ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್‌ 2019: ಗೌರವಕ್ಕಾಗಿ ಆಡಲಿರುವ ಕೇರಳ ಎಫ್‌ಸಿ-ಡೆಲ್ಲಿ ಎಫ್‌ಸಿ

By Isl Media
ISL: DDFC vs KBFC, Preview, Timing, Live Streaming

ಹೊಸದಿಲ್ಲಿ, ಜನವರಿ 30: ಹೀರೋ ಇಂಡಿಯನ್ ಸೂಪರ್ ಲೀಗ್‌ನ ಅಂಕಪಟ್ಟಿಯಲ್ಲಿ ವಿರುದ್ಧ ದಿಕ್ಕಿನಲ್ಲಿರುವ ಡೈಲ್ಲಿ ಡೈನಮೋಸ್ ಹಾಗೂ ಕೇರಳ ಬ್ಲಾಸ್ಟರ್ಸ್ ತಂಡಗಳ ಪ್ಲೇ ಆಫ್ ಕನಸು ದೂರವಾಗಿದ್ದು, ಈಗ ಗೌರವಕ್ಕಾಗಿ ಇಲ್ಲಿನ ಜವಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ.

ಕಳೆದ ವರ್ಷ ಚೆನ್ನೈಯಿನ್ ಎಫ್ ಸಿ ವಿರುದ್ಧದ ಪಂದ್ಯದಲ್ಲಿ 3-1 ಗೋಲಿನಿಂದ ಜಯ ಗಳಿಸಿದ್ದ ಡೈಮನೋಸ್ ಈ ಬಾರಿಯೂ 2019ರಲ್ಲಿ ಉತ್ತಮ ಆರಂಭ ಕಾಣುವ ಗುರಿ ಹೊಂದಿದೆ. 'ವಿಶ್ರಾಂತಿಯ ನಂತರ ಮೊದಲ ಜಯ ಗಳಿಸುವುದು ಪ್ರಮುಖವಾಗಿದೆ. ಚೆನ್ನೈ ವಿರುದ್ಧ ಜಯ ಗಳಿಸುವ ಮೂಲಕ ನಾವು ಕಳೆದ ವರ್ಷವನ್ನು ಜಯದೊಂದಿಗೆ ಮುಗಿಸಿದ್ದೇವೆ, ಆದೇ ರೀತಿ ಹೊಸ ವರ್ಷವನ್ನು ಜಯದೊಂದಿಗೆ ಆರಂಭಿಸಲಿದ್ದೇವೆ, ಈ ಹಿಂದಿನ ಎರಡು ಪಂದ್ಯಗಳಲ್ಲಿ ನಾವು ಕಠಿಣ ಹೋರಾಟ ನೀಡಿದ್ದೇವೆ, ಮತ್ತೆ ಜಯದ ಆರಂಭ ಕಾಣಬೇಕೆಂಬುದು ನಮ್ಮ ಗುರಿ, ' ಎಂದು ಕೋಚ್ ಜೊಸೇಫ್ ಗೊಂಬೊವ್ ಹೇಳಿದ್ದಾರೆ.

ಪಂದ್ಯದ Live Score ಇಲ್ಲಿದೆ. ಸ್ಕೋರ್‌ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
1042951

ಗೋಲು ಹಾಗೂ ಅಂಕಗಳಿಗಾಗಿ ಹರಸಾಹಸ ಪಡುತ್ತಿರುವ ಕ್ಲಬ್ ಇದುವರೆಗೂ ಆಟಗಾರರ ವರ್ಗಾವಣೆಯಲ್ಲಿ ತಲ್ಲೀನವಾಗಿತ್ತು. ಆಂಡ್ರೆಜಾ ಕಲುಜೆರೊವಿಕ್, ಪ್ರೀತಮ್ ಕೊತಾಲ್ ಮತ್ತು ಸಿಯಾಮ್ ಹಂಗಾಲ್ ತಂಡವನ್ನು ತೊರೆಯಬೇಕಾಯಿತು. ಮೆಕ್ಸಿಕೊದಾ ಮಿಡ್‌ಫೀಲ್ಡರ್ ಯುಲಿಸಸ್ ಡೆವಿಲ್ಲಾ ತಂಡವನ್ನು ಸೇರಿಕೊಂಡಿದ್ದಾರೆ.

