ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2020: ಹೊಸ ವರ್ಷದ ಆರಂಭದಲ್ಲಿ ಬಲಿಷ್ಠರ ಹೋರಾಟ

By Isl Media
ISL: Clash of the titans to kick off ISL in 2020

ಬೆಂಗಳೂರು, ಜನವರಿ 3: ಹೀರೋ ಇಂಡಿಯನ್ ಸೂಪರ್ ಲೀಗ್ ನ ಆರನೇ ಋತುವಿನ, 2020ನೇ ಇಸವಿಯ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬೆಂಗಳೂರು ಎಫ್ ಸಿ ಹಾಗೂ ಬಲಿಷ್ಟ ಎಫ್ ಸಿ ಗೋವಾ ತಂಡಗಳು ಮುಖಾಮುಖಿಯಾಗಲಿವೆ. ಶುಕ್ರವಾರ ಇಲ್ಲಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯ ಸಾಕಷ್ಟು ಕುತೂಹಲದ ಕ್ಷಣಗಳಿಗೆ ಸಾಕ್ಷಿಯಾಗುವುದು ಸ್ಪಷ್ಟ.

ಗೋವಾ ತಂಡ ತನ್ನ ಅಗ್ರ ಸ್ಥಾನವನ್ನು ಕಾಯ್ದುಕೊಳ್ಳಲಿ ಯತ್ನಿಸುತ್ತಿದ್ದು, ಬೆಂಗಳೂರು ಈ ಅಂತರವನ್ನು ಕಡಿಮೆಮಾಡಿಕೊಂಡು ಮೇಲಕ್ಕೆರಲು ಯತ್ನಿಸಲಿದೆ. ಮೊದಲ ಬಾರಿಗೆ ಇತ್ತಂಡಗಳು ಮುಖಾಮುಖಿ ಆದಾಗಿನಿಂದ ಗೋವಾ ಮೇಲುಗೈ ಸಾಧಿಸಿದೆ. ಗೋವಾ ವಿರುದ್ಧ ಬೆಂಗಳೂರು ತಂಡ ಆಡಿರುವ ಐದು ಪಂದ್ಯಗಳಲ್ಲಿ ಮೇಲುಗೈ ಸಾಧಿಸಿದೆ.

1
2026476

''ನಾವು ಐಎಸ್ ಎಲ್ ನಲ್ಲಿ ಬಲಿಷ್ಠ ತಂಡವೊಂದನ್ನು ಎದುರಿಸುತ್ತಿದ್ದೇವೆ, ನಮ್ಮ ಪಾಲಿಗೆ ಇದೊಂದು ಪ್ರಮುಖ ಪಂದ್ಯ. ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಅವರ ಮೇಲೆಯೇ ಹೆಚ್ಚು ಒತ್ತಡವಿದೆ ನಮ್ಮಿಬ್ಬರ ನಡುವೆ ಐದು ಅಂಕಗಳ ಅಂತರವಿದೆ. ನಾವು ಅತ್ಯಂತ ಆತ್ಮವಿಶ್ವಾಸದಲ್ಲಿ ಬೆಂಗಳೂರಿಗೆ ಹೋಗಬಹುದು. ಅದೇ ರೀತಿ ಮೂರು ಅಂಕಗಳನ್ನು ಗಳಿಸಬಹುದು. ಆಗ ಅಂತರ ಎಂಟು ಅಂಕಗಳಿಗೆ ಏರಲಿದೆ, ಎಂದು ಗೋವಾದ ಸಹಾಯಕ ಕೋಚ್ ಜೆಸಸ್ ಟಾಟೋ ಹೇಳಿದ್ದಾರೆ.

ಬೆಂಗಳೂರು ವಿರುದ್ಧ ಗೋವಾಕ್ಕೆ ಅದೃಷ್ಟ ಕಡಿಮೆ ಎಂಬುದು ಅನೇಕ ಪಂದ್ಯಗಳಲ್ಲಿ ಸಾಬೀತಾಗಿದೆ. ಚೆನ್ನೈಯಿನ್ ವಿರುದ್ಧದ ಪಂದ್ಯದಲ್ಲಿ ಅಂಗಣದಿಂದ ಹೊರ ಕಳುಹಿಸಲ್ಪಟ್ಟ ಕೋಚ್ ಸರ್ಗಿಯೋ ಲೊಬೆರಾ ನಾಳೆಯ ಪಂದ್ಯಕ್ಕೆ ಟಚ್ ಲೈನ್ ನಿಂದ ದೂರ ಉಳಿಯಲಿದ್ದಾರೆ.

