ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ನಾರ್ತ್ ಈಸ್ಟ್‌ಗೆ ಸೆಮಿಫೈನಲ್ ತಲುಪಲು ಒಂದೇ ಜಯ ಸಾಕು

By Isl Media
ISL: NorthEast United a win away from play-offs

ಗುವಾಹಟಿ, ಫೆಬ್ರವರಿ 20: ಬುಧವಾರ (ಫೆಬ್ರವರಿ 20) ಇಂದಿರಾ ಗಾಂಧಿ ಅಥ್ಲೆಟಿಕ್ಸ್ ಅಂಗಣದಲ್ಲಿ ನಡೆಯಲಿರುವ ಹೀರೋ ಇಂಡಿಯನ್ ಸೂಪರ್ ಲೀಗ್‌ನ ಪಂದ್ಯದಲ್ಲಿ ಪುಣೆ ಸಿಟಿ ತಂಡಕ್ಕೆ ಆತಿಥ್ಯ ನೀಡಲಿರುವ ನಾರ್ತ್ ಈಸ್ಟ್ ಯುನೈಟೆಡ್ ತಂಡಕ್ಕೆ ಸೆಮಿಫೈನಲ್ ತಲುಪಲು ಕೇವಲ ಒಂದು ಜಯದ ಅಗತ್ಯವಿದೆ.

ರಾಸ್ ಟೇಲರ್ ಏಕದಿನ ದಾಖಲೆ, ಬಾಂಗ್ಲಾ ವಿರುದ್ಧ ಕಿವೀಸ್‌ಗೆ ಸರಣಿ ಜಯರಾಸ್ ಟೇಲರ್ ಏಕದಿನ ದಾಖಲೆ, ಬಾಂಗ್ಲಾ ವಿರುದ್ಧ ಕಿವೀಸ್‌ಗೆ ಸರಣಿ ಜಯ

ಈ ಋತುವಿನಲ್ಲಿ ಕೇವಲ ಮೂರು ಪಂದ್ಯಗಳಲ್ಲಿ ಸೋತಿರುವ ತಂಡಗಳಲ್ಲಿ ಎಲ್ಕೊ ಷೆಟೋರಿ ಅವರ ಪಡೆಯೂ ಒಂದು. 16 ಪಂದ್ಯಗಳನ್ನಾಡಿರುವ ನಾರ್ತ್ ಈಸ್ಟ್ 27 ಅಂಕಗಳನ್ನು ಗಳಿಸಿದ್ದು, ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಮುಂಬೈ ಸಿಟಿ ವಿರುದ್ಧದ ಹಿಂದಿನ ಪಂದ್ಯದಲ್ಲಿ 2-0 ಅಂತರದಲ್ಲಿ ಗೆಲ್ಲುವ ಮೂಲಕ ನಾರ್ತ್ ಈಸ್ಟ್ ಅತ್ಯಂತ ಆತ್ಮವಿಶ್ವಾಸವನ್ನು ಹೊಂದಿದೆ.

1
1042967

ಐಪಿಎಲ್‌ಗೆ ಸಜ್ಜಾಗುತ್ತಿರೋ ಯುವಿಯ ರಿವರ್ಸ್ ಸ್ವೀಪ್ ಸಿಕ್ಸ್ ನೋಡಿ!ಐಪಿಎಲ್‌ಗೆ ಸಜ್ಜಾಗುತ್ತಿರೋ ಯುವಿಯ ರಿವರ್ಸ್ ಸ್ವೀಪ್ ಸಿಕ್ಸ್ ನೋಡಿ!

