ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಅಂತಿಮ ಕ್ಷಣದಲ್ಲಿ ಮುಂಬೈಯ ಜಯ ಕಸಿದ ಹೈದರಾಬಾದ್

By Isl Media
ISL: Hyderabad peg Mumbai back with late penalty

ಹೈದರಾಬಾದ್, ಜನವರಿ 24: ಮಾರ್ಕೋ ಸ್ಟ್ಯಾಂಕೊವಿಕ್ (90+ನೇ ನಿಮಿಷ) ಪೆನಾಲ್ಟಿ ಮೂಲಕ ಹಾಗೂ ಮೊಹಮ್ಮದ್ ಲಾರ್ಬಿ (43ನೇ ನಿಮಿಷ) ಪೆನಾಲ್ಟಿ ಮೂಲಕ ಗಳಿಸಿದ ಏಕೈಕ ಗೋಲು ಮುಂಬೈ ಸಿಟಿ ಎಫ್ ಸಿ ಹಾಗೂ ಹೈದರಾಬಾದ್ ಎಫ್ ಸಿ ನಡುವಿನ ಪಂದ್ಯವನ್ನು 1-1 ಗೋಲಿನಿಂದ ಸಮಬಲಗೊಂಡಿತು. ಈ ಪಂದ್ಯ ಡ್ರಾ ಗೊಳ್ಳುವುದರೊಂದಿಗೆ ಒಟ್ಟು 20 ಅಂಕ ಗಳಿಸಿದ ಮುಂಬೈ ಐದನೇ ಸ್ಥಾನದಲ್ಲೇ ಉಳಿಯಿತು. ಒಡಿಶಾ ಎಫ್ ಸಿ ಸದ್ಯಕ್ಕೆ ನೆಮ್ಮದಿಯ ನಿಟ್ಟುಸಿರಿಟ್ಟಿತು. ಈ ಪಂದ್ಯದಲ್ಲಿ ಎರಡೂ ಗೋಲುಳು ಪೆನಾಲ್ಟಿಯಿಂದ ಮೂಡಿಬಂದಿರುವುದು ವಿಶೇಷ.

ಮುಂಬೈ ಮುನ್ನಡೆ
43ನೇ ನಿಮಿಷದಲ್ಲಿ ಮೊಹಮ್ಮದ್ ಲಾಬ್ರಿ ಪೆನಾಲ್ಟಿ ಮೂಲಕ ಗಳಿಸಿದ ಗೋಲು ಮುಂಬೈ ಸಿಟಿ ತಂಡಕ್ಕೆ ನಿರೀಕ್ಷೆಯಂತೆ ಮುನ್ನಡೆ ತಂದುಕೊಟ್ಟಿತು. ಆರಂಭದಲ್ಲೇ ಡಿಗೋ ಕಾರ್ಲೋಸ್ ಅವರಿಗೆ ಗೋಲು ಗಳಿಸಲು ಉತ್ತಮ ಅವಕಾಶ ಇದ್ದಿತ್ತು ಆದರೆ ಹೈದರಾಬಾದ್ ಗೋಲ್ ಕೀಪರ್ ಲಕ್ಷ್ಮೀಕಾಂತ್ ಕಟ್ಟೀಮನಿ ಉತ್ತಮ ರೀತಿಯಲ್ಲಿ ತಡೆದು ತಂಡಕ್ಕೆ ರಕ್ಷಣೆ ನೀಡಿದರು. ಆ ನಂತರವೂ ಮುಂಬೈ ಗೋಲ್ ಬಾಕ್ಸ್ ಗೆ ಗುರಿ ಇಟ್ಟಿತ್ತು, ಆದರೆ ಎಲ್ಲವೂ ಗುರಿ ತಪ್ಪಿತ್ತು. ಬಾಕ್ಸ್ ವಿಭಾಗದಲ್ಲಿ ಹೈದರಾಬಾದ್ ತಂಡದ ನಿಖಿಲ್ ಪೂಜಾರಿ ಅವರ ಕೈಗೆ ಚೆಂಡು ತಗಲಿದ ಕಾರಣ ರಫರಿ ಕೂಡಲೇ ವಿಜಿಲ್ ಮೊಳಗಿಸಿ ಮುಂಬೈಗೆ ಪೆನಾಲ್ಟಿ ಅವಕಾಶ ನೀಡಿದರು. ಮೊಹಮ್ಮದ್ ಬಾಬ್ರಿ ಪಾವುದೇ ಪ್ರಮಾದ ಎಸಗದೆ ಕಟ್ಟೀಮನಿ ಅವರನ್ನು ವಂಚಿಸಿ ಚೆಂಡನ್ನು ನೆಟ್ ಗೆ ತಲುಪಿಸುವಲ್ಲಿ ಯಶಸ್ವಿಯಾದರು. ಮುಂಬೈಗೆ 1-0 ಮುನ್ನಡೆ.

