ಐಎಸ್‌ಎಲ್: ಈಸ್ಟ್ ಬೆಂಗಾಲ್ ಅಜೇಯ ನಡೆಗೆ ಬೆಸ್ಟ್ ಮುಂಬೈ ಸವಾಲು

By Isl Media

ಗೋವಾ: ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ಈಸ್ಟ್ ಬೆಂಗಾಲ್ ಕೋಚ್ ಹಾಗೂ ಅವರ ಆಟಗಾರರು ಕಠಿಣ ಸವಾಲೊಂದನ್ನು ಎದುರಿಸಲಿದ್ದಾರೆ. ಗೆದ್ದರೆ ಪ್ಲೇ ಆಫ್ ತಲುಪಲು ಇನ್ನೊಂದೇ ಜಯ ಬಾಕಿ ಇರುತ್ತದೆ. ಲೀಗ್ ನ ಆರಂಭಿಕ ಹಂತದಲ್ಲಿ ಕಂಡ ವೈಫಲ್ಯ ಈಗ ಪ್ರತಿಯೊಂದು ಪಂದ್ಯವನ್ನೂ ಗೆಲ್ಲಬೇಕಾದ ಅನಿವಾರ್ಯತೆ. ಎದುರಾಳಿ ತಂಡ ಅಗ್ರ ಸ್ಥಾನದಲ್ಲಿರುವ ಮುಂಬೈ ಸಿಟಿ ಎಫ್ ಸಿ, ನಾಳೆಯ ಪಂದ್ಯ ಗೆಲ್ಲುವುದು ಹೇಳಿದಷ್ಟು ಸಲುಭವಲ್ಲ.

ಭಾರತ vs ಇಂಗ್ಲೆಂಡ್: ಟೆಸ್ಟ್ ಪಂದ್ಯಗಳಿಗೆ ಇಂಗ್ಲೆಂಡ್ ತಂಡ ಪ್ರಕಟ

ಎಸ್ ಸಿ ಈಸ್ಟ್ ಬೆಂಗಾಲ್ ತಂಡ ನಡೆದು ಬಂದ ಹಾದಿಯನ್ನು ನೋಡಿದಾಗ ಈಗ ತಂಡದ ನಿಜವಾದ ಅದೃಷ್ಟ ಪರೀಕ್ಷೆ ನಡೆಯುತ್ತಿದೆ. ಸತತ ಏಳು ಪಂದ್ಯಗಳಲ್ಲಿ ಸೋಲನ್ನೇ ಕಂಡಿರದ ತಂಡ ಈಗ ಮುಂಬೈ ವಿರುದ್ಧ ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದೆ. ಮುಂಬೈ ತಂಡ ಹಿಂದಿಗಿಂತ ಈಗ ಮತ್ತಷ್ಟು ಬಲಿಷ್ಠವಾಗಿದೆ, "ಮುಂಬೈ ಬಲಿಷ್ಠ ತಂಡ ಅವರು ಉತ್ತಮವಾಗಿಯೇ ಆಡುತ್ತಿದ್ದಾರೆ, "ಎಂದು ಬೆಂಗಾಲದ ಸಹಾಯಕ ಕೋಚ್ ರೆನೆಡೆ ಸಿಂಗ್ ಹೇಳಿದ್ದಾರೆ.

'ಹಿಂದಿನ ಏಳು ಪಂದ್ಯಗಳಲ್ಲಿ ಆಡಿದ ರೀತಿಯಲ್ಲೇ ಆಡಬೇಕು, ನನ್ನ ಪ್ರಕಾರ ನಮ್ಮ ಹುಡುಗರು ಕಠಿಣ ಶ್ರಮ ವಹಿಸಿದ್ದಾರೆ. ಈ ಪ್ರಕ್ರಿಯೆಯನ್ನು ನಾವು ಮುಂದುವರಿಸಬೇಕು. ಅವರಿಗೆ ಗೌರವವನ್ನು ನೀಡುತ್ತ, ನಾವು ನಮ್ಮದೇ ಶೈಲಿಯಲ್ಲಿ ಆಡಲಿದ್ದೇವೆ," ಎಂದು ಸಿಂಗ್ ನುಡಿದಿದ್ದಾರೆ.

ಬೆಂಗಾಲ್ ತಂಡದ ಅದೃಷ್ಟವೇ ಬದಲಾಯಿತು

ಬೆಂಗಾಲ್ ತಂಡದ ಅದೃಷ್ಟವೇ ಬದಲಾಯಿತು

ಎನೋ ಬಾಖರೆ ಅವರ ಆಗಮನದಿಂದ ಈಸ್ಟ್ ಬೆಂಗಾಲ್ ತಂಡದ ಅದೃಷ್ಟವೇ ಬದಲಾಯಿತು. ತಂಡದ ಡಿಫೆನ್ಸ್ ವಿಭಾಗದ ಸಮಸ್ಯೆಯೇ ಇಲ್ಲವೆನ್ನುವಷ್ಟು ತಂಡ ಸುಧಾರಣೆ ಕಂಡಿತು. ತಂಡ 13 ಗೋಲುಗಳನ್ನು ನೀಡಿದ್ದು ಬೇರೆ ಯಾವುದೇ ತಂಡ ಈ ರೀತಿಯಲ್ಲಿ ಗೋಲು ನೀಡಿರಲಿಲ್ಲ. ಇದರಿಂದಾಗಿ ಗೋಲ್ ಕೀಪರ್ ದೇಬಜಿತ್ ಮಜುಂದಾರ್ ಹೆಚ್ಚು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕಾಗಿದೆ.

