ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2020: ಕೇರಳಕ್ಕೆ ಸೋಲುಣಿಸಿ ಅಗ್ರಸ್ಥಾನಕ್ಕೇರಿದ ಗೋವಾ

By Isl Media
ISL: FC Goa have last laugh in five-goal thriller

ಗೋವಾ, ಜನವರಿ 26: ಹ್ಯೂಗೋ ಬೌಮಾಸ್ (26 ಮತ್ತು 83ನೇ ನಿಮಿಷ) ಮತ್ತು ಜಾಕಿಚಾಂದ್ ಸಿಂಗ್ (45ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಕೇರಳ ಬ್ಲಾಸ್ಟರ್ಸ್ ತಂಡವನ್ನು 3-2 ಗೋಲುಗಳ ಅಂತರದಲ್ಲಿ ಮಣಿಸಿದ ಎಫ್ ಸಿ ಗೋವಾ ತಂಡ ಹೀರೋ ಇಂಡಿಯನ್ ಸೂಪರ್ ಲೀಗ್ ನ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿತು. ಕೇರಳ ಬ್ಲಾಸ್ಟರ್ಸ್ ಪರ ಮೆಸ್ಸಿ ಬೌಲಿ (53ನೇ ನಿಮಿಷ) ಹಾಗೂ ಬಾರ್ಥಲೋಮ್ಯೋ ಒಗ್ಬಚೆ (69ನೇ ನಿಮಿಷ) ಗಳಿಸಿದ ಗೋಲು ಸೋಲಿನ ಅಂತರವನ್ನು ಕಡಿಮೆ ಮಾಡಿತು. ಈ ಸೋಲಿನೊಂದಿಗೆ ಕೇರಳದ ಪ್ನೇ ಆಫ್ ಹಾದಿ ಮತ್ತಷ್ಟು ಕಠಿಣವಾಯಿತು.

ಗೋವಾ ಮುನ್ನಡೆ: ಪ್ರಥಮಾರ್ಥದಲ್ಲಿ ಎರಡು ಗೋಲುಗಳನ್ನು ಗಳಿಸುವ ಮೂಲಕ ಎಫ್ ಸಿ ಗೋವಾ ತಂಡ ಮನೆಯಂಗಣದಲ್ಲಿ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಮೇಲುಗೈ ಸಾಧಿಸಿದೆ. 26ನೇ ನಿಮಿಷದಲ್ಲಿ ಹ್ಯೂಗೋ ಬೌಮಾಸ್ ತಂಡದ ಪರ ಮೊದಲ ಗೋಲು ಗಳಿಸಿದರೆ, ಜಾಕಿಚಾಂದ್ ಸಿಂಗ್ ಪ್ರಥಮಾರ್ಧದ ಕೊನೆಯ ಕ್ಷಣ ಅಂದರೆ 45ನೇ ನಿಮಿಷದಲ್ಲಿ ಗಳಿಸಿದ ಗೋಲು ಆತಿಥೇಯ ತಂಡ 2-0 ಅಂತರದಲ್ಲಿ ಮೈಲುಗೈ ಸಾಧಿಸಿತು. ಗೋವಾ ತಂಡ ಪಂದ್ಯದ ಪ್ರತಿಯೊಂದು ಹಂತದಲ್ಲೂ ಮೇಲುಗೈ ಸಾಧಿಸಿತು.

ಕೇರಳ ಚೆಂಡನ್ನು ಹೆಚ್ಚು ಕಾಲ ನಿಯಂತ್ರಿಸಿದರೂ ಗೋಲ್ ಗಳಿಸುವ ಅವಕಾಶ ನಿರ್ಮಿಸಿಲ್ಲ. ಗೋವಾ ನಿರಂತರವಾಗಿ ಆಕ್ರಮಣಕಾರಿ ಆಟವನ್ನೇ ಮುಂದುವರಿಸಿತು. ಕೇರಳಕ್ಕೆ ಬಾರ್ಥಲೋಮ್ಯೋ ಒಗ್ಬಚೆ ಮುನ್ನಡೆ ಕಾಣುವ ಅವಕಾಶ ಸಿಕ್ಕತ್ತು, ಆದರೆ ಗುರಿ ಗೋಲ್ ಬಾಕ್ಸ್ ಕಡೆಗೆ ಇರಲಿಲ್ಲ. ಗೋವಾ ಆಕ್ರಮಣಕಾರಿ ಆಟ ಮುಂದುವರಿಸಿತು. 45ನೇ ನಿಮಿಷದಲ್ಲಿ ಜಾಕಿಚಾಂದ್ ಸಿಂಗ್ ಗಳಿಸಿದ ಗೋಲು ತಂಡಕ್ಕೆ 2-0 ಮುನ್ನಡೆ ತಂದುಕೊಟ್ಟಿತ್ತು, ಗೆಲ್ಲಲೇಬೇಕಾದ ಪಂದ್ಯದ ಪ್ರಥಮಾರ್ಧದಲ್ಲೇ ಕೇರಳ ಹಿನ್ನಡೆ ಕಂಡಿರುವುದರಿಂದ ದ್ವಿತಿಯಾರ್ಧದಲ್ಲಿ ಒತ್ತಡದಲ್ಲಿ ಆಡಬೇಕಾದ ಅನಿವಾರ್ಯತೆಗೆ ಸಿಲುಕಿತು.

