ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್‌ 2019: ನಾರ್ತಲ್ಲೂ ನಾರ್ತ್ ಈಸ್ಟ್ ಯುನೈಟೆಡ್ ಬೆಸ್ಟ್

By Isl Media
ISL: NorthEast climb above Mumbai with timely win

ಮುಂಬೈ, ಫೆಬ್ರವರಿ 13: ರೌಲಿನ್ ಬೊರ್ಗೆಸ್ (4ನೇ ನಿಮಿಷ) ಹಾಗೂ ಬಾರ್ತಲೋಮ್ಯೊ ಒಗ್ಬಚೆ (33ನೇ ನಿಮಿಷ) ಗಳಿಸಿದ ಗೋಲಿನಿಂದ ನಾರ್ತ್ ಈಸ್ಟ್ ಯುನೈಟೆಡ್ ತಂಡ ಮುಂಬೈ ಸಿಟಿ ವಿರುದ್ಧ 2-0 ಅಂತರದಲ್ಲಿ ಅಮೂಲ್ಯ ಜಯ ಗಳಿಸಿತು, ಈ ಜಯದೊಂದಿಗೆ ನಾರ್ತ್ ಈಸ್ಟ್ ಪ್ಲೇ ಆಫ್ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡು ಎರಡನೇ ಸ್ಥಾನಕ್ಕೆ ತಲುಪಿತು. ಗೋವಾ ತಂಡ ನಾಲ್ಕನೇ ಸ್ಥಾನ ತಲುಪಿದ ಕಾರಣ ಗುರುವಾರ ಗೋವಾ ಮತ್ತು ಎಟಿಕೆ ನಡುವಿನ ಪಂದ್ಯ ಮತ್ತಷ್ಟು ಕುತೂಹಲಕ್ಕೆ ಎಡೆಮಾಡಿ ಕೊಟ್ಟಿದೆ.

ಹಲ್ಲೆ ಪ್ರಕರಣ: ಅಂಡರ್-23 ಕ್ರಿಕೆಟರ್ ಅನುಜ್ ದೇಢಾಗೆ ಆಜೀವ ನಿಷೇಧ!ಹಲ್ಲೆ ಪ್ರಕರಣ: ಅಂಡರ್-23 ಕ್ರಿಕೆಟರ್ ಅನುಜ್ ದೇಢಾಗೆ ಆಜೀವ ನಿಷೇಧ!

ಪ್ರಥಮಾರ್ಧದಲ್ಲಿ ನಾರ್ತ್ ಈಸ್ಟ್ 2 ಗೋಲುಗಳನ್ನು ಗಳಿಸಿ ಮುಂಬೈಗೆ ಮನೆಯಂಗಣದಲ್ಲೇ ಆಘಾತ ನೀಡಿತು. ಪಂದ್ಯ ಆರಂಭಗೊಂಡ ನಾಲ್ಕನೇ ನಿಮಿಷದಲ್ಲಿ ರೌಲಿನ್ ಬೋರ್ಗಸ್ ಗಳಿಸಿದ ಗೋಲು ಪ್ರವಾಸಿ ತಂಡಕ್ಕೆ ಮೇಲುಗೈ ಸಾಧಿಸುವಂತೆ ಮಾಡಿತು. ನಂತರ 33ನೇ ನಿಮಿಷದಲ್ಲಿ ಬಾರ್ತಲೋಮ್ಯೊ ಒಗ್ಬಚೆ ಗಳಿಸಿದ ಗೋಲು ಮುಂಬೈ ಪ್ರೇಕ್ಷಕರನ್ನು ಮೌನಕ್ಕೆ ಸರಿಯುವಂತೆ ಮಾಡಿತು. ಒಗ್ಬಚೆ ಈಗ ಗೋಲ್ಡನ್ ಬೂಟ್ ಗೆಲ್ಲು ಅಗ್ರ ಸ್ಥಾನದಲ್ಲಿರುವ ಆಟಗಾರರೆನಿಸಿದರು. ಒಟ್ಟು 12 ಗೋಲುಗಳನ್ನು ತಮ್ಮ ಹೆಸರಿನಲ್ಲಿ ದಾಖಲಿಸಿಕೊಂಡರು.

