ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2020: ಮನೆಯಂಗಣದಲ್ಲಿ ಮಿಂಚಿದ ಒಡಿಶಾ ಎಫ್‌ಸಿ

By Isl Media
ISL: Odisha stay close to top four with Chennaiyin win

ಭುವನೇಶ್ವರ, ಜನವರಿ 7: ಜೆರ್ರಿ ಮಾವ್ಹಿಮಿಂಗ್ತಾಂಗ (37ನೇ ನಿಮಿಷ) ಹಾಗೂ ವಿನೀತ್ ರಾಯ್ (41ನೇ ನಿಮಿಷ) ಅವರು ಗಳಿಸಿದ ಗೋಲಿನಿಂದ ಚೆನ್ನೈಯಿನ್ ಎಫ್ ಸಿ ತಂಡನ್ನು 2-0 ಗೋಲುಗಳ ಅಂತರದಲ್ಲಿ ಮಣಿಸಿದ ಒಡಿಶಾ ಎಫ್ ಸಿ ಹೀರೋ ಇಂಡಿಯನ್ ಸೂಪರ್ ಲೀಗ್ ನ 43ನೇ ಪಂದ್ಯದಲ್ಲಿ ಅಮೂಲ್ಯವಾದ ಜಯ ಗಳಿಸಿತು. ಈ ಜಯದೊಂದಿಗೆ ಒಡಿಶಾ ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಜಿಗಿಯಿತು, ಇದರೊಂದಿಗೆ ಪ್ಲೇ ಆಫ್ ತಲಪುವ ಆಸೆಯನ್ನು ಜೀವಂತವಾಗಿರಿಸಿಕೊಂಡಿತು. ಇನ್ನೊಂದೆಡೆ ಚೆನ್ನೈಯಿನ್ ತಂಡ ನಾಲ್ಕನೇ ಸ್ಥಾನ ತಲಪುವ ತನ್ನ ಆಸೆಯನ್ನು ಮತ್ತಷ್ಟು ಕಠಿಣಗೊಳಿಸಿಕೊಂಡಿತು. ಕಳಿಂಗ ಕ್ರೀಡಾಂಗಣದಲ್ಲಿ ಮನೆಯಂಗಣದ ಪ್ರೇಕ್ಷಕರು ನೀಡಿದ ಬೆಂಬಲವನ್ನು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಂಡ ಒಡಿಶಾ ಜಯದ ನಡೆಯನ್ನು ಮುಂದುವಿರಿಸಿತು.

ಮುನ್ನಡೆದ ಒಡಿಶಾ
ಪ್ರಥಮಾರ್ಧದಲ್ಲಿ ಎರಡು ಗೋಲು ಗಳಿಸಿದ ಒಡಿಶಾ ಬಲಿಷ್ಠ ಚೆನ್ನೈಯಿನ್ ವಿರುದ್ಧ 2-0 ಅಂತರದಲ್ಲಿ ಮೇಲುಗೈ ಸಾಧಿಸಿತು. ಐದು ನಿಮಿಷಗಳ ಅಂತರದಲ್ಲಿ ಎರಡು ಗೋಲು ಗಳಿಸಿದ ಒಡಿಶಾ ಮನೆಯಂಗಣದ ಪ್ರೇಕ್ಷಕರಿಗೆ ಫುಟ್ಬಾಲ್ ನ ರಸದೌತಣ ನೀಡಿತು. 37ನೇ ನಿಮಿಷದಲ್ಲಿ ಜೆರ್ರಿ ಮಾವ್ಹಿಮಿಂಗ್ತಾಂಗ ತಂಡದ ಪರ ಮೊದಲ ಗೋಲು ಗಳಿಸಿದರು, 41ನೇ ನಿಮಿಷದಲ್ಲಿ ವಿನೀತ್ ರಾಯ್ ಗಳಿಸಿದ ಗೋಲು ಚೆನ್ನೈಯಿನ್ ತಂಡಕ್ಕೆ ಸೋಲಿನ ಆಘಾತ ನೀಡಲು ಆಹ್ವಾನಿಸಿದಂತಿತ್ತು. ಚೆನ್ನೈಯಿನ್ ಆರಂಭದಲ್ಲಿ ಉತ್ತಮ ರೀತಿಯಲ್ಲಿ ಪೈಪೋಟಿ ನೀಡಿದರೂ ಗೋಲನ್ನು ಗಳಿಸುವಲ್ಲಿ ವಿಫಲವಾಯಿತು.

