ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್ಎಲ್ 2019: ಮನೆಯಂಗಣದಲ್ಲಿ ಮಿಂಚಿದ ನಾರ್ತ್ ಈಸ್ಟ್

 ISL: NEUFC vs OFC: Asamoah Gyan heads winner for NorthEast

ಗುವಾಹಟಿ, ಅಕ್ಟೋಬರ್ 27: ರೆಡೀಮ್ ಟ್ಯಾಂಗ್ ( 2 ನೇ ನಿಮಿಷ) ಹಾಗೂ ಅಸಮಾಹ್ ಗ್ಯಾನ್ ( 84 ನೇ ನಿಮಿಷ) ಗಳಿಸಿದ ಅದ್ಭುತ ಗೋಲುಗಳ ನೆರವಿನಿಂದ ಆತಿಥೇಯ ನಾರ್ತ್ ಈಸ್ಟ್ ಯುನೈಟೆಡ್ ತಂಡ ಒಡಿಶಾ ವಿರುದ್ಧ 2-1 ಗೋಲುಗಳ ಅಂತರದಲ್ಲಿ ಜಯ ಗಳಿಸಿ ಇಂಡಿಯನ್ ಸೂಪರ್ ಲೀಗ್ ನ ಪ್ರಸಕ್ತ ಆವೃತ್ತಿಯಲ್ಲಿ ಜಯದ ಖಾತೆ ತೆರೆಯಿತು. ಕ್ಸಿಸ್ಕೋ ಹೆರ್ನಾಂಡಿಸ್ ( 71 ನೇ ನಿಮಿಷ) ಗೋಲು ಗಳಿಸಿ ಒಡಿಶಾದ ಸೋಲಿನ ಅಂತರವನ್ನು ಕಡಿಮೆ ಮಾಡಿದರು.

ದ್ವಿತೀಯಾರ್ಧದ ಕೊನೆಯ ಹಂತದಲ್ಲಿ ಕಾರ್ಲೋಸ್ ಡೆಲ್ಗಡೊ ರೆಡ್ ಕಾರ್ಡ್ ಗೆ ಗುರಿಯಾದದ್ದು ಒಡಿಶಾದ ಸೋಲಿಗೆ ಪ್ರಮುಖ ಕಾರ್ನವಾಯಿತು. ಹಿಂದಿನ ಪಂದ್ಯಕ್ಕೆ ಹೋಲಿಸಿದರೆ ಒಡಿಶಾ ಉತ್ತಮವಾಗಿಯೇ ಅದಿತ್ತು. ಆದರೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸುವಲ್ಲಿ ವಿಫಲವಾದದ್ದು ತಂಡದ ಹಿನ್ನಡೆಗೆ ಪ್ರಮುಖ ಕಾರಣವಾಯಿತು.

ಐಎಸ್ಎಲ್ 2019ರಲ್ಲಿ ಇತಿಹಾಸ ಬರೆಯಲು ಬೆಂಗಳೂರಿಗೆ ಅವಕಾಶಐಎಸ್ಎಲ್ 2019ರಲ್ಲಿ ಇತಿಹಾಸ ಬರೆಯಲು ಬೆಂಗಳೂರಿಗೆ ಅವಕಾಶ

ಬೆಂಗಳೂರು ಎಫ್ ಸಿ ವಿರುದ್ಧ ಸಾಧಿಸಿದ್ದು ನಾರ್ತ್ ಈಸ್ಟ್ ನ ಮನೋಬಲವನ್ನು ಹೆಚ್ಚಿಸಿರುವುದು ಸ್ಪಷ್ಟವಾಗಿತ್ತು. ಮನೆಯಂಗಣದ ಪ್ರೇಕ್ಷಕರ ಬೆಂಬಲ ಯಶಸ್ಸಿಗೆ ಮತ್ತೊಂದು ಕಾರಣವಾಗಿತ್ತು. ಜೇಮ್ಶೆಡ್ಪುರ ವಿರುದ್ಧದ ಪಂದ್ಯದಲ್ಲಿ ಒಡಿಶಾ ಹತ್ತು ಮಂದಿ ಆಟಗಾರರಿರುವಾಗ ಗೋಲು ಗಳಿಸುವಲ್ಲಿ ವಿಫಲವಾಗಿತ್ತು, ಇಲ್ಲಿ ಹತ್ತು ಮಂದಿ ಆಟಗಾರರಿರುವಾಗ ಗೋಲನ್ನು ತಡೆಯುವಲ್ಲಿ ವಿಫಲವಾಯಿತು.

