ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಅಂಕ ಹಂಚಿಕೊಂಡ ಒಡಿಶಾ ಮತ್ತು ಜೆಮ್ಷೆಡ್ಪುರ

By Isl Media
ISL: Mauricios last-minute stunner salvages a point for Odishal

ಗೋವಾ, ನವೆಂಬರ್, 29, 2020: ಜೆಮ್ಷೆಡ್ಪುರ ಪರ ಪ್ರಥಮಾರ್ಧದಲ್ಲಿ ನೆರಿಜಸ್ ವಾಸ್ಕಿಸ್ (12 ಮತ್ತು 27ನೇ ನಿಮಿಷ) ಮತ್ತು ಒಡಿಶಾ ಪರ ಡಿಗೊ ಮೌರಿಸಿಯೊ (77 ಮತ್ತು 90ನೇ ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಹೀರೋ ಇಂಡಿಯನ್ ಸೂಪರ್ ಲೀಗ್ 10ನೇ ಪಂದ್ಯ 2-2 ಗೋಲುಗಳಿಂದ ಸಮಬಲಗೊಂಡಿತು. ಜೆಮ್ಷೆಡ್ಪುರ ಗೋಲ್ ಕೀಪರ್ ರೆಹನೇಶ್ ಪೆನಾಲ್ಟಿ ಬಾಕ್ಸ್ ನ ಹುರಗಡೆ ಚೆಂಡನ್ನು ಹಿಡಿದು ರೆಡ್ ಕಾರ್ಡ್ ಗೆ ಗುರಿಯಾದರು, ಅಲ್ಲಿಂದ ಪಂದ್ಯದ ಮೇಲೆ ಒಡಿಶಾ ಹಿಡಿತ ಸಾಧಿಸಿತು.

ಐಎಸ್‌ಎಲ್: ಮೊದಲ ಜಯದ ನಿರೀಕ್ಷೆಯಲ್ಲಿ ಗೋವಾ ತಂಡಐಎಸ್‌ಎಲ್: ಮೊದಲ ಜಯದ ನಿರೀಕ್ಷೆಯಲ್ಲಿ ಗೋವಾ ತಂಡ

ಜೆಮ್ಷೆಡ್ಪುರಕ್ಕೆ 2-0 ಮುನ್ನಡೆ: ಒಂದು ತಂಡ ಮಾಡುವ ಪ್ರಮಾದ ಇನ್ನೊಂದು ತಂಡಕ್ಕೆ ವರವಾಗುತ್ತದೆ. ಜೆಮ್ಷೆಡ್ಪುರ ಹಾಗೂ ಒಡಿಶಾ ತಂಡಗಳ ನಡುವಿನ ಪಂದ್ಯದ ಪ್ರಥಮಾರ್ಧ ಜೆಮ್ಷೆಡ್ಪುರಕ್ಕೆ ವರವಾಗಿ ಪರಣಮಿಸಿತು.ಪಂದ್ಯ ಆರಂಭಗೊಂಡ 12ನೇ ನಿಮಿಷದಲ್ಲಿ ಒಡಿಶಾದ ಡಿಫೆಂಡರ್ ಕೈಗೆ ಪೆನಾಲ್ಟಿ ವಲಯದಲ್ಲಿ ಚೆಂಡು ತಗಲಿದ ಕಾರಣ ಜೆಮ್ಷೆಡ್ಪುರಕ್ಕೆ ಸುಲಭವಾಗಿ ಪೆನಾಲ್ಟಿ ಹೊಡೆತಕ್ಕೆ ಅವಕಾಶ ಸಿಕ್ಕಿತು. ನೆರಿಜಸ್ ವಾಸ್ಕಿಸ್ ಯಾವುದೇ ಪ್ರಮಾದ ಮಾಡದೆ ತಂಡಕ್ಕೆ ಮುನ್ನಡೆ ಕಲ್ಪಿಸಿದರು. 27ನೇ ನಿಮಿಷದಲ್ಲೂ ಡಿಫೆನ್ಸ್ ವಿಭಾಗದಲ್ಲಿ ಒಡಿಶಾ ಪ್ರಮಾದ ಎಸಗಿ ಎರಡನೇ ಗೋಲ್ ಗೆ ಅವಕಾಶ ಮಾಡಿಕೊಟ್ಟಿತು. ಶುಭಂ ಸಾರಂಗಿ ಚೆಂಡನ್ನು ನಿಯಂತ್ರಿಸುವಲ್ಲಿ ವಿಳಂಬ ಮಾಡಿದ ಕಾರಣ ನೆರಿಜಸ್ ವಾಸ್ಕಿಸ್ ನೇರವಾಗಿ ಗೋಲ್ ಬಾಕ್ಸಿಗೆ ಗುರಿ ಇಟ್ಟರು. ಅನಿರೀಕ್ಷಿತವಾಗಿ ಬಂದ ಚೆಂಡನ್ನು ತಡೆಯುವಲ್ಲಿ ಒಡಿಶಾ ಗೋಲ್ ಕೀಪರ್ ವಿಫಲರಾದರು.

