ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್‌ 2020: ಬೆಂಗಳೂರಿಗೆ ಮತ್ತೊಮ್ಮೆ ಶಾಕ್ ನೀಡಿದ ಮುಂಬೈ

By Isl Media
ISL: Mumbai City do the double over clumsy Bengaluru

ಮುಂಬೈ, ಜನವರಿ 18: ಪ್ರಥಮಾರ್ಧದಲ್ಲಿ ಮೊಡೌ ಸೊಗೌ (13ನೇ ನಿಮಿಷ) ಹಾಗೂ ದ್ವಿತಿಯಾರ್ಧದಲ್ಲಿ ಅಮೈನ್ ಚೆರ್ಮಿಟಿ (55ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಹಾಲಿ ಚಾಂಪಿಯನ್ ಬೆಂಗಳೂರು ಎಫ್ ಸಿ ವಿರುದ್ಧ 2-0 ಗೋಲುಗಳ ಅಂತರದಲ್ಲಿ ಜಯ ಗಳಿಸಿದ ಮುಂಬೈ ಸಿಟಿ ಎಫ್ ಸಿ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಅಂತಮ ನಾಲ್ಕರ ಪಟ್ಟಿಯಲ್ಲಿ ಸ್ಥಾನ ಪಡೆಯುವ ತನ್ನ ಆಸೆಯನ್ನು ಮತ್ತೊಮ್ಮೆ ಜೀವಂತವಾಗಿರಿಸಿಕೊಂಡಿತು.

IND vs AUS 2nd ODI : Rahul the opener and also a finisher | KL RAHUL | ONEINDIA KANNADA

ಜಯದೊಂದಿಗೆ ಮುಂಬೈ ಸಿಟಿ ಎಫ್ ಸಿ 19 ಅಂಕಗಳೊಂದಿಗೆ ಐದನೇ ಸ್ಥಾನ ತಲುಪಿತು. ಬೆಂಗಳೂರು ಈ ಸೋಲಿನೊಂದಿಗೆ ಬೆಂಗಳೂರು ಎರಡನೇ ಸ್ಥಾನದಲ್ಲೇ ಉಳಿದುಕೊಳ್ಳಬೇಕಾಯಿತು. ಈ ಋತುವಿನಲ್ಲಿ ಮುಂಬೈ ಸಿಟಿ ಎಫ್ ಸಿ ಬೆಂಗಳೂರು ವಿರುದ್ಧ ಆಡಿದ ಎರಡೂ ಪಂದ್ಯಗಳಲ್ಲಿ ಜಯ ಗಳಿಸಿರುವುದು ವಿಶೇಷ. ಮುಂಬೈಗೆ ಇನ್ನೂ ಐದು ಪಂದ್ಯಗಳ ಅವಕಾಶ ಇದ್ದು, ನಿರಂತರ ಜಯ ತಂಡವನ್ನು ಪ್ಲೇ ಆಫ್ ಗೆ ಕೊಂಡೊಯ್ಯಲಿದೆ ಎಂಬುದು ಸ್ಪಷ್ಟ,

ಮುಂಬೈ ಮೇಲುಗೈ
ಪ್ರಥಮಾರ್ಧದಲ್ಲಿ ಮುಂಬೈ ಸಿಟಿ ಎಫ್ ಸಿ 1-0 ಅಂತರದಲ್ಲಿ ಮೇಲುಗೈ ಸಾಧಿಸಿತು. 13ನೇ ನಿಮಿಷದಲ್ಲಿ ಮೊಡೌ ಸೊಗೌ ಗಳಿಸಿದ ಗೋಲಿನಿಂದ ಗೋಲು ಮುಂಬೈ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿತು. ಆರಂಭದಿಂದಲೂ ಬೆಂಗಳೂರಿನ ದಿಫೆನ್ಸ್ ವಿಭಾಗದ ಮೇಲೆ ಗಮನವಿಟ್ಟಿದ್ದ ಮುಂಬೈ ಚೆಂಡನ್ನು ಹೆಚ್ಚು ಕಾಲ ನಿಯಂತ್ರಿಸುವಲ್ಲಿ ಯಶಸ್ವಿಯಾಯಿತು. ಬೆಂಗಳೂರು ತಂಡ ಅವಕಾಶಕ್ಕಾಗಿ ಉತ್ತಮ ರೀತಿಯಲ್ಲಿ ಪೈಪೋಟಿ ನೀಡಿತ್ತು, ಆದರೆ ಯಾವುದೂ ಫಲಿಸಲಿಲ್ಲ.

