ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಸಮಬಲ ಸಾಧಿಸಿದ ಕೇರಳ ಬ್ಲಾಸ್ಟರ್ಸ್, ಜೆಮ್ಷೆಡ್ಪುರ

By Isl Media
ISL 2021: Unlucky Kerala shares spoils with Jamshedpur

ಗೋವಾ: ಹೀರೋ ಇಂಡಿಯನ್ ಸೂಪರ್ ಲೀಗ್ ನ 73ನೇ ಪಂದ್ಯವು ಗೋಲಿಲ್ಲದೆ ಡ್ರಾಗೊಂಡಿದೆ. ಕೇರಳ ಬ್ಲಾಸ್ಟರ್ಸ್ ಮತ್ತು ಜೆಮ್ಷೆಡ್ಪುರ ಎಫ್ ಸಿ ತಂಡಗಳು ಸಮಬಲ ಸಾಧಿಸುವುದರೊಂದಿಗೆ ಇತ್ತಂಡಗಳ ಅಂತಿಮ ನಾಲ್ಕರ ಘಟ್ಟ ಮತ್ತಷ್ಟು ಜಟಿಲವಾಗಿದೆ. ಇತ್ತಂಡಗಳು ತಲಾ 15 ಅಂಕ ಗಳಿಸಿ 7 ಮತ್ತು 8ನೇ ಸ್ಥಾನದಲ್ಲಿವೆ. ಪ್ರಥಮಾರ್ಧದಲ್ಲಿ ಅದೃಷ್ಟ ವಂಚಿತವಾದ ಕೇರಳ ತಂಡಕ್ಕೆ ದ್ವಿತಿಯಾರ್ಧದಲ್ಲಿ ಉತ್ತಮ ಅವಕಾಶಗಳೇ ಸಿಗಲಿಲ್ಲ. ಇದರೊಂದಿಗೆ ಸ್ಕೋರ್ ಬೋರ್ಡ್ ನಲ್ಲಿ ಕೊನೆಗೂ ಕಾಣಿಸಿದ್ದು 0-0.

ಸಿರಾಜ್‌ನ ದೊಡ್ಡ ಸಾಮರ್ಥ್ಯವೇ ಆತನ ಆತ್ಮವಿಶ್ವಾಸ: ಬೌಲಿಂಗ್ ಕೋಚ್ ಭರತ್ ಅರುಣ್ಸಿರಾಜ್‌ನ ದೊಡ್ಡ ಸಾಮರ್ಥ್ಯವೇ ಆತನ ಆತ್ಮವಿಶ್ವಾಸ: ಬೌಲಿಂಗ್ ಕೋಚ್ ಭರತ್ ಅರುಣ್

ಗೋಲಿಲ್ಲದ ಪ್ರಥಮಾರ್ಧ: ಮೊದಲ 45 ನಿಮಿಷಗಳ ಆಟದಲ್ಲಿ ಕೇರಳ ತಂಡಕ್ಕೆ ಅದೃಷ್ಟ ಇರಲಿಲ್ಲ ಎಂದರೆ ತಪ್ಪಾಗಲಾರದು. ಏಕೆಂದರೆ ಮೂರು ಬಾರಿ ಗೋಲು ಗಳಿಸುವ ಅವಕಾಶವಿದ್ದರೂ ಟ.ಪಿ. ರಹನೇಶ್ ತಡೆ ಅಥವಾ ಗೋಲ್ ಬಾಕ್ಸ್ ನ ಅಂಚಿಗೆ ತಗಲಿ ಚೆಂಡು ಹೊರನಡೆದಿತ್ತು.

ಎರಡು ಗೋಲುಗಳನ್ನು ಗಳಿಸಿರುತ್ತಿದ್ದರು

ಎರಡು ಗೋಲುಗಳನ್ನು ಗಳಿಸಿರುತ್ತಿದ್ದರು

ಜೊರ್ಡನ್ ಮರ್ರೆ ಅವರು ಎಲ್ಲವೂ ನಿರೀಕ್ಷಿಸಿದಂತೆ ನಡೆದಿರುತ್ತಿದ್ದರೆ ಎರಡು ಗೋಲುಗಳನ್ನು ಗಳಿಸಿರುತ್ತಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಕೇರಳ ಬ್ಲಾಸ್ಟರ್ಸ್ ತಂಡ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತ್ತಾದರೂ ಅವಕಾಶಗಳನ್ನು ಗೋಲಾಗಿಸುವಲ್ಲಿ ವಿಫಲವಾಗಿತ್ತು. ಪ್ರಥಮಾರ್ಧದ ಕೊನೆಯಲ್ಲಿ ಕೇರಳ ನೈಜ ಫುಟ್ಬಾಲ್ ಆಟವನ್ನು ಪ್ರದರ್ಶಿಸಿತ್ತು, ಕ್ರಾಸ್ ಬಾರ್ ಇಲ್ಲದೆ ಇರುತ್ತಿದ್ದರೆ ನಿಜವಾಗಿಯೂ ಎರಡು ಗೋಲು ದಾಖಲಾಗಿರುತ್ತಿತ್ತು. ಮುಂದಿನ 45 ನಿಮಿಷಗಳಲ್ಲಿ ಜೆಮ್ಷೆಡ್ಪುರ ಯಾವ ರೀತಿಯಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸಲಿದೆ ಮತ್ತು ಕೇರಳ ಪ್ರಥಮಾರ್ಧದ ಅದೃಷ್ಟವನ್ನು ಗೋಲಾಗಿ ಪರಿವರ್ತಿಸುವುದೇ ಕಾದು ನೋಡಬೇಕು.

