ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಮುಂಬೈ ಸಿಟಿ ವಿರುದ್ಧ ಜಯದ ಅಗತ್ಯದಲ್ಲಿದೆ ಚೆನ್ನೈಯಿನ್

By Isl Media
ISL: Chennaiyin seek much-required first win against Mumbai City

ಚೆನ್ನೈ, ಅಕ್ಟೋಬರ್ 27: ಹೀರೋ ಇಂಡಿಯನ್ ಸೂಪರ್ ಲೀಗ್ ಚೆನ್ನೈ ನಗರಕ್ಕೆ ಆಗಮಿಸಿದೆ, ಮನೆಯಂಗಣದಲ್ಲಿ ಚೆನ್ನೈ ತಂಡ ಋತುವಿನಲ್ಲಿ ಮೊದಲ ಬಾರಿಗೆ ಮುಂಬೈ ಸಿಟಿ ಎಫ್‌ಸಿ ವಿರುದ್ಧ ಸೆಣಸಲಿದೆ. ಹೀರೋ ಇಂಡಿಯನ್ ಸೂಪರ್ ಲೀಗ್ ನಾಲ್ಕರಲ್ಲಿ ಚಾಂಪಿಯನ್ ಪಟ್ಟ ಗೆದ್ದಿರುವ ತಂಡದ ಅಭಿಮಾನಿಗಳು ತಮ್ಮ ತಂಡ ಕಳೆದ ಋತುವಿನಲ್ಲಿ ಕಳಪೆ ಪ್ರದರ್ಶನ ತೋರಿದ ನಂತರ, ಈಗ ಜಯದ ನಿರೀಕ್ಷೆಯಲ್ಲಿದ್ದಾರೆ.

''ಅಭಿಮಾನಿಗಳ ಸಮ್ಮುಖದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ನಮ್ಮ ಆಟಗಾರರು ನಿಜವಾಗಿಯೂ ಉತ್ತಮ ಪ್ರದರ್ಶನ ತೋರುವ ತವಕದಲ್ಲಿದ್ದಾರೆ . ನಾವು ಹೇಗೆ ಗೆಲ್ಲುತ್ತೇವೆ ಎಂಬುದರ ಬಗ್ಗೆ ಯೋಚಿಸುವುದಿಲ್ಲ. ನಾವು ಮೂರು ಅಂಕಗಳನ್ನು ಗಳಿಸಬೇಕು. ಮುಂದಿನ ಎರಡು ಪಂದ್ಯಗಳಲ್ಲಿ ನಾವು ಅತಿ ಹೆಚ್ಚು ಅಂಕಗಳನ್ನು ಗಳಿಸಿದರೆ. ಅದಕ್ಕಿಂತ ಬೇರೆ ಖುಷಿ ಬೇರೆ ಇಲ್ಲ,'' ಎಂದು ಜಾನ್ ಗ್ರಗೋರಿ ಹೇಳಿದ್ದಾರೆ.

ನತಾಶಾ ಸ್ಟ್ಯಾಂಕೋವಿಕ್ ಬಾಹುಗಳಲ್ಲಿ ಬಂಧಿಯಾಗಲಿದ್ದಾರೆ ಹಾರ್ದಿಕ್ ಪಾಂಡ್ಯ!ನತಾಶಾ ಸ್ಟ್ಯಾಂಕೋವಿಕ್ ಬಾಹುಗಳಲ್ಲಿ ಬಂಧಿಯಾಗಲಿದ್ದಾರೆ ಹಾರ್ದಿಕ್ ಪಾಂಡ್ಯ!