ರಾಹುಲ್ ಅರ್ಧಶತಕ, ಇಂಗ್ಲೆಂಡ್ ಲಯನ್ಸ್ ಎದುರು ಭಾರತ 'ಎ' ಉತ್ತಮ ರನ್ರಾಹುಲ್ ಅರ್ಧಶತಕ, ಇಂಗ್ಲೆಂಡ್ ಲಯನ್ಸ್ ಎದುರು ಭಾರತ 'ಎ' ಉತ್ತಮ ರನ್

ನಾರ್ತ್ ಈಸ್ಟ್ ತಂಡ ಆರಂ'ದಿಂದಲೂ ತನ್ನ ನೈಜ ಆಟವನ್ನು ಪ್ರದರ್ಶಿಸಿತು. ಕೀಗನ್ ಪೆರೆರಾ ನೀಡಿದ ಪಾಸ್ ಬೋರ್ಗಸ್ ಅವರ ನಿಯಂತ್ರಣಕ್ಕೆ ಸುಲಭವಾಗಿ ಸಿಕ್ಕಿತ್ತು. ಅಲ್ಲದೆ ಗೋಲನ್ನು ಬಾಕ್ಸ್‌ಗೆ ತಲುಪಿಸಲು ಸಾಕಷ್ಟು ಅವಕಾಶವಿದ್ದಿತ್ತು. ಇದರಿಂದಾಗಿ ಮುಂಬೈ ಗೋಲ್‌ಕೀಪರ್‌ಗೆ ಯಾವುದೇ ರೀತಿಯಲ್ಲಿ ಚೆಂಡನ್ನು ತಡೆಯಲಾಗಲಿಲ್ಲ. ನಾಲ್ಕನೇ ನಿಮಿಷದಲ್ಲಿ ಪ್ರವಾಸಿ ತಂಡ ಮುನ್ನಡೆ ಕಂಡ ಕಾರಣ ಆತಿಥೇಯರಿಗೆ ಒತ್ತಡ. ಮುಂಬೈ ತಂಡಕ್ಕೆ ಒಂದೆರಡು ಅವಕಾಶ ಸಿಕ್ಕಿದರೂ ಅದಕ್ಕೆ ನಾರ್ತ್ ಈಸ್ಟ್‌ನ ಗೋಲ್‌ಕೀಪರ್ ಉತ್ತಮ ರೀತಿಯಲ್ಲಿ ತಡೆಯೊಡ್ಡಿದರು. ರೆಲ್ ಬಾಸ್ಟೋಸ್ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲಿಲ್ಲ. ಅವರು ತುಳಿದ ಚೆಂಡು ಗೋಲ್‌ಬಾಕ್ಸ್‌ನ ಅಂಚಿನ ತಗಲಿ ಹೊರ ನಡೆಯಿತು. 33ನೇ ನಿಮಿಷದಲ್ಲಿ ಒಗ್ಬಚೆ ಗಳಿಸಿದ ಗೋಲು ಪ್ರವಾಸಿ ತಂಡಕ್ಕೆ 2-0 ಅಂತರದಲ್ಲಿ ಮುನ್ನಡೆ ಕಲ್ಪಿಸಿತು.

ಐಪಿಎಲ್ 2019ರ ಪೂರ್ಣ ವೇಳಾಪಟ್ಟಿ ಪ್ರಕಟಗೊಳ್ಳದ್ದಕ್ಕೆ ಕಾರಣ ಬಹಿರಂಗಐಪಿಎಲ್ 2019ರ ಪೂರ್ಣ ವೇಳಾಪಟ್ಟಿ ಪ್ರಕಟಗೊಳ್ಳದ್ದಕ್ಕೆ ಕಾರಣ ಬಹಿರಂಗ

