ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2020: ಲೆಕ್ಕಾಚಾರದಲ್ಲಿ ನಾರ್ಥ್ ಈಸ್ಟ್‌ಗೆ ಇನ್ನೂ ಇದೆ ಅವಕಾಶ!

By Isl Media
ISL: NorthEast left with too much to do as Ogbeche returns ‘home’

ಗುವಾಹಟಿ, ಫೆಬ್ರವರಿ 7: ಶುಕ್ರವಾರ ಇಂದಿರಾ ಗಾಂಧಿ ಅಥ್ಲೆಟಿಕ್ಸ್ ಅಂಗಣದಲ್ಲಿ ನಡೆಯಲಿರುವ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ನಾರ್ಥ್ ಈಸ್ಟ್ ಯುನೈಟೆಡ್ ತಂಡ ಕೇರಳ ಬ್ಲಾಸ್ಟರ್ಸ್ ವಿರುದ್ಧ ಗೆಲ್ಲಲೇಬೇಕಾಗಿದೆ, ಜಯ ಗಳಿಸಿದರೆ ಮಾತ್ರ ಲೆಕ್ಕೆಚಾರ ನಿರೀಕ್ಷೆಯಂತೆ ಬಂದರೆ ಪ್ಲೇ ಆಫ್ ಗೆ ಅರ್ಹತೆ ಪಡೆಯಲಿದೆ.

13 ಪಂದ್ಯಗಳನ್ನಾಡಿ 11 ಅಂಕ ಗಳಿಸಿರುವ ನಾರ್ಥ್ ಈಸ್ಟ್ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ತಂಡಕ್ಕೆ ಈಗಲೂ ಅಗ್ರ ನಾಲ್ಕರ ಹಂತ ತಲಪುವ ಅವಕಾಶ ಇದೆ. ಅದು ಉಳಿದಿರುವ ಎಲ್ಲ ಐದೂ ಪಂದ್ಯಗಳಲ್ಲಿ ಗೆದ್ದರೆ ಮಾತ್ರ. ಆದರೆ ಇದುವರೆಗೂ ಕೆವಲ ಎರಡು ಜಯ ಕಂಡಿರುವ ನಾರ್ಥ್ ಈಸ್ಟ್ ಗೆ ಉಳಿದಿರುವ ಪಂದ್ಯಗಳಲ್ಲಿ ಜಯ ಗಳಿಸುವುದು ಅಷ್ಟು ಸುಲಭವಲ್ಲ. ಅಷ್ಟೇ ಅಲ್ಲದೆ ತನಗಿಂತ ಮೇಲಿರುವ ಇತರ ತಂಡಗಳು ಕೂಡ ಅಂಕಗಳನ್ನು ಕಳೆದುಕೊಳ್ಳಬೇಕಾಗಿದೆ.

1
2026504

ಕಳೆದ ಬಾರಿ ಸೆಮಿಫೈನಲ್ ತಲುಪಿದ್ದ ನಾರ್ಥ್ ಈಸ್ಟ್ ನ ಸ್ಟಾರ್ ಆಟಗಾರ ಘಾನಾದ ಅಸಮೋಹ್ ಗ್ಯಾನ್ ಗಾಯಗೊಂಡು ನಿರ್ಗಮಿಸಿರುವುದು ತಂಡದ ಈಗಿನ ಸ್ಥಿತಿಗೆ ಪ್ರಮುಖ ಕಾರಣ. ಅವರ ನಿರ್ಗಮನದ ನಂತರ ತಂಡದ ಇತರ ಆಟಗಾರರು ಗೋಲು ಗಳಿಸುವಲ್ಲಿ ವಿಫಲರಾದರು. ಕಳೆದ ನಾಲ್ಕು ಪಂದ್ಯಗಳಲ್ಲಿ ತಂಡ ಗೋಲು ಗಳಿಸಿರಲಿಲ್ಲ.

NEUFC vs KBFC

''ನಮಗೆ ಸ್ಟ್ರೈಕರ್ ಕಡೆಯಿಂದ ಸಾಕಷ್ಟು ಸಮಸ್ಯೆಯಾಯಿತು. ನಮಗೆ ಎರಡನೇ ಸ್ಟಟ್ರೈಕರ್ ಇದ್ದಿರಲಿಲ್ಲ. ಮ್ಯಾಕ್ಸಿಮಿಲಿಯಲ್ ಬೆರ್ರೈರೊ ನಿರ್ಗಮಿಸಿದರು. ಆ ನಂತರ ಅಸಮೋಹ್ ನಿರ್ಗಮಿಸಿದರು. ಪನಾಗಿಯೋಟಿಸ್ ಟ್ರಿಯಾಡಿಸ್ ಕೋಡ ನಿರ್ಗಮಿಸಿದರು. ಹಿಂದಿನ ನಾಲ್ಕು ಪಂದ್ಯಗಳಲ್ಲಿ ನಾವು ನಿಜವಾಗಿಯೂ ಉತ್ತಮವಾಗಿ ಆಡಿದೆವು, ಆದರೆ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ನಮ್ಮಲ್ಲಿರುವ ಏಕೈಕ ಸಮಸ್ಯೆಯೆಂದರೆ ಇದೊಂದೆ,'' ಎಂದು ನಾರ್ಥ್ ಈಸ್ಟ್ ಕೋಚ್ ರಾಬರ್ಟ್ ಜೆರ್ನಿ ಹೇಳಿದರು.