ಚೆನ್ನೈಯಿನ್ ಎಫ್ ಸಿ ಉತ್ತಮ ಸ್ಟಾರ್ ಆಟಗಾರರನ್ನು ಹೊಂದಿಲ್ಲ, ಇದರಿಂದಾಗಿ ಗೋವಾ ವಿರುದ್ಧದ ಪಂದ್ಯದಲ್ಲಿ ತಂಡ 0-3 ಗೋಳುಗಳಿಂದ ಸೋಲನುಭವಿಸಿತ್ತು, ಸೆಂಟರ್ ಅಟ್ಯಾಕ್ ವಿಭಾಗದಲ್ಲಿರುವ ಲೂಸಿಯಾನ್ ಗೋಯೆನ್ ಹಾಗೂ ಎಲಿ ಸಾಬಿಯ ಉತ್ತಮ ರೀತಿಯಲ್ಲಿ ಪ್ರದರ್ಶನ ತೋರಿಲ್ಲ, ಫರಾನ್ ಕೊರೊಮಿನಾಸ್ ಪಡೆಯನ್ನು ನಿಯಂತ್ರಿಸುವಲ್ಲಿ ವಿಫಲವಾದರು. ಕಳೆದ ಎರಡು ಋತುವಿನಲ್ಲಿ ಮುಂಬೈ ಪರ ಆಡಿದ್ದ ರೊಮಾನಿಯಾದ ಆಟಗಾರ ಈಗ ತನ್ನ ಮಾಜಿ ತಂಡದ ವಿರುದ್ಧ ಉತ್ತಮ ಪ್ರದರ್ಶನ ತೋರಬೇಕಾಗಿದೆ.

ನಾಲ್ಕನೇ ಋತುವಿನಲ್ಲಿ ಚೆನ್ನೈಯಿನ್ ತಂಡ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಗ್ರೆಗೋರಿ, ಕಳೆದ ಋತುವಿನಲ್ಲಿ ತಂಡ ಕಳಪೆ ಪ್ರದರ್ಶನ ತೋರಿರುವುದಕ್ಕೆ ಹೆಚ್ಚು ಗಮನ ಕೊಟ್ಟಿಲ್ಲ, ತಂಡಕ್ಕೆ ಹಿಡಿದಿರುವ ಸೋಲಿನ ಧೂಳನ್ನು ಅವರು ತೆಗೆಯಬೇಕಿದೆ.

ವಿರಾಟ್ ಕೊಹ್ಲಿ, ಕೇನ್ ವಿಲಿಯಮ್ಸನ್ ಅನುಸರಿಸುತ್ತೇನೆ: ಬಾಬರ್ ಅಝಮ್ವಿರಾಟ್ ಕೊಹ್ಲಿ, ಕೇನ್ ವಿಲಿಯಮ್ಸನ್ ಅನುಸರಿಸುತ್ತೇನೆ: ಬಾಬರ್ ಅಝಮ್

ಆರಂಭಿಕ ಪಂದ್ಯದಲ್ಲಿ ಅವರು, ಅನಿರುಧ್ ತಾಪ ಅವರಿಗೆ ವಿಶ್ರಾಂತಿ ನೀಡಿದ್ದು ಎಲ್ಲರಲ್ಲೂ ಕುತೂಹಲವನ್ನು ಉಂಟು ಮಾಡಿತ್ತು, ನಂತರ ದ್ವಿತೀಯಾರ್ಧದಲ್ಲಿ ಅಂಗಣಕ್ಕಿಳಿಸಿದರು. ಮುಂಬೈ ಸಿಟಿ ಯಾ ಸವಾಲನ್ನು ಎದುರಿಸಲು ಗ್ರೆಗೋರಿ ತಂಡದಲ್ಲಿ ಕೆಲವು ಬದಲಾವಣೆಗಳನ್ನು ತರುವ ನಿರೀಕ್ಷೆಯಲ್ಲಿದ್ದಾರೆ.

