ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2020: ಉಕ್ಕಿನ ತಂಡಕ್ಕೆ ಸೋಲುಣಿಸಿದ ಚೆನ್ನೈಯಿನ್

By Isl Media
ISL: Chennaiyin close gap on top-four with dominating win

ಚೆನ್ನೈ, ಜನವರಿ 23: ನಿರಿಜುಸ್ ವಾಸ್ಕಿಸ್ (13 ಮತ್ತು 75ನೇ ನಿಮಿಷ), ಆಂಡ್ರೆ ಶಿಂಬ್ರಿ (43ನೇ ನಿಮಿಷ) ಮತ್ತು ಲಾಲ್ರಿಯಾಂಜುವಾಲಾ ಚಾಂಗ್ಟೆ (87ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಜೆಮ್ಷೆಡ್ಪುರ ಎಫ್ ಸಿ ತಂಡವನ್ನು 4-1 ಗೋಲುಗಳ ಅಂತರದಲ್ಲಿ ಮಣಿಸಿದ ಚೆನ್ನೈಯಿನ್ ಎಫ್ ಸಿ ತಂಡ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಪ್ಲೇ ಆಫ್ ಹಂತ ತಲಪುವ ತನ್ನ ಆಸೆಯನ್ನು ಜೀವಂತವಾಗಿರಿಸಿಕೊಂಡಿತು. ಸರ್ಗಿಯೋ ಕ್ಯಾಸ್ಟಲ್ 71ನೇ ನಿಮಿಷದಲ್ಲಿ ಗಳಿಸಿದ ಗೋಲು ಸೋಲಿನ ಅಂತರವನ್ನು ಕಡಿಮೆ ಮಾಡಿತು. ಈ ಜಯದೊಂದಿಗೆ ಚೆನ್ನೈಯಿನ್ ಎಫ್ ಸಿ ತಂಡ ಅಂಕಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ಜಿಗಿಯಿತು.

2-0 ಮುನ್ನಡೆ: ಜಯವನ್ನೇ ತನ್ನ ಮಂತ್ರವನ್ನಾಗಿಸಿಕೊಂಡಿರುವ ಚೆನ್ನೈಯಿನ್ ಎಫ್ ಸಿ ಮನೆಯಂಗಣದ ಪ್ರೇಕ್ಷಕರ ಮುಂದೆ ಮಿಂಚಿನ ಆಟ ಪ್ರದರ್ಶಿಸಿತು, ಪರಿಣಾಮ ಪ್ರಥಮಾರ್ಧದಲ್ಲಿ 2-0 ಗೋಲುಗಳ ಮುನ್ನಡೆ. 13ನೇ ನಿಮಿಷದಲ್ಲಿ ನಿರಿಜುಸ್ ವಾಸ್ಕಿಸ್ ಗಳಿಸಿ ಗೋಲಿನ ನೆರವಿನಿಂದ ಎರಡು ಬಾರಿ ಚಾಂಪಿಯನ್ ಚೆನ್ನೈಯಿನ್ ತಂಡ ಆರಂಭದಲ್ಲೆ ತನ್ನ ನಿಲುವನ್ನು ಸ್ಪಷ್ಟಪಡಿಸಿತು. ನಂತರ 43ನೇ ನಿಮಿಷದಲ್ಲಿ ಆಂಡ್ರೆ ಶಿಂಬ್ರಿ ಗಳಿಸಿದ ಗೋಲು ತಂಡಕ್ಕೆ 2-0 ಮುನ್ನಡೆ ತಂದುಕೊಟ್ಟಿತು, ಈ ನಡುವೆ ಜೆಮ್ಷೆಡ್ಪುರದ ಡಿಫೆನ್ಸ್ ವಿಭಾಗ ಬಹಳ ದುರ್ಬಲವಾಗಿರುವುದು ಸ್ಪಷ್ಟವಾಗಿತ್ತು, ನಿರಿಜುಸ್ ಗೆ ಎರಡು ಬಾರಿ ಗೋಲು ಗಳಿಸುವ ಅವಕಾಶ ಉತ್ತಮವಾಗಿತ್ತು. ಆದರೆ ಯಶಸ್ಸು ದಕ್ಕಲಿಲ್ಲ.

