ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಬೆಂಗಳೂರು ವಿರುದ್ಧ ವಿಶೇಷ ಜಯದ ನಿರೀಕ್ಷೆಯಲ್ಲಿ ಲಾಸ್ಜ್ಲೊ

By Isl Media
ISL: Laszlo sniffs win in special game against Bengaluru

ಗೋವಾ, ಡಿಸೆಂಬರ್ 3: ಇಲ್ಲಿನ ಜಿಎಂಸಿ ಕ್ರೀಡಾಂಗಣಲ್ಲಿ ಶುಕ್ರವಾರ ನಡೆಯಲಿರುವ ಹೀರೋ ಇಂಡಿಯನ್ ಸೂಪರ್ ಲಿಗ್ ನ ಪಂದ್ಯದಲ್ಲಿ ಚೆನ್ನೈಯಿನ್ ಎಫ್ ಸಿ ತಂಡ ಬದ್ಧ ಎದುರಾಳಿ ಬೆಂಗಳೂರು ಎಫ್‌ಸಿ ವಿರುದ್ಧ ಜಯದ ಲಯಕ್ಕೆ ಮರಳುವ ಗುರಿ ಹೊಂದಿದೆ.

ಜೆಮ್ಷೆಡ್ಪುರ ಎಫ್ ಸಿ ವಿರುದ್ಧದ ಮೊದಲ ಪಂದ್ಯದಲ್ಲಿ ಜಯ ಗಳಿಸುವ ಮೂಲಕ ಉತ್ತಮ ರೀತಿಯಲ್ಲಿ ಋತುವಿನ ಆರಂಭ ಕಂಡ ಚೆನ್ನೈಯಿನ್ ತಂಡ ಕೇರಳ ಬ್ಲಾಸ್ಟರ್ಸ್ ವಿರುದ್ಧ ಡ್ರಾ ಸಾಧಿಸಿತ್ತು. ಸತತ ಎರಡು ಡ್ರಾ ಕಂಡು ಇನ್ನೂ ಜಯದ ರುಚಿ ಕಂಡಿರದ ಬೆಂಗಳೂರನ್ನು ಸೋಲುಣಿಸುವ ಗುರಿಯನ್ನು ಚೆನ್ನೈ ತಂಡ ಹೊಂದಿದೆ.

ಐಎಸ್‌ಎಲ್ 2020: ಅಂಕ ಹಂಚಿಕೊಂಡ ಹೈದಾಬಾದ್-ಜೆಮ್ಷೆಡ್ಪುರ್ಐಎಸ್‌ಎಲ್ 2020: ಅಂಕ ಹಂಚಿಕೊಂಡ ಹೈದಾಬಾದ್-ಜೆಮ್ಷೆಡ್ಪುರ್

ಚೆನ್ನೈಯಿನ್ ಹಾಗೂ ಬೆಂಗಳೂರು ನಡುವಿನ ಪಂದ್ಯ ಎಂದಾಗ ಅಲ್ಲಿ ಆಟಗಾರರ ನಡುವಿನ ಹೋರಾಟಕ್ಕಿಂತ ಅಭಿಮಾನಿಗಳ ನಡುವಿನ ಹೋರಾಟವೇ ಪ್ರಮುಖವಾಗಿರುತ್ತವೆ. ಇದರಿಂದಾಗಿ ಈ ಎರಡು ತಂಡಗಳ ನಡುವಿನ ಪಂದ್ಯ ಐಎಸ್ಎಲ್ ನಲ್ಲಿ ವಿಶೇಷ ಎನಿಸಿದೆ. ಇಲ್ಲಿ ಎರಡೂ ತಂಡಗಳ ಮುಖ್ಯ ಉದ್ದೇಶ ಸೋಲಬಾರದು...ಅಷ್ಟೆ.

"ಇದು ವಿಶೇಷ ಪಂದ್ಯ, ಇದು ನಮಗೆ ಡರ್ಬಿ ಇದ್ದಂತೆ. ಮೂರು ಅಂಕಗಳನ್ನು ಗಳಿಸಲು ನಾವು ನಮ್ಮಿಂದಾದ ಎಲ್ಲ ಪ್ರಯತ್ನವನ್ನೂ ಮಾಡುತ್ತೇವೆ. ಇಲ್ಲಿ ಮೂರು ಅಂಕಗಳನ್ನು ಗಳಿಸುವುದರಿಂದ ನಾವು ಅಂಕಪಟ್ಟಿಯಲ್ಲಿ ಸುಸ್ಥಿತಿಯನ್ನು ತಲುಪಬಹುದು," ಎಂದರು. ಡಿಫೆನ್ಸ್ ವಿಭಾಗವು ಅಟ್ಯಾಕ್ ವಿಭಾಗಕ್ಕೆ ಮೂರು ಅಂಕಗಳನ್ನು ಗಳಿಸಲು ಎಲ್ಲ ರೀತಿಯಲ್ಲಿ ಬೆಂಬಲ ನೀಡಲಿದೆ ಎಂದು ಅವರು ನಂಬಿದ್ದಾರೆ. ಆಡಿರುವ ಎರಡು ಪಂದ್ಯಗಳಲ್ಲಿ ಕೇವಲ ಒಂದು ಗೋಲನ್ನು ಎದುರಾಳಿ ತಂಡಕ್ಕೆ ನೀಡಿರುವ ಚೆನ್ನೈಯಿನ್ ತಂಡದ ಡಿಫೆನ್ಸ್ ವಿಭಾಗ ಐಎಸ್ಎಲ್ ನಲ್ಲಿ ಇದೇ ಮೊದಲ ಬಾರಿಗೆ ಉತ್ತಮ ಆರಂಭ ಕಂಡಿದೆ. ಎಲಿ ಸಾಬಿಯಾ ಮತ್ತು ಎನಸ್ ಸಿಪೋವಿಕ್ ನಿಜವಾಗಿಯೂ ಉತ್ತಮ ರೀತಿಯಲ್ಲಿ ಆಡುತ್ತಿದ್ದಾರೆ.

