ಐಎಸ್‌ಎಲ್: ಮೊದಲ ಜಯದ ನಿರೀಕ್ಷೆಯಲ್ಲಿ ಗೋವಾ ತಂಡ

By Isl Media

ಗೋವಾ, ನವೆಂಬರ್ 29: ಮೊದಲ ಪಂದ್ಯದಲ್ಲಿ ಜಯ ಹಾಗೂ ನಂತರದ ಪಂದ್ಯದಲ್ಲಿ ಡ್ರಾ ಸಾಧಿಸಿ ಆತ್ಮವಿಶ್ವಾಸದಲ್ಲಿರುವ ನಾರ್ಥ್ ಈಸ್ಟ್ ಯುನೈಟೆಡ್ ಎಫ್ ಸಿ ವಿರುದ್ಧ ಎಫ್ ಸಿ ಗೋವಾ ತಂಡ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಮೊದಲ ಜಯ ಗಳಿಸುವ ಗುರಿ ಹೊಂದಿದೆ. ಸೋಮವಾರ ಫಟೋರ್ಡಾ ಅಂಗಣದಲ್ಲಿ ಇತ್ತಂಡಗಳು ಮುಖಾಮುಖಿಯಾಗಲಿವೆ.

ಗೋವಾದ ನೂತನ ಕೋಚ್ ಜುವಾನ್ ಫೆರಾಂಡೋ ಉತ್ತಮ ಫುಟ್ಬಾಲ್ ಆಡಿಸುವ ಮೂಲಕ ಕ್ಲಬ್ ನ ಮೇಲೆ ತಮ್ಮ ಪ್ರಭಾವವನ್ನು ಉತ್ತಮ ರೀತಿಯಲ್ಲಿ ಬೀರಿದ್ದಾರೆ. ತನ್ನ ಮೊದಲ ಎರಡು ಪಂದ್ಯಗಳಲ್ಲಿ ಗೋವಾ ತನ್ನ ಆಕ್ರಮಣಕಾರಿ ಆಟವನ್ನೇ ಪ್ರದರ್ಶಿಸಿತ್ತು. ಏನೇ ಆಡಿದರೂ ಅಂತಿಮವಾಗಿ ಬೇಕಾಗಿರುವುದು ಜಯ. ಗೋವಾ ಎರಡು ಪಂದ್ಯಗಳಲ್ಲಿ ಮೂರು ಅಂಕ ಗಳಿಸುವಲ್ಲಿ ವಿಫಲವಾಗಿತ್ತು.

ನಾರ್ಥ್ ಈಸ್ಟ್ ವಿರುದ್ಧದ ಪಂದ್ಯದಲ್ಲಿ ಫೆರಾಂಡೋ ಆಟದ ಶೈಲಿಯಲ್ಲಿ ಬದಲಾವಣೆ ಮಾಡಲು ಉತ್ಸುಕರಾಗಿದ್ದಾರೆ. ಆದರೆ ಕ್ಲಬ್ ನ ಆಟದ ಸಿದ್ಧಾಂತವನ್ನು ಬಿಡುವುದಿಲ್ಲ ಎಂದಿದ್ದಾರೆ. "ನಮ್ಮ ಗುರಿ ಮೂರು ಅಂಕಗಳನ್ನು ಗಳಿಸುವುದು. ನನಗೆ ಇದುವರೆಗಿನ ಫಲಿತಾಂಶದ ಬಗ್ಗೆ ತೃಪ್ತಿ ಇಲ್ಲ. ಬೆಂಗಳೂರು ವಿರುದ್ಧ ಜಯ ಗಳಿಸಲು ನಮಗೆ ಉತ್ತಮ ಅವಕಾಶನಿದ್ದಿತ್ತು. ಮುಂಬೈ ವಿರುದ್ಧ ನಮ್ಮ ಆಟಗಾರರಿಗೆ ಉತ್ತಮ ಅವಕಾಶ ಸಿಗಲಿಲ್ಲ,"

ಐಎಸ್‌ಎಲ್: ಗೋಲಿಲ್ಲದೆ ಅಂಕ ಹಂಚಿಕೊಂಡ ಹೈದರಾಬಾದ್, ಬೆಂಗಳೂರು

ಬಲಿಷ್ಠ ವಿಂಗರ್ ಮತ್ತು ಆಕ್ರಮಣಕಾರಿ ಆಟದ ಶೈಲಿಯನ್ನು ಹೊಂದಿರುವ ಜತೆಯಲ್ಲಿ ಚೆಂಡನ್ನು ಉತ್ತಮ ರೀತಿಯಲ್ಲಿ ಪಾಸ್ ಮಾಡುವ ಸಾಮರ್ಥ್ಯ ಹೊಂದಿರುವ ನಾರ್ಥ್ ಈಸ್ಟ್ ವಿರುದ್ಧ ಯಶಸ್ಸು ಕಾಣುವುದು ಅಷ್ಟು ಸುಲಭವಲ್ಲ,"ಚೆಂಡನ್ನು ನಿಯಂತ್ರಣದಲ್ಲಿಡುವುದು ಪ್ರಮುಖವಾಗಿದೆ. ಅದೇ ರೀತಿ ನಾಳೆಯ ಪಂದ್ಯಕ್ಕೆ ನಮ್ಮದೇ ಆದ ಯೋಜನೆ ಇದೆ, ಆ ಯೋಜನೆಯನ್ನು ಹೊಂದುವುದು ಪ್ರಮುಖವಾಗಿದೆ,. ಆ ಬಗ್ಗೆ ನಾನು ವಿವರನ್ನು ನೀಡಲಾರೆ, ಅಂಗಣದಲ್ಲಿ ನೀವೇ ನೋಡಬಹುದು,'' ಎಂದು ಫೆರಾಂಡೋ ಹೇಳಿದರು.

