ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ರೋಚಕ ದ್ವಿತೀಯಾರ್ಧ, ಚೆನ್ನೈಯಿನ್-ಒಡಿಶಾ ಪಂದ್ಯ ಡ್ರಾದಲ್ಲಿ ಅಂತ್ಯ

By Isl Media
ISL: Odisha fight back twice to win a point in Chennai

ಚೆನ್ನೈ, ನವೆಂಬರ್ 28: ಪ್ರಥಮಾರ್ಧದಲ್ಲಿ ಇತ್ತಂಡಗಳು ಗೋಲು ಗಳಿಸುವಲ್ಲಿ ವಿಫಲವಾದವು, ಆದರೆ ದ್ವಿತೀಯಾರ್ಧದಲ್ಲಿ ನಾಲ್ಕು ಗೋಲುಗಳು ದಾಖಲಾದರೂ ಚೆನ್ನೈಯಿನ್ ಎಫ್ ಸಿ ಹಾಗೂ ಒಡಿಶಾ ನಡುವಿನ ಪಂದ್ಯ 2-2 ಗೋಲುಗಳಿಂದ ಸಮಬಲಗೊಂಡಿತು. ಚೆನ್ನೈಯಿನ್ ಎಫ್ ಸಿ ಪರ ನಿರೀಜುಸ್ ವಾಲ್ಸ್ಕಿಸ್ ( 51 ಮತ್ತು 71 ನೇ ನಿಮಿಷ) ಹಾಗೂ ಒಡಿಶಾ ಪರ ಕ್ಸಿಸ್ಕೋ ಹೆರ್ನಾಂಡಿಸ್ ( 54ನೇ ನಿಮಿಷ) ಮತ್ತು ಅರಿದಾನೆ ಸ್ಯಾಂಟಾನಾ ( 82ನೇ ನಿಮಿಷ) ಗೋಲು ಗಳಿಸಿದರು.

ಜಸ್‌ಪ್ರೀತ್‌ ಬೂಮ್ರಾ ಬೌಲಿಂಗ್‌ಗೆ ಕಳವಳ ವ್ಯಕ್ತಪಡಿಸಿದ ಕಪಿಲ್‌ ದೇವ್ಜಸ್‌ಪ್ರೀತ್‌ ಬೂಮ್ರಾ ಬೌಲಿಂಗ್‌ಗೆ ಕಳವಳ ವ್ಯಕ್ತಪಡಿಸಿದ ಕಪಿಲ್‌ ದೇವ್