ISL: Odisha stay close to top four with Chennaiyin win

ಒಡಿಶಾಕ್ಕೆ ಮಿಂಚುವ ಹಂಬಲ
ಹೀರೋ ಇಂಡಿಯನ್ ಸೂಪರ್ ಲೀಗ್ ನ 53ನೇ ಪಂದ್ಯದಲ್ಲಿ ಚೆನ್ನೈಯಿನ್ ಎಫ್ ಸಿ ತಂಡಕ್ಕೆ ಒಡಿಶಾ ಎಫ್ ಸಿ ಆತಿಥ್ಯ ನೀಡಿತು. ಭುವನೇಶ್ವರದಲ್ಲಿ ಒಡಿಶಾ ತಂಡಕ್ಕೆ ಇದು ಎರಡನೇ ಪಂದ್ಯ. ಮನೆಯಂಗಣದ ಪ್ರೇಕ್ಷಕರು ತಮಗೆ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಾರೆಂಬ ನಿರೀಕ್ಷೆಯೊಂದಿಗೆ ಅಂಗಣಕ್ಕಿಳಿಯಿತು. ಮುಂಬೈ ಸಿಟಿ ಎಫ್ ಸಿಗಿಂತ ಒಂದು ಅಂಕ ಹಿಂದೆ ಇರುವ ಒಡಿಶಾಕ್ಕೆ ಇಲ್ಲೊಂದು ಜಯದ ಅಗತ್ಯ ಇದೆ. ಸ್ಥಿರ ಪ್ರದರ್ಶನ ತೋರುವಲ್ಲಿ ವಿಫಲವಾಗುತ್ತಿರುವ ಒಡಿಶಾ ತಂಡ ಈ ಹಿಂದಿನ ಪಂದ್ಯದಲ್ಲಿ ಅರಿಡಾನೆ ಸ್ಯಾಂಟನಾ ಅವರ ಅದ್ಭುತ ಪ್ರದರ್ಶನದ ನೆರವಿನಿಂದ ಜಯ ಗಳಿಸಿತ್ತು. ಕ್ಸಿಸ್ಕೋ ಹೆರ್ನಾಂಡೀಸ್, ಮಾರ್ಕಸ್ ತೆಬರ್ ಮತ್ತು ಅರಿಡಾನೆ ಸ್ಯಾಂಟನಾ ಅವರು ತಂಡಕ್ಕೆ ಆಧಾರ ಎನಿಸಿದ್ದಾರೆ. ಎಲ್ಲಕ್ಕಿಂತ ತಂಡಕ್ಕೆ ಬೇಕಾಗಿರುವುದು ಪ್ರೇಕ್ಷಕರ ಬೆಂಬಲ.

ಅಗತ್ಯವಿದೆ ಎಂದು ತಂಡದ ಸುಹಾಯಕ ಕೋಚ್ ಗಳಾದ ಥಾಂಗ್ಬೋಯ್ ಸಿಂಗ್ಟೋ ಮತ್ತು ಜಾಕೊಬೊ ಹೇಳಿದ್ದಾರೆ. 9ನೇ ಸ್ಥಾನದಲ್ಲಿರುವ ಚೆನ್ನೈಯಿನ್ ತಂಡಕ್ಕೆ ನಾಲ್ಕನೇ ಸ್ಥಾನಕ್ಕೆ ತಲಪುವ ಆಸೆಯನ್ನು ಜೀವಂತವಾಗಿರಿಸಿಕೊಳ್ಳಬೇಕಾದರೆ ಎಲ್ಲ ಪಂದ್ಯಗಳಲ್ಲಿ ಜಯ ಗಳಿಸಬೇಕಾಗಿದೆ. ಉಳಿದ ಎರಡೂ ಪಂದ್ಯಗಳನ್ನು ಗೆದ್ದರೂ ನಾಲ್ಕನೇ ಸ್ಥಾನದಲ್ಲಿರುವ ಮುಂಬೈ ಸಿಟಿ ತಂಡಕ್ಕಿಂತ ಒಂದು ಅಂಕ ಹಿನ್ನಡೆ ಕಾಣಲಿದೆ. ಹೊಸ ಕೋಚ್ ಓವೆನ್ ಕಾಯ್ಲ್ ಅವರ ಆಗಮನದ ನಂತರ ಚೆನ್ನೈಯಿನ್ ಎಫ್ ಸಿ ಆಕ್ರಮಣಕಾರಿ ಆಟ ಆರಂಭಿಸಿದೆ. ಕಳೆದ ಮೂರು ಪಂದ್ಯಗಳಲ್ಲಿ ನಾಲ್ಕು ಗೋಲುಗಳನ್ನು ತಂಡ ಗಳಿಸಿದೆ.

Story first published: Tuesday, January 7, 2020, 0:02 [IST]
Other articles published on Jan 7, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X