ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್ಎಲ್ 2019: ಕೊನೆ ಪಂದ್ಯದಲ್ಲೂ ಸೋಲು, ಚೆನ್ನೈಗೆ ಕೊನೆಯ ಸ್ಥಾನ

 ISL: Chennaiyins sorry season ends in a whimper at Goa

ಗೋವಾ, ಫೆಬ್ರವರಿ 28: ಫೆರಾನ್ ಕೊರೊಮಿನಾಸ್ 26ನೇ ನಿಮಿಷದಲ್ಲಿ ಗಳಿಸಿದ ಏಕೈಕ ಗೋಲಿನಿಂದ ಚೆನ್ನೈಯಿನ್ ತಂಡವನ್ನು 1-0 ಗೋಲಿನಿಂದ ಸೋಲಿಸಿದ ಎಫ್ ಸಿ ಗೋವಾ ತಂಡ ಇಂಡಿಯನ್ ಸೂಪರ್ ಲೀಗ್ ನಲ್ಲಿ ಎರಡನೇ ಸ್ಥಾನ ಭದ್ರಪಡಿಸಿಕೊಂಡಿತು. ಚೆನ್ನೈ ಕೊನೆಯ ಪಂದ್ಯದಲ್ಲೂ ಗೆಲ್ಲಲಾಗದೆ ಕೊನೆಯ ಸ್ಥಾನವೇ ಗತಿ ಎಂದು ಮನೆಗೆ ಹಿಂದಿರುಗಿತು. ಫೆರಾನ್ ಕೊರೊಮಿನಾಸ್ ಈ ಬಾರಿಯ ಇಂಡಿಯನ್ ಸೂಪರ್ ಲೀಗ್ ನಲ್ಲಿ ಈಗ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರರೆನಿಸಿದರು.

ಫೆರಾನ್ ಮಿಂಚು
ಗೋವಾ ಪರ ಯಾರೂ ಗೋಲು ಗಳಿಸದಿದ್ದರೂ, ಫೆರಾನ್ ಕೊರೊಮಿನಾಸ್ ಮಾತ್ರ ಗಳಿಸಿಯೇ ಗಳಿಸುತ್ತಾರೆ. ಇಂದಿನ ಪಂದ್ಯದಲ್ಲೂ ಇದಕ್ಕೆ ನಿದರ್ಶನ ಸಿಕ್ಕಿತು. 26ನೇ ನಿಮಿಷದಲ್ಲಿ ಅಹಮ್ಮದ್ ಜೊಹೊವ್ ಪಾಸೊಂದನ್ನು ಜಾಕಿಚಾಂದ್ ಸಿಂಗ್ ಕಡೆಗೆ ನೀಡಿದರು. ಆದು ಸಾಮಾನ್ಯ ದೀರ್ಘ ಪಾಸಾಗಿತ್ತು. ಪೆನಾಲ್ಟಿ ವಲಯದಲ್ಲಿದ್ದ ಸ್ಪೇನ್‌ನ ಆಟಗಾರ ಕೊರೊಮಿನಾಸ್‌ಗೆ ಜಾಕಿಚಂದ್ ಪಾಸ್ ನೀಡಿದರು.

ಐಎಸ್ಎಲ್ : ಮನೆಯಂಗಣದಿ ಕೊಚ್ಚಿಗೆ ಕೊನೆಗೊಂದು ಗೆಲ್ಲುವ ಹಂಬಲ ಐಎಸ್ಎಲ್ : ಮನೆಯಂಗಣದಿ ಕೊಚ್ಚಿಗೆ ಕೊನೆಗೊಂದು ಗೆಲ್ಲುವ ಹಂಬಲ

ಮಿಂಚಿನ ವೇಗದಲ್ಲಿ ಅದನ್ನು ನಿಯಂತ್ರಿಸಿದ ಕೊರೊಮಿನಾಸ್, ಯಾವುದೇ ಪ್ರಮಾದವೆಸಗದೆ ಚೆನ್ನೈ ಗೋಲ್‌ಕೀಪರ್‌ನನ್ನು ವಂಚಿಸಿ ಚೆಂಡನ್ನು ಗೋಲ್‌ಬಾಕ್ಸ್‌ಗೆ ತಳ್ಳಿದರು. ತಂಡಕ್ಕೆ ಮೊದಲ ಗೋಲಿನಿಂದ ಮುನ್ನಡೆ. ಈ ಬಾರಿಯ ಇಂಡಿಯನ್ ಸೂಪರ್ ಲೀಗ್ ಗೋಲ್ಡನ್ ಬೂಟ್‌ನಲ್ಲಿ ಮಂಚೂಣಿಯಲ್ಲಿರುವ ಕೊರೊಮಿನಾಸ್ ಅವರ 15ನೇ ಗೋಲು ಇದಾಗಿದೆ. ಇದರೊಂದಿಗೆ ಗೋವಾ ಪ್ರಥಮಾರ್ಧದಲ್ಲಿ 1-0 ಗೋಲಿನಿಂದ ಮುನ್ನಡೆಯಿತು.

