ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಋತುವಿನ ಮೊದಲ ಅಂಕದ ನಿರೀಕ್ಷೆಯಲ್ಲಿ ಒಡಿಶಾ ಮತ್ತು ಜೆಮ್ಷೆಡ್ಪುರ

By Isl Media
ISL: Jamshedpur FC vs Odisha FC: Preview, Team News

ಗೋವಾ, ನವೆಂಬರ್, 28, 2020: ಭಾನುವಾರ ಇಲ್ಲಿನ ತಿಲಕ್ ಮೈದಾನದಲ್ಲಿ ನಡೆಯಲಿರುವ ಹೀರೋ ಇಂಡಿಯನ್ ಸೂಪರ್ ಲೀಗ್ ನ 7ನೇ ಆವೃತ್ತಿಯ 10ನೇ ಪಂದ್ಯದಲ್ಲಿ ಜೆಮ್ಷೆಡ್ಪುರ ಎಫ್ ಸಿ ಮತ್ತು ಒಡಿಶಾ ಎಫ್ ಸಿ ತಂಡಗಳು ಋತುವಿನ ಮೊದಲ ಜಯದ ನಿರೀಕ್ಷೆಯಲ್ಲಿವೆ.

ಕಳೆದ ಋತುವಿನಲ್ಲಿ ನಿರಾಶದಾಯಕ ಪ್ರದರ್ಶನ ತೋರಿದ್ದ ತಂಡಗಳು 2020-21ನೇ ಸಾಲಿನ ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿದ್ದು ಉತ್ತಮ ಆರಂಭ ಕಾಣುವಲ್ಲಿ ವಿಫಲವಾಗಿವೆ. ಎರಡೂ ತಂಡಗಳು ನೂತನ ಕೋಚಿಂಗ್ ತಂಡದೊಂದಿಗೆ ಹೊಸ ಫಲಿತಾಂಶಕ್ಕಾಗಿ ಹಾತೊರೆದಿದ್ದವು. ಆದರೆ ಒಡಿಶಾ ಮತ್ತು ಜೆಮ್ಷೆಡ್ಪುರ ಮೊದಲ ಪಂದ್ಯದಲ್ಲೇ ಸೋಲಿನ ಆಘಾತ ಅನುಭವಿಸಿದವು.

ಐಎಸ್‌ಎಲ್: ಗೋಲಿಲ್ಲದೆ ಅಂಕ ಹಂಚಿಕೊಂಡ ಹೈದರಾಬಾದ್, ಬೆಂಗಳೂರುಐಎಸ್‌ಎಲ್: ಗೋಲಿಲ್ಲದೆ ಅಂಕ ಹಂಚಿಕೊಂಡ ಹೈದರಾಬಾದ್, ಬೆಂಗಳೂರು

ಒಡಿಶಾ ತಂಡ ಹೈದರಾಬಾದ್ ವಿರುದ್ಧ 0-1 ಅಂತರದಲ್ಲಿ ಸೋಲನುಭವಿಸಿದರೆ, ಓವೆನ್ ಕೋಯ್ಲ್ ತರಬೇತಿಯಲ್ಲಿ ಪಳಗಿದ್ದ ಜೆಮ್ಷೆಡ್ಪುರ ತಂಡ ಚೆನ್ನೈಯಿನ್ ವಿರುದ್ಧ 1-2 ಗೋಲುಗಳ ಅಂತರದಲ್ಲಿ ಸೋಲುಂಡಿತು. ಎರಡೂ ತಂಡಗಳಿಗೂ ಈಗ ಜಯದ ಅನಿವಾರ್ಯತೆ ಇದೆ.

