ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಕೊನೆಯ ಪಂದ್ಯದಲ್ಲಿ ಒಡಿಶಾ ಮತ್ತು ಬೆಂಗಾಲ್ ಸೆಣಸು

ISL 2021: SCEBFC vs OFC, Preview: East Bengal and Odisha look to end season on a high

ಗೋವಾ: ಹೀರೋ ಇಂಡಿಯನ್ ಸೂಪರ್ ಲೀಗ್ ನ ಪ್ಲೇ ಆಫ್ ಹಂತವನ್ನು ತಲಪುವಲ್ಲಿ ವಿಫಲವಾಗಿರುವ ಒಡಿಶಾ ಎಫ್ ಸಿ ಮತ್ತು ಎಸ್ ಸಿ ಈಸ್ಟ್ ಬೆಂಗಾಲ್ ತಂಡಗಳು ಗೌರವಕ್ಕಾಗಿ ಕೊನೆಯ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಎರಡೂ ತಂಡಗಳಿಗೂ ಕೊನೆಯ ಪಂದ್ಯದಲ್ಲಿ ಗೆಲ್ಲುವ ಹಂಬಲ. ಒಡಿಶಾ ಎಫ್ ಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ, ಈಸ್ಟ್ ಬೆಂಗಾಲ್ ತಂಡ 9ನೇ ಸ್ಥಾನದಲ್ಲಿದೆ. ಎರಡೂ ತಂಡಗಳು ಬಹಳ ಸಮಯದಿಂದ ಪ್ರೋತ್ಸಾಹ ನೀಡುತ್ತಿರುವ ಅಭಿಮಾನಿಗಳಿಗಾಗಿ ಗೆಲ್ಲುವ ಗುರಿ ಹೊಂದಿವೆ.

ರಾಬಿ ಫ್ಲವರ್ ಪಡೆ ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸುವಲ್ಲಿ ವಿಫಲವಾಗಿದ್ದು, ಫಾರ್ವರ್ಡ್ ಆಟಗಾರರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಪ್ರದರ್ಶನ ತೋರಿಲ್ಲ. ತಂಡದ ಪರ ಬ್ರೈಟ್ ಎನೋಬಾಖರೆ ಮಾತ್ರ ಗೋಲು ಗಳಿಸಿದ್ದು ಗೋಲು ಗಳಿಕೆಯ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

ಉತ್ತಮ ಪ್ರದರ್ಶನ ತೋರಿಲ್ಲ

ಉತ್ತಮ ಪ್ರದರ್ಶನ ತೋರಿಲ್ಲ

ಕ್ಲಬ್ ನಲ್ಲಿ ಆಡುತ್ತಿರುವ ಭಾರತೀಯ ಆಟಗಾರರು ಕೂಡ ಉತ್ತಮ ರೀತಿಯಲ್ಲಿ ಪ್ರದರ್ಶನ ತೋರಿಲ್ಲ. ಜೆಜೆ ಲಾಲ್ ಪೆಲ್ಖುವಾ, ಸಿ ಕೆ ವಿನೀತ್ ಹಾಗೂ ಬಲ್ವಂತ್ ಸಿಂಗ್ ಅವರಂಥ ಆಟಗಾರರು ಕೂಡ ಮಿಂಚುವಲ್ಲಿ ವಿಫಲರಾದರು. ಇದು ತಂಡದ ಹಿನ್ನಡೆಗೆ ಪ್ರಮುಖ ಕಾರಣವಾಯಿತು.