ಇಂಡಿಯನ್ ಸೂಪರ್ ಲೀಗ್‌ನ 87ನೇ ಪಂದ್ಯದಲ್ಲಿ ಎರಡನೇ ಸ್ಥಾನದಲ್ಲಿರುವ ಎಫ್ ಸಿ ಗೋವಾ ಹಾಗೂ ಕೊನೆಯ ಸ್ಥಾನದಲ್ಲಿರುವ ಚೆನ್ನೈಯಿನ್ ಎಫ್ಸಿ ತಂಡಗಳು ಮುಖಾಮುಖಿಯಾದವು. ಗೋವಾ ಇಲ್ಲಿ ಗೆದ್ದರೂ ಮೇಲಿನ ಸ್ಥಾನ ತಲಪುವುದಿಲ್ಲ, ಏಕೆಂದರೆ ಬೆಂಗಳೂರು ತಂಡ ಪರಸ್ಪರ ಮುಖಾಮುಖಿಯಲ್ಲಿ ಮೇಲುಗೈ ಸಾಧಿಸಿದೆ. ಗೋವಾ ತಂಡ ಇದುವರೆಗೂ ಲೀಗ್‌ನಲ್ಲಿ ಸ್ಥಿರಿತೆ ಕಾಯ್ದುಕೊಂಡ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಐಎಸ್‌ಎಲ್ 2019: ಎರಡನೇ ಸ್ಥಾನಕ್ಕೆ ಜಿಗಿಯುವತ್ತ ಗೋವಾ ಚಿತ್ತ ಐಎಸ್‌ಎಲ್ 2019: ಎರಡನೇ ಸ್ಥಾನಕ್ಕೆ ಜಿಗಿಯುವತ್ತ ಗೋವಾ ಚಿತ್ತ

ಅತಿ ಹೆಚ್ಚು ಗೋಲು ಗಳಿಸಿರುವ ತಂಡದ ಒಟ್ಟು ಗೋಲಿನ ಸಾಧನೆ 32, ಎರಡನೇ ಸ್ಥಾನದಲ್ಲಿರುವ ತಂಡಕ್ಕಿಂತ ಆರು ಗೋಲುಗಳಿಗಿಂತ ಮೇಲುಗೈ ಕಂಡಿದೆ. ಬೆಂಗಳೂರು ವಿರುದ್ಧ 0-3 ಗೋಲಿನಿಂದ ಸೋಲನುಭವಿಸಿದ ನಂತರ ಗೋವಾ ಈ ಹೋರಾಟಕ್ಕೆ ಮುಂದಾಯಿತು. ಫೆರಾನ್ ಕೊರೊಮಿನಾಸ್ ಆಡಿರುವ 16 ಪಂದ್ಯಗಳಲ್ಲಿ 14 ಗೋಲು ಗಳಿಸಿ ಚಿನ್ನದ ಬೂಟಿನ ಸಾಧನೆಗೆ ಸಮೀಪದಲ್ಲಿದ್ದಾರೆ. ಗೋವಾ ಕೇವಲ ಅಟ್ಯಾಕ್‌ನಲ್ಲಿ ಮಾತ್ರವಲ್ಲಿ ಡಿಫೆನ್ಸ್‌ನಲ್ಲೂ ಬಲಿಷ್ಠವೆನಿಸಿದೆ.

ಗೋವಾ ತಂಡ ಇದುವರೆಗೂ ಏಳು ಕ್ಲೀನ್ ಶೀಟ್ ಸಾಧನೆ ಮಾಡಿದೆ. ಇದು ತಂಡವೊಂದು ಗಳಿಸಿರುವ ಅತಿ ಹೆಚ್ಚು ಕ್ಲೀನ್ ಶೀಟ್ ಆಗಿದೆ. ಈ ಯಶಸ್ಸು ತಂಡದ ಡಿಫೆನ್ಸ್ ವಿಭಾಗ ಎಷ್ಟು ಬಲಿಷ್ಠವಾಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಚೆನ್ನೈಯಿನ್ ತಂಡ ಹಾಲಿ ಚಾಂಪಿಯನ್ ಆಗಿ ಋತುವನ್ನು ಆರಂಭಿಸಿತ್ತು.

ಆದರೆ ಕೊನೆಯ ತಂಡವಾಗಿ ನಿರ್ಗಮಿಸುತ್ತಿರುವುದು ಬೇಸರದ ಸಂಗತಿ. ಕೇವಲ ಎರಡು ಪಂದ್ಯಗಳಲ್ಲಿ ಜಯ ಕಂಡಿರುವ ಚೆನ್ನೈ ಮತ್ತೊಂದು ಆಘಾತ ಅನುಭವಿಸಿದರೆ ನಾರ್ತ್ ಈಸ್ಟ್ ಯುನೈಟೆಡ್ ತಂಡದ ಹೆಸರಿನಲ್ಲಿದ್ದ ಅತಿ ಹೆಚ್ಚು ಸೋಲಿನ ದಾಖಲೆಯನ್ನು ಸರಿಗಟ್ಟಲಿದೆ. ಗೋವಾ ತಂಡ ಎರಡೂ ವಿಭಾಗಗಳಲ್ಲಿ ಬಲಿಷ್ಠವಾಗಿದ್ದರೆ, ಚೆನ್ನೆ' ತಂಡ ಎರಡೂ ವಿಭಾಗಗಳಲ್ಲಿ ದುರ್ಬಲವೆನಿಸಿದೆ. ಗಳಿಸಿದ್ದು ಕೇವಲ 16 ಗೋಲುಗಳು, ನೀಡಿದ್ದು, 31.

Story first published: Friday, March 1, 2019, 9:53 [IST]
Other articles published on Mar 1, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X