ಗೋಲಿಲ್ಲದ ಪ್ರಥಮಾರ್ಧ
ಒಡಿಶಾ ಎಫ್ ಸಿ ಪಂದ್ಯದ ಮೇಲೆ ಉತ್ತಮ ರೀತಿಯಲ್ಲಿ ಹಿಡಿತ ಸಾಧಿಸಿತ್ತು. ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಕೊಳ್ಳುವಲ್ಲಿ ವಿಫಲವಾಯಿತು. ವಿಶಾಲ್ ಕೈಥ್ ಚೆನ್ನೈ ಪರ ಪ್ರಥಮಾರ್ಧದ ಆಪದ್ಬಾಂಧವ ಎನಿಸಿದರು. ಚೆನ್ನೈ ಉತ್ತಮ ಅವಕಾಶ ಗಳಿಸಲು ಒಡಿಶಾದ ಡಿಫೆನ್ಸ್ ವಿಭಾಗ ಸಮ್ಮತಿ ನೀಡಲಿಲ್ಲ. ಪಂದ್ಯ ಆರಂಭಗೊಂಡ ಎಂಟನೇ ನಿಮಿಷದಲ್ಲಿ ಒಡಿಶಾದ ಕ್ಸಿಸ್ಕೋ ಹೆರ್ನಾಂಡೀಸ್ ಅವರ ಗುರಿಯನ್ನು ನಿಯಂತ್ರಿಸುವಲ್ಲಿ ಕೈಥ್ ಸಫಲರಾದರು. ಇಲ್ಲವಾದಲ್ಲಿ ಚೆನ್ನೈ ಆರಂಭದಲ್ಲೇ ಹಿನ್ನಡೆ ಅನುಭಾವಿಸುತ್ತಿತ್ತು. ವಿಶಾಲ್ ಕೈಥ್ ಗೆ ಇದು ಮೊದಲ ಪಂದ್ಯವಾಗಿತ್ತು. ಜೆರ್ರಿ ಮಾವ್ಹಿಮಿಂಗ್ತಂಗ್ ಉತ್ತಮ ಪಾಸ್ ಕ್ಸಿಸ್ಕೋ ಹೆರ್ನಾಂಡೀಸ್ ಗೆ ನೀಡಿದರು. ಅರಿದಾನೆ ಸ್ಯಾಂಟಾನಾ ಬಾಕ್ಸ್ ನಲ್ಲಿ ಚೆಂಡನ್ನು ನಿಯಂತ್ರಿಸಿದರು. ಸ್ಯಾಂಟಾನಾ ನೇರವಾಗಿ ಗುರಿಯಿಟ್ಟು ತುಳಿದ ಚೆಂಡನ್ನು ಎಡ್ವಿನ್ ವಾನಸ್ಪುಲ್ ತಡೆದರು. ಆದರೆ ಚೆಂಡು ಎಡ್ವಿನ್ ಕಾಲಿಗೆ ತಗಲಿ ಕ್ಸಿಸ್ಕೋ ನಿಯಂತ್ರಣಕ್ಕೆ ಸಿಕ್ಕಿತು. ಕ್ಸಿಸ್ಕೋ ಗುರಿಯಿಟ್ಟ ಚೆಂಡನ್ನು ಕೈಥ್ ಉತ್ತಮ ರೀತಿಯಲ್ಲಿ ತಡೆದರು. ಈ ಮೂಲಕ ಸಿಕ್ಕ ಅವಕಾಶವನ್ನು ಕ್ಸಿಸ್ಕೋ ಕೈ ಚೆಲ್ಲಿದರು. ಆ ನಂತರ 20ನೇ ನಿಮಿಷದಲ್ಲೂ ಒಡಿಶಾ ಅವಕಾಶವನ್ನು ಕೈ ಚೆಲ್ಲಿತು. ಚೆನ್ನೈಗೆ 32ನೇ ನಿಮಿಷದಲ್ಲಿ ಚೆನ್ನೈ ಫ್ರೀ ಕಿಕ್ ಅವಕಾಶವನ್ನು ಕೈ ಚೆಲ್ಲಿತು. ಈ ಮೂಲಕ ಪ್ರಥಮಾರ್ಧ ಗೋಲಿಲ್ಲದೆ ಕೊನೆಗೊಂಡಿತು.

ISL: Odisha fight back twice to win a point in Chennai

ಎರಡನೇ ಜಯದ ಗುರಿಯಲ್ಲಿ ಚೆನ್ನೈಯಿನ್
ಗೋಲಿಲಲ್ಲದೆ, ಜಯ ಕಾಣದೆ ಕಂಗಾಲಾಗಿದ್ದ ಚೆನ್ನೈ ತಂಡ ಕೊನೆಗೂ ಹೈದರಾಬಾದ್ ವಿರುದ್ಧ ಅಂತಿಮ ಕ್ಷಣದಲ್ಲಿ ಆಂಡ್ರೆ ಷೇಮ್ಬ್ರಿ ಹಾಗೂ ನೆರಿಜುಸ್ ವಾಲ್ಸ್ಕಿಸ್ ಗಳಿಸಿದ ಗೋಲಿನಿಂದ 2-1 ಅಂತರದಲ್ಲಿ ಜಯ ಗಳಿಸಿತ್ತು. ತಮ್ಮ ಅಸ್ತ್ರದಲ್ಲಿ ಕೊನೆ ಕ್ಷಣದಲ್ಲಿ ಗೋಲು ಗಳಿಸುವ ನಾಟಕೀಯ ಗುಣ ಇರುವುದು ತಂಡದ ಪಾಲಿನ ಅಸ್ತ್ರ ಎಂದು ಪ್ರಧಾನ್ ಕೋಚ್ ಜಾನ್ ಗ್ರೆಗೊರಿ ಹೇಳಿದ್ದು, ಈಗ ತಂಡದ ಅದೃಷ್ಟ ಹೊಸ ರೂಪ ಪಡೆದಿದೆ. ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಮೊದಲ ಗೋಲು, ಮೊದಲ ಜಯ ಗಳಿಸಿ ಆತ್ಮವಿಶ್ವಾಸದಲ್ಲಿರುವ ಚೆನ್ನೈಯಿನ್ ಎಫ್ ಸಿ ತಂಡ ಉತ್ತಮ ಪ್ರದರ್ಶನ ನೀಡಬಲ್ಲ ಒಡಿಶಾ ಎಫ್ ಸಿ ವಿರುದ್ಧ ಯಶಸ್ಸು ಸಾಧಿಸಿ ಸತತ ಎರಡನೇ ಜಯ ಗಳಿಸುವ ಗುರಿ ಹೊಂದಿದೆ. ಗೋಲು ಇಲ್ಲ, ಜಯವೂ ಇಲ್ಲದೆ ಕಂಗೆಟ್ಟಿದ್ದ ಚೆನ್ನೈ ತಂಡ ಹೈದರಾಬಾದ್ ವಿರುದ್ಧ ಕೊನೆಯ ಕ್ಷಣದಲ್ಲಿ ಗೋಲು ಗಳಿಸಿ ಜಯದ ಲಯ ಕಂಡುಕೊಂಡಿತು. ಚೆನ್ನೈಯಿನ್ ತಂಡ ಹೈದರಬಾದ್ ವಿರುದ್ಧದ ಪಂದ್ಯದಲ್ಲಿ ಸಾಕಷ್ಟು ಒತ್ತಡಕ್ಕೆ ಸಿಕ್ಕಿತ್ತು. ಅದಕ್ಕೆ ಪೂರಕವೆಂಬಂತೆ ಹೈದರಾಬಾದ್ ದಿಟ್ಟ ಹೋರಾಟ ನೀಡಿತ್ತು. ಈಗ ತಂಡದ ಮನೋಬಲ ಹೆಚ್ಚಿದೆ. ಕೊನೆಯ ಸ್ಥಾನದಲ್ಲಿದ್ದ ಚೆನ್ನೈ ಈಗ ಆ ಸ್ಥಾನಕ್ಕೆ ಹೈದರಾಬಾದ್ ತಂಡವನ್ನು ತಳ್ಳಿದೆ.