ಈ ಹಿಂದಿನ ಐದು ಮುಖಾಮುಖಿಗಳಲ್ಲಿ ಗೋವಾ ವಿರುದ್ಧ ನಾರ್ಥ್ ಈಸ್ಟ್ ಒಂದೇ ಒಂದು ಬಾಗಿ ಗೆದ್ದಿಲ್ಲ. ಮೂರು ಬಾರಿ ಸೋತು ಎರಡು ಪಂದ್ಯ ಡ್ರಾದಲ್ಲಿ ಕೊನೆಗೊಂಡಿತ್ತು. ಆದರೆ ನೂತನ ಕೋಚ್ ಗೆರಾರಗಡ್ ನಸ್, ತಂಡದ ಮನೋಬಲವನ್ನು ಹೆಚ್ಚಿಸಿದ್ದಾರೆ. ಮುಂಬೈ ವಿರುದ್ಧ ಜಯ ಗಳಿಸಿರುವ ತಂಡ ನಂತರ ಕೇರಳ ವಿರುದ್ಧ ಉತ್ತಮ ಪೈಪೋಟಿಯನ್ನು ನೀಡಿ ಅಂಕ ಹಂಚಿಕೊಂಡಿತ್ತು. ತಂಡದ ಡಿಫೆನ್ಸ್ ವಿಭಾಗದ ಆಟಗಾರರಾದ ಬೆಂಜಮಿನ್ ಲ್ಯಾಂಬಾಟ್ ಮತ್ತು ಡೈಲಾನ್ ಫಾಕ್ಸ್ ಇದುವರೆಗೂ ಉತ್ತಮ ರೀತಿಯಲ್ಲಿ ಆಟ ಪ್ರದರ್ಶಿಸಿದ್ದಾರೆ.

"ತಂಡದಲ್ಲಿ ಆಟಗಾರರ ಮನಸ್ಥಿತಿ ಉತ್ತಮವಾಗಿದೆ. ಎರಡು ಪಂದ್ಯಗಳ ಫಲಿತಾಂಶ ತಂಡದ ಆಟಗಾರರಲ್ಲಿ ಖುಷಿ ತಂದಿದೆ. ವೈಯಕ್ತಿಕವಾಗಿ ಹಾಗೂ ತಂಡವಾಗಿ ಹಲವಾರು ವಿಷಯಗಳಲ್ಲಿ ನಾವು ಸುಧಾರಣೆ ಕಂಡುಕೊಳ್ಳಬೇಕಾಗಿದೆ,'' ಎಂದು ಹೇಳಿರುವ ನಸ್, "ಆದರೆ ನಾಳೆಯ ಪಂದ್ಯ ನಮಗೆ ಅತ್ಯಂತ ಪ್ರಮುಖವಾಗಿದೆ. ನಮಗೆ ಈ ಪಂದ್ಯ ಸಾಕಷ್ಟು ಸವಾಲಿನ ಪಂದ್ಯವಾಗಿದೆ. ಎಫ್ ಸಿ ಗೋವಾ ಕಳೆದ ಬಾರಿಯೂ ನಮ್ಮ ವಿರುದ್ಧ ಜಯ ಗಳಿಸಿರುವುದನ್ನು ನಾವು ಮರೆಯುವಂತಿಲ್ಲ," ಎಂದರು.

ಫೆರಾಂಡೊ ಅವರಂತೆ ನಸ್ ಕೂಡ ಪಂದ್ಯದ ನಿಯಂತ್ರಣದ ಬಗ್ಗೆ ಮಾತನಾಡಿದ್ದಾರೆ. "ಚೆಂಡನ್ನು ಹೆಚ್ಚು ಸಮಯ ನಿಯಂತ್ರಿಸುವ ತಂಡ ಪಂದ್ಯ ಗೆಲ್ಲುವ ಅವಕಾಶವನ್ನು ಹೆಚ್ಚು ಹೊಂದಿರುತ್ತದೆ. ನಮಗೆ ಅವಕಾಶಗಳು ಸಿಗಬೇಕಾದರೆ ಎದುರಾಳಿ ತಂಡಕ್ಕೆ ಅವಕಾಶಗಳನ್ನು ನಿರ್ಮಿಸಲು ಅನುವು ಮಾಡಿಕೊಡಬಾರದು. ಇದು ನಮ್ಮ ಗುರಿ," ಎಂದರು.

For Quick Alerts
ALLOW NOTIFICATIONS
For Daily Alerts
Story first published: Sunday, November 29, 2020, 19:42 [IST]
Other articles published on Nov 29, 2020
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X