ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಜೆಮ್ಷೆಡ್ಪುರ ವಿರುದ್ಧ ಸೋಲಿಗೆ ಶರಣಾದ ನಾರ್ಥ್ ಈಸ್ಟ್

By Isl Media
ISL: Jamshedpur hands NorthEast seasons first defeat in leagues landmark 500th game

ಗೋವಾ, ಡಿಸೆಂಬರ್ 18: ಹೀರೋ ಇಂಡಿಯನ್ ಸೂಪರ್ ಲೀಗ್ ನ 7ನೇ ಆವೃತ್ತಿಯಲ್ಲಿ ಸೋಲಿಲ್ಲದೆ ಆತ್ಮವಿಶ್ವಾಸದ ನಡೆಯಲ್ಲಿದ್ದ ನಾರ್ಥ್ ಈಸ್ಟ್ ಯುನೈಟೆಡ್ ಗೆ ಕೊನೆಗೂ ಸೋಲಿನ ಆಘಾತ. ಅನಿಕೇತ್ ಜಾಧವ್ (53ನೇ ನಿಮಿಷ) ಏಕೈಕ ಗೋಲಿನಿಂದ ಜೆಮ್ಷೆಡ್ಪುರ ಎಫ್ ಸಿ 1-0 ಗೋಲಿನ ಅಂತರದಲ್ಲಿ ನಾರ್ಥ್ ಈಸ್ಟ್ ಗೆ ಮೊದಲ ಸೋಲಿನ ಕಹಿಯುಣಿಸಿದೆ. ಇತ್ತಂಡಗಳು ತಮ್ಮ ಸಾಮರ್ಥ್ಯದ ಜತೆಯಲ್ಲಿ ಎದುರಾಳಿಯ ಸಾಮರ್ಥ್ಯವನ್ನೂ ಅರಿತಕೊಂಡಿದ್ದರೆ ಗೋಲಿಗಾಗಿ ಕಾಯಬೇಕಾಗುತ್ತದೆ.

ತೂತಾದ ಶೂ ಧರಿಸಿ ಮೈದಾನಕ್ಕಿಳಿದ ವೇಗಿ ಮೊಹಮ್ಮದ್ ಶಮಿ!ತೂತಾದ ಶೂ ಧರಿಸಿ ಮೈದಾನಕ್ಕಿಳಿದ ವೇಗಿ ಮೊಹಮ್ಮದ್ ಶಮಿ!

ನಾರ್ಥ್ ಈಸ್ಟ್ ಮತ್ತು ಜೆಮ್ಷೆಡ್ಪುರ ನಡುವಿನ ಪಂದ್ಯದ ಪ್ರಥಮಾರ್ಧ ಹಾಗೆಯೇ ಆಯಿತು. ಇತ್ತಂಡಗಳು ಗೋಲಿಲ್ಲದೆ ತೃಪ್ತರಾಗಬೇಕಾಯಿತು. ಇತ್ತಂಡಗಳ ಯಾವುದೇ ಯೋಜನೆಯೂ ಗೋಲಿಗೆ ನೆರವಾಗಲಿಲ್ಲ. ಎರಡೂ ತಂಡಗಳು ಗೋಲು ಗಳಿಸಲು ಸೂಕ್ತವಾದ ಅವಕಾಶವನ್ನು ರೂಪಿಸುವಲ್ಲಿ ವಿಫಲವಾದವು.

3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದು ಗಮನ ಸೆಳೆದ ಬೂಮ್ರಾ3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದು ಗಮನ ಸೆಳೆದ ಬೂಮ್ರಾ

ಸ್ಟೀಫನ್ ಎಝಿಗೆ ಉತ್ತಮ ಅವಕಾಶ ಕೂಡಿ ಬಂದರೂ ಎದುರಾಳಿಯ ರಣತಂತ್ರದಲ್ಲಿ ಅದು ವಿಫಲವಾಯಿತು. ದ್ವಿತಯಾರರ್ಧಲ್ಲಿ ಗೋಲು ಗಳಿಸುವ ನಿರೀಕ್ಷೆ ಚಾಲ್ತಿಯಲ್ಲಿರಲಿ ಎಂಬಂತೆ ಇತ್ತಂಡಗಳು ಆತ್ಮವಿಶ್ವಾಸ ವಿರಾಮ ಪಡೆದವು.

ನಾರ್ಥ್ ಈಸ್ಟ್ ಗೆ ಅಜೇಯದ ಗುರಿ

ನಾರ್ಥ್ ಈಸ್ಟ್ ಗೆ ಅಜೇಯದ ಗುರಿ

ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಅಜೇಯದ ನಡೆಯಲ್ಲಿ ಸಾಗುತ್ತಿರುವ ನಾರ್ಥ್ ಈಸ್ಟ್ ಯುನೈಟೆಡ್ ತಂಡ ಮತ್ತೊಂದು ಜಯವನ್ನು ಗಮನದಲ್ಲಿರಿಸಿಕೊಂಡು ಜೆಮ್ಷೆಡ್ಪುರ ವಿರುದ್ಧ ಅಂಗಣಕ್ಕಿಳಿಯಿತು. ಮರುದಾಳಿಯನ್ನೇ ಅಸ್ತ್ರವಾಗಿರಿಸಿಕೊಂಡಿರುವ ಪರ್ವತತಪ್ಪಲಿನ ತಂಡ ಇದುವರೆಗೂ ಯಶಸ್ಸಿನ ಹಾದಿ ತುಳಿದಿದೆ. ಪ್ರತಿಯೊಂದು ಪಂದ್ಯದಲ್ಲೂ ಬ್ರೇಕ್ ನ ನಂತರ ನೈಜ ಆಟ ಪ್ರದರ್ಶಿಸುವ ಅದರಲ್ಲಿ ಯಶಸ್ಸು ಕಂಡಿದೆ. ಮಿಡ್ ಫೀಲ್ಡ್ ನಲ್ಲಿ ಖಾಸ್ಸಾ ಕಮರಾ ತಂಡದ ಪರ ಉತ್ತಮ ರೀತಿಯಲ್ಲಿ ಪ್ರದರ್ಶನ ತೋರಿದ್ದಾರೆ. ಎದುರಾಳಿ ತಂಡದ ದಾಳಿಗೆ ಪ್ರತಿದಾಳಿ ನೀಡುವುದರ ಜತೆಯಲ್ಲಿ ಕಮರಾ ಗೋಲು ಗಳಿಸುವ ಹಲವಾರು ಅವಕಾಶಗಳನ್ನು ಸೃಷ್ಟಿಸಿದ್ದಾರೆ.