ISL: FC Goa have last laugh in five-goal thriller

ಜಯವೊಂದೆ ಮಂತ್ರ
ಹೀರೋ ಇಂಡಿಯನ್ ಸೂಪರ್ ಲೀಗ್ ನ 67ನೇ ಪಂದ್ಯದಲ್ಲಿ ಗೋವಾ ಮತ್ತು ಕೇರಳ ಬ್ಲಾಸ್ಟರ್ಸ್ ತಂಡಗಳು ಮುಖಾಮುಖಿಯಾದವು. ಇಲ್ಲಿ ಯಾವುದೇ ತಂಡವು ವಿಭಿನ್ನ ಕಾರಣಗಳಿಗಾಗಿ ಅಂಕ ಕಳೆದುಕೊಳ್ಳಲು ಸಿದ್ಧವಿಲ್ಲ. ಗೋವಾಕ್ಕೆ ಜಯ ಗಳಿಸಿ ಅಗ್ರ ಸ್ಥಾನಕ್ಕೇರಬೇಕೆಂಬ ಹಂಬಲವಿದ್ದರೆ, ಕೇರಳ ಇಲ್ಲಿ ಅಂಕ ಕಳೆದುಕೊಂಡರೆ ಪ್ಲೇಆಫ್ ಹಾದಿ ಕಠಿಣಗೊಳಿಸಿಕೊಳ್ಳಲಿದೆ.

ಆತಿಥೇಯ ಗೋವಾ ತಂಡ ಹಿಂದಿನ ಪಂದ್ಯದಲ್ಲಿ ಎಟಿಕೆ ವಿರುದ್ಧ ಸೋಲನುಭವಿಸಿ ಮೂರನೇ ಸ್ಥಾನಕ್ಕೆ ತಲುಪಿತ್ತು. ಈಗ ಮನೆಯಂಗಣದಲ್ಲಿ ಗೆದ್ದು ಆ ಸೋಲನ್ನು ಮರೆಯುವುದು ಗೋವಾದ ಉದ್ದೇಶವಾಗಿದೆ, ಗೋವಾ ತಂಡ ಮನೆಯಂಗಣದಲ್ಲಿ ಉತ್ತಮ ಪ್ರದರ್ಶನ ತೋರಿದೆ, ಹಿಂದಿನ ಮೂರೂ ಪಂದ್ಯಗಳನ್ನು ಗೆದ್ದಿರುವುದಲ್ಲದೆ, ಈ ಋತುವಿನಲ್ಲಿ ಎದುರಾಳಿ ತಂಡಕ್ಕೆ ಅತಿ ಕಡಿಮೆ ಗೋಲು ಗಳಿಸುವ ಅವಕಾಶ ನೀಡಿದೆ.

ಗೋವಾದ ಅಟ್ಯಾಕ್ ವಿಭಾಗ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿದೆ, ಫೆರಾನ್ ಕೊರೊಮಿನಾಸ್ ಹಾಗೂ ಹ್ಯೂಗೊ ಬೌಮಾಸ್ ಗೋಲು ಗಳಿಸಿದರೆ, ಬ್ರೆಂಡಾನ್ ಫೆರ್ನಾಂಡೀಸ್ ಅದಕ್ಕೆ ಪೂರಕವಾದ ಬೆಂಬಲ ನೀಡಿದ್ದಾರೆ. ಬ್ಲಾಸ್ಟರ್ಸ್ ತಂಡ ಸದ್ಯ ಸಂದಿಗ್ಧ ಸ್ಥಿತಿಯಲ್ಲಿದೆ. ಋತುವಿನ ಆರಂಭದಲ್ಲಿ ಹಿನ್ನಡೆ ಕಂಡಿದ್ದ ತಂಡ ನಂತರ ಹೈದರಾಬಾದ್ ಹಾಗೂ ಎಟಿಕೆ ವಿರುದ್ಧ ಜಯ ಗಳಿಸುವ ಮೂಲಕ ಯಶಸ್ಸಿನ ಹಾದಿ ತುಳಿಯಲಾರಂಭಿಸಿತು. ಆದರೆ ಜೆಮ್ಷೆಡ್ಪುರ ಎಫ್ ಸಿ ವಿರುದ್ಧ ಸೋಲುವ ಮೂಲಕ ಕೇರಳ ಬ್ಲಾಸ್ಟರ್ಸ್ ಮತ್ತೊಮ್ಮೆ ಕಹಿ ಅನುಭವಿಸಿತು, ಈಗ ಜಯ ಗಳಿಸುವ ಉದ್ದೇಶದಿಂದ ಮತ್ತೆ ಅಂಗಣಕ್ಕಿಳಿಯಿತು.

Story first published: Sunday, January 26, 2020, 14:27 [IST]
Other articles published on Jan 26, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X