನ್ನು ವಶಕ್ಕೆ ಪಡೆಯಲು ಎರಡೂ ಕಡೆಯವರು ಪದೇ ಪದೇ ಫೌಲ್ ಮಾಡಲ್ಪಟ್ಟರು. ಈ ಸಂದರ್ಭದಲ್ಲಿ ರೆಫರಿ ಆದಿತ್ಯ ಪುರಕಾಯಸ್ಥ ಮೂರು ಬಾರಿ ಹಳದಿ ಕಾರ್ಡ್ ತೋರಿಸಬೇಕಾಯಿತು. ಈ ಸಮಯದಲ್ಲಿ ಗೋವಾ ಕಡೆಯಿಂದ ಒಂದು ಅಥವಾ ಎರಡು ಉತ್ತಮ ದಾಳಿಗಳು ನಡೆದರೂ ಸಿಕ್ಕ ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಸಾಧ್ಯವಾಗದ ಕಾರಣ ಮೊದಲಾರ್ಧ 0-0 ಅಂತರದಲ್ಲಿ ಅಂತ್ಯಗೊಂಡಿತು.

ಭಾರತದ ಈ ಸ್ಟಾರ್ ಆಟಗಾರನಿಗೆ ನಾಯಕನಾಗಲು ಬೇಕಾದ ಪ್ರಮುಖ ಗುಣವೇ ಇಲ್ಲ ಎಂದ ರವಿಶಾಸ್ತ್ರಿಭಾರತದ ಈ ಸ್ಟಾರ್ ಆಟಗಾರನಿಗೆ ನಾಯಕನಾಗಲು ಬೇಕಾದ ಪ್ರಮುಖ ಗುಣವೇ ಇಲ್ಲ ಎಂದ ರವಿಶಾಸ್ತ್ರಿ

ಇದು ಈ ಋತುವಿನಲ್ಲಿ ಎಫ್‌ಸಿ ಗೋವಾ ವಿರುದ್ಧ ಜೆಮ್ಶೆಡ್‌ಪುರ್ ಎಫ್‌ಸಿ ಸಾಧಿಸಿದ ಎರಡನೇ ಗೆಲುವಾಗಿದೆ. ಕಳೆದ ಬಾರಿ ಈ ಎರಡು ತಂಡಗಳು ಋತುವಿನ ಮೊದಲ ಲೆಗ್‌ನಲ್ಲಿ ಮುಖಾಮುಖಿಯಾದಾಗ ಜೆಮ್‌ಶೆಡ್‌ಪುರ 3-1 ಅಂತರದಲ್ಲಿ ಜಯಗಳಿಸಿತ್ತು.

ಎಫ್‌ಸಿ ಗೋವಾ: ನವೀನ್ ಕುಮಾರ್ (ಗೋಲ್‌ಕೀಪರ್), ಸೆರಿಟನ್ ಫೆರ್ನಾಂಡಿಸ್, ಇವಾನ್ ಗೊನ್ಜಾಲೆಜ್ (ನಾಯಕ), ಅನ್ವರ್ ಅಲಿ, ಐಬಾನ್ ಡೊಹ್ಲಿಂಗ್, ಪ್ರಿನ್ಸ್‌ಟನ್ ರೆಬೆಲ್ಲೊ, ಎಡು ಬೆಡಿಯಾ, ಅಲ್ಬರ್ಟೊ ನೊಗುರಾ, ಬ್ರಾಂಡನ್ ಫೆರ್ನಾಂಡಿಸ್, ದೇವೇಂದ್ರ ಮುರ್ಗಾಂವ್ಕರ್ ಮತ್ತು ಐರಾಮ್ ಕ್ಯಾಬ್ರೆರಾ.

ಜೆಮ್ಶೆಡ್ಪುರ ಎಫ್‌ಸಿ: ಟಿಪಿ ರೆಹನೇಶ್ (ಗೋಲ್‌ಕೀಪರ್), ಲಾಲ್ಡಿನ್ಲಿಯಾನಾ ರೆಂತ್ಲೀ, ನರೇಂದರ್ ಗಹ್ಲೋಟ್, ಪೀಟರ್ ಹಾರ್ಟ್ಲಿ (ನಾಯಕ), ರಿಕಿ ಲಲ್ಲಾವ್ಮಾ, ಜಿತೇಂದ್ರ ಸಿಂಗ್, ಅಲೆಕ್ಸಾಂಡ್ರೆ ಲಿಮಾ, ಸೀಮಿನ್ಲೆನ್ ಡೌಂಗೆಲ್, ಬೋರಿಸ್ ಸಿಂಗ್, ಗ್ರೆಗ್ ಸ್ಟೀವರ್ಟ್ ಮತ್ತು ಡೇನಿಯಲ್ ಚುಕ್ವು.

Story first published: Friday, January 28, 2022, 23:50 [IST]
Other articles published on Jan 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X