ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್ಎಲ್ : ಮನೆಯಂಗಣದಿ ಕೊಚ್ಚಿಗೆ ಕೊನೆಗೊಂದು ಗೆಲ್ಲುವ ಹಂಬಲ

0ISL : Kerala look for home comfort against weakened NorthEast

ಕೊಚ್ಚಿ, ಫೆಬ್ರವರಿ 28: ಈ ಬಾರಿಯ ಹೀರೋ ಇಂಡಿಯನ್ ಸೂಪರ್ ಲೀಗ್‌ನ ಕೊನೆಯ ಪಂದ್ಯವನ್ನಾಡುತ್ತಿರುವ ಕೇರಳ ತಂಡ ಮನೆಯಂಗಣದಲ್ಲಿ ನಾರ್ತ್ ಈಸ್ಟ್ ಯುನೈಟೆಡ್ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಜಯ ಗಳಿಸಿ ತವರಿನ ಪ್ರೇಕ್ಷಕರಿಗೆ ಖುಷಿ ನೀಡುವ ಗುರಿ ಹೊಂದಿದೆ.

ಐಎಸ್‌ಎಲ್ 2019: ಎರಡನೇ ಸ್ಥಾನಕ್ಕೆ ಜಿಗಿಯುವತ್ತ ಗೋವಾ ಚಿತ್ತಐಎಸ್‌ಎಲ್ 2019: ಎರಡನೇ ಸ್ಥಾನಕ್ಕೆ ಜಿಗಿಯುವತ್ತ ಗೋವಾ ಚಿತ್ತ

ಕೇರಳ ಬ್ಲಾಸ್ಟರ್ಸ್ ತಂಡ ಈ ಋತುವಿನಲ್ಲಿ ಅತ್ಯಂತ ಹೀನಾಯ ಪ್ರದರ್ಶನ ತೋರಿದೆ. ಎಟಿಕೆ ವಿರುದ್ಧ ಮೊದಲ ಪಂದ್ಯದಲ್ಲಿ ಜಯ ಗಳಿಸಿದ ನಂತರ ನಿರಂತರ 14 ಪಂದ್ಯಗಳಲ್ಲಿ ಕೇರಳ ಜಯ ಕಂಡಿರಲಿಲ್ಲ. ಕೊನೆಗೂ ಈ ಹಿಂದಿನ ಪಂದ್ಯದಲ್ಲಿ ಮನೆಯಂಗಣದಲ್ಲಿ ಚೆನ್ನೈಯಿನ್ ಎಫ್ಸಿ ವಿರುದ್ಧ ಗೆಲ್ಲುವ ಮೂಲಕ ಕೇರಳ ಎರಡನೇ ಜಯ ಗಳಿಸಿತು.

0ISL : Kerala look for home comfort against weakened NorthEast

'ನಾಳೆಗೆ ಕೊನೆಯ ಪಂದ್ಯವಾಗಿರುವುದರಿಂದ ಗೆಲ್ಲಲೇಬೇಕಾಗಿದೆ. ನಾರ್ತ್ ಈಸ್ಟ್ ಯುನೈಟೆಡ್ ತಂಡವೆಂದರೆ ನನಗೆ ವಿಶೇಷ. ಏಕೆಂದರೆ 2016ರಲ್ಲಿ ಭಾರತಕ್ಕೆ ಆಗಮಿಸುವ ಅವಕಾಶವನ್ನು ಕಲ್ಪಿಸಿದ್ದು, ಆ ಕ್ಲಬ್. ಪ್ಲೇ ಆಫ್ ಹಂತವನ್ನು ತಲುಪಿರುವ ನಾರ್ತ್ ಈಸ್ಟ್‌ಗೆ ಅಭಿನಂದನೆಗಳು,' ಎಂದು ಕೇರಳ ಬ್ಲಾಸ್ಟರ್ಸ್ ತಂಡದ ಕೋಚ್ ಹೇಳಿದ್ದಾರೆ.

ಮ್ಯಾಕ್ಸ್‌ವೆಲ್ ಆರ್ಭಟ, ಭಾರತ ವಿರುದ್ಧ ಟಿ20 ಸರಣಿ ಗೆದ್ದ ಆಸ್ಟ್ರೇಲಿಯಾ! ಮ್ಯಾಕ್ಸ್‌ವೆಲ್ ಆರ್ಭಟ, ಭಾರತ ವಿರುದ್ಧ ಟಿ20 ಸರಣಿ ಗೆದ್ದ ಆಸ್ಟ್ರೇಲಿಯಾ!

ಈಗಾಗಲೇ ಪ್ಲೇ ಆಫ್ ನಲ್ಲಿ ಸ್ಥಾನ ಪಡೆದಿರುವ ನಾರ್ತ್ ಈಸ್ಟ್ ತಂಡ 17 ಪಂದ್ಯಗಳಲ್ಲಿ 28 ಅಂಕಗಳನ್ನು ಗಳಿಸಿದೆ. ಮುಂಬೈ 30 ಅಂಕಗಳನ್ನು ಗಳಿಸಿದ್ದು, ಆ ತಂಡವೂ ಕೊನೆಯ ಪಂದ್ಯವನ್ನಾಡಲಿದೆ, ಈ ಹಿನ್ನೆಲೆಯಲ್ಲಿ ನಾರ್ತ್ ಈಸ್ಟ್ ಕೇರಳ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ಮೇಲಕ್ಕೇರುವ ಗುರಿ ಹೊಂದಿದೆ.

