ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಮುಂಬೈ ವಿರುದ್ಧ ಸೋತ ಈಸ್ಟ್ ಬೆಂಗಾಲ್ ಕಂಗಾಲ್!

By Isl Media
ISL: Boumous, Le Fondre shine as Mumbai sweep aside SC East Bengal

ಗೋವಾ, ಡಿಸೆಂಬರ್ 1: ಗ್ಲೆನ್ವಿಲ್ಲೆ ಲೀ ಫೊಂಡ್ರೆ (20 ಮತ್ತು 48ನೇ ನಿಮಿಷ) ಮತ್ತು ಹೆರ್ನಾನ್ ಡೇನಿಯಲ್ ಸಾಂಟನಾ (58ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಈಸ್ಟ್ ಬೆಂಗಾಲ್ ವಿರುದ್ಧ 3-0 ಗೋಲುಗಳ ಅಂತರದಲ್ಲಿ ಜಯ ಗಳಿಸಿದ ಮುಂಬೈ ಸಿಟಿ ಎಫ್ ಸಿ ಹೀರೋ ಇಂಡಿಯನ್ ಸೂಪರ್ ಲೀಗ್ ನ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿತು. ಸತತ ಎರಡು ಸೋಲಿನಿಂದ ಕಂಗೆಟ್ಟ ಈಸ್ಟ್ ಬೆಂಗಾಲ್ ಕೊನೆಯ ಸ್ಥಾನಕ್ಕೆ ತಳ್ಳಲ್ಪಟ್ಟಿತು. ಡಿಫೆನ್ಸ್ ವಿಭಾಗದಲ್ಲಿನ ವೈಫಲ್ಯ, ಅನುಭವದ ಕೊರತೆ ಪಾಸ್ ನಲ್ಲಿ ನಿಖರತೆ ಇಲ್ಲದ ಕಾರಣ ಈಸ್ಟ್ ಬೆಂಗಾಲ್ ಸೋಲಿಗೆ ಪ್ರಮುಖ ಕಾರಣವಾಯಿತು.

ಆಸ್ಟ್ರೇಲಿಯಾಕ್ಕೆ ಟೀಮ್ ಇಂಡಿಯಾ ತಿರುಗೇಟು ನೀಡಲಿದೆ: ಆರ್‌ಪಿ ಸಿಂಗ್ಆಸ್ಟ್ರೇಲಿಯಾಕ್ಕೆ ಟೀಮ್ ಇಂಡಿಯಾ ತಿರುಗೇಟು ನೀಡಲಿದೆ: ಆರ್‌ಪಿ ಸಿಂಗ್

ಮುನ್ನಡೆದ ಮುಂಬೈ ಸಿಟಿ: 20ನೇ ನಿಮಿಷದಲ್ಲಿ ಲೀ ಫೊಂಡ್ರೆ ಗಳಿಸಿದ ಗೋಲಿನಿಂದ ಈಸ್ಟ್ ಬೆಂಗಾಲ್ ವಿರುದ್ಧದ ಪ್ರಥಮಾರ್ಧದಲ್ಲಿ 1-0 ಗೋಲಿನ ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಪಂದ್ಯ ಆತ್ಯಂತ ಆಕ್ರಮಣಕಾರಿಯಾಗಿತ್ತು. ಹ್ಯೂಗೊ ಬೌಮಾಸ್ ಸುಮಾರು ಮಧ್ಯ ಪಿಚ್ ನಲ್ಲಿ ದೊರೆತ ಚೆಂಡನ್ನು ಒಂಟಿಯಾಗಿಯೇ ಮುನ್ನಡೆಸಿ ಪೆನಾಲ್ಟಿ ವಲಯದಲ್ಲಿ ಫೊಂಡ್ರೆಗೆ ಹಸ್ತಾಂತರಿಸಿದರು.

ಐಎಸ್‌ಎಲ್ 2020‌: ಗಾಯಾಳು ಹೈದಾಬಾದ್‌ಗೆ ಜೆಮ್ಷೆಡ್ಪುರ ಎದುರಾಳಿಐಎಸ್‌ಎಲ್ 2020‌: ಗಾಯಾಳು ಹೈದಾಬಾದ್‌ಗೆ ಜೆಮ್ಷೆಡ್ಪುರ ಎದುರಾಳಿ

ಈ ನಡುವೆ ಈಸ್ಟ್ ಬೆಂಗಾಲ್ ಗೋಲ್ ಕೀಪರ್ ದೇಬಜಿತ್ ಮಜುಂದರ್ ಮುನ್ನಡೆದು ಚೆಂಡನ್ನು ತಡೆಯಲು ಯತ್ನಿಸಿದರೂ ಬೌಮಾಸ್ ಜಾಣ್ಮೆಯಿಂದ ಚೆಂಡನ್ನು ಫೊಂಡ್ರೆಗೆ ನೀಡಿದರು. ಈಸ್ಟ್ ಬೆಂಗಾಲ್ ತಂಡದ ನಾಯಕ ಡೇನಿಯಲ್ ಫಾಕ್ಸ್ ಆರಂಭದಲ್ಲೇ ಗಾಯಗೊಂಡು ನಿರ್ಗಮಿಸಿದ್ದು ತಂಡದ ಹಿನ್ನಡೆಗೆ ಪ್ರಮುಖ ಕಾರಣವಾಗಿತ್ತು.

