ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2020: ಮತ್ತೆ ಅಗ್ರ ಸ್ಥಾನಕ್ಕೇರಲು ಎಫ್‌ಸಿ ಗೋವಾ ಸಜ್ಜು

By Isl Media
ISL: FC Goa look to get back on track against NorthEast

ಗೋವಾ, ಜನವರಿ 8: ಬುಧವಾರ ಇಲ್ಲಿನ ಜವಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆಯಲಿರುವ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ಆತಿಥೇಯ ಗೋವಾ ತಂಡ ನಾರ್ಥ್ ಈಸ್ಟ್ ಯುನೈಟೆಡ್ ವಿರುದ್ಧ ಜಯ ಗಳಿಸಿ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರುವ ಗುರಿ ಹೊಂದಿದೆ.

ಗೆದ್ದರೆ ಗೋವಾ ಅಗ್ರ ಸ್ಥಾನ ತಲುಪಲಿದೆ, ಆದರೆ ಕಳೆದ ಎರಡು ತಿಂಗಳಿಂದ ಜಯ ಕಾಣದಿರುವ ನಾರ್ಥ್ ಈಸ್ಟ್ ಗೆ ಇಲ್ಲಿ ಜಯದ ಅಗತ್ಯವಿದೆ. ಅಂತಮ ನಾಲ್ಕರಲ್ಲಿ ತನ್ನ ಸ್ಥಾನವನ್ನು ಕಾಯ್ದುಕೊಳ್ಳಬೇಕಾದರೆ ಪರ್ವತಪ್ರದೇಶದ ತಂಡಕ್ಕೆ ಇಲ್ಲಿ ಜಯದ ಅನಿವಾರ್ಯತೆ ಇದೆ. ಹತಾಶೆಯಲ್ಲಿರುವ ತಂಡ ಹೆಚ್ಚು ಅಪಾಯಕಾರಿಯಾಗಿರುತ್ತದೆ.

1
2026480

ಸತತ ನಾಲ್ಕು ಪಂದ್ಯಗಳಲ್ಲಿ ಜಯ ಕಂಡಿರುವ ಗೋವಾದ ಜಯದ ಓಟಕ್ಕೆ ಕೊನೆಗೂ ಹಾಲಿ ಚಾಂಪಿಯನ್ ಬೆಂಗಳೂರು ಬ್ರೇಕ್ ಹಾಕಿತು. ಪ್ರಥಮಾರ್ಧದಲ್ಲಿ ಗೋಲು ಗಳಿಸಿದಾಗಲ್ಲೆಲ್ಲ ಗೋವಾ ಜಯ ಗಳಿಸಿತ್ತು, ಫೆರಾನ್ ಕೊರೊಮಿನಾಸ್ ಆಡಡಿರುವ ಎಂಟು ಪಂದ್ಯಗಳಲ್ಲಿ ಏಳಗ ಗೋಲುಗಳನ್ನು ಗಳಿಸಿರುವುದು ಗಮನಾರ್ಹ, ಸದೇ ರೀತಿ ಕೈಯ್ ಹೀರಿಂಗ್ಸ್ ಹಾಗೂ ಮಿಸ್ಲಾವ್ ಕೊಮೊರ್ಸ್ಕಿ ಅವರು ತಂಡಕ್ಕೆ ಬೆನ್ನೆಲುಬಾಗಿದ್ದಾರೆ.

ISL: FC Goa look to get back on track against NorthEast

''ನಾರ್ಥ್ ಈಸ್ಟ್ ಒಂದು ಉತ್ತಮ ತಂಡ, ನಾವು ಉತ್ತಮವಾಗಿ ಆಡದಿದ್ದರೆ, 100 ಪ್ರತಿಶತ ಪ್ರಯತ್ನ ಮಾಡದಿದ್ದರೆ, ನಮಗೆ ಜಯದ ಹಾದಿ ಕಠಿಣವಾಗುವುದು ಖಚಿತ,'' ಎಂದು ಗೋವಾ ಕೋಚ್ ಸರ್ಗಿಯೋ ಲೆಬೆರಾ ಹೇಳಿದ್ದಾರೆ. ಯೋಜನೆಗೆ ತಕ್ಕಂತೆ ಆಡುವ ಗೋವಾ ತಂಡ ಸೆಟ್ ಪೀಸ್ ಮೂಲಕ ಇದುವರೆಗೂ 10 ಗೋಲುಗಳನ್ನು ಗಳಿಸಿದದೆ. ಅಂತಿಮ ಹಂತದಲ್ಲಿ ಗೋಲುಗಳನ್ನು ಗಳಿಸುವುದರಲ್ಲಿ ಗೋವಾ ಎತ್ತಿದ ಕೈ.

