ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಮನೆಯಂಗಣದಲ್ಲಿ ಬೆಂಗಳೂರಿಗೆ ಆಘಾತ ನೀಡಿದ ಮುಂಬೈ

By Isl Media
ISL: Mumbai end Bengaluru’s unbeaten run in five-goal spectacle

ಬೆಂಗಳೂರು, ಡಿಸೆಂಬರ್ 16: ಜಯ ಗಳಿಸುವಲ್ಲಿ ನಿರಂತರ ವೈಫಲ್ಯ ಕಾಣುತ್ತಿದ್ದ ಮುಂಬೈ ಸಿಟಿ ಎಫ್ ಸಿ ಹಾಲಿ ಚಾಂಪಿಯನ್ ಬೆಗಳೂರು ಎಫ್ ಸಿ ವಿರುದ್ಧ ರೋಚಕ 3-2 ಗೋಲುಗಳ ಅಂತರದಲ್ಲಿ ಜಯ ಗಳಿಸಿ ಅದ್ಭುತ ಸಾಧನೆ ಮಾಡಿದೆ.

ಏಕದಿನ ಸರಣಿ; ಮೊದಲ ಪಂದ್ಯದಲ್ಲಿ ಭಾರತಕ್ಕೆ ಸೋಲುಣಿಸಿದ ವಿಂಡೀಸ್ಏಕದಿನ ಸರಣಿ; ಮೊದಲ ಪಂದ್ಯದಲ್ಲಿ ಭಾರತಕ್ಕೆ ಸೋಲುಣಿಸಿದ ವಿಂಡೀಸ್

ಸುಭಾಶಿಶ್ ಭೋಸ್ ( 12 ನೇ ನಿಮಿಷ), ಡೀಗೊ ಕಾರ್ಲೋಸ್ ಒಲಿವೇರಾ ( 77 ನೇ ನಿಮಿಷ) ಹಾಗೂ ರೌಲಿನ್ ಬೋರ್ಗೆಸ್ ( 90+ ನಿಮಿಷ) ಗಳಿಸಿದ ಗೋಲು ಪ್ರವಾಸಿ ತಂಡಕ್ಕೆ ಅಮೂಲ್ಯ ಜಯ ತಂದುಕೊಟ್ಟಿತು. ಬೆಂಗಳೂರು ಗಳಿಸಿದ ಎರಡು ಗೋಲುಗಳಲ್ಲಿ ಒಂದು ಗೋಲು ಮ್ಯಾಟೋ ಗ್ರಗಿಸಿ ( 89 58 ನೇ ನಿಮಿಷ) ನೀಡಿದ ಉಡುಗೊರೆ ಗೋಲು ಸೇರಿದೆ. ಇನ್ನೊಂದು ಗೋಲನ್ನು ನಾಯಕ ಸುನಿಲ್ ಛೆಟ್ರಿ (ನೇ ನಿಮಿಷ) ಗಳಿಸಿದರು. ಹಾಲಿ ಚಾಂಪಿಯನ್ ಬೆಂಗಳೂರು ತನ್ನ ಮನೆಯಂಗಣದಲ್ಲಿ ತನ್ನ ನೈಜ ಸಾಮರ್ಥ್ಯ ತೋರುವಲ್ಲಿ ವಿಫಲವಾಯಿತು.