'ಪ್ಲೇ ಆಫ್ ಅರ್ಹತೆಯ ಬಗ್ಗೆ ನಮ್ಮ ಆಟಗಾರರಿಗೆ ಏನನ್ನೂ ಹೇಳಿಲ್ಲ. ಪ್ರತಿಯೊಂದು ಪಂದ್ಯವೂ ಪ್ರಮುಖವಾಗಿರುತ್ತದೆ. ಕಳೆದ 10 ಪಂದ್ಯಗಳಲ್ಲಿ ಸಾ'್ಯವಾದಷ್ಟು ಉತ್ತಮ ಆಟಗಾರರನ್ನೇ ಆಯ್ಕೆ ಮಾಡಿ ಆಡುವ ಹನ್ನೊಂದರಲ್ಲಿ ಸೇರಿಸಿದ್ದೇನೆ. ಇದು ಸಾಧಾರಣ ಹತ್ತು ಪಂದ್ಯಗಳಲ್ಲಿ ನಡೆಯುತ್ತಿದೆ.' ಎಂದು ನಾರ್ತ್ ಈಸ್ಟ್‌ನ ಕೋಚ್ ಷೆಟೋರಿ ಹೇಳಿದ್ದಾರೆ.

ಬಾರ್ತಲೋಮ್ಯೊ 12 ಗೋಲು

ಬಾರ್ತಲೋಮ್ಯೊ 12 ಗೋಲು

12 ಗೋಲುಗಳನ್ನು ಗಳಿಸಿರುವ ಬಾರ್ತಲೋಮ್ಯೊ ಒಗ್ಬಚೆ ಅತಿ ಹೆಚ್ಚು ಗೋಲು ಗಳಿಸಿರುವ ಫೆರಾನ್ ಕೊರೊಮಿನಾಸ್ ಅವರಿಗಿಂತ ಎರಡು ಗೋಲು ಹಿಂದೆ ಬಿದ್ದಿದ್ದಾರೆ. ಫೆಡ್ರಿಕೊ ಗಲ್ಲೆಗೋ ಗೋಲು ಗಳಿಸಲು ನೆರವಾದವರಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ, ಹೊಸದಾಗಿ ತಂಡವನ್ನು ಸೇರಿಕೊಂಡಿರುವ ಪನಾಗಿಯೊಟಿಸ್ ಟ್ರಿಯಾಡಿಸ್ ದಾಳಿಯಲ್ಲಿ ಅದ್ಬತ ಪ್ರದರ್ಶನ ತೋರುತ್ತಿದ್ದಾರೆ. ‘ಮುಂಬೈ ಸಿಟಿ ವಿರುದ್ಧದ ಪಂದ್ಯದಲ್ಲಿ ನಮ್ಮ ದಾಳಿ ಅತ್ಯಂತ ಆಕ್ರಮಣಕಾರಿಯಾಗಿತ್ತು. ದಾಳಿ ಹೇಗಿರಬೇಕೆಂಬುದನ್ನು ನಮ್ಮ ಆಟಗಾರರು ತೋರಿಸಿಕೋಟ್ಟಿದ್ದಾರೆ. ಆದರೆ ಎಲ್ಲವೂ ಸರಿಯಾಗಿಯೇ ನಡೆಯುತ್ತಿದೆ ಎಂದು ಹೇಳಿ ನಾನಿಲ್ಲಿ ಕುಳಿತುಕೊಂಡಿಲ್ಲ, ‘ ಎಂದು ಷೆಟೋರಿ ಹೇಳಿದ್ದಾರೆ.