ISL: Chennaiyin seek much-required first win against Mumbai City

''ಐಎಸ್ ಎಲ್ ನಲ್ಲಿ ಪಂದ್ಯಗಳು ಅತ್ಯಂತ ವೇಗದಲ್ಲಿ ಬರುತ್ತವೆ. ಹಾಗೂ ನೀವು ಅತ್ಯಂತ ವೇಗದಲ್ಲಿ ಜಯವನ್ನು ಆಯ್ದುಕೊಳ್ಳಬೇಕು. ಹೊಸ ಆಟಗಾರರು ಅತ್ಯಂತ ವೇಗದಲ್ಲಿ ಪರಿಸ್ಥಿತಿಗೆ ಹೊಂದಿಕೊಳ್ಳಬೇಕು. ಗೋವಾ ವಿರುದ್ಧದ ಪಂದ್ಯದಲ್ಲಿ ನಾನು ಮೂರು ಬದಲಾವಣೆ ಮಾಡಿರುವೆ. ಹುಡುಗರು ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ. ಮುಂಬೈ ವಿರುದ್ಧವೂ ನಾನು ಒಂದೆರಡು ಬದಲಾವಣೆ ಮಾಡಲಿದ್ದೇನೆ.'' ಎಂದು ಇಂಗ್ಲೆಂಡ್ ನ ಕೋಚ್ ಹೇಳಿದರು.

ಎರಡು ಋತುಗಳ ಹಿಂದೆ ಉದಯೋನ್ಮುಖ ಆಟಗಾರ ಗೌರವಕ್ಕೆ ಪಾತ್ರರಾದ ಜೆರ್ರಿ ಲಾಲರಿಂಜುವಾಲ ಅವರ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಮುಂಬೈ ತಂಡದ ಡೀಗೊ ಕಾರ್ಲೋಸ್ ವಿರುದ್ಧ ಜೆರ್ರಿ ತನ್ನ ಜೈಜ ಆತ ತೋರಬೇಕಾಗಿದೆ.

'ಎಂಎಸ್ ಧೋನಿ ಬಗ್ಗೆ ಮಾತನಾಡೋರಿಗೆ ಶೂ ಲೇಸ್ ಕಟ್ಟಲೂ ಬರೋಲ್ಲ''ಎಂಎಸ್ ಧೋನಿ ಬಗ್ಗೆ ಮಾತನಾಡೋರಿಗೆ ಶೂ ಲೇಸ್ ಕಟ್ಟಲೂ ಬರೋಲ್ಲ'

ಕೊಚ್ಚಿಯಲ್ಲಿ ಕೇರಳ ಬ್ಲಾಸ್ಟರ್ಸ್ ವಿರುದ್ಧ ನಡೆದ ಋತುವಿನ ಮೊದಲ ಪಂದ್ಯದಲ್ಲಿ ಮುಂಬೈ ಕಠಿಣ ರೀತಿಯಲ್ಲಿ ಜಯ ಕಂಡಿತ್ತು. ಆದರೂ ತಂಡದಲ್ಲಿ ಕೆಲವು ವಿಷಯದ ಕೆಡೆಗೆ ಗಮನ ಕೊಡಬೇಕಾದ ಅಗತ್ಯ ಇದೆ.

ಸೆಂಟರ್ ಬ್ಯಾಕ್ ಆಟಗಾರ ಮ್ಯಾಟೋ ಗ್ರಗಿಕ್ ಮೊದಲ ಪಂದ್ಯದಲ್ಲಿ ಗಾಯಗೊಂಡ ಕಾರಣ ಅವರು ಚೆನ್ನೈ ವಿರುದ್ಧ ಆಡುವುದಿಲ್ಲ ಎಂದು ಜಾರ್ಜ್ ಕೋಸ್ಟಾ ಖಚಿತ ಪಡಿಸಿದ್ದಾರೆ. ಅದೇ ಪಂದ್ಯದಲ್ಲಿ ಗಾಯಗೊಂಡಿದ್ದ ಮಿಡ್ ಫೀಲ್ಡರ್ ಪೌಲೊ ಮಚಾದೋ ಕೂಡ ನಾಳೆಯ ಪಂದ್ಯದಲ್ಲಿ ಆಡುವುದು ಸಂಶಯ.