ಪ್ರವಾಸಿ ಮುಂಬೈ ಮುನ್ನಡೆ
ಹಿಂದಿನ ಸಾಧನೆಗಳು, ಇಂದಿನ ಲೆಕ್ಕಾಚಾರಗಳು ಯಾವುದೂ ನಡೆಯಲಿಲ್ಲ, ಅಂಗಣದಲ್ಲಿ ನಡೆದುದ್ದೆ ಸತ್ಯ. 22ನೇ ನಿಮಿಷದಲ್ಲಿ ಸುಭಾಶಿಶ್ ಭೋಸ್ ಗಳಿಸಿದ ಗೋಲಿನಿಂದ ಪ್ರವಾಸಿ ಮುಂಬೈ ಸಿಟಿ ಎಫ್ ಸಿ ಹಾಲಿ ಚಾಂಪಿಯನ್ ಬೆಂಗಳೂರು ಎಫ್ ಸಿ ವಿರುದ್ಧ ಪ್ರಥಮಾರ್ಧದಲ್ಲಿ ಒಂದು ಗೋಲು ಗಳಿಸಿ ಮೇಲುಗೈ ಸಾಧಿಸಿತು. ಪ್ರಥಮಾರ್ಧದ ಕೊನೆಯ ಕ್ಷಣದಲ್ಲಿ ಮುಂಬೈ ಎಫ್ ಸಿ ಗೆ ಪೆನಾಲ್ಟಿ ಮೂಲಕ ಎರಡನೇ ಗೋಲು ಗಳಿಸುವ ಅವಕಾಶ ಇದ್ದಿತ್ತು. ಆದರೆ ಗುರ್ಪ್ರೀತ್ ಸಿಂಗ್ ಸಂಧೂ ಅವರು ಉತ್ತಮ ರೀತಿಯಲ್ಲಿ ತಡೆದು ಬೆಂಗಳೂರಿಗೆ ರಕ್ಷಣೆ ನೀಡಿದರು.43ನೇ ನಿಮಿಷದಲ್ಲೂ ಮುಂಬೈ ಸಿಟಿಯ ಮೌದೌ ಸೌಗೌ ಅವರಿಗೆ ಉತ್ತಮ ಅವಕಾಶ ಇದ್ದಿತ್ತು. ಆದರೆ ಸಂಧೂ ಉತ್ತಮ ರೀತಿಯಲ್ಲಿ ತಡೆದಿದ್ದರು. ಬೆಂಗಳೂರು ತಂಡದ ನಿಜವಾದ ಸಮಸ್ಯೆ ಏನೆಂಬುದು ಪ್ರಕಟಗೊಂಡಿತು. 41ನೇ ನಿಮಿಷದಲ್ಲಿ ಸಮಬಲ ಗೊಳಿಸುವ ಅವಕಾಶ ಸಿಕ್ಕರೂ ಬೆಂಗಳೂರು ಕೈ ಚೆಲ್ಲಿತು. ಪ್ರಥಮಾರ್ಧದ ತಪ್ಪುಗಳನ್ನು ಸರಿಪಡಿಸಿಕೊಂಡು ಆಕ್ರಮಣಕಾರಿ ಆಟವಾಡಿದರೆ ಬೆಂಗಳೂರಿಗೆ ಡ್ರಾ ಅಥವಾ ಜಯದ ಅವಕಾಶ ಇದೆ. ಇಲ್ಲವಾದಲ್ಲಿ ಸೋಲಿನ ಖಾತೆ ತೆರೆಯಬಹುದು.

ISL: Mumbai end Bengaluru’s unbeaten run in five-goal spectacle

ಮನೆಯಂಗದಲ್ಲಿ ಮಿಂಚುವ ಹಂಬಲ
ಬೆಂಗಳೂರು ಎಫ್ ಸಿ ತಂಡ ಇದುವರೆಗೂ ಸೋಲು ಕಂಡಿಲ್ಲ, ಇನ್ನೊಂದೆಡೆ ಮುಂಬೈ ಸಿಟಿ ಎಫ್ ಸಿ ಜಯ ಕಾಣದೆ ಕಂಗಾಲಾಗಿದೆ. ಇಂಡಿಯನ್ ಸೂಪರ್ ಲೀಗ್ ನ 39ನೇ ಪಂದ್ಯದಲ್ಲಿ ಈ ಎರಡು ತಂಡಗಳು ಜಯದ ಗುರಿ ಹೊತ್ತಿ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಮುಖಾಮುಖಿಯಾದವು. ಬೆಂಗಳೂರು ಮೂರು ಪಂದ್ಯಗಳಲ್ಲಿ ಜಯ ಗಳಿಸಿ ನಾಲ್ಕು ಪಂದ್ಯಗಳಲ್ಲಿ ಡ್ರಾ ಸಾಧಿಸಿದೆ. ಅಜೇಯವಾಗಿ ಮುಂದುವರಿಯುವುದು ಸುನಿಲ್ ಛೆಟ್ರಿ ಪಡೆಯ ಗುರಿಯಾಗಿದೆ. ಆದರೆ ಸತತ ಐದು ಪಂದ್ಯಗಳಲ್ಲಿ ಜಯ ಕಾಣದೆ ಹತಾಶೆಯಾಗಿರುವ ಮುಂಬೈ ಸಿಟಿ ತಂಡ ಇಲ್ಲಿ ಜಯದ ಲಯ ಕಾಣುವ ಗುರಿ ಹೊಂದಿದೆ.

