ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2019: ದುರ್ಬಲ ಡಿಫೆನ್ಸ್‌ನ ಮುಂಬೈಗೆ ಬಲಿಷ್ಠ ಗೋವಾ ಎದುರಾಳಿ

By Isl Media
ISL: Mumbai’s weak defense face test of time against Goa

ಮುಂಬೈ, ನವೆಂಬರ್ 7: ಗುರುವಾರ ಇಲ್ಲಿನ ಮುಂಬೈ ಸ್ಪೋರ್ಟ್ಸ್ ಅರೆನಾದಲ್ಲಿ ನಡೆಯಲಿರುವ ಹೀರೋ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ಗೋವಾ ವಿರುದ್ಧ ಆಡಲಿರುವ ಪಂದ್ಯದಲ್ಲಿ ಜಾರ್ಜ್ ಕೋಸ್ಟಾ ಅವರು ಕಳೆದ ಬಾರಿಯ ಪ್ರಮಾದ ಪುನರಾವರ್ತನೆ ಆಗದಂತೆ ನೋಡಿಕೊಳ್ಳಬೇಕಾಗಿದೆ.

ಕಳೆದ ಋತುವಿನಲ್ಲ ಮುಂಬೈ ತಂಡ ಗೋವಾ ವಿರುದ್ಧ ನಾಲ್ಕು ಬಾರಿ ಆಡಿತ್ತು. ಅದರಲ್ಲಿ ಎರಡು ಪ್ಲೇ ಆಫ್ ಪಂದ್ಯ ಸೇರಿತ್ತು. ಗೋವಾ ತಂಡ ಮುಂಬೈಯನ್ನು ಮೂರು ಬಾರಿ ಸೋಲಿಸಿಟ್ಟಲ್ಲದೆ 12 ಗೋಲುಗಳನ್ನು ಗಳಿಸಿತ್ತು. ಮೊದಲ ಹಂತದ ಪಾಲಿ ಆಫ್ ನಲ್ಲಿ ಗೋವಾ 5-1 ಅಂತರದಲ್ಲಿ ಗೆದ್ದ ಬಳಿಕ ಮುಂಬೈ ಏರಡನೇ ಪ್ಲೇ ಆಫ್ ನಲ್ಲಿ 1-0 ಅಂತರದಲ್ಲಿ ಗೆದ್ದಿತ್ತು.

ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭೋತ್ಸವಕ್ಕೆ ಅಂತ್ಯ ಹಾಡಿದ ಬಿಸಿಸಿಐ!ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭೋತ್ಸವಕ್ಕೆ ಅಂತ್ಯ ಹಾಡಿದ ಬಿಸಿಸಿಐ!

ಈಗಾಗಲೇ ಮುಂಬೈ ವಿರುದ್ಧ ತನ್ನ ಪ್ರಭುತ್ವ ಸಾಧಿಸಿರುವ ಗೋವಾ ವಿರುದ್ಧ ಮುಂಬೈ ಯಶಸ್ಸು ಕಾಣಬೇಕಾದರೆ, ಕೋಸ್ಟಾ ತಮ್ಮ ಆಯ್ಕೆಯಲ್ಲಿ ಸಮತೋಲನವನ್ನು ತೋರಬೇಕಾಗಿದೆ. ಮುಂಬೈ ತಂಡ ಈ ಹಿಂದಿಯ ಪಂದ್ಯದಲ್ಲಿ ಒಡಿಶಾ ವಿರುದ್ಧ 2-4 ಗೋಲುಗಳ ಅಂತರದಲ್ಲಿ ಸೋಲನುಭವಿಸಿತ್ತು.