ಸಮಸ್ಯೆಗಳನ್ನು ಎದುರಿಸಿತ್ತು

ಸಮಸ್ಯೆಗಳನ್ನು ಎದುರಿಸಿತ್ತು

ಒಡಿಶಾ ಕೂಡ ಈ ಋತುವಿನಲ್ಲಿ ಅದೇ ರೀತಿಯ ಸಮಸ್ಯೆಗಳನ್ನು ಎದುರಿಸಿತ್ತು. ಡಿಗೋ ಮೌರಾಸಿಯೋ ಹೊರತಾಗಿ ಇತರ ಆಟಗಾರರು ಗೋಲು ಗಳಿಸಿರಲಿಲ್ಲ. ತಂಡ ಗಳಿಸಿದ ಒಟ್ಟು ಗೋಲುಗಳಲ್ಲಿ ಶೇ 75ರಷ್ಟನ್ನು ಮೌರಾಸಿಯೊ ಒಬ್ಬರೇ ಗಳಿಸಿರುತ್ತಾರೆ. ತಮ್ಮ ತಂಡವು ಮಾಡಿರುವ ತಪ್ಪುಗಳಿಂದ ಪಾಠ ಕಲಿಯಲಿದೆ ಎಂದು ನಂಬಿಕೆ ಇಟ್ಟಿರುವ ಕೋಚ್ ಸ್ಟೀವನ್ ಡಯಾಸ್, ಮುಂದಿನ ಋತುವಿನಲ್ಲಿ ತಮ್ಮತಂಡ ಉತ್ತಮ ಪ್ರದರ್ಶನ ನೀಡಲಿದೆ ಎಂದಿದ್ದಾರೆ. " ನೀವು ಒಂದು ಋತುವಿನಲ್ಲಿ ಕೆಟ್ಟ ಪ್ರದರ್ಶನ ತೋರಿರಬಹುದ, ಅದೇ ರೀತಿ ಕಲಿಯಲು ಬಹಳ ಅವಕಾಶ ಸಿಕ್ಕಿದೆ. ಈ ಋತು ನಮ್ಮ ಪಾಲಿಗೆ ಬಹಳ ನಿರಾಸೆಯನ್ನುಂಟುಮಾಡಿದೆ. ಇಲ್ಲಿರುವ ತಪ್ಪುಗಳನ್ನು ಸರಿಪಡಿಸಕೊಂಡು ಮುಂದಿನ ವರ್ಷ ಬಲಿಷ್ಠರಾಗಿ ಬರುವೆವು," ಎಂದರು.

ಕ್ಲೀನ್ ಶೀಟ್ ನಲ್ಲೂ ಕಳಪೆ

ಕ್ಲೀನ್ ಶೀಟ್ ನಲ್ಲೂ ಕಳಪೆ

ಒಡಿಶಾ ತಂಡ ಸತತ ಹತ್ತು ಪಂದ್ಯಗಳಲ್ಲಿ ಜಯ ಕಾಣದೆ ಸಾಗಿ ಬಂದಿದೆ. ಅತಿ ಕಡಿಮೆ ಕ್ಲೀನ್ ಶೀಟ್ ನಲ್ಲೂ ತಂಡ ಕಳಪೆಯಾಗಿದೆ. ಈ ಪಂದ್ಯದಲ್ಲಿ ಜಯ ಅಥವಾ ಸೋಲು ಯಾವುದೇ ರೀತಿಯ ಪರಿಣಾಮಬೀರದು, ಆದರೆ ಗೌರವಕ್ಕಾಗಿ ಆಡಲಿವೆ. ಆದರೆ ಈ ಪಂದ್ಯದಲ್ಲಿ ಜಯ ಗಳಿಸುವುದು ನಮ್ಮ ಗುರಿಯಾಗಿದೆ ಎಂದು ಡಯಾಸ್ ಹೇಳಿದ್ದಾರೆ. "ನಾವು ಈ ಪಂದ್ಯವನ್ನು ಗೆಲ್ಲಲಿದ್ದೇವೆ, ಗೆಲ್ಲುವುದಕ್ಕಾಗಿಯೇ ಬಂದಿದ್ದೇವೆ. ಜಯದೊಂದಿಗೆ ಋತುವನ್ನು ಮುಗಿಸಲಿದ್ದೇವೆ, ನಾವು ಉತ್ತಮವಾಗಿಯೇ ಆಡಲಿದ್ದೇವೆ," ಎಂದರು.

Story first published: Saturday, February 27, 2021, 13:18 [IST]
Other articles published on Feb 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X