ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಗೆದ್ದ ಆತ್ಮವಿಶ್ವಾಸದಲ್ಲಿರುವ ಹೈದರಾಬಾದ್‌ಗೆ ಬೆಂಗಳೂರು ಸವಾಲು

By Isl Media
ISL: Cuadrat looks for change of plans as Bengaluru face buoyant Hyderabad

ಗೋವಾ, ನವೆಂಬರ್, 27, 2020: ಇತ್ತಂಡಗಳು ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಈಗಾಗಲೇ ಒಂದೊಂದು ಪಂದ್ಯಗಳನ್ನು ಆಡಿವೆ. ಬೆಂಗಳೂರು ಗೋವಾ ವಿರುದ್ಧ ಅಂಕವನ್ನು ಹಂಚಿಕೊಂಡಿದ್ದರೆ, ಹೈದರಾಬಾದ್ ಎಫ್ ಸಿ ತಂಡ ಒಡಿಶಾ ವಿರುದ್ಧ ಜಯ ಗಳಿಸಿ ಅಂಕಗಳ ಆಧಾರದ ಮೇಲೆ ಬೆಂಗಳೂರಿಗಿಂತ ಮೇಲುಗೈ ಸಾಧಿಸಿದೆ. ಶನಿವಾರ ಇತ್ತಂಡಗಳು ಮುಖಾಮುಖಿಯಾಗಲಿವೆ.

ಹೈದರಬಾದ್ ತಂಡ ಫಟೋರ್ಡಾದಲ್ಲಿ ಬೆಂಗಳೂರು ತಂಡವನ್ನು ಎದುರಿಸಲು ಸಜ್ಜಾಗುತ್ತಿದ್ದು, ಹೈದರಾಬಾದ್ ಕೋಚ್ ಮ್ಯಾನ್ವೆಲ್ ಮಾರ್ಕ್ವೆಜ್ ಒಡಿಶಾ ವಿರುದ್ಧದ ಕ್ಲೀನ್ ಶೀಟ್ ಸಾಧನೆಯನ್ನೇ ಮುಂದುವರಿಸುವ ಗುರಿ ಹೊಂದಿದ್ದಾರೆ. "ಜಯದೊಂದಿಗೆ ಆರಂಭ ಕಾಣುವುದು ಪ್ರಮುಖವಾಗಿದೆ. ಆದರೆ ಬಿಎಫ್‌ಸಿ ಉತ್ತಮ ತಂಡ. ನಾವು ಪ್ರಶಸ್ತಿ ಗೆಲ್ಲಲು ಉತ್ಸುಕವಾಗಿರುವ ತಂಡದ ವಿರುದ್ಧ ಆಡಲಿದ್ದೇವೆ. ಇದು ಅತ್ಯಂತ ಕಠಿಣ ಪಂದ್ಯವಾಗಲಿದೆ," ಎಂದು ಮಾರ್ಕ್ವೆಜ್ ಹೇಳಿದ್ದಾರೆ.

ಹೈದರಾಬಾದ್ ನ ಮೊಲದ ಪಂದ್ಯದ ದ್ವಿತಿಯಾರ್ಧದಲ್ಲಿ ಬದಲಿ ಆಟಗಾರನಾಗಿ ಅಂಗಣಕ್ಕೆ ಇಳಿದ ಲಿಸ್ಟನ್ ಕೊಲಾಕೊ ಅದ್ಭುತ ಪ್ರದರ್ಶನ ನೀಡಿ ತಂಡಕ್ಕೆ ಜಯ ತಂದುಕಪಟ್ಟರು, ಮಾರ್ಕ್ವೆಜ್ ಅವರ ಪ್ರಕಾರ ಕೊಲಾಕೊ ನಾಳೆ ಆಡುವ ುನ್ನೊಂದು ಮಂದಿಯಲ್ಲಿ ಸ್ಥಾನ ಪಡೆಯಲಿದ್ದಾರೆ. "ಹಿಂದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ ಕಾರಣ ಗೋವಾ ಸಂಜಾತ ಲಿಸ್ಟನ್ ನಾಳೆಯ ಪಂದ್ಯದಲ್ಲಿ ಆಡುವ ಸಾಧ್ಯತೆ ಹೆಚ್ಚಿದೆ, ಅವರು ತಂಡದ ಪ್ರಮುಖ ಆಟಗಾರ," ಎಂದರು.