ವಿಶ್ವ ಟಿ20ಯಲ್ಲಿ ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ ಆಡಲಿದ್ದಾರೆ: ಡ್ವೇನ್ ಬ್ರಾವೊವಿಶ್ವ ಟಿ20ಯಲ್ಲಿ ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ ಆಡಲಿದ್ದಾರೆ: ಡ್ವೇನ್ ಬ್ರಾವೊ

ಇದುವರೆಗೂ ನಡೆದಿರುವ ಪಂದ್ಯಗಳನ್ನು ಗಮನಿಸಿದಾಗ ಮುಂಬೈ ವಿರುದ್ಧ ಬೆಂಗಳೂರು ಮೇಲುಗೈ ಸಾಧಿಸಿದೆ. ಗೋಲ್ ಕೀಪರ್ ಗುರ್ಪ್ರೀತ್ ಸಿಂಗ್ ಸಂಧೂ ಬೆಂಗಳೂರು ತಂಡದ ಡಿಫೆನ್ಸ್ ವಿಭಾಗಕ್ಕೆ ಶಕ್ತಿ ತುಂಬಿದ್ದಾರೆ. ಆದರೆ ಬೆಂಗಳೂರಿನ ಅಟ್ಟ್ಯಾಕ್ ವಿಭಾಗ ಇನ್ನೂ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕಾಗಿದೆ. ಗಳಿಸಿರುವ ಏಳು ಗೋಲುಗಳಲ್ಲಿ ಮೂರು ಗೋಲುಗಳು ಒಂದೇ ಪಂದ್ಯದಲ್ಲಿ ದಾಖಾಲಾಗಿತ್ತು. ಮುಂಬೈಯ ಡಿಫೆನ್ಸ್ ವಿಭಾಗ ಉತ್ತಮವಾಗಿದ್ದರೂ ಅಟ್ಟ್ಯಾಕ್ ವಿಭಾಗ ದುರ್ಬಲವಾಗಿರುವುದು ಪ್ರತಿಯೊಂದು ಪಂದ್ಯದಲ್ಲೂ ಸಾಬೀತಾಗಿದೆ. ಇದುವರೆಗೂ ಮುಂಬೈ ಹತ್ತು ಗೋಲುಗಳನ್ನು ಗಳಿಸಿದೆ ಆದರೆ ಹದಿಮೂರು ಗೋಲುಗಳನ್ನು ಎದುರಾಳಿ ತಂಡಕ್ಕೆ ಗಳಿಸಲು ಅವಕಾಶ ನೀಡಿದೆ. ಆದರೆ ಇದೆಲ್ಲ ಹಿಂದಿನ ಪಂದ್ಯಗಳ ಇತಿಹಾಸ, ಈಗೆ ಹೊಸ ಹುಮ್ಮಸ್ಸಿನೊಂದಿಗೆ ತಂಡ ಅಂಗಣಕ್ಕಿಳಿಯಿತು.

Story first published: Monday, December 16, 2019, 8:43 [IST]
Other articles published on Dec 16, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X