ಕಳೆದ ಬಾರಿ ನಾರ್ಥ್ ಈಸ್ಟ್ ತಂಡ ಸೆಮಿಫೈನಲ್ ತಲಪುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಾರ್ಥಲೋಮ್ಯೊ ಒಗ್ಬಚೆ ಈಗ ಕೇರಳ ಬ್ಲಾಸ್ಟರ್ಸ್ ಪರ ಆಡುತ್ತಿದ್ದು, ಈಗ ಅವರಿಗೂ ತನ್ನ ಮಾಜಿ ತಂಡದ ವಿರುದ್ಧ ಹಾಲಿ ತಂಡಕ್ಕೆ ಜಯ ತಂದುಕೊಡಬೇಕಾದ ಅನಿವಾರ್ಯತೆ ಇದೆ. ಒಗ್ಬಚೆ ಒಟ್ಟು 11 ಗೋಲುಗಳನ್ನು ಗಳಿಸಿದ್ದು, ಕಳೆದ ಐದು ಪಂದ್ಯಗಳಲ್ಲಿ ಏಳು ಗೋಲುಗಳನ್ನು ಗಳಿಸಿರುವುದು ಗಮನಾರ್ಹ. ಆದರೆ ಷೆಟ್ಟೋರಿಯಾಗಲಿ ಅಥವಾ ಒಗ್ಬಚೆಯಾಗಲಿ ಈ ಬಾರಿ ಕೇರಳವನ್ನು ಸೆಮಿಫೈನಲ್ ಕಡೆಗೆ ಕೊಂಡೊಯ್ಯಲು ಇದುವರೆಗೂ ಯಶಸ್ವಿಯಾಗಲಿಲ್ಲ.

ಹೋರಾಟದ ಮೂಲಕ ಪ್ಲೇ ಆಫ್ ಹಂತವನ್ನು ತಲಪುವ ಅವಕಾಶ ಹೊಂದಿದ್ದ ಕೇರಳಕ್ಕೆ, ಚೆನ್ನೈಯಿನ್ ತಂಡದ ವಿರುದ್ಧ 6-3 ಅಂತರದಲ್ಲಿ ಸೋಲನುಭವಿಸುವ ಮೂಲಕ ಆಸೆ ಕಮರಿತು. ಕಳೆದ ಆರು ಪಂದ್ಯಗಳಲ್ಲಿ 12ಚ ಗೋಲುಗಳನ್ನು ನೀಡಿರುವ ಕೇರಳ, ಮನೆಯಂಗಣಲ್ಲಿ ನಡೆದ ಹಿಂದಿನ ಪಂದ್ಯದಲ್ಲೆ 6 ಗೋಲುಗಳನ್ನು ಗಳಿಸಲು ಎದುರಾಳಿ ತಂಡಕ್ಕೆ ಅವಕಾಶ ನೀಡಿತ್ತು.

''ಚೆನ್ನೈಯಿನ್ ವಿರುದ್ಧದ ಸೋಲು ಸಂಪೂರ್ಣ ಡಿಫೆನ್ಸ್ ವಿಭಾಗದ ವೈಫಲ್ಯವಲ್ಲ. ಅದು ವೈಯಕ್ತಿಕ ಪ್ರಮಾದಗಳಿಂದ ಕೂಡಿದ ಪಂದ್ಯವಾಗಿತತ್ತು. ಏನಾಯಿತೆಂಬುದು ನಮಗೆಲ್ಲರಿಗೂ ತಿಳಿದ ಸಂಗತಿ. 38ನೇ ನಿಮಿಷದ ವರೆಗೂ ನಾವು ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದೆವು. ಅಂಥ ತಪ್ಪುಗಳನ್ನು ಮಾಡಿದಾಗ ಕರೆದು ತಿಳಿ ಹೇಳಬೇಕಾಗುತ್ತದೆ. ನಾವು ನಮ್ಮ ಕೆಲಸ ಮಾಡಿದ್ದೇವೆ, ಮುಂದಿವ ಪಂದ್ಯಗಳಲ್ಲಿ ಇಂಥ ವೈಯಕ್ತಿಕ ಪ್ರಮಾದಗಳು ಆಗದಂತೆ ನೋಡಿಕೊಳ್ಳಬೇಕು,'' ಎಂದು ಕೇರಳ ಬ್ನಾಸ್ಟರ್ಸ್ ತಂಡದ ಸಹಾಯಕ ಕೋಚ್ ಇಷ್ಫಕ್ ಅಹಮದ್ ಹೇಳಿದ್ದಾರೆ.

Story first published: Thursday, February 6, 2020, 22:49 [IST]
Other articles published on Feb 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X