ಕಾರ್ಲೋಸ್ ಡೆಲ್ಗಡೊಗೆ ರೆಡ್ ಕಾರ್ಡ್

ಕಾರ್ಲೋಸ್ ಡೆಲ್ಗಡೊಗೆ ರೆಡ್ ಕಾರ್ಡ್

ಕಾರ್ಲೋಸ್ ಡೆಲ್ಗಡೊ ಪ್ರಮಾದವೆಸಗಿದ ಕಾರಣ ರೆಡ್ ಕಾರ್ಡ್ ಸ್ವೀಕರಿಸಬೇಕಾಯಿತು. ಪರಿಣಾಮ ಒಡಿಶಾ ತಂಡ ದ್ವಿತೀಯಾರ್ಧದ ಒಂದಿಷ್ಟು ಸಮಯವನ್ನು ಕೇವಲ ಹತ್ತು ಮಂದಿ ಆಟಗಾರರಲ್ಲೇ ಮುಂದುವರಿಸಬೇಕಾಯಿತು. ನಾರ್ತ್ ಈಸ್ಟ್ ಇದರ ಸದುಪಯೋಗ ಪಡೆದುಕೊಂಡಿತು. ಅಸಮಾಹ್ ಗ್ಯಾನ್ 84ನೇ ನಿಮಿಷದಲ್ಲಿ ಗೋಲು ಗಳಿಸಿ ತಂಡಕ್ಕೆ ಜಯದ ಮುನ್ನುಡಿ ಬರೆದರು. 71 ನೇ ನಿಮಿಷದಲ್ಲಿ ಕ್ಸಿಸ್ಕೋಹೆರ್ನಾಂಡೀಸ್ ಗಳಿಸಿದ ಗೋಲು ಪಂದ್ಯವನ್ನು ಸಮಬಲಗೊಳಿಸಿತ್ತು.

ರೆಡೀಮ್ ಟ್ಯಾಂಗ್ ಎರಡನೇ ನಿಮಿಷದಲ್ಲಿ ಗಳಿಸಿದ ಗೋಲಿನಿಂದ ಆತಿಥೇಯ ನಾರ್ತ್ ಈಸ್ಟ್ ಯುನೈಟೆಡ್ ಪ್ರಥಮಾರ್ಧದಲ್ಲಿ ಮೇಲುಗೈ ಸಾಧಿಸಿತು. ಅಲ್ಲಿಂದ ಒಡಿಶಾ ಎಫ್ ಡಿಫೆನ್ಸ್ ವಿಭಾಗದ ಕಡೆಗೆ ಹೆಚ್ಚಿನ ಗಮನ ಹರಿಸಿತು. ಆಕ್ರಮಣಕಾರಿ ಆಟದ ಪರಿಣಾಮ ಯಲ್ಲೋ ಕಾರ್ಡ್ ಹೆಚ್ಚು ಚಲಾವಣೆ ಕಂಡಿತು.

ಎರಡನೇ ನಿಮಿಷದಲ್ಲಿ ನಾರ್ತ್ ಈಸ್ಟ್ ಗೋಲು

ಎರಡನೇ ನಿಮಿಷದಲ್ಲಿ ನಾರ್ತ್ ಈಸ್ಟ್ ಗೋಲು

ಪಂದ್ಯ ಆರಂಭಗೊಂಡ ಎರಡನೇ ನಿಮಿಷದಲ್ಲಿ ನಾರ್ತ್ ಈಸ್ಟ್ ಗೋಲು ಗಳಿಸಿ ಮುನ್ನಡೆ ಕಂಡಿತು, ಮಾರ್ಟಿನ್ ಚಾವೇಸ್ ಎಡಭಾಗದಲ್ಲಿ ಬಂದ ಚೆಂಡನ್ನು ಸೆಂಟರ್ ವಿಭಾಗಕ್ಕೆ ಕಳುಹಿಸಿದರು. ಬಾಕ್ಸ್ ನ ಹೊರಭಾಗದಲ್ಲಿ ಪನಾಗಿಯೋಟಿಸ್ ಟ್ರಿಯಾಡಿಸ್ ಅದನ್ನು ಸ್ವೀಕರಿಸಿದರು. ತನ್ನ ಬಲಭಾಗದಲ್ಲಿರುವ ರೆಡೀಮ್ ಟ್ಯಾಂಗ್ ಅವರಿಗೆ ನೀಡಿದರು. ಹಾಗೆ ಬಂದ ಚೆಂಡನ್ನು ನಿಯಂತ್ರಿಸಿದ ರೆಡೀಮ್ ಗೋಲ್ ಬಾಕ್ಸ್ ಗೆ ಗುರಿ ಇಟ್ಟು ತುಳಿದಾಗ ಒಡಿಶಾ ಗೋಲ್ ಕೀಪರ್ ಗೆ ಚೆಂಡನ್ನು ತಡೆಯಲಾಗಲಿಲ್ಲ. ಮನೆಯಂಗಣದ ಪ್ರೇಕ್ಷಕರಿಗೆ ಎಲ್ಲಿಲ್ಲದ ಸಂಭ್ರಮ. ನಾರ್ತ್ ಈಸ್ಟ್ ಗೆ ಆರಂಭಿಕ ಮುನ್ನಡೆ.