ಖಾತೆ ತೆರೆಯುವ ಹಂಬಲ: ಋತುವಿನ ಮೊಲದ ಮೂರು ಅಂಕ ಗಳಿಸುವುದನ್ನೇ ಗುರಿಯಾಗಿಸಿಕೊಂಡ ಒಡಿಶಾ ಮತ್ತು ಜೆಮ್ಷೆಡ್ಪುರ ತಂಡಗಳು ಹೀರೋ ಇಂಡಿಯನ್ ಸೂಪರ್ ಲೀಗ್ ನ 10ನೇ ಪಂದ್ಯದಲ್ಲಿ ಮುಖಾಮುಖಿಯಾದವು. ಜೆಮ್ಷೆಡ್ಪುರ ತಂಡ ಕಳೆದ 11 ಪಂದ್ಯಗಳಲ್ಲಿ ಜಯ ಕಂಡಿರಲಿಲ್ಲ. ಇದರಿಂದಾಗಿ ತಂಡಕ್ಕೆ ಜಯದ ಅನಿವಾರ್ಯತೆ ಇದೆ. ಓವನ್ ಕೊಯ್ಲ್ ಅವರ ತಂಡದಲ್ಲಿ ಕಳೆದ ಬಾರಿಯ ಗೋಲ್ಡನ್ ಶೂ ಪ್ರಶಸ್ತಿಯನ್ನು ಹಂಚಿಕೊಂಡಿರುವ ನಿರಿಜಸ್ ವಾಸ್ಕೀಸ್ ಇದ್ದರೂ ಯಾವುದೇ ಪ್ರಯೋಜನವಾಗಲಿಲ್ಲ. ಆದರೆ ಚೆನ್ನೈಯಿನ್ ಎಫ್ ಸಿ ತಂಡದ ಡಿಫೆನ್ಸ್ ವಿಭಾಗಕ್ಕೆ ಉತ್ತಮ ರೀತಿಯಲ್ಲಿ ತಡೆಯೊಡ್ಡಿದ್ದರು. ತಂಡದ ಮಿಡ್ ಫೀಲ್ಡರ್ ಗಳಾದ ಅಲೆಕ್ಸಾಂಡ್ರೆ ಲಿಮಾ, ಐಟರ್ ಮನ್ರೋಯ್ ಮತ್ತು ಜಾಕಿಚಾಂದ್ ಸಿಂಗ್ ಅವರಿಗೆ ಉತ್ತಮ ರೀತಿಯಲ್ಲಿ ಬೆಂಬಲವನ್ನು ನೀಡುವುದು ಲಿತುವೇನಿಯಾ ಮೂಲದ ಸ್ಟ್ರೈಕರ್ ಅವರ ಆಶಯ.

