ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2020: ಅಂತಿಮ ಕ್ಷಣದಲ್ಲಿ ಗೋಲು, ಅಗ್ರ ಸ್ಥಾನಕ್ಕೇರಿದ ಎಟಿಕೆ

By Isl Media
ISL: Balwants injury-time winner helps ATK reclaim top spot

ಕೋಲ್ಕತ್ತಾ, ಜನವರಿ 28: ಹೀರೋ ಇಂಡಿಯನ್ ಸೂಪರ್ ಲೀಗ್ ನ 68ನೇ ಪಂದ್ಯದ ಕೊನೆಯ ಕ್ಷಣದಲ್ಲಿ ದಾಖಲಾದ ಗೋಲಿನ ನೆರವನಿಂದ ನಾರ್ಥ್ ಈಸ್ಟ್ ಯುನೈಟೆಡ್ ತಂಡವನ್ನು 1-0 ಗೋಲಿನಿಂದ ಮಣಿಸಿದ ಮಾಜಿ ಚಾಂಪಿಯನ್ ಎಟಿಕೆ ತಂಡ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ. ಈ ಸೋಲಿನಿಂದ ನಾರ್ಥ್ ಈಸ್ಟ್ ಯುನೈಟೆಡ್ ಪ್ಲೇ ಆಫ್ ಹಂತ ಮತ್ತಷ್ಟು ಕಠಿಣವಾಯಿತು. ಬದಲಿ ಆಟಗಾರನಾಗಿ ಅಂಗಣಕ್ಕಿಳಿದ ಬಲ್ವಂತ್ ಸಿಂಗ್ (90+ ನಿಮಿಷ) ಗಳಿಸಿದ ಗೋಲು ನಾರ್ಥ್ ಈಸ್ಟ್ ತಂಡವನ್ನು ಮೇಲಕ್ಕೇಳದಂತೆ ಮಾಡಿತು.

ಗೋಲಿಲ್ಲದ ಪ್ರಥಮಾರ್ಧ
ಪಂದ್ಯ ಗೋಲಿಲ್ಲದೆ ಡ್ರಾಗೊಂಡರೆ ನಾರ್ಥ್ ಈಸ್ಟ್ ಗೆ ಸಂಕಷ್ಟವಾಗುವುದು ಸಹಜ. ಆದರೆ ಪಂದ್ಯದ ಪ್ರಥಮಾರ್ಥದ ಫಲಿತಾಂಶ ನಾರ್ಥ್ ಈಸ್ಟ್ ಗೆ ಸೂಕ್ತವಾಗಿಲ್ಲ. 45 ನಿಮಿಷಗಳ ಆಟ ಗೋಲಿಲ್ಲದೆ ಕೊನೆಗೊಂಡಿತು. ಎಟಿಕೆ ಪಂದ್ಯದ ಮೇಲೆ ಹೆಚ್ಚಿನ ಹಿಡಿತ ಸಾಧಿಸಿತ್ತು. ರಾಯ್ ಕೃಷ್ಣ ಅವರಿಗೆ ಗೋಲಿನ ಬರ ನೀಗಿಸುವ ಅವಕಾಶ ಇದ್ದಿತ್ತು.

ಆದರೆ ನಾರ್ಥ್ ಈಸ್ಟ್ ನ ಗೋಲ್ ಕೀಪರ್ ಸುಭಾಶೀಶ್ ರಾಯ್ ಅದಕ್ಕೆ ಅವಕಾಶ ಕಲ್ಪಿಸಲಿಲ್ಲ. ಹೊಸ ಆಟಗಾರ ಆ್ಯಂಡ್ರ್ಯು ಕೆಯೊಗ್ ಹೆಡರ್ ಮೂಲಕ ಗೋಲು ಗಳಿಸುವ ಅವಕಾಶ ಸಿಕ್ಕಿತ್ತು, ಆದರೆ ಅರಿಂದಂ ಭಟ್ಟಾಚಾರ್ಯ ಅದಕ್ಕೆ ಅವಕಾಶ ನೀಡಲಿಲ್ಲ. ದ್ವಿತಿಯಾರ್ಧದಲ್ಲಿ ಗೋಲು ಗಳಿಸಬೇಕಾದ ಅನಿವಾರ್ಯತೆ ನಾರ್ಥ್ ಈಸ್ಟ್ ತಂಡಕ್ಕಿದೆ.