ಮೊದಲ ಜಯದ ನಿರೀಕ್ಷೆ

ಮೊದಲ ಜಯದ ನಿರೀಕ್ಷೆ

ಹೊಸ ತಿಂಗಳ ಮೊದಲ ಪಂದ್ಯ ಹೊಸ ತಂಡವಾಗಿರುವ ಈಸ್ಟ್ ಬೆಂಗಾಲ್ ತಂಡ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಮುಂಬಯ ಸಿಟಿ ಎಫ್ ಸಿ ವಿರುದ್ಧ ಜಯ ಗಳಿಸುವ ಆತ್ಮವಿಶ್ವಾಸದೊಂದಿಗೆ ಅಂಗಣಕ್ಕಿಳಿಯಿತು. ಎಟಿಕೆ ಮೋಹನ್ ಬಾಗನ್ ವಿರುದ್ಧದ ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿದ ನಂತರ ರಾಬೀ ಫ್ಲವರ್ ಪಡೆಗೆ ಈಗ ಕಠಿಣ ಸವಾಲನ್ನು ಸದುರಿಸಬೇಕಾದ ಅನಿವಾರ್ಯತೆ.

ಬೆಂಗಾಲ್ ಆತ್ಮವಿಶ್ವಾಸದ ಆಟ

ಬೆಂಗಾಲ್ ಆತ್ಮವಿಶ್ವಾಸದ ಆಟ

ಸೋಲಿನ ನಡುವೆಯೂ ಈಸ್ಟ್ ಬೆಂಗಾಲ್ ಆತ್ಮವಿಶ್ವಾಸದ ಆಟವಾಡಿತ್ತು. ಮಿಡ್ ಫೀಲ್ಟ್ ವಿಭಾಗದಲ್ಲಿ ಆಂಟೊನಿಯೊ ಪಿಲ್ಕಿಂಗ್ಟನ್ ಮತ್ತು ಮಟ್ಟಿ ಸ್ಟೈನ್ಮನ್ ತಂಡದ ಬೆನ್ನೆಲುಬಾಗಿದ್ದಾರೆ. ಬಲ್ವಂತ್ ಸಿಂಗ್ ಮೊದಲ ಪಂದ್ಯದಲ್ಲಿ ನರೀಕ್ಷಿತ ಮಟ್ಟದ ಪ್ರದರ್ಶನ ತೋರಿಲ್ಲ. ಇದರಿಂದ ಜೆಜೆ ಲಾಲ್ಪೆಖ್ಲುವಾ ಅವರು ಅಂಗಣಕ್ಕಿಳಿದರೆ ಅಚ್ಚರಿ ಇಲ್ಲ. ಎರಡೂ ತಂಡಗಳು ಚೆಂಡಿನ ಹತೋಟಿಯಲ್ಲಿಡುವ ಬಗ್ಗೆಯೇ ಆಸಕ್ತಿ ಹೆಚ್ಚು ತೋರುವುದರಿಂದ ಪಂದ್ಯ ಸಾಕಷ್ಟು ಕುತೂಹಲಕ್ಕೆ ಕಾರಣವಾಗುವ ಸಾಧ್ಯತೆ ಹೆಚ್ಚು.

ಮುಂಬೈ ನೈಜ ಆಟ ಆಡಿರಲಿಲ್ಲ

ಮುಂಬೈ ನೈಜ ಆಟ ಆಡಿರಲಿಲ್ಲ

ಮುಂಬೈ ಇದುವರೆಗೂ ತನ್ನ ನೈಜ ಆಟವನ್ನು ಆಡಿರಲಿಲ್ಲ. ಈಗ ಹೊಸ ತಂಡದ ವಿರುದ್ಧ ಜಯ ಗಳಿಸುವ ಆತ್ಮವಿಶ್ವಾಸದೊಂದಿಗೆ ಅಣಗಣಕ್ಕಿಳಿಯಿತು. ಕೋಚ್ ಸರ್ಗಿಯೊ ಲೊಬೆರಾ ಅವರು ಆಡಂ ಲೀ ಫೊಂಡ್ರೆ ಮತ್ತು ಬಾರ್ಥಲೋಮ್ಯೊ ಒಗ್ಬಚೆ ಅವರನ್ನು ಅಂಗಣಕ್ಕಿಳಿಸುವ ಸಾಧ್ಯತೆ ಇದೆ. ಹ್ಯುಗೊ ಬೌಮಾಸ್ ಅವರ ಜನಪ್ರಿಯತೆ ಇನ್ನೂ ತಂಡದ ಫಲಿತಾಂಶದ ಮೇಲೆ ಬೀಳಲಿಲ್ಲ. ಮಂದಾರ ರಾವ್ ದೇಸಾಯಿ ಇಂಡಿಯನ್ ಸೂಪರ್ ಲೀಗ್ ನಲ್ಲಿ 100ನೇ ಪಂದ್ಯವನ್ನಾಡಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

Story first published: Tuesday, December 1, 2020, 23:33 [IST]
Other articles published on Dec 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X