ಐಎಸ್‌ಎಲ್: ನಾರ್ತ್ ಈಸ್ಟ್‌ಗೆ ಐತಿಹಾಸಿಕ ಸೆಮಿಫೈನಲ್, ಎದುರಾಳಿ ಬೆಂಗಳೂರು!

By Isl Media

ಗುವಾಹಟಿ, ಮಾರ್ಚ್ 6: ನಾರ್ತ್ ಈಸ್ಟ್ ಯುನೈಟೆಡ್ ತಂಡ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಮೊದಲ ಬಾರಿಗೆ ಸೆಮಿಫೈನಲ್ ತಲುಪಿದ್ದು, ಇದು ಪರ್ವತ ಪ್ರದೇಶದ ತಂಡಕ್ಕೆ ಐತಿಹಾಸಿಕ ಸಾಧನೆಯಾಗಿದೆ. ಐದು ವರ್ಷಗಳಲ್ಲಿ ತಂಡ ಇದೇ ಮೊದಲ ಬಾರಿಗೆ ಅಂತಿಮ ನಾಲ್ಕರ ಹಂತ ತಲುಪಿದೆ. ನಾರ್ತ್ ಈಸ್ಟ್ ಅಂತಿಮ ನಾಲ್ಕರ ಹಂತ ತಲುಪಿದ ಹಾದಿ ಸುಲಭವಾಗಿರಲಿಲ್ಲ. ಎರಡು ಬಾರಿ ನಾಕೌಟ್‌ನ ಹತ್ತಿರ ತಲುಪಿದ್ದರೂ ಕೂದಲೆಳೆಯ ಅಂತರದಲ್ಲಿ ವಂಚಿತವಾಗಿತ್ತು.

1
1052774

ಆದರೆ ಅಂತಿಮವಾಗಿ ಎಲೈಟ್ ತಂಡಗಳ ಸಾಲಿನಲ್ಲಿ ಸ್ಥಾನ ಪಡೆದಿದೆ. ಮೊದಲ ಹಂತದ ಸೆಮಿಫೈನಲ್ ಪಂದ್ಯದಲ್ಲಿ ನಾರ್ತ್ ಈಸ್ಟ್ ಬಲಿಷ್ಠ ಬೆಂಗಳೂರು ತಂಡದ ವಿರುದ್ಧ ಸೆಣಸಲಿದೆ. ಪ್ರತಿಯೊಬ್ಬ ಫುಟ್ಬಾಲ್ ಅಭಿಮಾನಿಗೂ ನಾರ್ತ್ ಈಸ್ಟ್ ತಂಡದ ಕೋಚ್ ಎಲ್ಕೊ ಷೆಟೋರಿ ಯಾವ ರೀತಿಯಸಲ್ಲಿ ತಂಡವನ್ನು ಸೆಮಿಫೈನಲ್‌ಗೆ ಕೊಂಡೊಯ್ದರು ಎಂಬುದರ ಬಗ್ಗೆ ಅಚ್ಚರಿ ಇದೆ. ಆದರೆ ತಂಡ ಆಡಿದ ರೀತಿ ನಮ್ಮ ಕಣ್ಣ ಮುಂದೆಯೇ ಇದೆ.

ಹಾರ್ದಿಕ್ ಪಾಂಡ್ಯ- ರಾಹುಲ್ ಪ್ರಕರಣ ಓಂಬುಡ್ಸ್ಮನ್‌ಗೆ ಶೀಘ್ರ ಹಸ್ತಾಂತರ

ಬೆಂಗಳೂರು ಎಫ್ಸಿ ಸತತ ಎರಡನೇ ಬಾರಿಗೆ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಕಳೆದ ಬಾರಿ ರನ್ನರ್ ಅಪ್ ಗೌರವ ಕಾಯ್ದುಕೊಂಡಿತ್ತು. ವಿರಾಮದ ನಂತರ ಬೆಂಗಳೂರು ತಂಡ ಉತ್ತಮ ಪ್ರದರ್ಶನ ತೋರುವಲ್ಲಿ ವಿಲವಾಗಿತ್ತು. ಆದರೂ ಲೀಗ್‌ನಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿತ್ತು, ನಾರ್ತ್ ಈಸ್ಟ್ ತಂಡ ನಾಲ್ಕನೇ ಸ್ಥಾನ ಪಡೆದು ಅಂತಿಮ ನಾಲ್ಕರ ಹಂತ ತಲುಪಿತ್ತು. ಬೆಂಗಳೂರು ತಂಡವನ್ನು ನಾರ್ತ್ ಈಸ್ಟ್ ಸೋಲಿಸಬಹುದೇ ಎಂಬುದು ಕುತೂಹಲದ ಸಂಗತಿ.