ಅಗ್ರ ಸ್ಥಾನಕ್ಕೇರುವ ಹಂಬಲ
ಮೂರನೇ ಸ್ಥಾನದಲ್ಲಿರುವ ಎಟಿಕೆ ಒಂಬತ್ತನೇ ಸ್ಥಾನದಲ್ಲಿರುವ ನಾರ್ಥ್ ಈಸ್ಟ್ ಯುನೈಟೆಡ್ ವಿರುದ್ಧ ಜಯ ಗಳಿಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರುವ ಗುರಿಯೊಂದಿಗೆ ಎಟಿಕೆ ತಂಡ ಅಂಗಣಕ್ಕಿಳಿಯಿತು, ನಾರ್ಥ್ ಈಸ್ಟ್ ಯುನೈಟೆಡ್ ಗೆ ಇಲ್ಲಿ ಜಯ ಗಳಿಸಿದರೆ ಮಾತ್ರ ಪ್ಲೇ ಆಫ್ ಆಸೆ ಜೀವಂತವಾಗಿರುತ್ತದೆ. ಎಂಟು ದಿನಗಳ ಬಿಡುವಿನ ನಂತರ ಎಟಿಕೆ ಅಂಗಣಕ್ಕಿಳಿದಿದೆ.

ಋತುವಿನಲ್ಲಿ ಈ ಹಿಂದೆ ನಡೆದ ಪಂದ್ಯದಲ್ಲಿ ನಾರ್ಥ್ ಈಸ್ಟ್ ವಿರುದ್ಧ ಎರಡು ಗೋಲು ಗಳಿಸಿ ಜಯದ ರೂವಾರಿ ಎನಿಸಿದ್ದ ರಾಯ್ ಕೃಷ್ಣ ಕಳೆದ ನಾಲ್ಕು ಪಂದ್ಯಗಳಲ್ಲಿ ಗೋಲು ಗಳಿಸಿರಲಿಲ್ಲ. ಈಗ ಗೋಲಿನ ಬರವನ್ನು ನೀಗಿಸಿಕೊಳ್ಳುವ ತವಕದೊಂದಿಗೆ ಅಂಗಣಕ್ಕಿಳಿದರು. ಹಿಂದಿನ ಹಂದ್ಯಗಳಲ್ಲಿ ರಾಯ್ ಕೃಷ್ಣ ಗೋಲು ಗಳಿಸದೇ ಇದ್ದಿರಬಹುದು, ಆದರೆ ಇತರರು ಗೋಲು ಗಳಿಸುವಲ್ಲಿ ನೆರವಾಗಿದ್ದಾರೆ.

ಆತಿಥೇಯ ತಂಡ ಹಿಂದಿನ ನಾಲ್ಕು ಪಂದ್ಯಗಳಲ್ಲಿ ಮೂರು ಜಯ ಗಳಿಸಿದ್ದು, ಈಗ ನಾಲ್ಕನೇ ಜಯದ ಗುರಿಯೊಂದಿಗೆ ಅಂಗಣಕ್ಕಿಳಿಯಿತು. ತಮಗಿರುವ ಅಲ್ಪ ಅವಕಾಶವನ್ನು ಜೀವಂತವಾಗಿರಿಸಿಕೊಳ್ಳಬೇಕಾದರೆ ಪರ್ವತಪ್ರದೇಶದ ತಂಡ ಆವೇಶದ ಆಟಕ್ಕೆ ಮುಂದಾಗಬೇಕಿದೆ. ಏಳು ಪಂದ್ಯಗಳಲ್ಲಿ ಜಯ ಕಾಣದ ನಾರ್ಥ್ ಈಸ್ಟ್ ಗೆ ಈಗ ಜಯದ ಅಗತ್ಯ ಇದೆ. ಗೋಲು ಗಳಿಕೆಯಲ್ಲಿಯೂ ಹಿಂದೆ ಬಿದ್ದಿರುವ ನಾರ್ಥ್ ಈಸ್ಟ್ ಗಳಿಸಿದ್ದು, ಹೈದರಾಬಾದ್ ಗಿಂತ ಹಿಂದೆ ಇದೆ. ಗೋಲು ಗಳಿಕೆಯಲ್ಲಿ ಎಟಿಕೆ ಎರಡನೇ ಸ್ಥಾನದಲ್ಲಿದೆ.

Story first published: Monday, January 27, 2020, 23:56 [IST]
Other articles published on Jan 27, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X