ಪ್ರಸಕ್ತ ಸಾಲಿನ ಇಂಡಿಯನ್ ಸೂಪರ್ ಲೀಗ್‌ನ 75ನೇ ಪಂದ್ಯ. ಎರನಡೇ ಸ್ಥಾನದಲ್ಲಿರುವ ಮುಂಬೈ ಸಿಟಿ ತಂಡ ಹಾಗೂ ನಾಲ್ಕನೇ ಸ್ಥಾನದಲ್ಲಿರುವ ನಾರ್ತ್ ಈಸ್ಟ್ ಯುನೈಟೆಡ್ ತಂಡಗಳ ನಡುವಿನ ಹೋರಾಟ. ಇತ್ತಂಡಗಳಿಗೂ ಇನ್ನು ಮೂರು ಪಂದ್ಯ ಬಾಕಿ ಇದೆ. ಇತ್ತಂಡಗಳು ಮೂರು ಅಂಕಗಳಿಂದ ಪ್ರತ್ಯೇಕಗೊಂಡಿವೆ. ಜೆಮ್ಷೆಡ್ಪುರ ತಂಡ ನಾರ್ತ್ ಈಸ್ಟ್‌ಗಿಂತ ಕೆಳಗಡೆ ಇದ್ದು, ಕೇವಲ ಒಂದು ಅಂಕ ಹಿಂದೆ ಬಿದ್ದಿದೆ. ಆದ್ದರಿಂದ ನಾರ್ತ್ ಈಸ್ಟ್‌ಗೆ ಈ ಪಂದ್ಯ ಅಂತ್ಯತ ಪ್ರಮುಖವೆನಿಸಿದೆ. ಮುಂಬೈ ತಂಡ ಸತತ ಎರಡು ಸೋಲುಗಳನ್ನು ಅನು'ವಿಸಿ ಈ ಪಂದ್ಯಕ್ಕೆ ಸಜ್ಜಾಯಿತು. ಮನೆಯಂಗಣದಲ್ಲಿ ಮುಂಬೈಗೆ ಇದು ಋತುವಿನ ಕೊನೆಯ ಪಂದ್ಯವಾಗಿದೆ. ನಾರ್ತ್ ಈಸ್ಟ್ ಹಿಂದಿನ ಎರಡು ಪಂದ್ಯಗಳಲ್ಲಿ ಒಂದು ಸೋಲು ಹಾಗೂ ಒಂದು ಡ್ರಾ ಕಂಡಿದೆ. ಮುಖಾಮುಖಿಯ ವಿಚಾರ ಬಂದಾಗ ಮುಂಬೈ ತಂಡ ಮೇಲುಗೈ ಸಾಧಿಸಿದೆ.

ಆಡಿರುವ 9 ಪಂದ್ಯಗಳಲ್ಲಿ ಮುಂಬೈ 6 ಪಂದ್ಯಗಳಲ್ಲಿ ಜಯ ಕಂಡಿದೆ. ಎರಡು ಪಂದ್ಯಗಳಲ್ಲಿ ನಾರ್ತ್ ಈಸ್ಟ್ ಯಶಸ್ಸು ಕಂಡಿದೆ. ಒಂದು ಪಂದ್ಯ ಡ್ರಾದಲ್ಲಿ ಕೊನೆಗೊಂಡಿದೆ. ಈ ಬಾರಿ ಇತ್ತಂಡಗಳು ಒಂದು ಬಾರಿ ಮುಖಾಮುಖಿಯಾಗಿದ್ದು, ಮುಂಬೈ ಏಕೈಕ ಗೋಲಿನಿಂದ ಜಯ ಕಂಡಿತ್ತು. 11 ಗೋಲುಗಳನ್ನು ಗಳಿಸಿರುವ ನಾಯಕ ಬಾರ್ತಲೋಮ್ಯೊ ಒಗ್ಬಚೆ ಅವರಿಗೆ ಫೆರಾನ್ ಕೊರೊಮಿನಾಸ್ ಅವರನ್ನು ಹಿಂದಿಕ್ಕಲು ಉತ್ತಮ ಅವಕಾಶ.

Story first published: Wednesday, February 13, 2019, 23:12 [IST]
Other articles published on Feb 13, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X