ಐಎಸ್‌ಎಲ್: ಹೈದರಾಬಾದ್ ಎಫ್‌ಸಿ, ಮುಂಬೈ ಸಿಟಿ ನಡುವೆ ರೋಚಕ ಪಂದ್ಯ

By Isl Media

ಗೋವಾ, ಡಿ. 19: ಹೀರೋ ಇಂಡಿಯನ್ ಸೂಪರ್ ಲೀಗ್ ಸೀಸನ್ 7ರ ಸರಣಿಯಲ್ಲಿ ಉತ್ತಮ ಆರಂಭ ಪಡೆದಿರುವ ಹೈದರಾಬಾದ್ ಎಫ್‌ಸಿ ತಂಡ ಭಾನುವಾರ ತಿಲಕ್ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಅಂಕ ಪಟ್ಟಿಯಲ್ಲಿ ಅಗ್ರಶ್ರೇಯಾಂಕದಲ್ಲಿರುವ ಮುಂಬೈ ಸಿಟಿ ಎಫ್‌ಸಿಯನ್ನು ಮಣಿಸಿ ಅಜೇಯ ಓಟವನ್ನು ಮುಂದುವರೆಸುವ ವಿಶ್ವಾಸದೊಂದಿಗೆ ಕಣಕ್ಕಿಳಿಯಲಿದೆ. ಹಿಂದಿನ ಪಂದ್ಯದಲ್ಲಿ ಎಸ್‌ಸಿ ಈಸ್ಟ್ ಬೆಂಗಾಲ್ ತಂಡವನ್ನು ಮಣಿಸಿದ್ದ ಮನೋಲೋ ಮಾರ್ಕ್ವಿಜ್‌ನ ಹೈದರಾಬಾದ್ ಎಫ್‌ಸಿ ಹುಡುಗರು ಒಂದು ಗೋಲ್‌ನಿಂದ ತಿರುಗಿ ಬಿದ್ದರು.

ಆಸ್ಟ್ರೇಲಿಯಾ ವಿರುದ್ಧ ಅತೀ ಕೆಟ್ಟ ದಾಖಲೆ ನಿರ್ಮಿಸಿದ ಟೀಮ್ ಇಂಡಿಯಾ!

ಆದರೆ ಜೆಮ್‌ಶೆಡ್‌ಪುರ್ ಎಫ್‌ಸಿ ವಿರುದ್ಧ 1-1 ರಿಂದ ನಿರಾಶಾದಾಯಕ ಡ್ರಾ ಮಾಡಿಕೊಂಡಿರುವ ಮುಂಬೈ ತಂಡವನ್ನು ಎದುರಿಸುವ ಕಠಿಣ ಹಾದಿ ಇವರ ಮುಂದಿದೆ. ಆದರೆ ಮಾರ್ಕ್ವಿಜ್‌ನ ಹುಡುಗರಿಗೆ ಇದು ಅಷ್ಟು ಸುಲಭದ ತುತ್ತಲ್ಲ. ನನ್ನ ಅಭಿಪ್ರಾಯದಲ್ಲಿ ಈ ಸರಣಿಯನ್ನು ಗೆಲ್ಲುವ ಸಾಮರ್ಥ್ಯ ಮುಂಬೈ ಸಿಟಿ ತಂಡಕ್ಕಿದೆ ಎನ್ನುತ್ತಾರೆ ಮಾರ್ಕ್ವಿಜ್.

ಟೆಸ್ಟ್‌ನಲ್ಲಿ ಅತೀ ಕಡಿಮೆ ರನ್ ದಾಖಲೆಗಳ ಪಟ್ಟಿಗೆ ಭಾರತ ಸೇರ್ಪಡೆ!

ಅದೊಂದು ಉತ್ತಮ ಕೋಚ್ ಹೊಂದಿರುವ ಅತ್ಯುತ್ತಮ ತಂಡ. ಅವರು ಉತ್ತಮ ಆಟ ಆಡುತ್ತಿದ್ದಾರೆ. ಸೆಟ್ ಫೀಸ್‌ನಲ್ಲೂ ಅವರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ನಮಗೆ ಮುಂಬೈ ಸಿಟಿ ಮೇಲಿನ ಭಾನುವಾರದ ಪಂದ್ಯ ಕಠಿಣ ಸವಾಲಾಗಬಹುದು ಎನ್ನುತ್ತಾರೆ ಮಾರ್ಕ್ವಿಜ್.