ನಾರ್ತ್ ಈಸ್ಟ್ ಯುನೈಟೆಡ್ ಮೊದಲ ಪಂಡ್ಯ ಡ್ರಾ

ನಾರ್ತ್ ಈಸ್ಟ್ ಯುನೈಟೆಡ್ ಮೊದಲ ಪಂಡ್ಯ ಡ್ರಾ

ಇಂಡಿಯನ್ ಸೂಪರ್ ಲೀಗ್ ನ ಸಂಭ್ರಮ ಮೊದಲ ವಾರಾಂತ್ಯಕ್ಕೆ ಸಮೀಪಿಸುತ್ತಿದ್ದಂತೆ ನಾರ್ತ್ ಈಸ್ಟ್ ಯುನೈಟೆಡ್ ಹಾಗೂ ಒಡಿಶಾ ಎಫ್ ಸಿ ತಂಡಗಳು ಗುವಾಹಟಿಯಲ್ಲಿ ಮುಖಾಮುಖಿಯಾದವು. ಋತುವಿನ ಮೊದಲ ಪಂದ್ಯದಲ್ಲಿ ನಾರ್ತ್ ಈಸ್ಟ್ ಯುನೈಟೆಡ್ ತಂಡ ತನ್ನ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬೆಂಗಳೂರು ವಿರುದ್ಧ ಡ್ರಾ ಸಾಧಿಸಿತ್ತು. ಒಡಿಶಾ ತಂಡ ಇದಕ್ಕೆ ವಿರುದ್ಧವಾಗಿದೆ, ಮೊದಲ ಪಂದ್ಯದಲ್ಲೇ ಜೇಮ್ಶೆಡ್ಪುರ ವಿರುದ್ಧದ ತನ್ನ ಮೊದಲ ಪಂದ್ಯದಲ್ಲಿ ಸೋಲನುಭವಿಸಿತ್ತು. ಜೇಮ್ಶೆಡ್ಪುರ ತಂಡ ಒಂದು ಗಂಟೆ ಕಾಲ ಕೇವಲ ಹತ್ತು ಮಂದಿ ಆಟಗಾರರಿಂದ ಕೂಡಿದರೂ ಒಡಿಶಾ ಗೋಲು ಗಳಿಸುವಲ್ಲಿ ವಿಫಲವಾಗಿತ್ತು.

ಮನೆಯಂಗಣದ ಪ್ರೇಕ್ಷಕರ ಬೆಂಬಲ

ಮನೆಯಂಗಣದ ಪ್ರೇಕ್ಷಕರ ಬೆಂಬಲ

ಈಗ ಮನೆಯಂಗಣಕ್ಕೆ ಆಗಮಿಸರುವ ಹೊಸ ತಂಡದ ವಿರುದ್ಧ ಮೊದಲ ಜಯ ಗಳಿಸುವ ಗುರಿಯೊಂದಿಗೆ ನಾರ್ತ್ ಈಸ್ಟ್ ಯುನೈಟೆಡ್ ಅಂಗಣಕ್ಕಿಳಿಯಿತು, ಮೊದಲ ಪಂದ್ಯದಲ್ಲಿ ಮಾಡಿರುವ ಪ್ರಮಾದಗಳ ಪುನರಾವರ್ತನೆ ಆಗದೆ ಇರುವುವದರ ಕಡೆಗೆ ಒಡಿಶಾ ಗಮನ ಹರಿಸಿತು. ಬೆಂಗಳೂರು ಎಫ್ ಸಿ ವಿರುದ್ಧ ಸಾಧಿಸಿದ್ದು ನಾರ್ತ್ ಈಸ್ಟ್ ನ ಮನೋಬಲವನ್ನು ಹೆಚ್ಚಿಸಿರುವುದು ಸ್ಪಷ್ಟವಾಗಿತ್ತು. ಮನೆಯಂಗಣದ ಪ್ರೇಕ್ಷಕರ ಬೆಂಬಲ ಯಶಸ್ಸಿಗೆ ಮತ್ತೊಂದು ಕಾರಣವಾಗಿತ್ತು. ಜೇಮ್ಶೆಡ್ಪುರ ವಿರುದ್ಧದ ಪಂದ್ಯದಲ್ಲಿ ಒಡಿಶಾ ಹತ್ತು ಮಂದಿ ಆಟಗಾರರಿರುವಾಗ ಗೋಲು ಗಳಿಸುವಲ್ಲಿ ವಿಫಲವಾಗಿತ್ತು, ಇಲ್ಲಿ ಹತ್ತು ಮಂದಿ ಆಟಗಾರರಿರುವಾಗ ಗೋಲನ್ನು ತಡೆಯುವಲ್ಲಿ ವಿಫಲವಾಯಿತು.

Story first published: Sunday, October 27, 2019, 13:06 [IST]
Other articles published on Oct 27, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X