ಕೋಸ್ಟಾ ಅವರ ಪಡೆ ಸಾಕಷ್ಟು ಗಾಯದ ಸಮಸ್ಯೆ ಎದುರಿಸುತ್ತಿದೆ. ಡಿಫೆನ್ಸ್ ವಿಭಾಗದ ಆಟಗಾರ ಮ್ಯಾಟೊ ಗ್ರಿಗಿಕ್ ಅವರು ನಾಳೆಯ ಪಂದ್ಯ ಆಡುವುದು ಸಂಶಯ ಎನಿಸಿದೆ. ಉತ್ತಮ ಡಿಫೆನ್ಸ್ ವಿಭಾಗವನ್ನು ಹೊಂದಿರುವ ಗೋವಾ ವಿರುದ್ಧ ಮುಂಬೈಗೆ ಕೇವಲ ಭಾರತೀಯರನ್ನೊಳಗೊಂಡ ಡಿಫೆನ್ಸ್ ವಿಭಾಗವನ್ನು ಹೊಂದದೆ ಬೇರೆ ದಾರಿ ಇಲ್ಲ.

ಮೊದೌ ಸೌಗೌ ಗಾಯದಿಂದ ಇನ್ನೂ ಚೇತರಿಸಿಕೊಳ್ಳದ ಕಾರಣ ಕೋಸ್ತಾ ಅವರಿಗೆ ಬೇರೆ ಆಯ್ಕೆಯೇ ಇಲ್ಲವಾಗಿದೆ. ಒಡಿಶಾ ವಿರುದ್ಧದ ಪಂದ್ಯದಲ್ಲಿ ರೌಲಿನ್ ಬೋರ್ಗೆಸ್ ಗಾಯಗೊಂಡಿದ್ದು ನಾಳೆಯ ಪಂದ್ಯದಿಂದ ವಂಚಿತರರಾಗಲಿದ್ದಾರೆ.

ISL: Mumbai’s weak defense face test of time against Goa

''ಒಡಿಶಾ ಎಫ್ ಸಿ ವಿರುದ್ಧ ಸೋತ ಬಳಿಕ ಆಟಗಾರರೊಂದಿಗೆ ಮಾತನಾಡಿದ್ದೇನೆ. ನಾವು ತಪ್ಪುಗಳು ಪುನರಾವರ್ತನೆ ಆಗದಂತೆ ನೋಡಿಕೊಳ್ಳಬೇಕು. ಫುಟ್ಬಾಲ್ ಆಟದಲ್ಲಿ ನಿಮಗೆ ಅತಿಯಾದ ಆತ್ಮವಿಶ್ವಾಸ ಬಂತೆಂದರೆ ಅದು ಕೂಡ ಸಮಸ್ಯೆ, ನಾನು ಸುಲಭ ಪಂದ್ಯವನ್ನು ನಿರೀಕ್ಷಿಸುವುದಿಲ್ಲ, ಎಫ್ ಸಿ ಗೋವಾ ಕೂಡ ಸುಲಭ ಪಂದ್ಯವನ್ನು ನಿರೀಕ್ಷಿಸುವುದಿಲ್ಲ. ನಾವು ಅವರನ್ನು ಗೌರವಿಸುತ್ತೇವೆ, ಅದೇ ರೀತಿ ಅವರು ನಮ್ಮನ್ನು ಗೌರವಿಸುತ್ತಾರೆ.'' ಎಂದು ಪೋರ್ಚುಗೀಸ್ ಕೋಚ್ ಹೇಳಿದರು.