ಸಮಾನರ ಸಮರ

ಸಮಾನರ ಸಮರ

ಕೇರಳ ಬ್ಲಾಸ್ಟರ್ಸ್ ಮತ್ತು ಜೆಮ್ಷೆಡ್ಪುರ ಎಫ್ ಸಿ ನಡುವಿನ ಪಂದ್ಯವನ್ನು ಸಮಾನರ ಹೋರಾಟ ಎನ್ನಬಹುದು, 13 ಪಂದ್ಯಗಳು, 3 ಜಯ, ಅಷ್ಟೇ ಡ್ರಾ, ಅಷ್ಟೇ ಸೋಲು ಸಮಾನ ಅಂಕಗಳು, ಈ ಕಾರಣಕ್ಕಾಗಿ ಇದು ಸಮಾನರ ಸಮರ. ಕೆಳಹಂತದಲ್ಲಿ ಸ್ಥಾನ ಪಡೆದಿರುವ ಇತ್ತಂಡಗಳಿಗೂ ಇಲ್ಲಿ ಜಯದ ಅಗತ್ಯ ಇದೆ. ಕೇರಳ ಬ್ಲಾಸ್ಟರ್ಸ್ ತಂಡ ಜಯದ ಹಾದಿಯಲ್ಲಿ ಮುನ್ನಡೆದಿದೆ, ಕಳೆದ ನಾಲ್ಕು ಪಂದ್ಯಗಳಲ್ಲಿ ತಂಡ ಸೋಲು ಕಂಡಿರಲಿಲ್ಲ. ಅದರಲ್ಲಿ ಎರಡು ಜಯ ಹಾಗೂ ಎರಡು ಡ್ರಾ ಸೇರಿದೆ. ಈ ಋತುವಿನಲ್ಲಿ ಕೇರಳ ಗೆದ್ದಿರುವುದೇ ಮೂರು ಪಂದ್ಯಗಳು. ಸತತ ಮೂರು ಪಂದ್ಯಗಳಲ್ಲಿ ಸೋಲು ಅನುಭವಿಸಿದ ಜೆಮ್ಷೆಡ್ಪುರ ತಂಡ ತನ್ನ ಹಿಂದಿನ ಪಂದ್ಯದಲ್ಲಿ ಹೈದರಾಬಾದ್ ಎಫ್ ಸಿ ವಿರುದ್ಧ ಡ್ರಾ ಕಂಡಿರುವುದು ಇತ್ತೀಚಿನ ಸಮಾಧಾನಕರ ಸಾಧನೆ.

ಜೇಕ್ಸನ್ ಸಿಂಗ್, ರಾಹುಲ್ ಕೆಪಿ ಅಮಾನತು

ಜೇಕ್ಸನ್ ಸಿಂಗ್, ರಾಹುಲ್ ಕೆಪಿ ಅಮಾನತು

ಕೇರಳ ಬ್ಲಾಸ್ಟರ್ಸ್ ತಂಡದ ಡಿಫೆನ್ಸ್ ವಿಭಾಗ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸದೇ ಇರುವುದು ತಂಡದ ಈ ಸ್ಥಿತಿಗೆ ಕಾರಣವಾಗಿದೆ. ಜೇಕ್ಸನ್ ಸಿಂಗ್ ಮತ್ತು ರಾಹುಲ್ ಕೆಪಿ ಅಮಾನತುಗೊಂಡಿರುವುದು ತಂಡದ ಬಲವನ್ನು ಮತ್ತಷ್ಟು ಕುಗ್ಗಿಸಿದೆ. ಜೆಮ್ಷೆಡ್ಪುರ ಎಫ್ ಸಿ ಪರ ನಿರಿಜಸ್ ವಾಸ್ಕಿಸ್ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರ. ಆದರೆ ಇತ್ತೀಚಿನ ಪಂದ್ಯಗಳಲ್ಲಿ ಅವರು ಗೋಲು ಗಳಿಸುವಲ್ಲಿ ವಿಫಲರಾಗುತ್ತಿದ್ದಾರೆ. ಹೋಸ ಸೇರ್ಪಡೆಯಾದ ಸೈಮಿನ್ಲೆನ್ ಡೌಂಗಲ್ ಹಾಗೂ ಫಾರೂಕ್ ಚೌಧರಿ ಉತ್ತಮವಾಗಿ ಆಡಬಹದು ಎಂಬುದು ತಂಡದ ನಿರೀಕ್ಷೆ.

Story first published: Thursday, January 28, 2021, 9:33 [IST]
Other articles published on Jan 28, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X