ಐಎಸ್‌ಎಲ್: ಗೋಲಿಲ್ಲದೆ ಅಂಕ ಹಂಚಿಕೊಂಡ ಹೈದರಾಬಾದ್, ಬೆಂಗಳೂರುಐಎಸ್‌ಎಲ್: ಗೋಲಿಲ್ಲದೆ ಅಂಕ ಹಂಚಿಕೊಂಡ ಹೈದರಾಬಾದ್, ಬೆಂಗಳೂರು

ಸ್ಟೀಫನ್ ಎಝಿ ಮತ್ತು ನರೇಂದರ್ ಘಲೋಟ್ ಬ್ಯಾಕ್ ಲೈನ್ ನಲ್ಲಿ ತಂಡದ ಬೆನ್ನೆಲುಬು. ಪೀಟರ್ ಹಾರ್ಟ್ಲೀ ಗಾಯಗೊಂಡಿರುವುದು ತಂಡದ ಮೇಲೆ ಹೆಚ್ಚು ಪರಿಣಾಮ ಬೀರದು. ಹೈದರಾಬಾದ್ ವಿರುದ್ಧ ಸೋಲನುಭವಿಸಿರುವ ಒಡಿಶಾ ತಂಡ ಈ ಪಂದ್ಯದ ಬಗ್ಗೆ ಹೆಚ್ಚು ಯೋಚಿಸಬೇಕಾಗಿದೆ. ಮಾರ್ಸೆಲೋ ಪೆರೆರಾ, ಮ್ಯಾನ್ವೆಲ್ ಓನ್ವು, ಮತ್ತು ಡಿಗೋ ಮೌರಿಸಿಯೊ ಅವರ ಮೇಲೆ ತಂಡ ಹೆಚ್ಚು ಆಧರಿಸಿದೆ. ಕಳೆದ ಋತುವಿನಲ್ಲಿ ನಿರಾಶದಾಯಕ ಪ್ರದರ್ಶನ ತೋರಿದ್ದ ತಂಡಗಳು 2020-21ನೇ ಸಾಲಿನ ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿದ್ದು ಉತ್ತಮ ಆರಂಭ ಕಾಣುವಲ್ಲಿ ವಿಫಲವಾಗಿವೆ. ಎರಡೂ ತಂಡಗಳು ನೂತನ ಕೋಚಿಂಗ್ ತಂಡದೊಂದಿಗೆ ಹೊಸ ಫಲಿತಾಂಶಕ್ಕಾಗಿ ಹಾತೊರೆದಿದ್ದವು. ಆದರೆ ಒಡಿಶಾ ಮತ್ತು ಜೆಮ್ಷೆಡ್ಪುರ ಮೊದಲ ಪಂದ್ಯದಲ್ಲೇ ಸೋಲಿನ ಆಘಾತ ಅನುಭವಿಸಿದವು. ಒಡಿಶಾ ತಂಡ ಹೈದರಾಬಾದ್ ವಿರುದ್ಧ 0-1 ಅಂತರದಲ್ಲಿ ಸೋಲನುಭವಿಸಿದರೆ, ಓವೆನ್ ಕೋಯ್ಲ್ ತರಬೇತಿಯಲ್ಲಿ ಪಳಗಿದ್ದ ಜೆಮ್ಷೆಡ್ಪುರ ತಂಡ ಚೆನ್ನೈಯಿನ್ ವಿರುದ್ಧ 1-2 ಗೋಲುಗಳ ಅಂತರದಲ್ಲಿ ಸೋಲುಂಡಿತು. ಎರಡೂ ತಂಡಗಳಿಗೂ ಈಗ ಜಯದ ಅನಿವಾರ್ಯತೆ ಇದೆ. ನಿರಿಜಸ್ ವಾಸ್ಕೀಸ್ ಮತ್ತು ಜಾಕಿಚಾಂದ್ ಸಿಗ್ ಅವರು ಜೆಮ್ಷೆಡ್ಪುರದ ಡಿಫೆನ್ಸ್ ನಲ್ಲಿ ಇರುವುದರಿಂದ ಒಡಿಶಾ ಪಂದ್ಯದುದ್ದಕ್ಕೂ ಎಚ್ಚರಿಕೆಯ ಆಟ ಪ್ರದರ್ಶಿಸಬೇಕಾದ ಅಗತ್ಯ ಇದೆ.

Story first published: Monday, November 30, 2020, 8:22 [IST]
Other articles published on Nov 30, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X