ವಿಜಯ್ ಶಂಕರ್‌ಗೆ ವಿಶೇಷ ಅಭಿನಂದನೆ ಸಲ್ಲಿಸಿದ ವಿರಾಟ್ ಕೊಹ್ಲಿ: ವಿಡಿಯೋ

'ಬೆಂಗಳೂರು ತಂಡ ಬಹಳ ಅದ್ಭುತ ತಂಡ. ನನ್ನ ಪ್ರಕಾರ ಬೆಂಗಳೂರು ತಂಡ ಉತ್ತಮ ಕ್ಲಬ್ ಎನಿಸಿದೆ. ಇದರರ್ಥ ನಾವು ಉತ್ತಮ ತಂಡದ ವಿರುದ್ಧ ಹೋರಾಡಲಿದ್ದೇವೆ. ಈ ಹಿಂದೆ ಎರಡು ಬಾರಿ ನಾವು ಬೆಂಗಳೂರು ವಿರುದ್ಧ ಆಡಿದ್ದೇವು, ನಾವು ಉತ್ತಮವಾಗಿಯೇ ಆಡಿದ್ದೇವು, ಹೆಚ್ಚುವರಿ ಸಮಯದಲ್ಲಿ ಸಮಯದಲ್ಲಿ ನಾವು ಯಶಸ್ಸು ಕಂಡಿದ್ದೆವು, ಆದರೆ ಬೆಂಗಳೂರಿನಲ್ಲಿ ನಾವು ಯಶಸ್ಸು ಕಾಣಲಿಲ್ಲ,' ಎಂದು ಷೆಟೋರಿ ಹೇಳಿದ್ದಾರೆ.

ಲೀಗ್ ಹಂತದಲ್ಲಿ ನಾರ್ತ್ ಈಸ್ಟ್ ತಂಡ ಬೆಂಗಳೂರಿಗೆ ಆತಿತ್ಯಾ ನೀಡಿದಾಗ ಉತ್ತಮ ಪ್ರದರ್ಶನ ತೋರಿತ್ತು. ಪಂದ್ಯದಲ್ಲಿ ತಂಡ ಯಶಸ್ಸು ಕಾಣುವ ಅಂಚಿನಲ್ಲಿತ್ತು, ಆದರೆ ಅಂತಿಮ ಹಂತದಲ್ಲಿ ಚೆಂಕೊ ಗಿಲಿಸ್ತೇನ್ ಗಳಿಸಿದ ಗೋಲು ಪಂದ್ಯವನ್ನು ಸಮಬಲಗೊಳಿಸಿತ್ತು. ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ನಾರ್ತ್ ಈಸ್ಟ್ ಅಂಕ ಗಳಿಸುವಲ್ಲಿ ವಿಲವಾಗಿತ್ತು. ಆದರೆ ಷೆಟೋರಿ ಈಗ ಹಿಂದಿಗಿಂತ ವಿಭಿನ್ನವಾದ ಯೋಜನೆಯನ್ನು ರೂಪಿಸಿಬೇಕಾಗಿದೆ.

ಇದು ಕೇವಲ ನಂಬರ್ ಅಷ್ಟೇ: 40ನೇ ಏಕದಿನ ಶತಕಕ್ಕೆ ಕೊಹ್ಲಿ ಪ್ರತಿಕ್ರಿಯೆ

'ಕಳೆದ 10-12 ಪಂದ್ಯಗಳಲ್ಲಿ ನಾನು ಬಹಳ ಹತಾಷೆಯ ಕ್ಷಣಗಳನ್ನು ಎದುರಿಸಬೇಕಾಯಿತು. ನಾವು ಕೇವಲ 16 ಆಟಗಾರರಿಂದ ಆಡಬೇಕಾಯಿತು. ಹಿಂದಿನ ಪಂದ್ಯದಲ್ಲಿ ನಾವು ಮತ್ತೊಂದು ರೆಡ್ ಕಾರ್ಡ್ ಪಡೆದೆವು. ಅದಲ್ಲದೆ ನಮ್ಮ ತಂಡದಲ್ಲಿ ಬೇರೆ ಸಮಸ್ಯೆಗಳು ಇವೆ. ಪಂದ್ಯಕ್ಕೆ ಮುನ್ನ ನಮ್ಮ ಆಯ್ಕೆ ಸಾಕಷ್ಟು ಇದೆ ಎಂದು ನಂಬಿದ್ದೇನೆ,' ಎಂದರು.