ಗೋಲೇ ಪ್ರಮುಖ ಅಂಶ

ಗೋಲೇ ಪ್ರಮುಖ ಅಂಶ

ಗಂಬೌವ್ ಪಡೆಗೆ ಗೋಲು ಗಳಿಸುವುದು ಪ್ರಮುಖ ಅಂಶವಾಗಿತ್ತು. ಈ ತಂಡ ನಿರಂತರ ವಿವಾಗುತ್ತಿರುವುದೇ ಗೋಲು ಗಳಿಕೆಯಲ್ಲಿ. ಎದುರಾಳಿ ತಂಡಕ್ಕೆ ಗೋಲು ನೀಡುವುದರಲ್ಲಿಯೂ ಡೆಲ್ಲಿ ಎರಡನೇ ಸ್ಥಾನದಲ್ಲಿದೆ. ಅಂದರೆ ಅತ್ಯಂತ ದುರ್ಬಲ ಡಿಫೆನ್ಸ್ ವಿಭಾಗವನ್ನು ಹೊಂದಿದೆ. ಚೆನ್ನೈಯಿನ್ ವಿರುದ್ಧ ಜಯ ಗಳಿಸಿರುವುದನ್ನು ಹೊರತುಪಡಿಸಿದರೆ, ಕ್ಲಬ್ ಮನೆಯಂಗಣದಲ್ಲಿ ಇನ್ನೂ ಜಯ ಕಂಡಿಲ್ಲ. ಇದು ಕೋಚ್‌ಗೆ ಚಿಂತೆಯ ವಿಷಯವಾಗಿದೆ.

ಎರಡೂ ತಂಡಗಳು 13 ಗೋಲು

ಎರಡೂ ತಂಡಗಳು 13 ಗೋಲು

ಕುತೂಹಲದ ಸಂಗತಿಯೆಂದರೆ ಎರಡೂ ತಂಡಗಳು 13 ಗೋಲು ಗಳಿಸಿವೆ. ಅದೇ ರೀತಿ 21 ಗೋಲುಗಳನ್ನು ನೀಡಿವೆ. ಜಯ ಗಳಿಸಿದರೆ, ಅಂಕ ಪಟ್ಟಿಯಲ್ಲಿ ಕೇರಳಕ್ಕಿಂತ ಮೇಲಕ್ಕೇರಲಿದೆ. ಅದು ಕೂಡ ಗೋಲುಗಳ ವ್ಯತ್ಯಾಸದಲ್ಲಿ. ಕಳೆದ ವರ್ಷ ಕೊಚ್ಚಿಯಲ್ಲಿ ಮುಖಾಮುಖಿಯಾಗಿದ್ದ ಈ ತಂಡವನ್ನು ಪ್ರತ್ಯೇಕವಾಗಿ ನೋಡುವ ಅಗತ್ಯವೇ ಇಲ್ಲ. ಸಿಕೆ ವಿನೀತ್ ಗಳಿಸಿದ ಗೋಲ್‌ಗೆ ಕಲಜೆರೊವಿಕ್ ಅಡ್ಡಿ ಮಾಡಿದ್ದರು. ಅಚ್ಚರಿಯ ಸಂಗತಿಯೆಂದರೆ ಅಂದು ಗೋಲು ಗಳಿಸಿದ್ದ ಇಬ್ಬರೂ ಆಟಗಾರರು ಈಗ ತಂಡದಲ್ಲಿಲ್ಲ. ವಿನೀತ್ ಹಾಗೂ ಹಲಿಚರಣ್ ನಾರ್ಜರಿ ಇಬ್ಬರೂ ಚೆನ್ನೈಯಿನ್ ತಂಡವನ್ನು ಸೇರಿಕೊಂಡಿದ್ದಾರೆ.

