ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2020: ಬ್ಲಾಸ್ಟರ್ಸ್ ವಿರುದ್ಧ ಗೋವಾಕ್ಕೆ ಅಗ್ರ ಸ್ಥಾನದ ಗುರಿ

By Isl Media
ISL: FC Goa ready for first of five finals, Kerala hopeful

ಗೋವಾ, ಜನವರಿ 25: ಎಫ್.ಸಿ. ಗೋವಾ, ಎಟಿಕೆ ಹಾಗೂ ಬೆಂಗಳೂರು ತಂಡಗಳು ಹೀರೋ ಇಂಡಿಯನ್ ಸೂಪರ್ ಲೀಗ್ ನ ಅಂತಿಮ ನಾಲ್ಕರ ಪಟ್ಟಿಯಲ್ಲಿ ಈಗಾಗಲೇ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿವೆ. ಆದರೆ ಎಎಫ್ ಸಿ ಚಾಂಪಿಯನ್ಸ್ ಲೀಗ್ ನಲ್ಲಿ ಸ್ಥಾನ ಪಡೆಯುವ ಸಲುವಾಗಿ ಗೋವಾ ತಂಡ ಶನಿವಾರ ನಡೆಯಲಿರುವ ಕೇರಳ ಬ್ಲಾಸ್ಟರ್ಸ್ ವಿರುದ್ಧದ ಪಂದ್ಯದಲ್ಲಿ ಜಯ ಗಳಿಸಿ ಅಗ್ರ ಸ್ಥಾನಕ್ಕೇರುವ ಗುರಿ ಹೊಂದಿದೆ.

''ನನ್ನ ಪ್ರಕಾರ ಇನ್ನು ಮುಂದೆ ನಡೆಯುವ ಪ್ರತಿಯೊಂದು ಪಂದ್ಯವೂ ಫೈನಲ್ ಇದ್ದಂತೆ. ಇದು ಕೇವಲ ನಮಗಾಗಿಯಲ್ಲ, ಎಲ್ಲಾ ತಂಡಗಳಿಗೂ ಇದೇ ಪರಿಸ್ಥಿತಿ. ಇದು ಅತ್ಯಂತ ಮುಖ್ಯ ಪಂದ್ಯ, ನಾವು ಹಂತಹಂತವಾಗಿ ಸಾಗಬೇಕು. ನಮ್ಮ ಪಾಲಿಗೆ ಇದೊಂದು ಉತ್ತಮ ಅವಕಾಶ ಮತ್ತು ಕ್ಲಬ್ ಮತ್ತು ಆಟಗಾರರ ಪಾಲಿಗೆ ದೊಡ್ಡ ಸವಾಲು. ಆ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ,'' ಎಂದು ಎಫ್ ಸಿ ಗೋವಾ ತಂಡದ ಕೋಚ್ ಸರ್ಗಿಯೊ ಲೊಬೆರಾ ಹೇಳಿದ್ದಾರೆ.

ಕೇರಳ ಬ್ಲಾಸ್ಟರ್ಸ್ ತಂಡಕ್ಕೆ ಗೋವಾ ವಿರುದ್ಧ ಜಯದ ಹೊರತಾಗಿ ಬೇರೇನೂ ಬೇಕಾಗಿಲ್ಲ. ಇಲ್ಲಿ ಸೋಲನುಭವಿಸಿದರೆ ಕೇರಳ ಬ್ಲಾಸ್ಟರ್ಸ್ ತಂಡದ ಕೋಚ್ ಎಲ್ಕೋ ಷೆಟೋರಿ ಹೇಳಿದ್ದಾರೆ.

ಎಟಿಕೆ ವಿರುದ್ಧ ಸೊಲನುಭವಿಸಿದ ನಂತರ ಮನೆಯಂಗಣದಲ್ಲಿ ಪಂದ್ಯವನ್ನಾಡುತ್ತಿರುವ ಪಂದ್ಯವನ್ನಾಡುತ್ತಿರುವ ಗೋವಾ ತಂಡಕ್ಕೆ ತವರಿನ ಪ್ರೇಕ್ಷಕರ ಬೆಂಬಲ ಹೆಚ್ಚು ಪರಿಣಾಮ ಬೀರುವುದು ಸಹಜ. ಕೇರಳ ತಂಡ ಮನೆಯಂಗಣದ ಹೊರಗಡೆ ನಡೆದ ಪಂದ್ಯದಲ್ಲಿ ಕೇವಲ ಪಂದು ಪಂದ್ಯದಲ್ಲಿ ಮಾತ್ರ ಕ್ನೀನ್ ಶೀಟ್ ಸಾಧನೆ ಮಾಡಿದೆ. ಮನೆಯಂಗಣದಲ್ಲಿ ಗೋವಾ ಮೊದಲ ಮೂರು ಪಂದ್ಯಗಳನ್ನು ಗಳಿಸಿತ್ತು, ಕೇವಲ ಮೂರು ಗೋಲಿಗಳನ್ನು ನೀಡಿತ್ತು. ಈ ಋತುವಿನಲ್ಲಿ ತಂಡವೊಂದು ಮನೆಯಂಗಣದಲ್ಲಿ ಎದುರಾಳಿ ತಂಡಕ್ಕೆ ನೀಡಿದ ಅತಿ ಕಡಿಮೆ ಗೋಲು ಇದಾಗಿದೆ.

