ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಅಂತಿಮ ನಾಲ್ಕರ ಸ್ಥಾನಕ್ಕಾಗಿ ಬೆಂಗಾಲ್ ಎದುರಾಳಿ ಹೈದರಾಬಾದ್

By Isl Media
ISL 2021: The first of four finals for SC East Bengal against Hyderabad

ಗೋವಾ: ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ನಿಧಾನಗತಿಯ ಆರಂಭ ಕಂಡಿದ್ದ ಎಸ್ ಸಿ ಈಸ್ಟ್ ಬೆಂಗಾಲ್, ಋತುವಿನ ಹೆಚ್ಚಿನ ಸಮಯವನ್ನು ಕೆಳಹಂತದಲ್ಲೇ ಕಳೆದಿತ್ತು. ಆದರೂ ತಂಡದ ಪ್ಲೇ ಆಫ್ ಆಸೆ ಅಲ್ಲಿಗೇ ಮುಗಿದಿಲ್ಲ. ಶುಕ್ರವಾರದ ಪಂದ್ಯದಲ್ಲಿ ಜಯ ಗಳಿಸಿದರೆ ಅಗ್ರ ನಾಲ್ಕರಲ್ಲಿರುವ ತಂಡಕ್ಕಿಂತ ಕೇವಲ ನಾಲ್ಕು ಅಂಕ ಹಿಂದೆ ಬೀಳಲಿದೆ. ಇನ್ನು ಕೇವಲ ಮೂರು ಪಂದ್ಯಗಳು ಬಾಕಿ ಉಳಿದಿರುವುದರಿಂದ ನಾಳೆಯಿಂದ ನಾಲ್ಕು ಫೈನಲ್ ಗಳ ಮೊದಲ ಪಂದ್ಯ ನಾಳೆಯಿಂದ ಆರಂಭವಾಗಲಿದೆ.

16 ಪಂದ್ಯಗಳನ್ನಾಡಿರುವ ಎಸ್ ಸಿ ಈಸ್ಟ್ ಬೆಂಗಾಲ್ 16 ಅಂಕಗಳನ್ನು ಗಳಿಸಿದೆ. ನಾರ್ಥ್ ಈಸ್ಟ್ ಯುನೈಟೆಡ್, ಹೈದರಾಬಾದ್ ಎಫ್ ಸಿ ಹಾಗೂ ಎಫ್ ಸಿ ಗೋವಾ ತಂಡಗಳು ಹಿನ್ನಡೆ ಕಂಡಲ್ಲಿ ಈಸ್ಟ್ ಬೆಂಗಾಲ್ ಪ್ಲೇ ಆಫ್ ತಲುಪಲಿದೆ. ಈ ತಂಡಗಳು 16 ಪಂದ್ಯಗಳನ್ನಾಡಿ 23 ಅಂಕಗಳೊಂದಿಗೆ ಸಮಬಲ ಕಂಡಿವೆ. ಈ ತಂಡಗಳು ಮುಂದಿನ ಪಂದ್ಯದಲ್ಲಿ ಎಟಿಕೆ ಮೋಹನ್ ಬಾಗನ್, ನಾರ್ಥ್ ಈಸ್ಟ್ ಯುನೈಟೆಡ್ ಹಾಗೋ ಹೈದರಾಬಾದ್ ಎಫ್ ಸಿ ವಿರುದ್ಧ ಸೆಣಸಲಿವೆ.

ಯುರೋ ಮಿಲಿಯನ್ ಈ ವಾರ ಭಾರತೀಯರಿಗೆ ಯೂರೋ 163 ಮಿ. ಜಾಕ್‌ಪಾಟ್ ನೀಡಲಿದೆ!ಯುರೋ ಮಿಲಿಯನ್ ಈ ವಾರ ಭಾರತೀಯರಿಗೆ ಯೂರೋ 163 ಮಿ. ಜಾಕ್‌ಪಾಟ್ ನೀಡಲಿದೆ!

