ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಫೈನಲ್‌ನಲ್ಲೂ ಮಿನುಗುತ್ತಾ ನಮ್ಮ ಬೆಂಗಳೂರು ಎಫ್‌ಸಿ!?

By Isl Media
ISL: Can Bengaluru carry league form into final?

ಮುಂಬೈ, ಮಾರ್ಚ್ 15: ಹೀರೋ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಅತ್ಯಂತ ಸವಾಲಿನ ತಂಡವೆಂದರೆ ಅದು ಬೆಂಗಳೂರು ಎಫ್ ಸಿ. ಕಳೆದ ಋತುವಿನಲ್ಲಿ ಆರಂಭದಿಂದದಲೂ ಅಗ್ರ ಸ್ಥಾನ ಕಾಯ್ದುಕೊಂಡಿದ್ದ ಬೆಂಗಳೂರು ಎರಡನೇ ಸ್ಥಾನದಲ್ಲಿದ್ದ ಚೆನ್ನೆ'ಯಿನ್ ತಂಡಕ್ಕಿಂತ ಎಂಟು ಅಂಕ ಮೇಲುಗೈ ಸಾಧಿಸಿತ್ತು. ಆದರೆ ಮನೆಯಂಗಣದಲ್ಲಿ ನಡೆದ ಫೈನಲ್‌ನಲ್ಲಿ ಚೆನ್ನೈಯಿನ್ ವಿರುದ್ಧ ಸೋತಿರುವುದು ಸ್ಪಷ್ಚ.

1
1053230

ಈ ಬಾರಿಯೂ ಬೆಂಗಳೂರು ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಗೋವಾ ಹಾಗೂ ಬೆಂಗಳೂರು ತಂಡಗಳ ಅಂಕದಲ್ಲಿ ಸಮಬಲಗೊಂಡಿವೆ. ಲೀಗ್ ಹಂತದಲ್ಲಿ ಎರಡು ಜಯ ಗಳಿಸುವ ಮೂಲಕ ಬೆಂಗಳೂರು ತಂಡ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿತು. 'ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಗೋವಾ ವಿರುದ್ಧ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡವಾಗಿ ಬೆಂಗಳೂರು ಕಾಣಿಸಿಕೊಂಡಿದೆ.

ಭಾರತ vs ಆಸ್ಟ್ರೇಲಿಯಾ: ಕಂಡು-ಕಾಣದೆ ಉಳಿದ ಸ್ವಾರಸ್ಯಕರ ಸಂಗತಿಗಳು!ಭಾರತ vs ಆಸ್ಟ್ರೇಲಿಯಾ: ಕಂಡು-ಕಾಣದೆ ಉಳಿದ ಸ್ವಾರಸ್ಯಕರ ಸಂಗತಿಗಳು!

'ಕೇವಲ ಗೆದ್ದ ಎರಡು ಪಂದ್ಯಗಳನ್ನು ಪರಿಗಣಿಸುವುದಾದರೆ ಅವರು ಫೇವರಿಟ್, ಆದರೆ ನಾವು ಈ ಫೈನಲ್ ಪಂದ್ಯವನ್ನು ತೀವ್ರತರ ಹೋರಾಟವೆಂದು ಪರಿಗಣಿಸಿದ್ದೇವೆ,' ಎಂದು ಗೋವಾ ತಂಡದ ಕೋಚ್ ಸರ್ಗಿಯೋ ಲೊಬೆರಾ ಹೇಳಿದ್ದಾರೆ. ಗೋವಾದ ಆಕ್ರಮಣಕಾರಿ ಆಟ ಹಾಗೂ ಡಿಫೆನ್ಸ್‌ನಲ್ಲಿ ಉತ್ತಮವಾದ ಶಕ್ತಿಯನ್ನು ಹೊಂದಿದ್ದರೂ, ಎರಡು ಋತುಗಳಲ್ಲಿ ಬೆಂಗಳೂರು ತಂಡಕ್ಕೆ ಯಾವುದೇ ರೀತಿಯ ಅಡ್ಡಿಯನ್ನು ಮಾಡಲಾಗಲಿಲ್ಲ. ಈ ಹಿಂದಿನ ನಾಲ್ಕು ಮುಖಾಮುಖಿಯಲ್ಲಿ ಬೆಂಗಳೂರು ತಂಡ ಮೂರು ಬಾರಿ ಜಯ ಗಳಿಸಿದೆ. ಗೋವಾ ಕೇವಲ ಒಂದು ಬಾರಿ ಗೆದ್ದಿದ್ದು, ಆ ಪಂದ್ಯವೂ ತೀವ್ರ ಪೈಪೋಟಿಯಿಂದ ಕೂಡಿ 4-3 ರ ಅಂತರದಲ್ಲಿ ಕೊನೆಗೊಂಡಿತ್ತು. ಗುರ್‌ಪ್ರೀತಿ ಸಿಂಗ್ ಸಂಧೂ ರೆಡ್ ಕಾರ್ಡ್ ಪಡೆದು ಹೊರ ನಡೆದ ನಂತರ ಗೋವಾ ಜಯ ಗಳಿಸುವಲ್ಲಿ ಯಶಸ್ವಿಯಾಯಿತು.

