ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್‌ 2018: ಮುಂಬೈ ಗೋಲ್ಮಳೆಯಲ್ಲಿ ಕೊಚ್ಚಿ ಹೋದ ಕೇರಳ!

By Isl Media
ISL: Mumbai City clinch thumping 6-1 win over Kerala Blasters

ಮುಂಬೈ, ಡಿಸೆಂಬರ್ 16: ಮೊಡೌ ಸೊಗೌ ಅವರ ನಾಲ್ಕು ಗೋಲುಗಳ ಸಾಧನೆ (12, 15, 30, 90ನೇ ನಿಮಿಷ), ರಾಫೆಲ್ ಬಸ್ಟೋಸ್ (70ನೇ ನಿಮಿಷ) ಹಾಗೂ ಮತಿಯಾಸ್ ಮೀರಾಬಾಜೆ (89ನೇ ನಿಮಿಷ) ಗಳಿಸದ ಗೋಲುಗಳ ನೆರವಿನಿಂದ ಕೇರಳ ಬ್ಲಾಸ್ಟರ್ಸ್ ತಂಡವನ್ನು 6-1 ಗೋಲುಗಳ ಅಂತರದಲ್ಲಿ ಮಣಿಸಿದ ಮುಂಬೈ ಸಿಟಿ ಎಫ್ ಸಿ ತಂಡ ಇಂಡಿಯನ್ ಸೂಪರ್ ಲೀಗ್ ನ ಟಾಪ್ ನಾಲ್ಕರಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿತು. ಕೇರಳ ಪರ ಸೈಮನ್‌ಲಿನ್ ಡೌಂಗಲ್ 27ನೇ ನಿಮಿಷದಲ್ಲಿ ಗಳಿಸಿದ ಗೋಲು ಸೋಲಿನ ಅಂತರವನ್ನು ಕಡಿಮೆ ಮಾಡಿತು.

'ಎಂಎಸ್‌ಎಲ್‌ 2018'ರ ಚಾಂಪಿಯನ್‌ ಆಗಿ ಮಿನುಗಿದ ಜೋಝಿ ಸ್ಟಾರ್ಸ್'ಎಂಎಸ್‌ಎಲ್‌ 2018'ರ ಚಾಂಪಿಯನ್‌ ಆಗಿ ಮಿನುಗಿದ ಜೋಝಿ ಸ್ಟಾರ್ಸ್

ತೀವ್ರ ಪೈಪೋಟಿ ನೀಡಿದ ಕೇರಳದ ಸಂಭ್ರಮ ಹೆಚ್ಚು ಕಾಲ ಉಳಿಯಲಿಲ್ಲ. 30 ನಿಮಿಷಗಳ ಅವಧಿಯಲ್ಲಿ ನಾಲ್ಕು ಗೋಲುಗಳು ದಾಖಲಾದವು. 30ನೇ ನಿಮಿಷದಲ್ಲಿ ಮೊಡೌ ಸೊಗೌ ಹ್ಯಾಟ್ರಿಕ್‌ಸಾಧನೆ ಮಾಡಿದರು. ಸುಭಾಶಿಶ್ ಬೋಸ್ ಎಡಭಾಗದಿಂದ ನಿಖರವಾದ ಪಾಸ್ ನೀಡಿದರು. ಹಾಗೆ ಚಿಮ್ಮುತ್ತಲೇ ಸೊಗೌ ಹೆಡರ್ ಮೂಲಕ ಮೂರನೇ ಗೋಲು ಗಳಿಸಿದರು. ಇದರೊಂದಿಗೆ ಸೆನೆಗಲ್ ಮೂಲದ ಆಟಗಾರ ಪ್ರಸಕ್ತ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಎಂಟನೇ ಗೋಲು ಗಳಿಸಿ ಗೋಲ್ಡನ್ ಶೂ ಸ್ಪರ್ಧೆಯಲ್ಲಿ ತಾನೂ ಇರುವುದಾಗಿ ಸ್ಪಷ್ಟಪಡಿಸಿದರು. 35ನೇ ನಿಮಿಷದಲ್ಲಿ ಕೇರಳ ತಂಡದ ಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ಜಾಕೀರ್ ಮುಂಡಂಪರಾ ರೆಡ್ ಕಾರ್ಡ್ ಪಡೆದು ಅಂಗಣದಿಂದ ಹೊರ ನಡೆದರು.