ರಾಬರ್ಟ್ ಜರ್ನಿ ತಂಡವು ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ಗೋಲು ಗಳಿಕೆಯಲ್ಲಿ ತಂಡ ಸಾಕಷ್ಟು ಹಿಂದೆ ಬಿದ್ದಿದೆ. ತಂಡ ಇದುವರೆಗೂ ಗಳಿಸಿದ್ದು ಬರೇ ಒಂಬತ್ತು ಗೋಲುಗಳು. ಇದು ಲೀಗ್ ನಲ್ಲಿ ತಂಡವೊಂದು ಗಳಿಸಿದ ಅತಿ ಕಡಿಮೆ ಗೋಲಾಗಿದೆ. ಅಸಮೋಹ್ ಗ್ಯಾನ್ ನಾಲ್ಕು ಗೋಲುಗಳನ್ನುಗಳಿಸಿ ತಂಡದ ಪರ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರರೆನಿಸಿದ್ದಾರೆ. ಆದರೆ ಇತರ ಆಟಗಾರರು ತಂಡಕ್ಕೆ ಉತ್ತಮ ರೀತಿಯಲ್ಲಿ ಕೊಡುಗೆ ನೀಡಿರಲಿಲ್ಲ.

ಉರುಗ್ವೆ ಮೂಲಕ ಆಟಗಾರ ಫೆಡರಿಕೊ ಗಲ್ಲೆಗೋ ತಂಡಕ್ಕೆ ಹಿಂದಿರುಗಿರುವುದು ಆಟ್ಯಾಕ್ ವಿಭಾಗದ ಬಲವನ್ನು ಹೆಚ್ಚಿಸಿದೆ. ಗ್ಯಾನ್ ಆವರೊಂದಿಗೆ ಉತ್ತಮ ರೀತಿಯ ಹೊಂದಾಣಿಕೆ ಸಿಕ್ಕರೆ ನಾರ್ಥ್ ಈಸ್ಟ್ ತಂಡವನ್ನು ನಿಯಂತ್ರಿಸುವುದು ಕಷ್ಟ. ಮನೆಯಂಗಣದ ಹೊರಗೆ ನಡೆದ ಪಂದ್ಯಗಳಲ್ಲಿ ನಾರ್ಥ್ ಈಸ್ಟ್ ತಂಡ ಗೋವಾ ವಿರುದ್ಧ ಇನ್ನೂ ಗೆದ್ದಿಲ್ಲ. ಆದರೆ ನಾಳೆಯ ಪಂದ್ಯದಲ್ಲಿ ತನ್ನ ಆಟಗಾರರು ಅಗತ್ಯವಿರುವ ನಾಲ್ಕು ಆಂಕಗಗಳನ್ನು ಗಳಿಸುತ್ತಾರೆ ಎಂದು ಕೋಚ್ ಜರ್ನಿ ಆತ್ಮವಿಶ್ವಾಸದಲ್ಲಿ ಹೇಳಿದ್ದಾರೆ.

''ನಮಗೆ ಇನ್ನು 9 ಪಂದ್ಯಗಳು ಆಡಲು ಅವಕಾಶವಿದೆ. ನಮಗೆ ಈಗ ಜಯದ ಅಗತ್ಯ ಇದೆ. ಅವರದ್ದು ಉತ್ತಮ ತಂಡ, ನಾವು ಗೋವಾದಂತೆಯೇ ಬಲಿಷ್ಠ ತಂಡವಾಗಿದೆ. ನಮ್ಮ ತಂಡದ ಆಟಗಾರರಲ್ಲಿ ಚೈತನ್ಯ ಹೆಚ್ಚಿದೆ. ನಾವು ಗೆಲ್ಲಲು ಸಜ್ಜಾಗಿದ್ದೇವೆ, '' ಎಂದು ಜರ್ನಿ ಹೇಳಿದರು.

Story first published: Tuesday, January 7, 2020, 23:55 [IST]
Other articles published on Jan 7, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X