ISL: Hyderabad peg Mumbai back with late penalty

ಮುಂಬೈ ಫೇವರಿಟ್
ಹೀರೋ ಇಂಡಿಯನ್ ಸೂಪರ್ ಲೀಗ್ ನ 66ನೇ ಪಂದ್ಯದಲ್ಲಿ ಹೈದರಾಬಾದ್ ತಂಡ ಮುಂಬೈ ಸಿಟಿ ತಂಡಕ್ಕೆ ಆತಿಥ್ಯ ನೀಡಿತು. ಹೈದರಾಬಾದ್ ತಂಡ ತನ್ನ ಚೊಚ್ಚಲ ಋತುವಿನಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರಿದೆ. 10 ಪಂದ್ಯಗಳಲ್ಲಿ ಜಯ ಕಾಣದೆ ಕಂಗಾಲಾಗಿದ್ದ ಹೈದರಾಬಾದ್ ಕಳೆದ ನಾಲ್ಕು ಪಂದ್ಯಗಳಲ್ಲಿ ಸತತ ಸೋಲನುಭವಿಸಿತ್ತು. ಡಿಫೆನ್ಸ್ ವಿಭಾಗ ಎಷ್ಟು ಕಳಪೆಯಾಗಿದೆ ಎಂದರೆ 13 ಪಂದ್ಯಗಳಲ್ಲಿ ಎದುರಾಳಿ ತಂಡಗಳಿಗೆ ಒಟ್ಟು 31 ಗೋಲುಗಳನ್ನು ನೀಡುವ ಅವಕಾಶ ಕಲ್ಪಿಸಿದೆ. ಅಟ್ಯಾಕ್ ವಿಭಾಗದಲ್ಲೂ ಹೈದರಾಬಾದ್ ಬಹಳ ದುರ್ಬಲ, 13 ಪಂದ್ಯಗಳಲ್ಲಿ ಗಳಿಸಿದ್ದು, ಕೇವಲ 13 ಗೋಲುಗಳು. ಬ್ರೆಜಿಲ್ ಮೂಲದ ಆಟಗಾರ ಬೊಬೊ 5 ಗೋಲುಗಳನ್ನು ಗಳಿಸಿ ತಂಡದ ಗೌರವ ಕಾಪಾಡಿದ್ದಾರೆ. ಈಗ ಗೌರವಕ್ಕಾಗಿ ಆಡದೆ ಬೇರೆ ದಾರಿ ಇಲ್ಲದಂತಾಗಿದೆ.

ಮುಂಬೈ ಸಿಟಿ ಎಫ್ ಸಿ ತಂಡ ಯಾಆವುದೇ ಆತಂಕವಿಲ್ಲದೆ ಹೈದರಾಬಾದ್ ಗೆ ಆಗಿಮಿಸಿದೆ. ಅಂತಿಮ ನಾಲ್ಕರ ಹಂತ ತಲಪುವ ಫೇವರಿಟ್ ತಂಡಗಳಲ್ಲಿ ಮುಂಬೈ ಕೂಡ ಒಂದು. ಇಂದಿನ ಪಂದ್ಯದಲ್ಲಿ ಜಯ ಗಳಿಸಿದರೆ ಮುಂಬೈ ತಂಡ ಒಡಿಶಾವನ್ನು ಹಿಂದಿಕ್ಕಿ ಪ್ಲೇ ಆಫ್ ಸ್ಥಾನಕ್ಕೆ ಏರಲಿದೆ. ಮನೆಯಂಗಣದ ಹೊರಗಡೆ ಉತ್ತಮವಾಗಿ ಪ್ರದರ್ಶನ ತೋರಿರುವ ಮುಂಬೈ ತಂಡಕ್ಕೆ ಆ ಆತ್ಮವಿಶ್ವಾಸವೇ ಬಲವಾಗಿದೆ. ಏಳು ಪಂದ್ಯಗಳಲ್ಲಿ ಮುಂಬೈ ಸೋತಿರುವುದು ಒಂದು ಪಂದ್ಯದಲ್ಲಿ ಮಾತ್ರ. ಮೊಡೌ ಸೌಗೌ ಹಾಗೂ ಅಮೈನ್ ಚೆರ್ಮಿಟಿ ತಂಡದ ಬೆನ್ನೆನುಬೆನಿಸಿದ್ದಾರೆ. ಅದೇ ರೀತಿ ಡಿಯಾಗೋ ಕಾರ್ಲೋಸ್, ರೌಲಿನ್ ಬೋರ್ಗಸ್ ಮಿಡ್ ಫೀಲ್ಡ್ ವಿಭಾದಲ್ಲಿ ಉತ್ತಮ ಪ್ರರದರ್ಶನ ತೋರಿದ್ದಾರೆ. ಗೋಲ್ ಕೀಪಿಂಗ್ ನಲ್ಲಿ ಅಮ್ರಿಂದರ್ ಸಿಂಗ್ ಭದ್ರ ಕೋಟೆಯಾಗಿದ್ದಾರೆ, ಇದರಿಂದಾಗಿ ಮುಂಬೈ ತಂಡವನ್ನು ಸೋಲಿಸುವುದು ಕಠಿಣವೆನಿಸುವುದು ಸಹಜ.

Story first published: Friday, January 24, 2020, 23:30 [IST]
Other articles published on Jan 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X