ಕೇರಳದ ಖಾತೆ
ಸೈಮನ್‌ಲಿನ್ ಡೌಂಗಲ್ ಕೊನೆಗೂ ಕೇರಳ ತಂಡಕ್ಕೆ ಜೀವ ತಂದರು. 27ನೇ ನಿಮಿಷದಲ್ಲಿ ಸಮದ್ ಅವರು ಡ್ರಿಬ್ಲಿಂಗ್ ಮೂಲಕ ಚೆಂಡನ್ನು ಮುಂಬೈಯ ಪೆನಾಲ್ಟಿ ವಲಯಕ್ಕೆ ತಂದರು. ಲೂಸಿಯಾನ್ ಗೊಯೇನ್ ಅದನ್ನು ನಿಯಂತ್ರಿಸಲು ಯತ್ನಿಸಿದರು. ಆದರೆ ಪುಟಿದ ಚೆಂಡು ಸೌವಿಕ್ ಚಕ್ರವರ್ತಿ ಕಡೆಗೆ ಸಾಗಿ ನಂತರ ಲೆನ್ ಡೌಂಗಲ್ ನಿಯಂತ್ರಣಕ್ಕೆ ಸಿಲುಕಿತು. ಕೆಳ ಅಂಚಿನಲ್ಲಿ ತುಳಿದ ಚೆಂಡು ನೇರವಾಗಿ ಗೋಲ್ ಬಾಕ್ಸ್ ತಲುಪಿತು. ಪಂದ್ಯ 2-1ರಲ್ಲಿ ಸಾಗಿತು.

15ನೇ ನಿಮಿಷದಲ್ಲಿ ಸೌಗೌ ವೈಯಕ್ತಿಕ ಎರಡನೇ ಹಾಗೂ ತಂಡದ ಎರಡನೇ ಗೋಲು ಗಳಿಸಿದರು. ಇದು ಕೇರಳ ತಂಡ ಉಡುಗೊರೆಯ ರೀತಿಯಲ್ಲೇ ನೀಡಿದ ಗೋಲು ಎಂದರೆ ತಪ್ಪಾಗಲಾರದು. ಧೀರಜ್ ಸಿಂಗ್ ಪ್ರಮಾದದ ಪಾಸ್ ರೈನಿಯರ್ ಫೆರ್ನಾಂಡಿಸ್ ಅವರತ್ತ ಸಾಗಿತು. ಬಲಭಾಗದಲ್ಲಿ ಸೌಗೌ ಅವರಿಗೆ ಫೆರ್ನಾಂಡೀಸ್ ಉತ್ತಮ ಪಾಸ್ ನೀಡಿದರು. ಎತ್ತರದಿಂದ ಬಂದ ಪಾಸನ್ನು ಅಷ್ಟೇ ಉತ್ತಮ ರೀತಿಯಲ್ಲಿ ಗೋಲ್‌ಬಾಕ್ಸ್‌ಗೆ ಸೌಗೌ ತಳ್ಳಿದರು. ತಂಡಕ್ಕೆ 2-0 ಮುನ್ನಡೆ.