ಆದರೆ ಶುಕ್ರವಾರ ನಡೆಯಲಿರುವ ಪಂದ್ಯ ತಮ್ಮ ಪಾಲಿಗೆ ಕಠಿಣ ಪರೀಕ್ಷೆ ಎಂದು ತಂಡದ ಸಹಾಯಕ ಕೋಚ್ ಟೋನಿ ಗ್ರಾಂಟ್ ಹೇಳಿದ್ದಾರೆ."ಇತರ ಹೆಚ್ಚಿನ ಕ್ಲಬ್ ಗಳಿಗಿಂತ ಅವರನ್ನು ನಾವು ಉತ್ತಮ ತಂಡವೆಂದು ಪರಿಗಣಿಸುತ್ತೇನೆ. ಅವರು ಕಳೆದ ಎರಡು ವರ್ಷಗಳಿಗಿಂತ ಉತ್ತಮವಾಗಿದ್ದಾರೆ. ಅವರಲ್ಲಿ ಕೆಲವು ಉತ್ತಮ ಆಟಗಾರರಿದ್ದಾರೆ. ನಾಳೆಯ ಪಂದ್ಯ ಕಠಿಣ ಸವಾಲಿನಿಂದ ಕೂಡಲಿದೆ," ಎಂದರು.

"ಅವರು ನಮಗಿಂತ ಕೆವಲು ಅಂಕ ಮುಂದೆ ಇದ್ದಾರೆ. ಆದ್ದರಿಂದ ಅವರ ನಮ್ಮ ಮೇಲೆ ಹೆಚ್ಚಿನ ಒತ್ತಡ ಹೇರಲಿದ್ದಾರೆ," ಎಂದರು.

ಪ್ರದರ್ಶನ ತೋರಬೇಕಾಗಿದೆ

ಪ್ರದರ್ಶನ ತೋರಬೇಕಾಗಿದೆ

ಪಂದ್ಯದ ಫಲಿತಾಂಶ ಏನೇ ಇರಲಿ, ಆದರೆ ಈಸ್ಟ್ ಬೆಂಗಾಲ್ ಅಂತಿಮ ಕ್ಬಾರ್ಟರ್ ನಲ್ಲಿ ಉತ್ತಮ ಪ್ರದರ್ಶನ ತೋರಬೇಕಾಗಿದೆ. ಓಪನ್ ಪ್ಲೇ ನಲ್ಲಿ ತಂಡ ಅತಿ ಕಡಿಮೆ ಗೋಲು (7) ಗಳಿಸಿದೆ. ಉತ್ತಮ ಆರಂಭ ಕಂಡ ಸ್ಟ್ರೈಕರ್ ಬ್ರೈಟ್ ಎನೋಬಾಖ್ರೆ ಈಗ ಮಿಂಚುತ್ತಿಲ್ಲ. ಪಂದ್ಯ ದ್ವಿತಿಯಾರ್ಧದಲ್ಲಿ ನಿರ್ಣಯವಾಗುವ ಸಾಧ್ಯತೆ ಹೆಚ್ಚಿದೆ. ಹೈದರಾಬಾದ್ ತಾನು ಗಳಿಸಿರುವ ಒಟ್ಟು ಗೋಲುಗಳಲ್ಲಿ ಶೇ75ರಷ್ಟನ್ನು ದ್ವಿತಿಯಾರ್ಧದಲ್ಲಿ ಗಳಿಸಿದೆ. ಈ ಅವಧಿಯಲ್ಲಿ ಈಸ್ಟ್ ಬೆಂಗಾಲ್ ತಾನು ನೀಡಿರುವ ಒಟ್ಟು 21 ಗೋಲುಗಳಲ್ಲಿ 14 ಗೋಲುಗಳನ್ನು ಎದುರಾಳಿ ತಂಡಕ್ಕೆ ನೀಡಿದೆ.