ಬೆಂಗಳೂರು ತಂಡ ಈ ಪಂದ್ಯಕ್ಕೆ ಮುನ್ನ ಗೋವಾ ವಿರುದ್ಧ ಹತಾಶೆಯ 2-2 ಗೋಲುಗಳ ಡ್ರಾ ಸಾಧಿಸಿತ್ತು. ಮೊದಲ ಪಂದ್ಯದಲ್ಲಿ ಎರಡು ಗೋಲುಗಳಿಂದ ಮುನ್ನಡೆ ಕಂಡಿದ್ದರೂ ಜಯ ಕಾಣುವಲ್ಲಿ ವಿಫಲವಾಗಿರುವ ತಂಡದ ಆಟಗಾರರಿಂದ ಕೋಚ್ ಕಾರ್ಲಸ್ ಕ್ಬಾಡ್ರಾಟ್, ಆಟಗಾರರಿಂದ ಉತ್ತಮ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿದ್ದಾರೆ.

"ಹೈದರಾಬಾದ್ ವಿರುದ್ಧ ನಮ್ಮದು ಇನ್ನೊಂದು ಯೋಜನೆ ಇದೆ. ಈ ಋತುವಿನಲ್ಲಿ ಎಲ್ಲ ಆಟಗಾರರೂ ಪ್ರಮುಖವೆಂಬುದು ಖಚಿತ," ಎಂದು ಹೇಳಿರುವ ಬೆಂಗಳೂರು ಕೋಚ್, ಆರು ದಿನಗಳ ಸಿದ್ಧತೆಯ ಲಾಭವನ್ನು ತಮ್ಮ ಆಟಗಾರರು ಸಂಪೂರ್ಣವಾಗಿ ಪಡೆದಿದ್ದಾರೆ ಎಂದರು,

ಜಾವೊ ವಿಕ್ಟರ್ ಹಾಗೂ ಒಡೈ ಒನೈಂಡಿಯಾ ಅವರು ಹೈದರಾಬಾದ್ ನ ಡಿಫೆನ್ಸ್ ನಲ್ಲಿ ಇರುವುದು ಮತ್ತು ಐಎಸ್ ಎಲ್ ನಲ್ಲಿ 27 ಕ್ಲೀನ್ ಶೀಟ್ ಸಾಧನೆ ಮಾಡಿರುವ ಸುಬ್ರತಾ ಪಾಲ್ ಅವರಿರುವಾಗ ಬೆಂಗಳೂರಿಗೆ ಗೋಲು ಗಳಿಸುವುದು ಅಷ್ಟು ಸುಲಭವಲ್ಲ. ಬೆಂಗಲೂರು ತಂಡ ಹೈದರಾಬಾದ್ ವಿರುದ್ಧ ಉತ್ತಮ ಗೋಲು ಗಳಿಕೆಯ ದಾಖಲೆಯನ್ನು ಹೊಂದಿಲ್ಲ. ಆಡಿರುವ ಎರಡು ಪಂದ್ಯಗಳಲ್ಲಿ ಗಳಿಸಿರುವುದು ಎರಡೇ ಗೋಲುಗಳು.

"ಒಡಿಶಾ ವಿರುದ್ಧ ಅವರು ಗೆದ್ದಿರುವ ಪಂದ್ಯವನ್ನು ನೋಡಿದ್ದೇವೆ. ಅವರಲ್ಲಿ ಧನಾತ್ಮಕ ಅಂಶ ಇರುವುದನ್ನು ತಳ್ಳಿ ಹಾಕುವಂತಿಲ್ಲ. ಹೆಚ್ಚು ಪಂದ್ಯಗಳನ್ನು ಗೆಲ್ಲವ ಉತ್ಸಾಹ, ಸೋಲ ಬಾರದೆಂಬ ಛಲ ಹೊಂದಿರುವ ತಂಡದಿಂದ ನಾನು ಕಠಿಣ ಸವಾಲನ್ನು ನಿರೀಕ್ಷಿಸುತ್ತಿದ್ದೇವೆ, ಇದು ಕುತೂಹಲದ ಪಂದ್ಯವಾಗಲಿದೆ," ಎಂದು ಕ್ವಾಡ್ರಾಟ್ ಹೇಳಿದರು.

ಮಾಜಿ ಚಾಂಪಿಯನ್ ಬೆಂಗಳೂರು ತಂಡದಲ್ಲಿ ಯಾವುದೇ ಗಾಯಾಳು ಸಮಸ್ಯೆ ಇಲ್ಲ, ಆದರೆ ಹೈದರಾಬಾದ್ ತಂಡದಲ್ಲಿ ಫ್ರಾನ್ಸಿಸ್ಕೋ ಸ್ಯಾಂಡಜಾ ಅವರು ಆಡುತ್ತಿಲ್ಲ

Story first published: Friday, November 27, 2020, 18:55 [IST]
Other articles published on Nov 27, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X