ಬೆಂಗಳೂರಿಗೆ ಅಗ್ರ ಸ್ಥಾನದ ಗುರಿ
ಹೀರೋ ಇಂಡಿಯನ್ ಸೂಪರ್ ಲೀಗ್ ಈಗ ಕುತೂಹಲದ ಹಂತ ತಲುಪಿದೆ, ಅಗ್ರ ನಾಲ್ಕರಲ್ಲಿರುವ ತಂಡಗಳು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ತೀವ್ರಪೈಪೋಟಿ ನಡೆಸುತ್ತಿದ್ದರೆ, ನಾಲ್ಕನೇ ಸ್ಥಾನಕ್ಕೆ ಹತ್ತಿರದಲ್ಲಿರುವ ತಂಡಗಳು ಮೇಲಕ್ಕೇರುವ ತವಕದಲ್ಲಿದೆ, ಮುಂಬೈಯಲ್ಲಿ ಬೆಂಗಳೂರು ಎಫ್ ಸಿ ಹಾಗೂ ಮುಂಬೈ ಸಿಟಿ ತಂಡಗಳು ಮುಖಾಮುಖಿಯಾದವು.

ಬೆಂಗಳೂರು ಅಗ್ರ ಸ್ಥಾನಕ್ಕೇರುವ ಗುರಿ ಹೊಂದಿದ್ದರೆ, ಮುಂಬೈ ನಾಲ್ಕನೇ ಸ್ಥಾನಕ್ಕೇರುವ ಹಂಬಲದೊಂದಿಗೆ ಅಂಗಣಕ್ಕಿಳಿಯಿತು, ನಾಯಕ ಸುನಿಲ್ ಛೆಟ್ರಿ ಉತ್ತಮ ಪ್ರದರ್ಶನ ತೋರುವ ಮೂಲಕ ಹಿಂದಿನ ಸತತ ಎರಡು ಪಂದ್ಯಗಳಲ್ಲಿ ಜಯ ಗಳಿಸಿತ್ತು. ಈ ಋತುವಿನಲ್ಲಿ ಛೆಟ್ರಿ 8 ಗೋಲುಗಳನ್ನು ಗಳಿಸಿದ್ದು, ಮುಂಬೈ ವಿರುದ್ಧವೂ ಉತ್ತಮ ಪ್ರದರ್ಶನ ತೋರುವ ಗುರಿ ಹೊಂದಿದ್ದಾರೆ, ದೆಶೋರ್ನ್ ಬ್ರೌನ್ ತಂಡವನ್ನು ಸೇರಿಕೊಂಡಿದ್ದರಿಂದ ಬೆಂಗಳೂರಿನ ಅಟ್ಯಾಕಿಂಗ್ ವಿಭಾಗ ಮತ್ತಷ್ಟು ಬಲಗೊಂಡಿದೆ.

ಬೆಂಗಳೂರಿನ ಡಿಫೆನ್ಸ್ ವಿಭಾಗ ಉತ್ತಮವಾಗಿದ್ದು, ಇದುವರೆಗೂ ಎದುರಾಳಿ ತಂಡಕ್ಕೆ ಕೇವಲ ಏಳು ಗೋಲುಗಳನ್ನು ಗಳಿಸಿದ್ದು, ಅಲ್ಬೆರ್ಟ್ ಸೆರನ್ ಮತ್ತು ಜುವಾನನ್ ಡಿಫೆನ್ಸ್ ವಿಭಾಗದಲ್ಲಿ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಗೋಲ್ ಕೀಪರ್ ಗುರ್ಪ್ರೀತ್ ಸಿಂಗ್ ಸಂಧೂ ಬೆಂಗಳೂರಿನ ಸರ್ವ ಶಕ್ತಿ ಇದ್ದಂತೆ. ಕಳೆದ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿರುವ ಮುಂಬೈ ಸಿಟಿ ತಂಡಕ್ಕೆ ಇಲ್ಲಿ ಜಯದ ಅಗತ್ಯ ಇದೆ. ಇದರಿಂದಾಗಿ ಒಡಿಶಾ ಎಫ್ ಸಿ ಆ ಸ್ಥಾನವನ್ನು ತನ್ನದಾಗಿಸಿಕೊಂಡಿತು.

ಆದರೆ ಒಂದು ಪಂದ್ಯ ಹೆಚ್ಚಿಗೆ ಹೊಂದಿರುವ ಮುಂಬೈ ಈಗ ಅದರ ಸಂಪೂರ್ಣ ಲಾಭವನ್ನು ಪಡೆಯಬೇಕಾಗಿದೆ. ಹಿಂದಿನ ಮುಖಾಮುಖಿಯಲ್ಲಿ ಮುಂಬೈ 3-2 ಗೋಲುಗಳ ಅಂತರದಲ್ಲಿ ಬೆಂಗಳೂರಿಗೆ ಸೋಲುಣಿಸಿತ್ತು. ಅದೇ ಆತ್ಮವಿಶ್ವಾಸದೊಂದಿಗೆ ಮುಂಬೈ ಹಾಲಿ ಚಾಂಪಿಯನ್ನರ ವಿರುದ್ಧ ಅಂಗಣಕ್ಕಿಳಿಯಿತು.

Story first published: Friday, January 17, 2020, 22:36 [IST]
Other articles published on Jan 17, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X