ಬೆಂಗಳೂರು ತಂಡದ ಕೋಚ್ ಕಾರ್ಲಸ್ ಕ್ಬಾಡ್ರಾಟ್ ಅವರಿಗೆ ಹಲವಾರು ಸಮಸ್ಯೆಗಳು ಎದುರಾಗಿವೆ. ಕಳೆದ ಯಾವುದೇ ಋತುವಿನಲ್ಲಿ ಬೆಂಗಳೂರು ತಂಡ ಈ ರೀತಿಯಾಗಿ ದಾಳಿ ವಿಭಾಗದಲ್ಲಿ ವೈಫಲ್ಯವನ್ನು ಕಂಡಿರಲಿಲ್ಲ. ಹಿಂದಿನ ಎರಡು ಪಂದ್ಯಗಳಲ್ಲಿ ಬೆಂಗಳೂರು ತಂಡ ಕೇವಲ 12 ಬಾರಿ ಚೆಂಡನ್ನು ಗುರಿಯಿಟ್ಟು ತುಳಿಯುವ ಅವಕಾಶವನ್ನು ಪಡೆದಿದೆ. ಅದರಲ್ಲಿ ಕೇವಲ ಮೂರು ಗೋಲ್ ಬಾಕ್ಸ್ ಕಡೆಗೆ ಗುರಿಯಾಗಿತ್ತು. ಇದುವರೆಗೂ ನಡೆದ ಪಂದ್ಯಗಳಲ್ಲಿ ತಂಡವೊಂದು ತೋರಿದ ಕಳಪೆ ಅಂಕಿಅಂಶ ಇದಾಗಿದೆ. ಸುನಿಲ್ ಛೆಟ್ರಿ, ಕ್ಲಿಂಟನ್ ಸಿಲ್ವಾ ಮತ್ತು ಕ್ರಿಸ್ಟಿಯನ್ ಆಪ್ಸೆತ್ ಇದುವರೆಗೂ ನೈಜ ಸಾಮರ್ಥ್ಯ ತೋರಲಿಲ್ಲ.

ಐಎಸ್‌ಎಲ್: ಮುಂಬೈ ವಿರುದ್ಧ ಸೋತ ಈಸ್ಟ್ ಬೆಂಗಾಲ್ ಕಂಗಾಲ್!ಐಎಸ್‌ಎಲ್: ಮುಂಬೈ ವಿರುದ್ಧ ಸೋತ ಈಸ್ಟ್ ಬೆಂಗಾಲ್ ಕಂಗಾಲ್!

ಆದರೆ ಕ್ವಾಡ್ರಾಟ್ ತಂಡದ ಸಾಮರ್ಥ್ಯದ ಬಗ್ಗೆ ಧನಾತ್ಮಕ ನಿಲುವನ್ನು ಹೊಂದಿದ್ದಾರೆ. "ನಮ್ಮ ತಂಡ ಇದುವರೆಗೂ ಸ್ಥಿರ ಪ್ರದರ್ಶನ ನೀಡುತ್ತ ಬಂದಿದೆ. ನಮ್ಮ ಡಿಫೆನ್ಸ್ ವಿಭಾಗವೂ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದೆ. ಗೋವಾ ವಿರುದ್ಧದ ಪಂದ್ಯದಲ್ಲಿ ನಾವು ಕೊಂಚ ಎಡವಿದೆವು. ಅಲ್ಲಿ ಎಲ್ಲ ತಂಡಗಳು ಗೋಲು ಗಳಿಸಿವೆ. ಪಂದ್ಯದ ಇತರ ಸಂದರ್ಭಗಳಲ್ಲಿ ನಾವು ಪಂದ್ಯದ ಮೇಲೆ ಹಿಡಿತ ಸಾಧಿಸಿದೆವು, ಹೈದರಾಬಾದ್ ವಿರುದ್ಧವೂ ಉತ್ತಮವಾಗಿ ಆಡಿದೆವು, ಎರಡೂ ಪಂದ್ಯಗಳಲ್ಲಿ ಎದುರಾಳಿಗಳು ಅವಕಾಶಕ್ಕೆ ಅನುವುಮಾಡಿಕೊಡಲಿಲ್ಲ. ನಾವು ಸೂಧಾರಿಸಿಕೊಳ್ಳಬೇಕಿದೆ ಎಂಬುದು ನಮ್ಮಲ್ಲಿ ಎಲ್ಲರಿಗೂ ಗೊತ್ತಿದೆ, ಆ ಬಗ್ಗೆ ನಾವು ಕೆಲಸ ಮಾಡುತ್ತಿದ್ದೇವೆ," ಎಂದರು.

Story first published: Thursday, December 3, 2020, 17:45 [IST]
Other articles published on Dec 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X