ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್ ಎಲ್ 2019: ಕೇರಳಕ್ಕೆ ಸೋಲುಣಿಸಿದ ಡೆಲ್ಲಿ ಡೈನಮೋಸ್

ISL: Delhi Dynamos heap more misery on Kerala Blasters

ಹೊಸದಿಲ್ಲಿ, ಜನವರಿ 31: ಗಿಯಾನ್ನಿ ಜ್ಯುವೆರ್ಲೂನ್ (29ನೇ ನಿಮಿಷ ) ಹಾಗೂ 90ನಿಮಿಷದಲ್ಲಿ ರೆನೆ ಮೆಹಲಿಕ್ ಗಳಿಸಿದ ಗೋಲಿನಿಂದ ಕೇರಳ ಬ್ಲಾಸ್ಟರ್ಸ್ ತಂಡವನ್ನು 2-0 ಅಂತರದಲ್ಲಿ ಮಣಿಸಿದ ಡೆಲ್ಲಿ ಡೈನಮೋಸ್ ತಂಡ ಕೊನೆಗೂ ಮನೆಯಗಣದಲ್ಲಿ ಋತುವಿನ ಮೊದಲ ಜಯ ಗಳಿಸಿತು. ಅಂತಿಮ ವಿಸಿಲ್ ಮೊಳಗಲು ಕೊನೆಯ ಕ್ಷಣ ಬಾಕಿ ಇರುವಾಗ ಕೇರಳದ ಲಾಲ್ರುತ್ತರ ರೆಡ್ ಕಾರ್ಡ್ ಪಡೆದು ಅಂಗಣದಿಂದ ಹೊರ ನಡೆದರು. ಪೆನಾಲ್ಟಿ ಮೂಲಕ ಡೆಲ್ಲಿ ಎರಡನೇ ಗೋಲು ಗಳಿಸಿ ಅದ್ಭುತ ಜಯ ಗಳಿಸಿತು.

ಪ್ರಥಮಾರ್ಧದಲ್ಲಿ ಡೆಲ್ಲಿ ಮುನ್ನಡೆ
29ನೇ ನಿಮಿಷದಲ್ಲಿ ಗಿಯಾನ್ನಿ ಜ್ಯುವೆರ್ಲೂನ್ ಗಳಿಸಿದ ಅದ್ಭುತ ಗೋಲಿನಿಂದ ಡೆಲ್ಲಿ ಡೈನಮೋಸ್ ತಂಡ ಆರಂಭಿಕ ಮುನ್ನಡೆ ಕಂಡಿತು. ಈ ಪಂದ್ಯ ಮುನ್ನಡೆಯ ದೃಷ್ಟಿಯಿಂದ ಪ್ರಮುಖವಲ್ಲದಿದ್ದರೂ ಫುಟ್ಬಾಲ್ ಅಭಿಮಾನಿಗಳಿಗೆ ರಸದೌತಣ ನೀಡಿತು. ಗಿಯಾನ್ನಿ ಗಳಿಸಿದ ಗೋಲು ಈ ಬಾರಿಯ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಉತ್ತಮ ಗೋಲುಗಳಲ್ಲಿ ಒಂದೆಂದರೆ ಅತಿಶಯೋಕ್ತಿಯಾಗಲಾರದು.

ಅತ್ಯಂತ ನಿಧಾನಗತಿಯಲ್ಲಿ ಆರಂಭಗೊಂಡ ಪಂದ್ಯದ ಮೇಲೆ ಡೆಲ್ಲಿ ಇದ್ದಕ್ಕಿದ್ದಂತೆ ಪ್ರಭುತ್ವ ಸಾಧಿಸಿತು. ಆಕ್ರಮಣಕಾರಿ ಆಟಕ್ಕೆ ಇಳಿದ ಡೆಲ್ಲಿಗೆ 29ನೇ ನಿಮಿಷದಲ್ಲಿ ಯಶಸ್ಸು ದಕ್ಕಿತು. ಮೇಲಿಂದ ಸಾಗಿ ಬಂತ ಚೆಂಡನ್ನು ಅದೇ ರೀತಿಯಲ್ಲಿ ಗೋಲ್‌ಬಾಕ್ಸ್‌ಗೆ ಕಳುಹಿಸಿದ ಗಿಯಾನ್ನಿ ಪ್ರಥಮಾರ್ಧದ ಹೀರೋ ಎನಿಸಿದರು. ಡೆಲ್ಲಿ ತಂಡ ಆ ನಂತರವೂ ಚೆಂಡಿನ ಮೇಲೆ ಪ್ರಭುತ್ವ ಸಾಧಿಸಿ ಪೆನಾಲ್ಟಿ ವಲಯದಲ್ಲಿ ಮಿಂಚಿತ್ತು, ಆದರೆ ಕೇರಳ ಮತ್ತೆ ಗೋಲು ಗಳಿಸುವ ಅವಕಾಶ ನೀಡಲಿಲ್ಲ.