ಆ ಒಂದು ಸ್ಥಾನಕ್ಕಾಗಿ
ಅಂಕಪಟ್ಟಿಯ ಮಧ್ಯಭಾಗದಿಂದ ತಪ್ಪಿಸಿಕೊಂಡು ನಾಲ್ಕನೇ ಸ್ಥಾನಕ್ಕಾಗಿ ಸ್ಪರ್ಧೆ ನಡೆಸುತ್ತಿರುವ ಚೆನ್ನೈಯಿನ್ ಎಫ್ ಸಿ ಹಾಗೂ ಜೆಮ್ಷೆಡ್ಪುರ ತಂಡಗಳು ಚೆನ್ನೈನಲ್ಲಿ ಮುಖಾಮುಖಿಯಾದವು. ಉಳಿದಿರುವ ಒಂದು ಸ್ಥಾನಕ್ಕಾಗಿ ಈಗ ಪೈಪೋಟಿ ನಡೆಯುತ್ತಿದೆ, ಮೂರು ತಂಡಗಳು ಈಗಾಗಲೇ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿವೆ. ಆತಿಥೇಯ ಚೆನ್ನೈ ತಂಡ ಸತತ ಎರಡು ಪಂದ್ಯಗಳಲ್ಲಿ ಜಯ ಗಳಿಸಿ ಅತ್ಯಂತ ಆತ್ಮವಿಶ್ವಾಸದಲ್ಲಿದ್ದು, ಮೂರು ಅಂಕಗಳನ್ನು ಪಡೆಯಲು ಸಜ್ಜಾಗಿವೆ. ಮರಿನಾ ಮಚಾನ್ಸ್ ಮನೆಯಂಗಣದಲ್ಲಿ ಉತ್ತಮ ಪ್ರದರ್ಶನ ತೋರಿದ್ದು, ಆಡಿರುವ ಐದು ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಸೋಲನುಭವಿಸಿ 12 ಗೋಲುಗಳನ್ನು ಗಳಿಸಿತ್ತು.

ನೂತನ ಕೋಚ್ ಓವೆನ್ ಕಾಯ್ಲ್ ಅವರ ಆಗಮನದ ನಂತರ ತಂಡದ ಆಕ್ರಮಣಕಾರಿ ಆಟದಲ್ಲಿ ಯಶಸ್ಸು ಸಿಕ್ಕಿದೆ, ರಫಾಯಲ್ ಕ್ರಿವೆಲ್ಲರೋ, ಆಂಡ್ರೆ ಶೆಂಬ್ರಿ ಮತ್ತು ನಿರಿಜುಸ್ ವಾಸ್ಕಿಸ್ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿರುತ್ತಾರೆ. ಆದರೆ ಎರಡು ಬಾರಿ ಚಾಂಪಿಯನ್ ಲೂಸಿಯಾನ ಗೊಯೆನ್ ಮತ್ತು ಎಲಿ ಸಾಬಿಯಾ ಇದುವರೆಗೂ ತಮ್ಮ ನೈಜ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದಾರೆ. ಜೆಮ್ಷೆಡ್ಪುರ ತಂಡ ಮನೆಯಂಗಣದ ಹೊರಗಡೆ ಕಳೆದ ಋತುವಿನಿಂದ ಗೆದ್ದಿರುವುದು ಕೇವಲ ಎರಡು ಪಂದ್ಯಗಳು.

ಈ ಬಾರಿ ಕಳೆದ ಆರು ಪಂದ್ಯಗಳಲ್ಲಿ ಜಯ ಕಾಣದೆ ಕಂಗಾಲಾಗಿದೆ, ಇಲ್ಲಿ ಜಯ ಗಳಿಸಿದರೆ ಮಾತ್ರ ಜೆಮ್ಷೆಡ್ಪುರಕ್ಕೆ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಳ್ಳಬಹುದು. ಸರ್ಗಿಯೋ ಕ್ಯಾಸ್ಟಲ್ ಅವರ ಆಗಮನ ತಂಡದ ಬಲವನ್ನು ಹೆಚ್ಚಿಸಿದೆ. ನೋಯ್ ಅಕೋಸ್ಟಾ, ಐಟರ್ ಮನ್ರಾಯ್ ಮತ್ತು ಫಾರೂಕ್ ಚೌಧರಿ ತಮ್ಮ ನೈಜ ಆಟವನ್ನು ತೋರ್ಪಡಿಸಬೇಕಾಗಿದೆ.

Story first published: Thursday, January 23, 2020, 23:18 [IST]
Other articles published on Jan 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X