ರಿಷಬ್ ಪಂತ್, ಸಂಜು ಸ್ಯಾಮ್ಸನ್ ಪ್ರದರ್ಶನದ ಮೇಲೆ ಎಂಎಸ್ ಧೋನಿ ಕಣ್ಣು!?ರಿಷಬ್ ಪಂತ್, ಸಂಜು ಸ್ಯಾಮ್ಸನ್ ಪ್ರದರ್ಶನದ ಮೇಲೆ ಎಂಎಸ್ ಧೋನಿ ಕಣ್ಣು!?

ಪ್ರವಾಸಿ ಒಡಿಶಾ ತಂಡ ಈ ಬಾರಿ ಉತ್ತಮ ಆರಂಭ ಕಾಣುವಲ್ಲಿ ವಿಫಲವಾಗಿದೆ. ಎರಡು ಸೋಲು ಹಾಗೂ ಎರಡು ಡ್ರಾ ತಂಡದ ಇದುವರೆಗಿನ ಸಾಧನೆಯಾಗಿದೆ. ಎಟಿಕೆ ವಿರುದ್ಧ ಒಡಿಶಾ ಸೋಲಬಹುದು ಎಂದು ಅನೇಕ ಫುಟ್ಬಾಲ್ ಪಂಡಿತರು ಊಹಿಸಿದ್ದರು. ಆದರೆ ಉತ್ತಮ ರೀತಿಯಲ್ಲಿ ಡಿಫೆನ್ಸ್ ಆಟ ಪ್ರದರ್ಶಿಸಿದ ಒಡಿಶಾ ಅಂಕ ಹಂಚಿಕೊಂಡಿತ್ತು. ತಂಡಕ್ಕೆ ಎಟಿಕೆ ವಿರುದ್ಧ ಮೂರು ಅಂಕ ಗಳಿಸುವ ಅವಕಾಶ ಇದ್ದಿತ್ತು. ಆದರೆ ಕೊನೆಯ ಕ್ಷಣದಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾದ ಕಾರಣ ಅಂಕವನ್ನು ಹಂಚಿಕೊಳ್ಳಬೇಕಾಯಿತು. ಮಾಡಿದ ಪ್ರಮಾದಗಳನ್ನು ತಿದ್ದಿಕೊಂಡು ಮೂರು ಅಂಕ ಗಳಿಸುವ ಗುರಿಯೊಂದಿಗೆ ಅಂಗಣಕ್ಕಿಳಿಯಿತು.

Story first published: Thursday, November 28, 2019, 23:36 [IST]
Other articles published on Nov 28, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X