ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಅಂಕ ಹಂಚಿಕೊಂಡ ಈಸ್ಟ್ ಬೆಂಗಾಲ್-ಕೇರಳ ಬ್ಲಾಸ್ಟರ್ಸ್

By Isl Media
ISl: Neville saves the blushes for East Bengal with late equaliser against Kerala Blasters

ಗೋವಾ: ಕೇರಳ ಬ್ಲಾಸ್ಟರ್ಸ್ ಪರ ಜಾರ್ಡನ್ ಮರ್ರೆ (64ನೇ ನಿಮಿಷ) ಹಾಗೂ ಎಸ್ ಸಿ ಈಸ್ಟ್ ಬೆಂಗಾಲ್ ಪರ ಸ್ಕಾಟ್ ನೆವಿಲ್ಲೇ (90ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಹೀರೋ ಇಂಡಿಯನ್ ಸೂಪರ್ ಲೀಗ್ ನ 59ನೇ ಪಂದ್ಯ 1-1 ಗೋಲಿನಿಂದ ಸಮಬಲಗೊಂಡಿತು. ದ್ವಿತಿಯಾರ್ಧದಲ್ಲಿ ಕೇರಳ ಮೇಲುಗೈ ಸಾಧಿಸಿದರೂ ಕೊನೆಯ ಕ್ಷಣದವರೆಗೂ ಉತ್ತಮ ರೀತಿಯಲ್ಲಿ ಪೈಪೋಟಿ ನೀಡಿದ ಎಸ್ ಸಿ ಈಸ್ಟ್ ಬೆಂಗಾಲ್ ಕೇರಳದ ಜಯ ಕಸಿದುಕೊಂಡು ಅಂಕ ಹಂಚಿಕೊಂಡಿತು. ಈ ಫಲಿತಾಂಶದೊಂದಿಗೆ ಇತ್ತಂಡಗಳು ತಾವಿರುವ ಸ್ಥಾನದಲ್ಲೇ ಮುಂದುವರಿದವು.

ಶ್ರೀಕಾಂತ್‌ಗೆ ಗಾಯ, ಥೈಲ್ಯಾಂಡ್ ಓಪನ್‌ನಲ್ಲಿ ಭಾರತದ ಸ್ಪರ್ಧೆ ಕೊನೆಶ್ರೀಕಾಂತ್‌ಗೆ ಗಾಯ, ಥೈಲ್ಯಾಂಡ್ ಓಪನ್‌ನಲ್ಲಿ ಭಾರತದ ಸ್ಪರ್ಧೆ ಕೊನೆ

ಗೋಲೇ ಇಲ್ಲದ ಪ್ರಥಮಾರ್ಧ: ಇತ್ತಂಡಗಳ ಆಟಗಾರರು ಉತ್ತಮ ರೀತಿಯಲ್ಲೇ ಆಡಿದರು ಪರಿಣಾಮ ಗೋಲಾಗಲಿಲ್ಲ. ಎರಡೂ ತಂಡಗಳಿಗೂ ಅವಕಾಶವಿದ್ದಿತ್ತು, ಆದರೆ ಗೋಲಾಗಿ ಪರಿವರ್ತನೆಗೊಂಡಿಲ್ಲ. ಇತ್ತಮಡಗಳ ಆಟದಲ್ಲಿ ಆಕ್ರಮಣವಿದ್ದಿತ್ತು, ನಿಯಂತ್ರಣವಿದ್ದಿತ್ತು, ಪಂದ್ಯ ಏಖಮುಖವಾಗಿ ಸಾಗಲಿಲ್ಲ.

ಆಸ್ಟ್ರೇಲಿಯಾ ಮಾಧ್ಯಮಗಳ ಅಸಲಿಯತ್ತು ಬಿಚ್ಚಿಟ್ಟ ಕೆವಿನ್ ಪೀಟರ್ಸನ್!ಆಸ್ಟ್ರೇಲಿಯಾ ಮಾಧ್ಯಮಗಳ ಅಸಲಿಯತ್ತು ಬಿಚ್ಚಿಟ್ಟ ಕೆವಿನ್ ಪೀಟರ್ಸನ್!

ಗೋಲ್ ಕೀಪರ್ ಗಳ ಮಿಂಚಿನ ಕಾರ್ಯಕ್ಷಮತೆಯಿಂದ ಮೊದಲಾರ್ಧದಲ್ಲಿ ಗೋಲಿಗೆ ಅವಕಾಶ ಸಿಗಲಿಲ್ಲ. ಗ್ಯಾರಿ ಹೋಪರ್ ಹಾಗೂ ಜೊರ್ಡನ್ ಮರ್ರೆ ಕೆಲ ಹೊತ್ತು ಎಸ್ ಸಿ ಈಸ್ಟ್ ಬೆಂಗಾಲ್ ತಂಡವನ್ನು ಕಸಿವಿಸಿಗೊಳಿಸಿದ್ದರು. ಆದರೆ ಗೋಲಾಗಲಿಲ್ಲವೆಂದರೆ ಯಾವುದೇ ಆಕ್ರಮಣ ಅಥವಾ ಡಿಫೆನ್ಸ್ ನಡೆಯಿಂದ ಪ್ರಯೋಜನವಿರುವುದಿಲ್ಲ. ಕುತೂಹಲ ದ್ವಿತಿಯಾರ್ಧದತ್ತ ತಿರುಗಿತು.