ಸವಾಲೊಟ್ಟುವ ತಂಡ

ಸವಾಲೊಟ್ಟುವ ತಂಡ

ನಾರ್ಥ್ ಈಸ್ಟ್ ನ ಇಡ್ರಿಸಾ ಸಿಲ್ಲಾ, ನಿನ್ಥೋಯಿಂಗಂಬಾ ಮೀತೈ, ಕ್ವೆಸಿ ಅಪ್ಪಿಯ್ಯ ಮತ್ತು ಲೂಯಿಸ್ ಮಚಾಡೋ ಅವರಿಂದಾಗಿ ನಾರ್ಥ್ ಈಸ್ಟ್ ಈಗ ಎಲ್ಲ ತಂಡಗಳಿಗೂ ಸವಾಲೊಟ್ಟುವ ತಂಡವಾಗಿ ಬೆಳೆದು ನಿಂತಿದೆ. ಡಿಫೆನ್ಸ್ ವಿಭಾಗದಲ್ಲಿ ಶಿಸ್ತಿನ ಆಟ ಪ್ರದರ್ಶಿಸುತ್ತಿರುವುದೇ ನಾರ್ಥ್ ಈಸ್ಟ್ ನ ಯಶಸ್ಸಿಗೆ ಪ್ರಮುಖ ಕಾರಣ. ಇದರಿಂದಾಗಿ ಇದುವರೆಗೂ ಮೂರು ಕ್ಲೀನ್ ಶೀಟ್ ಸಾಧನೆ ಮಾಡಿದೆ. ಕಳೆದ ಐದು ಪಂದ್ಯಗಳಲ್ಲಿ ಅಜೇಯವಾಗಿ ಉಳಿದಿದೆ. ಐಟರ್ ಮನ್ರೊಯ್ ಅವರ ಅನುಪಸ್ಥಿತಿಯಲ್ಲಿ ರೆಡ್ ಮೈನರ್ಸ್ ಖ್ಯಾತಿಯ ಜೆಮ್ಷೆಡ್ಪುರ ಎಫ್ ಸಿ ಅಂಗಣಕ್ಕಿಳಿಯಿತು. ಮನ್ರೊಯ್ ಹಿಂದಿನ ಪಂದ್ಯದಲ್ಲಿ ರೆಡ್ ಕಾರ್ಡ್ ಪಡೆದು ಅಮಾನತುಗೊಂಡಿದ್ದರು. ಇದರಿಂದಾಗಿ ತಂಡ ಹೆಚ್ಚಾಗಿ ನೆರಿಜಸ್ ವಾಸ್ಕಿಸ್ ಅವರ ಮೇಲೆ ಅವಲಂಬಿತವಾಗಿದೆ.

ತಂಡಕ್ಕೆ ಉಕ್ಕಿನ ಭದ್ರತೆ

ತಂಡಕ್ಕೆ ಉಕ್ಕಿನ ಭದ್ರತೆ

ಜೆಮ್ಷೆಡ್ಪುರ ಗಳಿಸಿರುವ 7 ಗೋಲುಗಳಲ್ಲಿ ಲಿಥುವೇನಿಯಾದ ಆಟಗಾರ 6ನ್ನು ತನ್ನ ಹೆಸರಿನಲ್ಲಿ ದಾಖಲಿಸಿಕೊಂಡಿದ್ದಾರೆ. ಮುಂಬೈ ಸಿಟಿ ತಂಡದ ವಿರುದ್ಧ ತೋರಿದ ಪ್ರದರ್ಶನಕ್ಕೆ ಕೋಚ್ ಓವೆನ್ ಕೊಯ್ಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೇವಲ ಹತ್ತು ಮಂದಿ ಆಟಗಾರರಿದ್ದರೂ ಗೋಲಿನ ಮಳೆಯನ್ನೇ ಕರೆಯಬಲ್ಲ ಮುಂಬೈಗೆ ಒಂದೇ ಒಂದು ಗೋಲು ಗಳಿಸಲು ಅವಕಾಶ ನೀಡದಿರುವುದು ವಿಶೇಷ. ಪೀಟರ್ ಹರ್ಟ್ಲೀ ಹಾಗೂ ಸ್ಟೀಫನ್ ಎಝಿ ತಂಡಕ್ಕೆ ಉಕ್ಕಿನ ಭದ್ರತೆ ನೀಡಿದ್ದಾರೆ. ಈ ಋತುವಿನಲ್ಲಿ ಇದುವರೆಗೂ 18 ಸಾಧ್ಯತೆಯ ಗೋಲುಗಳನ್ನು ತಡೆದಿರುವ ಟಿಪಿ ರೆಹನೇಶ್ ತಂಡಕ್ಕೆ ಆಧಾರ ಎನಿಸಿದ್ದಾರೆ.

Story first published: Friday, December 18, 2020, 23:57 [IST]
Other articles published on Dec 18, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X