0ISL : Kerala look for home comfort against weakened NorthEast

ತಂಡದಲ್ಲಿ ಆಟಗಾರರು ಗಾಯಗೊಂಡಿರುವುದು ಹಾಗೂ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ತೋರದಿರುವ ಹಿನ್ನೆಲೆಯಲ್ಲಿ ಎಲ್ಕೋ ಷೆಟೋರಿ ಹಲವು ಬಾರಿ ತಂಡವನ್ನು ಬದಲಾಯಿಸುತ್ತಿದ್ದರು. 'ಈ ಹಂತದಲ್ಲಿ ನಮ್ಮ ತಂಡದಲ್ಲಿ ಐವರು ಆಟಗಾರರು ಗಾಯದಿಂದ ಬಳಲುತ್ತಿದ್ದಾರೆ. ಇಂದು ಅಂಗಣದಲ್ಲಿ ಕೇವಲ 18 ಆಟಗಾರರು ಸೇರಿದ್ದರು.

ಭಾರತ vs ಪಾಕಿಸ್ತಾನ: ಎಲ್ಲಾ ಪಂದ್ಯಗಳೂ ಮುಖ್ಯ ಎಂದ ಜೂಲನ್ ಗೋಸ್ವಾಮಿ ಭಾರತ vs ಪಾಕಿಸ್ತಾನ: ಎಲ್ಲಾ ಪಂದ್ಯಗಳೂ ಮುಖ್ಯ ಎಂದ ಜೂಲನ್ ಗೋಸ್ವಾಮಿ

ಅದರಲ್ಲೂ ಇಬ್ಬರು ಅಮಾನತುಗೊಂಡಿರುವುದರಿಂದ ಸಂಖ್ಯೆ 16ಕ್ಕೆ ಕುಸಿದಿದೆ. ಮತ್ತೆ ಮೂವರು ಮೂರು ಯಲ್ಲೋ ಕಾರ್ಡ್ ಗಳಿದವರಾಗಿದ್ದಾರೆ. ಅದರ್ಥ ಈ ಆಟಗಾರರನ್ನು ಅಂಗಣಕ್ಕಿಳಿಸಲಾಗದು. ಪ್ಲೇ ಆಫ್ ನಲ್ಲಿ ಅದು ಅಪಾಯಕಾರಿ. 13 ಆಟಗಾರರಲ್ಲಿ ನಾಲ್ವರು ಆಟಗಾರರು ಈ ಋತುವಿನಲ್ಲೇ ಆಡಿರಲಿಲ್ಲ. ಆದ್ದರಿಂದ ಅವರಲ್ಲಿ ಮ್ಯಾಚ್ ಫಿಟ್ನೆಸ್ ಇಲ್ಲ ಎನ್ನಬಹುದು.' ಎಂದು ಡಚ್ ಮೂಲದ ಕೋಚ್ ಹೇಳಿದ್ದಾರೆ.

0ISL : Kerala look for home comfort against weakened NorthEast

ಗೋಲ್‌ಕೀಪರ್ ಟಿಪಿ ರೆಹನೇಶ್ ಹಾಗೂ ಪವನ್ ಕುಮಾರ್ ಗಾಯಗೊಂಡಿದ್ದಾರೆ. ಜೋಸ್ ಲ್ಯೂಡೋ ಪುಣೆ ವಿರುದ್ಧದ ಪಂದ್ಯದಲ್ಲಿ ರೆಡ್ ಕಾರ್ಡ್ ಗಳಿಸಿದ್ದಾರೆ.

ಷೆಟೋರಿಗೆ ಈಗ ಬೇರೆ ಆಯ್ಕೆಯೇ ಇಲ್ಲ. ಕೇರಳ ವಿರುದ್ಧ ತಂಡ ದುರ್ಬಲವಾಗಿರುವುದು ಸ್ಪಷ್ಟ. ತಂಡ ಪ್ಲೇ ಆಫ್ ಹಂತ ತಲುಪಿರುವುದೇ ಸಂತಸದ ವಿಚಾರ. ಬೆಂಗಳೂರು ತಂಡ ಜೆಮ್ಷೆಡ್ಪುರ ವಿರುದ್ಧ ಇದೇ ರೀತಿಯ ಯೋಜನೆ ಹಾಕಿ 5-1 ಗೋಲುಗಳಿಂದ ಸೋಲನ್ನು ಅನುಭವಿಸಿತು. ಮೊದಲ ಬಾರಿಗೆ ಪ್ಲೇ ಆಫ್ ತಲುಪಿರುವ ತಂಡದಲ್ಲಿರುವ ಉಲ್ಲಾಸವನ್ನು ಕಡಿಮೆಗೊಳಿಸುವ ಉದ್ದೇಶ ಕೋಚ್‌ಗೆ, ಇಲ್ಲ, ಉತ್ತಮ ಆಟಗಾರರನ್ನೇ ಅಂಗಣಕ್ಕಿಳಿಸುವ ಗುರಿ ಹೊಂದಿದ್ದಾರೆ.

Story first published: Thursday, February 28, 2019, 20:52 [IST]
Other articles published on Feb 28, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X