ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2020: ಎಟಿಕೆ ಮನೆಯಲ್ಲಿ ಕೇರಳಕ್ಕೆ ಜಯದ ಅನಿವಾರ್ಯ

By Isl Media
ISL: ATK have plenty at stake against Kerala

ಕೋಲ್ಕತಾ, ಜನವರಿ 12: ವಿವೇಕಾನಂದ ಯುವಭಾರತಿ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಬಲಿಷ್ಠ ಎಟಿಕೆ ತಂಡವು ಕೇರಳ ಬ್ಲಾಸ್ಟರ್ಸ್ ತಂಡಕ್ಕೆ ಆತಿಥ್ಯ ನೀಡಲಿದ್ದು, ಇದೋಮದು ಕುತೂಹಲದ ಪಂದ್ಯವಾಗಿ ಮೂಡಿ ಬರಲಿದೆ.

ಎರಡು ಬಾರಿ ಚಾಂಪಿಯನ್ ಎಟಿಕೆ ಎರಡು ಬಾರಿ ಫೈನಲಿಸ್ಟ್ ಕೇರಳ ನಡುವೆ ಐಎಸ್ ಎಲ್ ಇತಿಹಾಸದಲ್ಲಿ ಕೆಲವು ಕುತೂಹಲದ ಸಂಗತಿಗಳಿವೆ. ಎರಡೂ ಬಾರಿ ಫೈನಲ್ ತಲುಪಿದ ಎಟಿಕೆ ತಂಡ ಕೇರಳ ವಿರುದ್ಧ ಪ್ರಶಸ್ತಿ ಗೆದ್ದಿತ್ತು. ಕೇರಳ ಪ್ರತಿ ಬಾರಿಯೂ ಸೇಡುತೀರಿಸಿಕೊಳ್ಳಲು ಯತ್ನಿಸುತ್ತಿದೆ. ಎಟಿಕೆ ವಿರುದ್ಧ ನಡೆದ ಹಿಂದಿನ ಐದು ಪಂದ್ಯಗಳಲ್ಲಿ ಕೇರಳ ಜಯ ಗಳಿಸಿದೆ. ಈ ಬಾರಿ ಎಟಿಕೆ ತಂಡಕ್ಕೆ ಹಿಂದಿನ ಅಧ್ಯಾಯವನ್ನು ತಿದ್ದಿ ಬರೆಯಬೇಕಾಗಿದೆ. ಋತುವಿನ ಮೊದಲ ಪಂದ್ಯದಲ್ಲಿ ಕೇರಳ ವಿರುದ್ಧ ಎಟಿಕೆ 2-1 ಅಂತರದಲ್ಲಿ ಸೋಲಿನ ಆಘಾತ ಕಂಡಿತ್ತು.

1
2026484

''ಆರಂಭಿಕ ಪಂದ್ಯದಲ್ಲಿ ಅವರಿಗೆ ನಮ್ಮ ಬಗ್ಗೆ ಏನೂ ಗೊತ್ತಿರಲಿಲ್ಲ. ನಮಗೂ ಅವರ ಬಗ್ಗೆ ಏನೂ ಗೊತ್ತಿರಲಿಲ್ಲ. ಈ ಪಂದ್ಯದಲ್ಲಿ ನಮಗೆ ಅವರು ದೌರ್ಬಲ್ಯಗಳ ಬಗ್ಗೆ ಚೆನ್ನಾಗಿ ಗೊತ್ತು. ಅವರು ಹೇಗೆ ಗೋಲು ಗಳಿಸುತ್ತಾರೆ ಎಂಬುದರ ಬಗ್ಗೇಯೂ ಗೊತ್ತು. ನಾನು ಅದಕ್ಕೇಗಿಯೇ ಉತ್ತಮ ಗೇಮ್ ಪ್ಲಾನ್ ಮಾಡಿದ್ದೇನೆ. ಇದರಿಂದಾಗಿ ನಾವು ಎಟಿಕೆ ವಿರುದ್ಧ ಸೋತಿರಲಿಲ್ಲ. ನಾವೀಗ ಮತ್ತೊಂದು ಜಯದ ಗುರಿ ಹೊಂದಿದ್ದೇವೆ,'' ಎಂದು ಕೇರಳ ಬ್ಲಾಸ್ಟರ್ಸ್ ತಂಡದ ಕೋಚ್ ಎಲ್ಕೋ ಷೆಟ್ಟೋರಿ ಹೇಳಿದ್ದಾರೆ.

ಈ ಋತುವಿನಲ್ಲಿ ಎಟಿಕೆ ಉತ್ತಮ ರೀತಿಯ ಪ್ರದರ್ಶನ ನೀಡುತ್ತಿದೆ. ರಾಯ್ ಕೃಷ್ಣ ಹಾಗೂ ಡೇವಿಡ್ ವಿಲಿಯಮ್ಸ್ ಅವರ ಉತ್ತಮ ಪ್ರದರ್ಶನದ ನೆರವಿನಿಂದ ಎಟಿಕೆ ತಂಡ 11 ಪಂದ್ಯಗಳಲ್ಲಿ 21 ಗೋಲು ಗಳಿಸಿದೆ. ಕೃಷ್ಣ ಹಾಗೂ ವಿಲಿಯಮ್ಸ್ ಸೇರಿ 13 ಗೋಲುಗಳನ್ನುಗ ಗಳಿಸಿದ್ದಾರೆ.