3 ಅಂಕಗಳನ್ನು ನಾವು ಪಡೆಯುತ್ತೇವೆ

3 ಅಂಕಗಳನ್ನು ನಾವು ಪಡೆಯುತ್ತೇವೆ

ಮುಂಬೈ ಸಿಟಿ ಎಷ್ಟೇ ಉತ್ತಮ ತಂಡವಾಗಿದ್ದರೂ ನಮಗೆ ಎಷ್ಟೆ ಕಠಿಣ ಸವಾಲಾಗಿದ್ದರೂ ಬೇಕಾಗಿರುವ 3 ಅಂಕಗಳನ್ನು ನಾವು ಪಡೆಯುತ್ತೇವೆ. ನಾವು ಈ ಪಂದ್ಯವನ್ನು ಗೆಲ್ಲುವ ಎಲ್ಲ ಸಾಧ್ಯತೆಗಳನ್ನು ಹೊಂದಿದ್ದೇವೆ. ಗೆಲುವು ಅಥವಾ ಸೋಲು ತಂಡದ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ. ನಾವು ಭಾನುವಾರದ ಪಂದ್ಯಕ್ಕಾಗಿ ಸಂಪೂರ್ಣ ಸಜ್ಜಾಗಿದ್ದು ನಮ್ಮ ವಿರೋಧಿ ತಂಡ ಆಟದ ವಿಡಿಯೋ ತುಣುಕನ್ನು ಅಭ್ಯಸಿಸಿದ್ದೇವೆ. ಬಾಲನ್ನು ಅವರನ್ನು ತಮ್ಮಲ್ಲಿ ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸುವಂತೆ ನಮ್ಮ ತಂಡವು ಪ್ರಯತ್ನಿಸುತ್ತದೆ ಎನ್ನುತ್ತಾರೆ.

ಆಟವಾಡುವಲ್ಲಿ ವಿಫಲವಾಯಿತು

ಆಟವಾಡುವಲ್ಲಿ ವಿಫಲವಾಯಿತು

ಅಂಕ ಪಟ್ಟಿಯಲ್ಲಿ ಎಟಿಕೆ ಮೋಹನ್ ಬಗಾನ್ ತಂಡದೊಂದಿಗೆ ಮುಂಬೈ ಸಿಟಿ ತಂಡ ಮೇಲಿದೆ. ಆದರೂ ಮುಂಬೈ ಸಿಟಿ ತಂಡ, ಜೆಮ್‌ಶೆಡ್‌ಪುರ ಎಫ್‌ಸಿ ತಂಡದ ವಿರುದ್ಧ ತನ್ನ ಸಾಮರ್ಥ್ಯಕ್ಕೆ ತಕ್ಕದಾದ ಆಟವಾಡುವಲ್ಲಿ ವಿಫಲವಾಯಿತು ಎನ್ನುತ್ತಾರೆ ಕೋಚ್ ಸೆರ್ಗೀಯೋ ಲೊಬೇರೋ.

ಕಠಿಣ ಪಂದ್ಯವನ್ನು ಆಡಲಿದ್ದೇವೆ

ಕಠಿಣ ಪಂದ್ಯವನ್ನು ಆಡಲಿದ್ದೇವೆ

ನಾವು ಭಾನುವಾರ ಬಲಿಷ್ಟ ತಂಡದೊಂದಿಗೆ ಕಠಿಣ ಪಂದ್ಯವನ್ನು ಆಡಲಿದ್ದೇವೆ ಎನ್ನುವುದು ಗೊತ್ತಿದೆ. ಹೈದರಾಬಾದ್ ಎಫ್‌ಸಿ ತಂಡದ ಆಟಗಾರರು ಹಾಗೂ ಕೋಚ್ ಬಗ್ಗೆ ನನಗೆ ತಿಳಿದಿದೆ. ಕೋಚ್ ಮಾರ್ಕ್ವಿಜ್ ಕೂಡ ಲಾಸ್ ಪಾಮ್ಸ್ ಕ್ಲಬ್‌ನಲ್ಲಿ ಇದ್ದರು. ಅವರ ಶೈಲಿಯನ್ನು ನಾನು ಬಲ್ಲೆ. ನಾನು ಕೂಡ ಅದೇ ಕ್ಲಬ್‌ನಿಂದ ಬಂದವನು ಎನ್ನುತ್ತಾರೆ ಲೊಬೆರೋ

For Quick Alerts
ALLOW NOTIFICATIONS
For Daily Alerts
Story first published: Saturday, December 19, 2020, 20:31 [IST]
Other articles published on Dec 19, 2020
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X