ಲೊಬೆರಾ ಅವರ ರಣತಂತ್ರವನ್ನು ಮುಂಬೈ ಸಮರ್ಪಕವಾಗಿ ಇದುವರೆಗೂ ಎದುರಿಸಿಲ್ಲ. ಯಾವಾಗಲೂ ಹರಸಾಹಸ ಪಡುತ್ತಿರುವುದು ಸಾಮಾನ್ಯವಾಗಿದೆ. ಆದರೆ ಕಾಡೆತ್ತು ಖ್ಯಾತಿಯ ಗೋವಾ ಈ ಬಾರಿಯ ಐಎಸ್ ಎಲ್ ನಲ್ಲಿ ನಿರೀಕ್ಷಿತ ಸಾಧನೆ ತೋರಿಲ್ಲ. ಚೆನ್ನೈಯಿನ್ ಎಫ್ ಸಿ ವಿರುದ್ಧ 3-0 ಅಂತರದಲ್ಲಿ ಗೆದ್ದ ಬಳಿಕ ಬೆಂಗಳೂರು ಹಾಗೂ ನಾರ್ತ್ ಈಸ್ಟ್ ಯುನೈಟೆಡ್ ವಿರುದ್ಧ ಹರಸಾಹಸದಲ್ಲಿ ಡ್ರಾ ಸಾಧಿಸಿತ್ತು. ಅಂತಿಮ ಕ್ಷಣದಲ್ಲಿ ಗೋಲ್ ಗಳಿಸಿಯೇ ಡ್ರಾ ಕಂಡಿತ್ತು.

ಐಪಿಎಲ್‌ನಲ್ಲಿ ಇನ್ಮುಂದೆ ಬರಲಿದ್ದಾರೆ ಗೇಮ್ ಚೇಂಜರ್ 'ಪವರ್ ಪ್ಲೇಯರ್‌'!ಐಪಿಎಲ್‌ನಲ್ಲಿ ಇನ್ಮುಂದೆ ಬರಲಿದ್ದಾರೆ ಗೇಮ್ ಚೇಂಜರ್ 'ಪವರ್ ಪ್ಲೇಯರ್‌'!

ಫರಾನ್ ಕೊರೊಮಿನಾಸ್ ಎರಡು ಗೋಲುಗಳನ್ನು ಗಳಿಸಿದ್ದು ಹ್ಯೂಗೋ ಬೌಮುಸ್ ಗಾಯದ ಸಮಸ್ಯೆ ಎದುರಿಸುತ್ತಿದ್ದಾರೆ. ಎಡು ಬೇಡಿಯ ಅವರಿಂದ ತಂಡಕ್ಕೆ ಇನ್ನೂ ಉತ್ತಮ ರೀತಿಯ ನೆರವಾಗಲಿಲ್ಲ. ಐಎಸ್ ಎಲ್ ಫೈನಲ್ ನಲ್ಲಿ ಸೋತ ಸ್ಥಾನದಲ್ಲೇ ಮತ್ತೊಂದು ಪಂದ್ಯ ನಡೆಯಲಿದೆ. ಇಲ್ಲಿ ಗೋವಾ ಆಟಗಾರರು ಭಾವುಕರಾಗವುದು ಸಹಜ, ಅದಕ್ಕೆ ಜಯವೊಂದೇ ಪರಿಹಾರ.

''ನನ್ನ ಆಟಗಾರರು 5-1 ಅಂತರದಲ್ಲಿ ಮುಂಬೈ ವಿರುದ್ಧ ಜಯ ಗಳಿಸಿದ್ದನ್ನು ಮರೆಯುವಂತಿಲ್ಲ. ನನ್ನ ಪ್ರಕಾರ ಪ್ರತಿಯೊಂದು ಪಂದ್ಯವೂ ಭಿನ್ನವಾಗಿರುತ್ತದೆ. ನಾಳೆಯ ಪಂದ್ಯ ಅತ್ಯಂತ ಕಠಿಣ ಎನಿಸಲಿದೆ ಏಕೆಂದರೆ ನಾವು ಒಂದು ಬಲಿಷ್ಠ ತಂಡದ ವಿರುದ್ಧ ಆಡಲಿದ್ದೇವೆ. ಹಿಂದಿನದ್ದು ಇತಿಹಾಸ, ಅದು ನಮಗೆ ಮುಖ್ಯವಾದುದಲ್ಲ,'' ಎಂದು ಲೊಬೆರಾ ಹೇಳಿದ್ದಾರೆ.

Story first published: Thursday, November 7, 2019, 0:58 [IST]
Other articles published on Nov 7, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X