ಅತೀರೋಚಕ ಪಂದ್ಯ ಗೆದ್ದ ಬೆಲ್ಜಿಯಂ 'ಹಾಕಿ ವಿಶ್ವಕಪ್' ಚೊಚ್ಚಲ ಚಾಂಪಿಯನ್ಅತೀರೋಚಕ ಪಂದ್ಯ ಗೆದ್ದ ಬೆಲ್ಜಿಯಂ 'ಹಾಕಿ ವಿಶ್ವಕಪ್' ಚೊಚ್ಚಲ ಚಾಂಪಿಯನ್

ಪಂದ್ಯ ಆರಂಭಗೊಂಡ 12ನೇ ನಿಮಿಷದಲ್ಲಿ ಮೊಡೌ ಸೊಗೌ ಗಳಿಸಿದ ಗೋಲಿನಿಂದ ಮುಂಬೈ ತಂಡ ಮೇಲುಗೈ ಸಾಧಿಸಿತು. ಪೌಲೋ ಮಚಾಡೋ ಎಡಭಾಗದಲ್ಲಿ ಪಾಸೊಂದನ್ನು ರೊಲ್ ಬಾಸ್ಟೋಸ್‌ಗೆ ನೀಡಿದರು. ಸೊಗೌ ಯಾವುದೇ ಪ್ರಮಾದವೆಸಗದೆ ನೇರವಾಗಿ ಗೋಲ್ ಬಾಕ್ಸ್‌ಗೆ ಚೆಂಡನ್ನು ಗುರಿ ಇಟ್ಟರು. ಮುಂಬೈ ನಿರೀಕ್ಷೆಯಂತೆ ಮನೆಯಂಗಣದಲ್ಲಿ ಮಿಂಚಿತು.

ಹೀರೋ ಇಂಡಿಯನ್ ಸೂಪರ್ ಲೀಗ್‌ನ 59ನೇ ಪಂದ್ಯ ಮುಂಬೈ ಹಾಗೂ ಕೇರಳ ತಂಡಗಳ ನಡುವೆ ನಡೆಯಿತು. ಕೇರಳ ಇದುವರೆಗೂ ಗೆದ್ದಿರುವುದು ಒಂದು ಪಂದ್ಯದಲ್ಲಿ ಮಾತ್ರ. ಆದರೆ ಬರೇ ಡ್ರಾದಲ್ಲೇ ನಾಲ್ಕರ ಹಂತ ತಲಪುವ ಗುರಿಯೊಂದಿಗೆ ಅಂಗಣಕ್ಕೆ ಇಳಿಯಿತು. ಮುಂಬೈ ತಂಡ ಸತತ ಏಳು ಪಂದ್ಯಗಳಲ್ಲಿ ಸೋಲರಿಯದೆ ಎರಡನೇ ಸ್ಥಾನದಲ್ಲಿ ಭದ್ರವಾಗಿದೆ.

ಮೊಡೌ ಸೊಗೌ ಇದುವರೆಗೂ ಐದು ಗೋಲುಗಳನ್ನು ಗಳಿಸಿ ತಂಡದ ಜಯದಲ್ಲಿ ಪ್ರಮುಖ ಪಾತ್ರವಹಿಸಿರುತ್ತಾರೆ. ಡಿಫೆನ್ಸ್ ವಿಭಾಗದಲ್ಲೂ ಮೇಲುಗೈ ಸಾಧಿಸಿರುವ ಮುಂಬೈ 11ಪಂದ್ಯಗಳಲ್ಲಿ ಆರರಲ್ಲಿ ಕ್ಲೀನ್ ಶೀಟ್‌ಸಾ'ನೆ ಮಾಡಿದೆ. ಕೇರಳದ ಫಾರ್ವರ್ಡ್ ಆಟಗಾರ ಡೌಂಗಲ್ ಅತ್ಯಂತ ನಿಷ್ಪ್ರಯೋಜಕ ಡಿಫೆಂಡರ್ ಎನಿಸಿರುವುದು ಕೇರಳದ ಹಿನ್ನೆಡೆಗೆ ಪ್ರಮುಖ ಕಾರಣವಾಗಿದೆ.

Story first published: Sunday, December 16, 2018, 22:54 [IST]
Other articles published on Dec 16, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X