ವಿಜಯ್ ಹಜಾರೆ ಟ್ರೋಫಿ 2019-20: ಸ್ಪಿನ್ನರ್ ಅರ್‌ ಅಶ್ವಿನ್‌ಗೆ ದಂಡವಿಜಯ್ ಹಜಾರೆ ಟ್ರೋಫಿ 2019-20: ಸ್ಪಿನ್ನರ್ ಅರ್‌ ಅಶ್ವಿನ್‌ಗೆ ದಂಡ

ಪ್ರತೀಕ್ ಚೌಧರಿ ಅವರೊಂದಿಗೆ ಸಾರ್ಥಕ್ ಗೌಳಿ ಅಂಗಣಕ್ಕಿಳಿಯುವುದರಿಂದ ಬ್ಯಾಕ್ ನಲ್ಲಿ ನಾಲ್ವರೂ ಭಾರತೀಯರು ಕಾಣಿಸಿಕೊಳ್ಳಲಿದ್ದಾರೆ. ಅಮೈನ್ ಚೇರ್ಮಿತಿ ಮುಂಬೈ ಪರ ಉತ್ತಮ ಪ್ರದರ್ಶನ ತೋರುತ್ತಿದ್ದು, ಇದು ಚೆನ್ನೈಯಿನ್ ತಂಡಕ್ಕೆ ಸವಾಲಾಗಿದೆ. ಚೇರ್ಮಿತಿ ಕೇರಳ ವಿರುದ್ಧ ತಂಡಕ್ಕೆ ಜಯದ ಗೋಲ್ ಗಳಿಸಿದ್ದರು. ಮೊದೌ ಸೌಗೌ ಮತ್ತು ಕಾರ್ಲೋಸ್ ಅವರು ಜೊತೆ ಸೇರಿದರೆ ಮುಂಬೈಯನ್ನು ನಿಯಂತ್ರಿಸಲು ಚೆನ್ನೈಯಿನ್ ಕಠಿಣ ಶ್ರಮ ಪಡಬೇಕಿದೆ.

''ಋತುವಿನ ಆರಂಭಕೆ ಮುನ್ನ ನಾವು ಚೆನ್ನೈಯಿನ್ ವಿರುದ್ಧ ಆಡಿದ್ದೇವೆ. ಗೋವಾ ವಿರುದ್ಧದ ಅವರ ಪಂದ್ಯವನ್ನು ವೀಕ್ಷಿಸಿದ್ದೆ. ಆದ್ದರಿಂದ ಅವರು ನಮ್ಮ ವಿರುದ್ಧ ವಿಭಿನ್ನವಾಗಿ ಆಡಲಿದ್ದಾರೆ ಎಂದು ಊಹಿಸಿರುವೆ, ನಾವು ಏನು ಮಾಡಬಲ್ಲೆವು ಎಂಬುದರ ಬಗ್ಗೆ ಗಮನ ಹರಿಸುವುದು ಇಲ್ಲಿ ಪ್ರಮುಖವಾಗಿದೆ,'' ಎಂದು ಕೋಸ್ಟಾ ಹೇಳಿದ್ದಾರೆ.

ಒತ್ತಡ ಗ್ರೆಗೋರಿ ಅವರ ಮೇಲಿದೆ, ಅವರು ತಮ್ಮ ಆಟಗಾರರಿಂದ ಉತ್ತಮ ಆಟವನ್ನು ನಿರೀಕ್ಷಿಸುತ್ತಿದ್ದಾರೆ. ಕೋಸ್ಟಾ ಅವರು ಮನೆಯಂಗಣದ ಹೊರಗೆ ಮತ್ತೊಂದು ಜಯದ ನಿರೀಕ್ಶ್ವಯಲ್ಲಿದ್ದಾರೆ.

Story first published: Saturday, October 26, 2019, 19:47 [IST]
Other articles published on Oct 26, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X