ISL: Clash of the titans to kick off ISL in 2020

ಅಂತಿಮ ಹಂತದಲ್ಲಿ ಆಟದಲ್ಲಿ ಲಯ ಕಂಡುಕೊಂಡ ಸ್ಟಾರ್ ಸ್ಟ್ರೈಕರ್ ಫೆರಾನ್ ಕೊರೊಮಿನಾಸ್ ಅವರ ಮೇಲೆ ಗೋವಾ ತಂಡ ಹೆಚ್ಚು ಆಧರಿಸಿದೆ. ಆದರೆ ಜುವಾನನ್ ಮತ್ತು ಅಲ್ಬರ್ಟ್ ಸೆರ್ರಾನ್ ಅವರಿಗೆ ಅಗತ್ಯ ಇದ್ದಾಗ ನೆರವು ನೀಡುವಲ್ಲಿ ವಿಫಲರಾಗಿದ್ದರು. ಬ್ರೆಂಡಾನ್ ಫೆರ್ನಾಂಡೀಸ್ ಆಡಿರುವ ಎರಡು ಪಂದ್ಯಗಳಲ್ಲಿ ಎರಡು ಗೋಲುಗಳನ್ನು ಗಳಿಸಿ ತಂಡಕ್ಕೆ ಆಧಾರ ಎನಿಸಿದ್ದಾರೆ. ಐದು ಗೋಲು ಗಳಿಸುವಲ್ಲಿಯೂ ಬ್ರೆಂಡಾನ್ ನೆರವಾಗಿದ್ದಾರೆ.

''ನನ್ನ ಪ್ರಕಾರ ಈ ಋತುವಿನಲ್ಲಿ ನಾವು ಉತ್ತಮವಾಗಿ ಆಡುತ್ತಿದ್ದೇವೆ, ಕಳೆದ ಋತುವಿನಂತೆ ನಾವು ಸ್ಟ್ರೈಕರ್ ಮಿಕು ಅವರನ್ನು ಒಂಬತ್ತು ಪಂದ್ಯಗಣಿಂದ ವಂಚಿತವಾಗಿರುವಂತೆ, ಈಗ ಒನೌ ಅವರು ಏಳು ಪಂದ್ಯಗಳಿಗೆ ಗೈರಾಗಿದ್ದಾರೆ. ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವವರನ್ನು ಗಮನಿಸಿದಾಗ ಪ್ರತಿಯೊಂದು ತಂಡದಲ್ಲಿ ವಿದೇಶಿ ಆಟಗಾರರು ಗೋಲು ಗಳಿಸಿರುತ್ತಾರೆ. ಅಂತಿಮವಾಗಿ ಫುಟ್ಬಾಲ್ ನಲ್ಲಿ ಬೇಕಾಗಿರುವುದು ಹೊಂದಾಣಿಕೆ. ಆ ಹೊಂದಾಣಿಕೆ ನಮ್ಮ ತಂಡದಲ್ಲಿ ಇದೆ. ಇದರಿಂದಾಗಿ ನಾವು ಕಳೆದ ಎರಡು ಋತುಗಳಲ್ಲಿ ಪ್ಲೇ ಆಫ್ ಹಂತ ತಲುಪಿರುತ್ತೇವೆ, '' ಎಂದು ಬೆಂಗಳೂರು ತಂಡದ ಕೋಚ್ ಕಾರ್ಲಸ್ ಕ್ವಾಡ್ರಾಟ್ ಹೇಳಿದ್ದಾರೆ.

ಎಟಿಕೆ ಹಾಗೂ ಮುಂಬೈ ಸಿಟಿ ಎಫ್ ಸಿ ವಿರುದ್ಧ ಸೋಲುವ ಮೂಲಕ ಬೆಂಗಳೂರು ತಂಡ ಹಿನ್ನಡೆ ಕಾಣಲು ಕಾರಣವಾಯಿತು. ಗೋವಾ ವಿರುದ್ಧವೂ ಕಂಡಿರುವುದು ಡ್ರಾ ಮಾತ್ರ. ಗೋವಾ ಗಳಿಸಿರುವ 22 ಗೋಲುಗಳಲ್ಲಿ 11 ಗೋಲುಗಳು ಅಂತಿಮ ಹಂತದಲ್ಲಿ ದಾಖಲಾಯಿತು. ಬೆಂಗಳೂರಿನ 11 ಗೋಲುಗಳಲ್ಲಿ ಆರು ಗೋಲುಗಳು ಯೋಜಿತ ಗೋಲುಗಳಾಗಿವೆ. ಈ ವಿಷಯದಲ್ಲಿ ಇತ್ತಂಡಗಳೂ ಉತ್ತಮ ದಾಖಲೆ ಹೊಂದಿವೆ.

''ಸೆಟ್ ಪೀಸ್ ಬಗ್ಗೆ ಆವರು ಹೆಚ್ಚಿನ ಗಮನ ಹರಿಸಿದರು. ಅವರ ಪರ ಆಡಿದ್ದರಿಂದ ಈ ವಿಷಯ ನನಗೆ ಚೆನ್ನಾಗಿ ಗೊತ್ತಿದೆ. ಉದಾಂತ್ ಸಿಂಗ್ ಮತ್ತು ಆಶಿಕ್ ಕುರುನಿಯಾನ್ ಅವರ ಬಗ್ಗೆ ನಾವು ಎಚ್ಚರಿಕೆಯಿಂದ ಇರಬೇಕು, ಕೋಚ್ ಹೇಳಿರುವಂತೆ ನಾವು ನಮ್ಮ ಆಟವನ್ನು ಆಡಬೇಕಾಗಿದೆ,'' ಮಂದಾರ್ ದೇಸಾಯಿ ಹೇಳೀದ್ದಾರೆ, ಅವರು ಮೊದಲು ಬೆಂಗಳೂರು ಎಫ್ ಸಿ ಪರ ಆಡಿದ್ದರು.

Story first published: Thursday, January 2, 2020, 23:03 [IST]
Other articles published on Jan 2, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X