ನವೆಂಬರ್‌ನಿಂದ ಮಾರ್ಚ್‌ವರೆಗೆ ಇಂಡಿಯನ್ ಸೂಪರ್ ಲೀಗ್ 7ನೇ ಆವೃತ್ತಿ

ನವದೆಹಲಿ, ಜುಲೈ 6: ಇಂಡಿಯನ್ ಸೂಪರ್ ಲೀಗ್ 7ನೇ ಆವತ್ತಿಯ ಫುಟ್ಬಾಲ್ ಟೂರ್ನಿ ನವೆಂಬರ್‌ನಿಂದ ಮಾರ್ಚ್ ವರೆಗೆ ವೀಕ್ಷಕರಿಲ್ಲದ ಮೈದಾನದಲ್ಲಿ ನಡೆಯಲಿದೆ. ಭಾರತದಲ್ಲಿ ಕೊರೊನಾವೈರಸ್ ಆತಂಕ ಹೆಚ್ಚಿರುವುದರಿಂದ ಗೋವಾ ಮತ್ತು ಕೇರಳ ರಾಜ್ಯಾದಲ್ಲಿ ಮಾತ್ರ ಐಎಸ್‌ಎಲ್ ನಡೆಯುವ ಸಾಧ್ಯತೆಯಿದೆ.

ಕುಸಾಲ್ ಮೆಂಡಿಸ್ ಕಾರು ಅಪಘಾತದ ಸಿಸಿಟಿವಿ ದೃಶ್ಯ ಬಿಡುಗಡೆ: ವೀಡಿಯೊ

ಐಎಸ್‌ಎಲ್ ಆಯೋಜನೆಗೆ ಆಸಕ್ತಿ ತೋರಿರುವ ರಾಜ್ಯಗಳಲ್ಲಿ ಕೇರಳ ಮತ್ತು ಗೋವಾ ರಾಜ್ಯಗಳೇ ಮುಂಚೂಣಿಯಲ್ಲಿದೆ. ಐಎಸ್‌ಎಲ್ ಆರ್ಗನೈಸರ್ಸ್ ಫುಟ್ಬಾಲ್ ಸ್ಪೋರ್ಟ್ಸ್ ಡೆವಲಪ್‌ಮೆಂಟ್ ಲಿಮಿಟೆಡ್ ಮತ್ತು ಕ್ಲಬ್ ರೆಪ್ರೆಸೆಂಟೇಟಿವ್ ನಡುವೆ ಸೋಮವಾರ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಯ್ತು.

'ಖಚಿತವಾಗಿ ಮುಚ್ಚಿದ ಬಾಗಿಲುಗಳ ಹಿಂದೆ ಐಎಸ್‌ಎಲ್ ಲೀಗ್ ನಡೆಯಲಿದೆ. ವೇಳಾಪಟ್ಟಿ ನವೆಂಬರ್ ನಿಂದ ಮಾರ್ಚ್ ವರೆಗೆ ಇರುತ್ತದೆ. ಕೇರಳ, ಗೋವಾ, ಪಶ್ಚಿಮ ಬಂಗಾಳ ಮತ್ತು ಈಶಾನ್ಯವನ್ನು ತಾಣಗಳ ಸಂಭಾವ್ಯ ರಾಜ್ಯಗಳೆಂದು ಚರ್ಚಿಸಲಾಯಿತು. ಆದರೆ ಗೋವಾ ಮತ್ತು ಕೇರಳವನ್ನು ಈ ಸಮಯದಲ್ಲಿ ಮುಂಚೂಣಿಯಲ್ಲಿರುವ ರಾಜ್ಯಗಳೆಂದು ಹೇಳಬಹುದು,' ಎಂದು ಐಎಸ್‌ಎಲ್ ಪಿಟಿಐ ಜೊತೆ ಹೇಳಿಕೊಂಡಿದೆ.

ಜುಲೈ 8ರಿಂದ Eng vs WI ಟೆಸ್ಟ್: ತಂಡಗಳು, ನೇರಪ್ರಸಾರ ಸಂಪೂರ್ಣ ಮಾಹಿತಿ

'ಒಂದು ಅಥವಾ ಎರಡು ರಾಜ್ಯಗಳ ಬೇರೆ ಬೇರೆ ತಾಣಗಳಲ್ಲಿ ಟೂರ್ನಿ ಆಯೋಜಿಸುವ ಯೋಜನೆ ನಮ್ಮದು,' ಎಂದು ಐಎಸ್‌ಎಲ್ ಮಾಹಿತಿ ನೀಡಿದೆ. ಉಳಿದ ರಾಜ್ಯಗಳಿಗೆ ಹೋಲಿಸಿದರೆ ಕೇರಳ ಮತ್ತು ಗೋವಾ ರಾಜ್ಯಗಳಲ್ಲಿ ಕೊರೊನಾ ಸೋಂಕಿರತ ಸಂಖ್ಯೆ ತೀವ್ರ ಆತಂಕಕಾರಿಯಾಗಿಲ್ಲ. ಹೀಗಾಗಿ ಐಎಸ್‌ಎಲ್ ಈ ಎರಡು ರಾಜ್ಯಗಳಲ್ಲೇ ನಡೆಯೋ ಸಾಧ್ಯತೆ ಹೆಚ್ಚಿದೆ.

For Quick Alerts
ALLOW NOTIFICATIONS
For Daily Alerts
Story first published: Monday, July 6, 2020, 22:43 [IST]
Other articles published on Jul 6, 2020
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X