ಪ್ರಮುಖ ಬದಲಾವಣೆ

ಪ್ರಮುಖ ಬದಲಾವಣೆ

ವಿರಾಮದ ವೇಳೆ ಡೆಲ್ಲಿ ಹಾಗೂ ಕೇರಳ ತಂಡಗಳು ಪ್ರಮುಖವಾದ ಬದಲಾವಣೆ ಮಾಡಿವೆ. ಬೌರಿಂಗ್‌ಬೌ ಬೊಡೊ ಗೋಕುಲಂ ಕೇರಳ ಹಾಗೂ ಲಾಲ್‌ಥುಮ್ಮಾಯಾ ರಾಲ್ಟೆ ಏಕೂಡ ಗೋವಾದಿಂದ ತಂಡವನ್ನು ಸೇರಿಕೊಂಡಿದ್ದಾರೆ. ಲೀಗ್ ಪುನರಾರಂಭಗೊಂಡ ನಂತರ ಕೇರಳ ಒಂದು ಪಂದ್ಯವನ್ನಾಡಿದೆ. ಆದರೆ ಡೆಲ್ಲಿ ಇನ್ನೂ ಅಂಗಣಕ್ಕಿಳಿದಿಲ್ಲ. ಮನೆಯಂಗಣದಲ್ಲಿ ನಡೆದ ಪಂದ್ಯದಲ್ಲಿ ನಿಲೊ ವಿಂಗಡಾ ಕ್ಲಬ್ ಎಟಿಕೆ ವಿರುದ್ಧ 1-1 ಗೋಲಿನಿಂದ ಡ್ರಾ ಸಾಧಿಸಿತ್ತು.

ಸಾಮರ್ಥ್ಯಕ್ಕೆ ಅನುಗುಣವಾಗಿಲ್ಲ

ಸಾಮರ್ಥ್ಯಕ್ಕೆ ಅನುಗುಣವಾಗಿಲ್ಲ

‘ಇದುವರೆಗಿನ ಫಲಿತಾಂಶವನ್ನು ಗಮನಿಸಿದಾಗ ತಂಡದ ಸಾಮರ್ಥ್ಯಕ್ಕೆ ಅನುಗುಣವಾಗಿರಲಿಲ್ಲ. ಇಲ್ಲಿಗೆ ಆಗಮಿಸಿದ ಎರಡು ದಿನಗಳಲ್ಲೇ ಮೊದಲ ಪಂದ್ಯವಾಡಿದೆವು. ನನ್ನನ್ನು ಮೊದಲು ನೋಡಿದ್ದಕ್ಕಿಂತ ಆಟಗಾರರು ಈಗ ಹೆಚ್ಚಾಗಿ ಆರ್ಥೈಸಿಕೊಂಡಿದ್ದಾರೆ ಎಂದು ಅರಿತಿರುವೆ,‘ ಎಂದು ವಿಂಗಡಾ ಹೇಳಿದ್ದಾರೆ. ಕಳೆದ ವರ್ಷ ಸೆಪ್ಟಂಬರ್‌ನಲ್ಲಿ ಎಟಿಕೆ ವಿರುದ್ಧ ಜಯ ಗಳಿಸಿದ ನಂತರ ಕೇರಳ ತಂಡ ಆಡಿದ 12 ಪಂದ್ಯಗಳಲ್ಲಿ ಯಶಸ್ಸು ಕಾಣಲಿಲ್ಲ. ಈಗ ಮತ್ತೊಮ್ಮೆ ಅಲೆಗಳ ವಿರುದ್ಧ ಈಜುವ ಪ್ರಯತ್ನ.

Story first published: Wednesday, January 30, 2019, 19:14 [IST]
Other articles published on Jan 30, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X