''ನಾವು ಕೇರಳದ ಮನೆಯಂಗಣದಲ್ಲಿ ಆಡಿದಾಗಿದ್ದ ಕೇರಳ ತಂಡ ಈಗ ಸಾಕಷ್ಟು ಸುಧಾರಣೆ ಕಂಡಿದೆ. ಅವರು ಕೆಲವು ಪ್ರಮುಖ ಆಟಗಾರರನ್ನು ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು. ಕೇರಳ ಹಿಂದಿನ ಪಂದ್ಯದಲ್ಲಿ ಸೋಲನುಭವಿಸಿತ್ತು. ಆದರೆ ಸೋತಿರುವ ಪರಿಸ್ಥಿತಿಯನ್ನು ಗಮನಿಸುವುದು ಪ್ರಮುಖವಾದುದು.ಕೇವಲ ಫಲಿತಾಂಶ ಮುಖ್ಯವಲ್ಲ,'' ಎಂದು ಲೊಬೆರಾ ಹೇಳಿದ್ದಾರೆ, ಕೇರಳ ವಿರುದ್ಧ ಆಡಿರುವ ಐದು ಪಂದ್ಯಗಳಲ್ಲಿ ಗೋವಾ ಐದು ಪಂದ್ಯಗಳಲ್ಲಿ ಜಯ ಗಳಿಸಿತ್ತು.

ಒಂದು ಪಂದ್ಯದಲ್ಲಿ ಮಾತ್ರ 2-2 ಗೋಲಿನಿಂದ ಡ್ರಾ ಸಾಧಿಸಿತ್ತು.ಒಟ್ಟು 25 ಗೋಲುಗಳನ್ನು ಗಳಿಸಿದರೂ ಗೋವಾ ತಂಡ ಗಮನಿಸಬೇಕಾದ ಅಂಶಗಳು ಸಾಕಷ್ಟಿದೆ. ಕಳೆದ ಮೂರು ಪಂದ್ಯಗಳಲ್ಲಿ 44 ಪ್ರಯತ್ನಗಳನ್ನು ಮಾಡಿದರೂ ಗೋವಾ ಗಳಿಸಿದ್ದು ಮೂರು ಗೋಲು. ಫೆರಾನ್ ಕೊರಿಮಿನಾಸ್ ಹಾಗೂ ಬೌಮಾಸ್ ಗೋಲು ಗಳಿಸುತ್ತಿದ್ದರೂ ಇತರರು ತಂಡದ ಜಯಕ್ಕೆ ನೆರವಾಗುತ್ತಿಲ್ಲ.

''ಗೋವಾ ತಂಡ ನಾನು ಯಾವ ರೀತಿಯಲ್ಲಿ ಫುಟ್ಬಾಲ್ ಆಡಬಯಸುತ್ತೇನೋ ಆ ರೀತಿಯಲ್ಲಿ ಆಡುತ್ತಿದೆ. ಚೆಂಡನ್ನು ಹೆಚ್ಚು ಕಾಲ ನಿಯಂತ್ರಿಸುವ ಫುಟ್ಬಾಲ್ ಆಡುವ ಏಕೈಕ ತಂಡ ಗೋವಾವಾಗಿದೆ. ನಮ್ಮ ತಂಡದಿಂದಲೂ ನಾವು ಇದೇ ರೀತಿಯ ಫುಟ್ಬಾಲ್ ನಿರೀಕ್ಷಿಸುತ್ತಿದ್ದೆ, ಆದರೆ ಫಿಟ್ನೆಸ್ ಸಮಸ್ಯೆ ನಮ್ಮನ್ನು ಯಾವಾಗಲೂ ಕಾಡುತ್ತಿತ್ತು,'' ಎಂದು ಷೆಟ್ಟೋರಿ ಹೇಳಿದ್ದಾರೆ.

Story first published: Friday, January 24, 2020, 23:40 [IST]
Other articles published on Jan 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X