ಗಾಯಗೊಂಡಿರುವ ಕಾರಣ ವಿಲಿಯಮ್ಸ್ ನಾಳೆಯ ಪಂದ್ಯದಲ್ಲಿ ಆಡುವುದು ಸಂಶಯವೆನಿಸಿದೆ. ''ವಿಲಿಯಮ್ಸ್ ಆಡುತ್ತಾರೋ ಇಲ್ಲವೋ ಗೊತ್ತಿಲ್ಲ. ಪಂದ್ಯಕ್ಕೆ ಮುನ್ನ ನಾವು ಈ ಬಗ್ಗೆ ತೀರ್ಮಾನ ಮಾಡುತ್ತೇವೆ, ನನ್ನ ಯೋಜನೆಯ ಫುಟ್ಬಾಲ್ ಅದು ಒಬ್ಬ ಆಟಗಾರನ ಆಟವಲ್ಲ. ಒಬ್ಬನ ಮೇಲೆಯೇ ಅವಲಂಬಿಸಿರುವುದಲ್ಲ,''ಎಂದು ಆಂಟೋನಿಯೋ ಹಬ್ಬಾಸ್ ಹೇಳಿದ್ದಾರೆ. ಭಾರತೀಯ ಆಟಗಾರರು ಉತ್ತಮ ರೀತಿಯಲ್ಲಿ ಪ್ರದರ್ಶನ ತೋರುತ್ತಿರುವ ಬಗ್ಗೆ ಹಬ್ಬಾಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂಬೈ ಸಿಟಿ ವಿರುದ್ಧದ ಪಂದ್ಯದಲ್ಲಿ ಪ್ರಣಾಯ್ ಹಲ್ದಾರ್ ಹಾಗೂ ಮೈಕಲ್ ಸೂಸೈರಾಜ್ ಗೋಲಿನ ಯಶಸ್ಸು ಕಂಡಿದ್ದಾರೆ. ಪ್ರಭಿರ್ ದಾಸ್ ಹಾಗೂ ಸುಮಿತ್ ರಥಿ ಕೂಡ ಉತ್ತಮವಾಗಿ ಆಡಿದರೆ ತಂಡದ ಜಯದ ಹಾದಿ ಸುಲಭವಾಗುತ್ತದೆ.

ಉತ್ತಮ ಅಟ ಪ್ರದರ್ಶಿಸಿರುವ ಎಟಿಕೆ 21 ಅಂಕ ಗಳಿಸಿ ಈಗ ಮೂರನೇ ಸ್ಥಾನದಲ್ಲಿದ್ದು, ನಾಳೆಯ ಪಂದ್ಯದಲ್ಲಿ ಗೆದ್ದು ಗೋವಾದೊಂದಿಗೆ ಮೊದಲ ಸ್ಥಾನ ಹಂಚಿಕೊಂಡರೆ ಅಚ್ಚರಿಪಡಬೇಕಾಗಿಲ್ಲ.

ಕೇರಳ ಬ್ನಾಸ್ಟರ್ಸ್ ಕೂಡ ಇತ್ತೀನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಪಫಾಯಲ್ ಮೆಸ್ಸಿ ಬೌಲಿ ಮತ್ತು ಬಾರ್ಥಲೋಮ್ಯೋ ಒಗ್ಬಚೆ 11 ಗೋಲುಗಳನ್ನು ಗಳಿಸಿದ್ದಾರೆ. ಆದರೆ ತಂಡದ ಜಯ ಮಾತ್ರ 2. ಆಡಿರುವ 11 ಪಂದ್ಯಗಳಲ್ಲಿ ಕೇರಳ ಜಯ ಗಳಿಸಿರುವುದು ಎರಡು ಪಂದ್ಯಗಳಲ್ಲಿ.

''ಏಳು ಮಂದಿ ವಿದೇಶಿ ಆಟಗಾರರನ್ನು ಹೊಂದಿರುವ ಏಕೈಕ ತಂಡ ನಮ್ಮದು ಮಾತ್ರ. ಆದರೆ ಅವರಲ್ಲಿ ಆರು ಆಟಗಾರರು ಗಾಯಸ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನಮ್ಮ ಡಿಫೆನ್ಸ್ ಉತ್ತಮವಾಗಿಲ್ಲ. ನಮ್ಮ ಮಿಡ್ ಫೀಲ್ಡ್ ನಲ್ಲಿ ಯಾವಾಗಲೂ ಬದಲಾವಣೆ ನಡೆಯುತ್ತಿರುತ್ತದೆ,'' ಎಂದು ಷೆಟ್ಟೋರಿ ಹೇಳಿದ್ದಾರೆ.

Story first published: Sunday, January 12, 2020, 2:24 [IST]
Other articles published on Jan 12, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X