ದ್ವಿತಿಯಾರ್ಧದಲ್ಲಿ ಬೆಂಗಾಲ್ ತಂಡ ಗೋಲನ್ನು ನಿಯಂತ್ರಿಸುವಲ್ಲಿ ನಿಸ್ಸೀಮವಾಗಿದ್ದರೆ ಸರ್ಗಿಯೊ ಲೊಬೆರಾ ಅವರ ಮುಂಬೈ ತಂಡ ಪ್ರಥಮಾರ್ಧದಲ್ಲಿ ಗೋಲು ಗಳಿಸುವ ತಂಡವಾಗಿದೆ. ಮುಂಬೈ ತಂಡ ಪ್ರಥಮಾರ್ಧದಲ್ಲಿ ಗಳಿಸಿರುವಷ್ಟು ಗೋಲುಗಳನ್ನು ಬೇರೆ ಯಾವುದೇ ತಂಡ ಗಳಿಸಿರಲಿಲ್ಲ. ಮುಂಬೈ ಕೂಡ 10 ಪಂದ್ಯಗಳಲ್ಲಿ ಸೋಲು ಕಾಣದೆ ಮುನ್ನಡೆದಿದೆ. ಇನ್ನು ಮೂರು ಪಂದ್ಯಗಳಲ್ಲಿ ಸೋಲು ಕಾಣದಿದ್ದರೆ ಮುಂಬೈ ತಂಡ ಐಎಸ್ ಎಲ್ ಇಲಿಹಾಸದಲ್ಲೇ ಹೊಸ ದಾಖಲೆಯನ್ನು ಬರೆಯಲಿದೆ. ಗೋವಾ ತಂಡ ಇದುವರೆಗೂ 12 ಬಾರಿ ಅಜೇಯವಾಗಿದ್ದು ದಾಖಲೆಯಾಗಿತ್ತು.

ಗೆಲ್ಲುವುದು ಅತ್ಯಂತ ಪ್ರಮುಖವಾದುದಾಗಿದೆ

ಗೆಲ್ಲುವುದು ಅತ್ಯಂತ ಪ್ರಮುಖವಾದುದಾಗಿದೆ

"ಟ್ರೋಫಿಯನ್ನು ಗೆಲ್ಲುವುದು ಅತ್ಯಂತ ಪ್ರಮುಖವಾದುದಾಗಿದೆ," ಎಂದು ಲೊಬೆರಾ ಹೇಳಿದ್ದಾರೆ, "ಅದಕ್ಕಾಗಿ ಹಲವಾರು ಅಂಶಗಳಲ್ಲಿ ನಾವು ಎಚ್ಚರಿಕೆ ವಹಿಸಬೇಕಾಗಿದೆ. ತೋದರೆಗಳನ್ನೂ ಎದುರಿಬೇಕಾಗುತ್ತದೆ. ನಮ್ಮಲ್ಲಿ ಈಗ ಸಾಕಷ್ಟು ಗೋಲುಗಳನ್ನು ಗಳಿಸಿದ್ದಾರೆ, ಸಾಕಷ್ಟು ಕ್ಲೀನ್ ಶೀಟ್ ಗಳಿವೆ. ಚೆಂಡನ್ನು ಹೆಚ್ಚು ಕಾಲ ನಿಯಂತ್ರಿಸುವಲ್ಲಿಯೂ ನಾವು ಅಗ್ರಸ್ಥಾನದಲ್ಲಿದ್ದೇವೆ, ಇದು ಟ್ರೋಫಿ ಗೆಲ್ಲಲು ಬೇಕಾಗಿರುವ ಮುಖ್ಯ ಅರ್ಹತೆ. ಪ್ರಶಸ್ತಿ ಗೆಲ್ಲುವುದಕ್ಕಾಗಿ ನಾನು ಈ ಎಲ್ಲ ದಾಖಲೆಗಳನ್ನು ಪರಿಗಣಿಸಬೇಕಾಗುತ್ತದೆ, ಏಕೆಂದರೆ ಇದು ಅತ್ಯಂತ ಉತ್ತಮ ದಾಖಲೆಯಾಗಿದೆ," ಎಂದು ಹೇಳಿದರು.

ಸವಾಲುಗಳ ಬಗ್ಗೆ ಹೆಚ್ಚಾಗಿ ಯೋಚಿಸಿಲ್ಲ

ಸವಾಲುಗಳ ಬಗ್ಗೆ ಹೆಚ್ಚಾಗಿ ಯೋಚಿಸಿಲ್ಲ

ಲೊಬೆರಾ ಅವರಿಗೆ ಶುಕ್ರವಾರ ಎದುರಾಗುವ ಸವಾಲುಗಳ ಬಗ್ಗೆ ಹೆಚ್ಚಾಗಿ ಯೋಚಿಸಿಲ್ಲ. " ಹಿಂದಿನ ಪಂದ್ಯವನ್ನು ಗಮನದಲ್ಲಿಟ್ಟುಕೊಂಡು ಆಡಿದರೆ ನಾವು ದೊಡ್ಡ ತಪ್ಪ ಮಾಡಿದಂತಾಆಗುತ್ತದೆ. ಈಗ ಎದುರಾಳಿ ತಂಡ ಸಂಪೂರ್ಣ ಭಿನ್ನವಾಗಿದೆ, ಅವರು ವೃತ್ತಿಪರವಾಗಿ ಸಾಕಷ್ಟು ಬದಲಾಗಿದ್ದಾರೆ," ಎಂದರು.

For Quick Alerts
ALLOW NOTIFICATIONS
For Daily Alerts
Story first published: Friday, January 22, 2021, 0:16 [IST]
Other articles published on Jan 22, 2021
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X