ಜಯದ ನಿರೀಕ್ಷೆ

ಜಯದ ನಿರೀಕ್ಷೆ

ಕೇರಳ ಬ್ಲಾಸ್ಟರ್ಸ್ ಹಾಗೂ ಈಸ್ಟ್ ಬೆಂಗಾಲ್ ತಂಡಗಳು ಹೀರೋ ಇಂಡಿಯನ್ ಸೂಪರ್ ಲೀಗ ನ 59ನೇ ಪಂದ್ಯದಲ್ಲಿ ಜಯದ ನಿರೀಕ್ಷೆ ಹೊತ್ತು ಅಂಗಣಕ್ಕಿಳಿದವು. ಲೀಗ್ ನಲ್ಲಿ ನಡೆದ ಹಿಂದಿನ ಪಂದ್ಯದಲ್ಲಿ ಇತ್ತಂಡಗಳು 1-1 ಡ್ರಾದಲ್ಲಿ ಸಮಬಲ ಸಾಧಿಸಿದ್ದವು. ಜೇಕ್ಸನ್ ಸಿಂಗ್ ಅಂತಿಮ ಕ್ಷಣದಲ್ಲಿ ಗಳಿಸಿದ ಗೋಲು ಪಂದ್ಯವನ್ನು ಸಮಬಲಗೊಳಿಸಿತ್ತು. ಕಳೆದ ಐದು ಪಂದ್ಯಗಳಲ್ಲಿ ಈಸ್ಟ್ ಬೆಂಗಾಲ್ ಸೋಲು ಅನುಭವಿಸಿರಲಿಲ್ಲ. ಅಂಕಿತ್ ಮುಖರ್ಜಿ ಹಾಗೂ ರಾಜು ಗಾಯಕ್ವಾಡ್ ಈಸ್ಟ್ ಬೆಂಗಾಲ್ ತಂಡದ ಡಿಫೆನ್ಸ್ ವಿಭಾಗದ ಆಧಾರ ಸ್ತಂಭ ಎನಿಸಿದ್ದಾರೆ.

ತಂಡದ ಶಕ್ತಿಯನ್ನು ಹೆಚ್ಚಿಸಿದೆ

ತಂಡದ ಶಕ್ತಿಯನ್ನು ಹೆಚ್ಚಿಸಿದೆ

ಎನೊಬಾಖರ್ಸ್ ಅವರ ಆಗಮನ ಈಸ್ಟ್ ಬೆಂಗಾಲ್ ತಂಡದ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ. ಆ ಬಳಿಕ ಈಸ್ಟ್ ಬೆಂಗಾಲ್ ತಂಡ ಪ್ರತಿಯೊಂದು ಪಂದ್ಯದಲ್ಲೂ ಗೋಲು ಗಳಿಸಿರುವುದು ಗಮನಾರ್ಹ. ದೇವಜಿತ್ ಮಜುಂದಾರ್ ಗೋಲ್ ಕೀಪಿಂಗ್ ನಲ್ಲಿ ಉತ್ತಮ ಕಾರ್ಯನಿರ್ವಹಿಸಿದ್ದು, ಬೆಂಗಳೂರು ಎಫ್ ಸಿ ವಿರುದ್ಧದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ್ದನ್ನು ಮರೆಯುವಂತಿಲ್ಲ. ಜೆಮ್ಷೆಡ್ಪುರ ವಿರುದ್ಧದ ಪಂದ್ಯದಲ್ಲಿ 3-2 ಗೋಲುಗಳ ಅಂತರದಲ್ಲಿ ಜಯ ಗಳಿಸಿದ ಕೇರಳ ಬ್ಲಾಸ್ಟರ್ಸ್ ಮತ್ತೊಂದು ಪಂದ್ಯವನ್ನು ಗೆಲ್ಲುವ ಆತ್ಮವಿಶ್ವಾಸದಲ್ಲಿದೆ. ಆ ಪಂದ್ಯದಲ್ಲಿ ಜೋರ್ಡನ್ ಮರ್ರೆ ಎರಡು ಗೋಲುಗಳನ್ನು ಗಳಿಸಿ ತಮ್ಮ ಗೋಲಿನ ಸಂಖ್ಯೆಯನ್ನು 5ಕ್ಕೆ ಏರಿಸಿಕೊಂಡಿದ್ದರು.

ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ

ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ

ಬ್ಲಾಸ್ಟರ್ಸ್ ಪರ ಅತಿ್ ಹೆಚ್ಚು ಗೋಲು ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಂತಿಮ ಕ್ಷಣದಲ್ಲಿ ಆಕ್ರಮಣಕಾರಿ ಆಟ ಪ್ರದರ್ಶಿಸುವ ಕೇರಳ ಬ್ಲಾಸ್ಟರ್ಸ್ ಅಂತಿಮ 15 ನಿಮಿಷಗಳ ಆಟದಲ್ಲಿ ಇದುವರೆಗೂ 6 ಗೋಲುಗಳನ್ನು ಗಳಿಸಿದೆ. ರಾಬಿ ಫ್ಲವರ್ ಪಡೆ ಅಜೇಯ ಓಟಕ್ಕೆ ಕಿಬು ವಿಕುನಾ ಪಡೆ ಯಾವ ರೀತಿಯಲ್ಲಿ ಬ್ರೇಕ್ ನೀಡುತ್ತದೆ ಎಂಬುದು ಕುತೂಹಲದ ಅಂಶ.

Story first published: Friday, January 15, 2021, 23:57 [IST]
Other articles published on Jan 15, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X