ಬೆಂಗಳೂರು ಎಫ್ ಸಿ ತಂಡ ಕೊನೆಯ ಲೀಗ್ ಹಂತದಲ್ಲಿ ಎರಡನೇ ದರ್ಜೆಯ ತಂಡವನ್ನು ಅಂಗಣಕ್ಕಿಳಿಸಿದ ಕಾರಣ ಬಹಳ ಅಂತರದಲ್ಲಿ ಹೀನಾಯ ಸೋಲನು'ವಿಸಿತ್ತು. ಆದರೆ ಕೋಚ್ ಕಾರ್ಲಸ್ ಕ್ವಾಡ್ರಾಟ್ ಆ ಸೋಲಿನ ಬಗ್ಗೆ ಹೆಚ್ಚು ಯೋಚಿಸಿಲ್ಲ. ಆದರೂ ಬೆಂಗಳೂರು ತಂಡ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನ ಗಳಿಸಿತ್ತು. ಬೆಂಗಳೂರು ಕೋಚ್‌ಗೆ ಚೆನ್ನಾಗಿ ಗೊತ್ತಿದೆ ಹಿಂದಿನ ಯಾವುದೇ ಯಶಸ್ಸು ಅಥವಾ ಸೋಲು ಪ್ಲೇ ಆಫ್ ನಲ್ಲಿ ಉಪಯೋಗಕ್ಕೆ ಬರುವುದಿಲ್ಲ ಎಂದು ಕ್ವಾಡ್ರಾಟ್ ಅವರಿಗೆ ಗೊತ್ತಿದೆ.

'ನಮ್ಮಂತೆಯೇ ನಾರ್ತ್ ಈಸ್ಟ್ ತಂಡದಲ್ಲಿ ಅವರದ್ದೇ ಆದ ಅಸ್ತ್ರಗಳಿವೆ. ಅವರ ವಿರುದ್ಧ ಆಡುತ್ತಿರುವ ನಮ್ಮಲ್ಲಿ ಕೆಲವು ಸಮಸ್ಯೆಗಳಿವೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಆದರೆ ಅವರು ಗಳಿಸಿದ್ದು, ಒಂದು ಅಂಕ ನಾವು ಗಳಿಸಿದ್ದು ನಾಲ್ಕು ಅಂಕ. ಅವರ ವಿರುದ್ಧ ನಾವು ಅಡಿದ್ದು ಉತ್ತಮ ಆಟ, ಹಾಗೂ ಅದ್ಭುತ ಫುಟ್ಬಾಲ್.' ಎಂದು ಕ್ವಾಡ್ರಾಟ್ ಹೇಳಿದ್ದಾರೆ.

ಹಿಂದಿನ ದಾಖಲೆ ಹಾಗೂ ಈಗಿನ ಸಾಮರ್ಥ್ಯವನ್ನು ಗಮಿಸಿದಾಗ ಬೆಂಗಳೂರು ಪಂದ್ಯ ಗೆಲ್ಲುವ ಫೇವರಿಟ್ ಎನಿಸಿದೆ, ಆದರೆ ಯಾವುದನ್ನೂ ಹಗುರವಾಗಿ ಪರಿಗಣಿಸುವಂತಿಲ್ಲ ಎಂದು ಕ್ವಾಡ್ರಾಟ್ ಹೇಳಿದ್ದಾರೆ.

'ಎರಡು ಲೀಗ್‌ನಲ್ಲಿ ನಾವು 78 ಅಂಕಗಳನ್ನು ಗಳಿಸಿದ್ದೇವೆ. 2017-2019ರ ಅವಧಿಯಲ್ಲಿ. ನಂತರದಲ್ಲಿ ಈ ಪಟ್ಟಿಯಲ್ಲಿ ಬರುವುದು 64 ಅಂಕಗಳನ್ನು ಗಳಿಸಿರುವ ಗೋವಾ ತಂಡ. ಆದರೆ ನಾವು ಪ್ಲೇ ಆಫ್ ನಲ್ಲಿ ಅಥವಾ ಫೈನಲ್‌ನಲ್ಲಿ ಸೋತರೆ ಅದು ಯಾವುದೇ ಕಾರಣಕ್ಕೂ ಈಗ ಪ್ರಯೋಜನಕ್ಕೆ ಬಾರದು, ಅದು ಸ್ಪರ್'ೆಯ ನಿಯಮ ಅದನ್ನು ನಾವು ಪಾಲಿಸಲೇ ಬೇಕು,' ಎಂದು ಸ್ಪೇನ್‌ನ ಕೋಚ್ ಹೇಳಿದ್ದಾರೆ.

ನಾಲ್ಕು ಬಾರಿ ನಡೆದ ಮುಖಾಮುಖಿಯಲ್ಲಿ ನಾರ್ತ್ ಈಸ್ಟ್ ತಂಡ ಬೆಂಗಳೂರು ವಿರುದ್ಧ ಗೆದ್ದಿರಲಿಲ್ಲ. ಬೆಂಗಳೂರು ಮೂರು ಬಾರಿ ಗೆದ್ದಿದೆ.

For Quick Alerts
ALLOW NOTIFICATIONS
For Daily Alerts
Story first published: Wednesday, March 6, 2019, 20:36 [IST]
Other articles published on Mar 6, 2019
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X