ಅತ್ಯಂತ ಕಳಪೆ ಪ್ರದರ್ಶನ

ಅತ್ಯಂತ ಕಳಪೆ ಪ್ರದರ್ಶನ

ಋತುವಿನ ಆರಂಭದಲ್ಲೇ ಅತ್ಯಂತ ಕಳಪೆ ಪ್ರದರ್ಶನ ತೋರಿದ ಪುಣೆ ಸಿಟಿ ತಂಡ ನೂತನ ಕೋಚ್ ಫಿಲ್ ಬ್ರೌನ್ ಅವರ ತರಬೇತಿಯಲ್ಲಿ ಚೇತರಿಸಿಕೊಂಡಿದೆ. ಬೆಂಗಳೂರು ಎಫ್ ಸಿ ವಿರುದ್ಧ ಸೋತ ನಂತರ ಪುಣೆ ತಂಡ ನಾಲ್ಕು ಪಂದ್ಯಗಳಲ್ಲಿ ಜಯ ಗಳಿಸಿದೆ. ಈಗ 18 ಅಂಕಗಳನ್ನು ಗಳಿಸಿ ಅಂಕ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ತಂಡ ಉತ್ತಮವಾಗಿ ಪ್ರದರ್ಶನ ತೋರುತ್ತಿದ್ದರೂ ಪ್ಲೆ‘ ಆಫ್ ತಲುಪುವುದು ಕಷ್ಟವಾಗಿದೆ. ಆದರೂ ಅದು ಸುಲಭವಾದುದದಲ್ಲ, ಇಲ್ಲಿ ಗೆದ್ದ ನಂತರ ನಾರ್ತ್ ಈಸ್ಟ್ ಹಾಗೂ ಮುಂಬೈ ನಡುವಿನ ಪಂದ್ಯದಲ್ಲಿ ನಾರ್ತ್ ಈಸ್ಟ್ ಸೋಲಬೇಕೆಂಬುದು ಪುಣೆಯ ಲೆಕ್ಕಾಚಾರ.

ಆಟಗಾರರು ಆಡುತ್ತಿದ್ದಾರೆ

ಆಟಗಾರರು ಆಡುತ್ತಿದ್ದಾರೆ

‘ನಾನು ಕೆಲಸ ಮಾಡುತ್ತಿರುವ ತಂಡ ನನ್ನ ಮೇಲೆ ಪರಿಣಾಮ ಬೀರಿದೆ. ನನ್ನ ಯೋಜನೆಗಳಿಗೆ ಸರಿಯಾಗಿ ಆಟಗಾರರು ಆಡುತ್ತಿದ್ದಾರೆ. ಅವರಲ್ಲಿ ಅಪಾರವಾದ ಆತ್ಮವಿಶ್ವಾಸ ಹಾಗೂ ನಂಬಿಕೆ ಹುಟ್ಟಿದೆ. ಭಾರತದ ಆಟಗಾರರು ವಿಶೇಷವಾಗಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ,‘ ಎಂದು ಪುಣೆಯ ಪ್ರಧಾನ ಕೋಚ್ ಬ್ರೌನ್ ಹೇಳಿದ್ದಾರೆ.

ಗಮನ ಸೆಳೆದ ರಾಬಿನ್

ಗಮನ ಸೆಳೆದ ರಾಬಿನ್

ಜೆಮ್ಷೆಡ್ಪುರ ವಿರುದ್ಧದ ಪಂದ್ಯದಲ್ಲಿ ಪುಣೆ ಜಯ ಗಳಿಸಿತ್ತು, ಆ ಪಂದ್ಯದಲ್ಲಿ ಸ್ಟ್ರೈಕರ್ ರಾಬಿನ್ ಸಿಂಗ್ ಎರಡು ಗೋಲುಗಳನ್ನು ಗಳಿಸಿ ಗಮನ ಸೆಳೆದಿದ್ದಾರೆ. ಇತ್ತೀಚಿನ ಪಂದ್ಯಗಳಲ್ಲಿ ರಾಬಿನ್ ಸಿಂಗ್ ಅತ್ಯಂತ ಅಪಾಯಕಾರಿ ಆಟಗಾರರಾಗಿ ಕಾಣುತ್ತಿದ್ದಾರೆ. ನಾಲ್ಕನೇ ಹಳದಿ ಕಾರ್ಡ್ ಪಡೆದ ಮಾರ್ಸೆಲೋ ಅಮಾನತಿನಲ್ಲಿ ಮುಂದುವರಿಯಲಿದ್ದಾರೆ. ಆದರೂ ಪುಣೆ ತಂಡ ಸತತ ನಾಲ್ಕನೇ ಜಯದ ಗುರಿಯಲ್ಲಿದೆ.

Story first published: Wednesday, February 20, 2019, 13:36 [IST]
Other articles published on Feb 20, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X