ಈ ಋತುವಿನಲ್ಲಿ ಬೆಂಗಳೂರ ತಂಡ ಗೋವಾ ವಿರುದ್ಧ ಉತ್ತಮ ಪ್ರದರ್ಶನ ತೋರಿತ್ತು. ಆಡಿದ್ದ ಎರಡು ಪಂದ್ಯಗಳಲ್ಲಿ ಬೆಂಗಳೂರು ಐದು ಗೋಲು ಗಳಿಸಿತ್ತು. ಗೋವಾಕ್ಕೆ ನೀಡಿದ್ದು ಕೇವಲ ಒಂದ ಗೋಲು. ಎರಡೂ ತಂಡಗಳ ಕೋಚ್ ಸ್ಪೇನ್ ಮೂಲದವರಾದ ಕಾರಣ ಪಂದ್ಯ ಸಾಕಷ್ಟು ಕುತೂಹಲದ ಕ್ಷಣಗಳಿಗೆ ಸಾಕ್ಷಿಯಾಗವ ಸಾ'್ಯತೆ ಇದೆ. ಸರ್ಗಿಯೋ ಲೊಬೆರಾ ಮತ್ತು ಕಾರ್ಲ್ಸ್ ಕ್ವಾಡ್ರಾಟ್ ಬಾರ್ಸಿಲೋನಾ ವಾತಾವರಣದಲ್ಲಿ ಪಳಗಿದವರು.

ಧೋನೀನಾ-ಕೊಹ್ಲೀನಾ?: ಅದ್ದೂರಿ ಐಪಿಎಲ್‌ಗೊಂದು ಕಲರ್‌ಫುಲ್ ವಿಡಿಯೋಧೋನೀನಾ-ಕೊಹ್ಲೀನಾ?: ಅದ್ದೂರಿ ಐಪಿಎಲ್‌ಗೊಂದು ಕಲರ್‌ಫುಲ್ ವಿಡಿಯೋ

ಲೊಬೆರಾ ಆಕ್ರಮಣಕಾರಿ ಆಟಕ್ಕೆ ಹೆಚ್ಚು ಒತ್ತು ನೀಡಿದರೆ ಕ್ವಾಡ್ರಾಟ್ ಡಿೆನ್ಸ್ ಆಟಕ್ಕೂ ಅವಕಾಶ ನೀಡುತ್ತಾರೆ. ಬೆಂಗಳೂರು ತಂಡದಲ್ಲಿ 'ಾರತೀಯ ಆಟಗಾರರು ಸ್ಪೇನ್ ಕೋಚ್ ನೀಡುವ ಸೂತ್ರಗಳನ್ನು ಸರಿಯಾಗಿ ಕಾರ್ಯರೂಪಕ್ಕೆ ತಂದು ವಿದೇಶಿ ಆಟಗಾರರ ಮೇಲೆ ಹೆಚ್ಚು ಆತುಕೊಂಡಂತೆ ಕಾಣುತ್ತಿಲ್ಲ. ಆದರೆ ಗೋವಾ ಫೆರಾನ್ ಕೊರೊಮಿನಾಸ್, ಎಡು ಬೇಡಿಯಾ ಹಾಗೂ ಅಹಮ್ಮದ್ ಜೊಶೊಹು ಅವರನ್ನೇ ಹೆಚ್ಚು ನಂಬಿಕೊಂಡಿರುವಂತೆ ಕಾಣುತ್ತದೆ.

ಬೆಂಗಳೂರು ತಂಡದಲ್ಲಿ ವಿದೇಶಿ ಆಟಗಾರರು ಉತ್ತಮ ಪ್ರದರ್ಶನ ತೋರುವಲ್ಲಿ ವಿಲವಾದಾಗ, ದೇಶೀಯ ಆಟಗಾರರು ತಂಡಕ್ಕೆ ಆ'ಧಾರವಾಗಿದ್ದರು. ಸುನಿಲ್ ಛೆಟ್ರಿ 9 ಗೋಲುಗಳನ್ನು ಗಳಿಸಿ ತಂಡದ ಪರ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರರೆನಿಸಿದ್ದಾರೆ. ಉದಾಂತ್ ಸಿಂಗ, ಹರ್ಮನ್‌ಜೋತ್ ಖಾಬ್ರಾ, ರಾಹುಲ್ ಭಿಕೆ ಋತುವಿನುದ್ದಕ್ಕೂ ತಂಡದ ಪರ ಉತ್ತಮ ಪ್ರದರ್ಶನ ತೋರಿದ್ದಾರೆ. ಗೋಲ್‌ಕೀಪಿಂಗ್‌ನಲ್ಲಿ ಗುರ್‌ಪ್ರೀತ್ ತಂಡದ ಯಶಸ್ಸಿನ ರೂವಾರಿ ಎನಿಸಿದ್ದಾರೆ. 'ಹಿಂದಿನ ಎರಡು ಲೀಗ್ ಪಂದ್ಯಗಳಿಗಿಂತ ನಾಳೆಯ ಫೈನಲ್ ಪಂದ್ಯ ವಿಭಿನ್ನವಾಗಿರುತ್ತದೆ,' ಎಂದು ಲೊಬೆರಾ ಎಚ್ಚರಿಸಿದ್ದಾರೆ.

Story first published: Friday, March 15, 2019, 20:52 [IST]
Other articles published on Mar 15, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X