ಉತ್ತಮವಾಗಿಯೇ ಆಡಿತ್ತು

ಉತ್ತಮವಾಗಿಯೇ ಆಡಿತ್ತು

ಜೆಮ್ಷೆಡ್ಪುರ ವಿರುದ್ಧ ಈಸ್ಟ್ ಬೆಂಗಾಲ್ ಉತ್ತಮವಾಗಿಯೇ ಆಡಿತ್ತು. ಅದೇ ರೀತಿಯ ಆಟ ಪ್ರದರ್ಶಿಸಬೇಕೆಂಬುದು ಗ್ರಾಂಟ್ ಅವರ ನಿಲುವು. 11 ಆಟಗಾರರಲ್ಲಿ ಬದಲಾವಣೆಗಳನ್ನು ಮಾಡುತ್ತಿರಬೇಕೆಂಬುದು ಅವರ ಆಶಯ. "ನಾವು ಅದೇ 11 ಮಂದಿಯಲ್ಲಿ ಆಟವನ್ನು ಮುಂದುವರಿಸಲು ಬಯಸುವುದಿಲ್ಲ. ನಾವು ಉತ್ತಮವಾಗಿಯೇ ಆಡಿದ್ದೇವೆ. ನಾವು ಅದೇ ತಂಡವನ್ನು ಮುಂದುವರಿಸಲಿದ್ದೇವೆ, ಗಾಯದ ಸಮಸ್ಯೆ ಬಂದಾಗ ಮಾತ್ರ ಬದಲಾವಣೆ ಬಯಸುತ್ತೇವೆ," ಎಂದು ಗ್ರಾಂಟ್ ಹೇಳಿದ್ದಾರೆ.

ಪ್ಲೇ ಆಫ್ ಗೆ ದಿಟ್ಟ ಹೆಜ್ಜೆ ಇಟ್ಟಂತೆ

ಪ್ಲೇ ಆಫ್ ಗೆ ದಿಟ್ಟ ಹೆಜ್ಜೆ ಇಟ್ಟಂತೆ

ಗುತ್ತಿಗೆ ಮುಂದುವರಿದ ಖುಷಿಯಲ್ಲಿರು ಹೈದರಾಬಾದ್ ತಂಡದ ಕೋಚ್ ಮಾನ್ವೆಲ್ ಮಾರ್ಕ್ವೇಜ್ ನಾಳೆ ಜಯ ಗಳಿಸಿದರೆ ಪ್ಲೇ ಆಫ್ ಗೆ ದಿಟ್ಟ ಹೆಜ್ಜೆ ಇಟ್ಟಂತೆ ಎಂದಿದ್ದಾರೆ. ಸತತ ಎಂಟು ಪಂದ್ಯಗಳಲ್ಲಿ ಸೋಲು ಕಂಡರಿಯದ ಹೈದರಾಬಾದ್ ಅದೇ ಹಾದಿಯಲ್ಲಿ ಮುನ್ನಡೆಯುವ ಗುರಿ ಹೊಂದಿದೆ.
" ಇದು ಕಠಿಣ ಪಂದ್ಯ, ನನ್ನ ಪ್ರಕಾರ ಅವರು ಸಾಕಷ್ಟು ಆಟಗಾರರನ್ನು ಬದಲಾಯಿಸಿದ್ದಾರೆ. ಆದರೆ ನಾವು ಗೆಲ್ಲಲು ಯತ್ನಿಸುವೆವು, ನಾವು ಗೆದ್ದರೆ ಅಂತಿಮ ನಾಲ್ಕರಲ್ಲಿ ಸ್ಥಾನ ಪಡೆಯುವೆವು, ನಾವು ಪಂದ್ಯದಿಂದ ಪಂದ್ಯಕ್ಕೆ ಅಂಕಗಳನ್ನು ಗಳಿಸಬೇಕು," ಎಂದರು.

Story first published: Friday, February 12, 2021, 1:24 [IST]
Other articles published on Feb 12, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X