ಒಡಿಶಾ ತಂಡ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಈ ತಂಡದ ಡಿಫೆನ್ಸ್ ವಿಭಾಗ ಇನ್ನೂ ಸುಧಾರಣೆ ಕಾದಿರುವುದು. ಇದು ಕಳೆದ ಋತುವಿನಿಂದಲೂ ಮುಂದುವರಿದಿತ್ತು. ಹೈದರಾಬಾದ್ ವಿರುದ್ಧ ಆತಂಕದ ಆರಂಭ ಕಂಡ ಕಾರಣ ಕೋಚ್ ಸ್ಟುವರ್ಟ್ ಬಾಕ್ಸ್ಟರ್, ಪಿಚ್ಚಿನುದ್ದಕ್ಕೂ ಸಮಸ್ಯೆ ಕಂಡು ಬಂದಿದ್ದು, ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಲಾಗಿದೆ ಎಂದಿದ್ದಾರೆ. "ತಂಡದ ಸಮತೋಲನದಲ್ಲಿಯೇ ತಪ್ಪಿದೆ. ನಾವು ತಂಡದಲ್ಲೇ ಪ್ರತ್ಯೇಕವಾದವು ಎಂಬ ರೀತಿಯಲ್ಲಿ ಕೊನೆಗಾಣಿಸಿದೆವು. ನಾವು ಫಾರ್ವರ್ಡ್ ಆಟಗಾರರ ವರೆಗೂ ಚೆಂಡನ್ನು ತಲುಪಿಸುವಲ್ಲಿ ವಿಫಲರಾದೆವು. ನಾವು ಚೆಂಡು ದೊರೆತಾಗ ಇನ್ನೂ ಹೆಚ್ಚಿನ ತಾಳ್ಮೆ ವಹಿಸಬೇಕಾದ ಅಗತ್ಯ ಇದೆ," ಎಂದರು.

ನಿರಿಜಸ್ ವಾಸ್ಕೀಸ್ ಮತ್ತು ಜಾಕಿಚಾಂದ್ ಸಿಗ್ ಅವರು ಜೆಮ್ಷೆಡ್ಪುರದ ಡಿಫೆನ್ಸ್ ನಲ್ಲಿ ಇರುವುದರಿಂದ ಒಡಿಶಾ ಪಂದ್ಯದುದ್ದಕ್ಕೂ ಎಚ್ಚರಿಕೆಯ ಆಟ ಪ್ರದರ್ಶಿಸಬೇಕಾದ ಅಗತ್ಯ ಇದೆ. "ನಾವು ಇನ್ನೂ ಹೆಚ್ಚಿನ ಆಟಗಾರರ ಮೂಲಕ ರಕ್ಷಣೆ ಮತ್ತು ನಿಯಂತ್ರಣದ ಆಟ ಪ್ರದರ್ಶಿಸಬಲ್ಲೆವು.," ಎಂದಿರುವ ಬಾಕ್ಸ್ಟರ್, "ಡಿಫೆನ್ಸ್ ವಿಭಾಗದ ಸುಧಾರಣೆ ಕಡೆಗೆ ಗಮನ ಹರಿಸಿದ್ದೇವೆ, ಆದರೆ ಈ ರೀತಯ ಫಲಿತಾಂಶ ಬಂದ ಕೂಡಲೇ ಸಹಜವಾಗಿ ಮಾಡುವ ಪ್ರಕ್ರಿಯೆ ಇದಲ್ಲ," ಎಂದರು.