ಐಎಸ್ಎಲ್ 2019: ಗೋವಾ ವಿರುದ್ಧ ಸೇಡಿಗೆ ಕಾದಿರುವ ಮುಂಬೈ ಐಎಸ್ಎಲ್ 2019: ಗೋವಾ ವಿರುದ್ಧ ಸೇಡಿಗೆ ಕಾದಿರುವ ಮುಂಬೈ

ಕಳೆದ ನಾಲ್ಕು ದಿನಗಳಿಂದ ಮೂರು ಪ್ರಮುಖ ಪಂದ್ಯಗಳನ್ನು ಕಂಡ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಗುರುವಾರ ಅಷ್ಟು ಕುತೂಹಲವಲ್ಲದ ಪಂದ್ಯಕ್ಕೆ ಕೇರಳ ಹಾಗೂ ಡೆಲ್ಲಿ ಡೈನಮೋಸ್ ಪಂದ್ಯಗಳು ಮುಖಾಮುಖಿಯಾದವು. ಎರಡೂ ತಂಡಗಳು ಅಂತಿಮ ನಾಲ್ಕರ ಹಂತ ತಲಪುವಲ್ಲಿ ವಿಲವಾಗಿರುವುದರಿಂದ ಇಲ್ಲಿನ ಮುನ್ನಡೆ ಅಥವಾ ಹಿನ್ನಡೆ ತಂಡದ ಮೇಲೆ ಯಾವುದೇ ಪರಿಣಾಮ ಬೀರದು. ಆದರೂ ಗೌರವಕ್ಕಾಗಿ ಈ ಪಂದ್ಯ ಪ್ರಮುಖವೆನಿಸುತ್ತದೆ. ಈ ಋತುವಿನಲ್ಲಿ ಕೇವಲ ಒಂದು ಪಂದ್ಯವನ್ನು ಗೆದ್ದಿರುವ ಇತ್ತಂಡಗಳು ಪ್ಲೇ ಆಫ್ನ ಹಾದಿ ಮರೆತಿವೆ.

ವಿರಾಮಕ್ಕೆ ಮುನ್ನ ಗೆದ್ದಿರುವ ಡೆಲ್ಲಿ ವಿರಾಮದ ನಂತರವೂ ಜಯದ ನಡೆಯಲ್ಲಿ ಸಾಗುವ ಗುರಿಯೊಂದಿಗೆ ಅಂಗಣಕ್ಕಿಳಿಯಿತು. ಹಿಂದಿನ ಪಂದ್ಯದಲ್ಲಿ ಡೆಲ್ಲಿ ತಂಡ ಚೆನ್ನೈ ವಿರುದ್ಧ 3-1 ಗೋಲಿನಿಂದ ಜಯ ಗಳಿಸಿತ್ತು. ಇಲ್ಲಿ ಜಯ ಗಳಿಸಿದರೆ ಡೆಲ್ಲಿ ತಂಡ ಕೇರಳದ ಜತೆ ಸಮಬಲ ಸಾಧಿಸಲಿದೆ. ಪರಸ್ಪರ ಮುಖಾಮುಖಿಯನ್ನು ಗಮನಿಸಿದಾಗ ಕೇರಳ ಮೇಲುಗೈ ಸಾಧಿಸಿರುವುದು ಸ್ಪಷ್ಟ. ಆದರೆ ಆಡಿರುವ 11 ಪಂದ್ಯಗಳಲ್ಲಿ ಕೇರಳ ಐದು ಪಂದ್ಯಗಳಲ್ಲಿ ಜಯ ಗಳಿಸಿತ್ತು, ಎರಡು ಪಂದ್ಯಗಳಲ್ಲಿ ಸೋತಿತ್ತು. ನಾಲ್ಕು ಪಂದ್ಯಗಳು ಡ್ರಾದಲ್ಲಿ ಅಂತ್ಯಕಂಡಿವೆ. ಗೋಲು ಗಳಿಸಿರುವುದು ಹಾಗೂ ಎದುರಾಳಿ ತಂಡಕ್ಕೆ ಗೋಲು ನೀಡಿರುವುದರಲ್ಲೂ ಇತ್ತಂಡಗಳು ಸಮಬಲ ಕಂಡಿವೆ. ಈ ಋತುವಿನಲ್ಲಿ ಇತ್ತಂಡಗಳು ಮನೆಯಂಗಣದಲ್ಲಿ ಜಯ ಗಳಿಸಿಲ್ಲ. ಎರಡೂ ತಂಡಗಳು ತಳಮಟ್ಟದಿಂದ ಮೇಲೇರಲು ಯತ್ನಿಸಲು ಮುಂದಾದವು.

Story first published: Thursday, January 31, 2019, 22:49 [IST]
Other articles published on Jan 31, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X