ಹಿಂದಿನ ಪಂದ್ಯದಲ್ಲಿ ಡಿಫೆಂಡರ್ ಗಳಾದ ಪೀಟರ್ ಹಾರ್ಟ್ಲೀ ಮತ್ತು ನರೇಂದರ್ ಘೆಲೋಟ್ ಅವರು ಗಾಯಗೊಂಡ ಕಾರಣ, ಕೊಯ್ಲ್ ಅವರು ಮೂರು ಅಂಕಗಳನ್ನು ಕಳೆದುಕೊಳ್ಳಬೇಕಾಯಿತು. ಇಬ್ಬರೂ ಆಟಗಾರರು ಮುಂದಿನ ಪಂದ್ಯಕ್ಕೆ ಸಂಶಯವಾಗಿದ್ದು, ಡೇವಿಡ್ ಗ್ರಾಂಡೆ ಅವರು ಪಂದ್ಯದಿಂದ ಹೊರಗುಳಿಯಲಿದ್ದಾರೆ. ಆಟಗಾರರಲ್ಲಿ ಒಗ್ಗಟ್ಟಿನ ಕೊರತೆ ಇದೆ ಎಂಬುದು ಕೊಯ್ಲ್ ಅವರ ಗಮನಕ್ಕೆ ಬಂದಿರುತ್ತದೆ, ಇದು ಸಾಮಾನ್ಯವಾಗಿ ಈ ತಂಡ ಮೊದಲ ಪಂದ್ಯದಲ್ಲಿ ಎದುರಿಸುತ್ತಿದೆ. ಆದರೆ ಮುಂದುವರಿದಂತೆ ಜೆಮ್ಷೆಡ್ಪುರ ುತ್ತಮ ತಂಡವಾಗಿ ರೂಪುಗೊಳ್ಳುತ್ತದೆ ಎಂದು ಕೋಚ್ ಹೇಳಿದ್ದಾರೆ.

ಬಿಬಿಎಲ್‌: ಮೆಲ್ಬರ್ನ್ ಸ್ಟಾರ್ಸ್ ಸೋಲಿಸಿ ಪ್ರಶಸ್ತಿ ಗೆದ್ದ ಸಿಡ್ನಿ ಥಂಡರ್ಸ್ಬಿಬಿಎಲ್‌: ಮೆಲ್ಬರ್ನ್ ಸ್ಟಾರ್ಸ್ ಸೋಲಿಸಿ ಪ್ರಶಸ್ತಿ ಗೆದ್ದ ಸಿಡ್ನಿ ಥಂಡರ್ಸ್

"ಹೊಸ ತಂಡವಾಗಿ ಜೆಮ್ಷೆಡ್ಪುರ ಪರಿಣಾಮಕಾರಿಯಾಗಿ ಆಡಿದೆ, ಕಳೆದ ವರ್ಷಕ್ಕಿಂತ ಈ ಬಾರಿ ಸಾಕಷ್ಟು ಬದಲಾವಣೆಯಾಗಿದೆ. ಆದರೆ ಮುಂದುವರಿದಂತೆ ನಾವು ಉತ್ತಮ ತಂಡವಾಗಿ ರೂಪುಗೊಳ್ಳಲಿದ್ದೇವೆ, ನಾವು ಕಠಿಣ ಶ್ರಮಪಟ್ಟಂತೆ ನಮ್ಮಲ್ಲಿ ಸುಧಾರಣೆ ಉತ್ತಮವಾಗುತ್ತದೆ,'' ಎಂದರು.

"ನಾವು ನಾಳೆಯ ಪಂದ್ಯವನ್ನು ಉತ್ತಮ ರೀತಿಯಲ್ಲಿ ಆರಂಭಿಸಲು ಉತ್ಸುಕರಾಗಿದ್ದೇವೆ. ಪಂದ್ಯದ ಮೇಲೆ ಹಿಡಿತ ಸಾಧಿಸಲು ಯತ್ನಿಸುವೆವು. ಆ ಅಮೂಲ್ಯ ಮೂರು ಅಂಕಗಳನ್ನು ಗಳಿಸಲು ಯತ್ನಿಸುವೆವು. ಏಕೆಂದರೆ ಮೂರು ಅಂಕಗಳು ನಿಮ್ಮನ್ನು ಲೀಗ್ ಪಟ್ಟಿಯಲ್ಲಿ ಐದು ಅಥವಾ ಆರನೇ ಸ್ಥಾನಕ್ಕೆ ಕೊಂಡೊಯ್ಯಬಹುದು," ಎಂದರು.

Story first published: Sunday, November 29, 2020, 11:09 [IST]
Other articles published on Nov 29, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X